Breaking
Tue. Dec 17th, 2024

ಬೆಳೆ ದರ್ಶಕ ಆ್ಯಪ್ ಡೌನ್ಲೋಡ್ ಮಾಡಿ ಸಮೀಕ್ಷೆ ವಿವರ ತಿಳಿಯಿರಿ, crop survey

Spread the love

ಬೆಳೆ ದರ್ಶಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://play.google.com/store/apps/details?id=com.crop.offcskharif_2021

ಹೇಗೆ ಬಳಸಬೇಕು ಎಂದು ತಿಳಿಯಲು ಕೆಳಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ?

https://bhoomisuddi.com/how-to-download-crop-survey-details-for-2023-24/

ಜಿಲ್ಲೆಯಲ್ಲಿ ಈ ಬಾರಿ 26 ಸಾವಿರ ಯುವ ಮತದಾರರು ಹೆಸರು ನೋಂದಣಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ‘ಯುವ ಮತದಾರರಿಂದ ಮಾನವ ಸರಪಳಿ’ ಕಾರ್ಯಕ್ರಮವು ನಗರದ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು.

ಗದಗ ನಗರದ ವಿವಿಧ ಕಾಲೇಜಿನ ನೂರಾರು ಯುವ ಮತದಾರರು ಮಾನವ ಸರಪಳಿ ಪಾಲ್ಗೊಂಡು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಈ ಬಾರಿ ಜಿಲ್ಲೆಯಲ್ಲಿ ಹೊಸದಾಗಿ 26 ಸಾವಿರ ಮಂದಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. 18 ವರ್ಷ ಪೂರ್ಣಗೊಂಡ ಅರ್ಹ ಮತದಾರರೆಲ್ಲರೂ ಮತದಾನ ಮಾಡುವುದು ಅತಿ ಮುಖ್ಯವಾಗಿದೆ. ಪ್ರತಿ ಮತವೂ ಅಮೂಲ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 1950 ಅಥವಾ ಸಿವಿಜಲ್ ಆಪ್ ಮೂಲಕ ದೂರು ದಾಖಲಿಸಬಹುದಾಗಿದೆ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಅವರು ವಿವರಿಸಿದರು. ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಯುವ ಮತದಾರರ ಪಾತ್ರ ಹೆಚ್ಚಿನದಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ.ಪಂ.ಸಿಇಒ ಎಸ್.ಭರತ್ ಅವರು ಮಾತನಾಡಿ ಮೇ 7 ರಂದು ನಡೆಯುವ ಮತದಾನದಂದು ಅರ್ಹರೆಲ್ಲರೂ ಮತ ಚಲಾಯಿಸಬೇಕು. ಅರ್ಹರು ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ‘ಯುವಜನರು ಸಡಗರ- ಸಂಭ್ರಮದಿಂದ ಮತ ಹಕ್ಕು ಚಲಾಯಿಸಬೇಕು. ಪ್ರತಿಯೊಂದು ಮತವೂ ಸಹ ಅತ್ಯಮೂಲ್ಯವಾಗಿದ್ದು ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಕೋರಿದರು. ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತರಾಷ್ಟ್ರೀಯ ಕುಸ್ತಿಪಟು ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ.ದೇವರಮನಿ, ತಾ.ಪಂ. ಇಒ ಮಾಣಿಕರಾವ್ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ಇತರರು ಇದ್ದರು.

ಡಿ.18ರಿಂದ ಹಗಲು ರಾತ್ರಿ ಧರಣಿಗೆ ತೀರ್ಮಾನ

ತಾಲೂಕಿನ ನಾಗರಬೆಟ್ಟ ಗ್ರಾಮದ ರೈತರು ತಾಲೂಕು ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ತಹಶೀಲ್ದಾರ್ ಬಲರಾಮ ಕಟ್ಟಿಮನಿಯವರಿಗೆ ಪ್ರಮುಖ ಬೇಡಿಕೆಗಳ ಕುರಿತಾದ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ಡಿ.17ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಡಿ.18ರಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶಾಂತರೀತಿಯ ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.

ನಾಗರಬೆಟ್ಟ ಗುಡ್ಡ ಉಳಿಸಲು ಆಗ್ರಹ : ಗ್ರಾಮದ ಸರ್ವೆ ನಂಬರ್ 51ರಲ್ಲಿರುವ 185.25 ಎಕರೆ ಮತ್ತು ಸರ್ವೆ ನಂಬರ್ 89ರಲ್ಲಿರುವ 24.01 ಎಕರೆಯಲ್ಲಿ ನೈಸರ್ಗಿಕ ಗುಡ್ಡಗಳಿವೆ. ಗ್ರಾಮವು ಹೈದರಾಬಾದ್ ನಿಜಾಮರ ಕಾಲದಲ್ಲಿ ಅವರ ವ್ಯಾಪ್ತಿಯ ಕೊನೇಯ ಹಳ್ಳಿಯಾಗಿದ್ದು ಕೊಡೇಕಲ್ ಜಾಗೀರುದಾರರ ಒಡೆತನದಲ್ಲಿತ್ತು. ಮುಂದೆ ಟೆನೆಂಟ್ ಕಾಯ್ದೆ ಪ್ರಕಾರ ರೈತರಿಂದ ಪಟ್ಟು ತುಂಬಿಸಿಕೊಂಡು ಅವರಿಗೇ ಬಿಟ್ಟುಕೊಡಲಾಗಿತ್ತು. ಆದರೆ ಎರಡೂ ಗುಡ್ಡಗಳು ಪೂರ್ತಿ ಖರಾಬ್ ಇದ್ದ ಕಾರಣ ಸರ್ಕಾರವೇ ಕೊಡೇಕಲ್ ಜಾಗೀರುದಾರರಿಗೆ ಪಟ್ಟನ್ನು 1978ನೇ ಇಸ್ವಿಯಲ್ಲಿ ಸರಕಾರ ಎಂದು ದೃಢೀಕರಿಸಿತ್ತು.

2005-06ರಲ್ಲಿ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಾಗಿ ಆಗಿನ ತಹಶೀಲ್ದಾರರ ತಪ್ಪು ಮಾಹಿತಿಯಿಂದಾಗಿ ಕೊಡೇಕಲ್ ಜಾಗೀರುದಾರರ ವಂಶಸ್ಥರಿಗೆ ವಾರಸಾ ಮಾಡಿ 8.08 ಎಕರೆ ಜಮೀನನ್ನು ರಾಜ್ಯಪಾಲರ ಹೆಸರಿನಲ್ಲಿ ಖರೀದಿಸಿ ಯೋಜನೆ ಜಾರಿಗೊಳಿಸಲಾಗಿತ್ತು. ಆ ನಂತರ ಜಾಗೀರುದಾರರು ಗುಡ್ಡಗಳನ್ನು ಮಾರಲು ಯತ್ನಿಸಿದ್ದರು. ವಿಷಯ ತಿಳಿದ ಗ್ರಾಮಸ್ಥರು ಗುಡ್ಡಗಳನ್ನು ಉಳಿಸಿಕೊಳ್ಳಲು 2012ರಿಂದ ಇಲ್ಲೀವರೆಗೆ ಹೋರಾಟ ಮಾಡುತ್ತ ಬಂದಿದ್ದಾರೆ. ಆಗ ಮಾರಾಟ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.

ಆದರೆ ಈಗ ಪಹಣಿ ಉತಾರೆಯಲ್ಲಿ ಗೆರೆಯ ಮೇಲಿದ್ದ ಸರಕಾರ ಕಡಿಮೆ ಮಾಡಿ ವಾರಸುದಾರರನ್ನು ಗೆರೆಯ ಮೇಲೆ ತಂದಿದ್ದಾರೆ. ಇದರಿಂದ ಅವರು ಕಬ್ಬಾ ತೆಗೆದುಕೊಂಡು ಗುಡ್ಡ ಮಾರುವ ಪ್ರಯತ್ನದಲ್ಲಿದ್ದಾರೆ. ಇದನ್ನು ತಡೆಯಲು 2012ರಿಂದ 2022ರವರೆಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮುಂತಾದವರಿಗೆ ಸಲ್ಲಿಸಲಾಗಿದೆ. ಹಿಂದಿನ ತಹಶೀಲ್ದಾರ್ ಕಡಕಭಾವಿಯವರು ನಮ್ಮೆದುರಿಗೆ ಜಾಗೀರುದಾರರನ್ನು ಕರೆಸಿ ಮಾರಾಟ ಮಾಡದಂತೆ ಸೂಚಿಸಿದ್ದರು. ಇದೀಗ ಬೇಡಿಕೆಗಳಾದ ಎರಡೂ ಗುಡ್ಡ ಸಂಪೂರ್ಣ ಸರಕಾರ ಎಂದು ಜಗಳ ನಡೆದು ಕೊಲೆಗಳೂ ಆಗಿವೆ. ರೈತ ಸಂಘಟನೆಗು ಸತತ 15 ವರ್ಷ ನಡೆಸಿದ ಹೋರಾಟದ ಫಲವಾಗಿ ಸರ್ಕಾರವು 20-10-2023ರಂದು ಆದೇಶ ಹೊರಡಿಸಿ ರೈತರಿಗೆ ತೊಂದರೆ ಆಗದಂತೆ ಹೊಲಗಳಿಗೆ ಹೋಗಿ ಬರುವ ದಾರಿಗಳ ವಿಷಯದಲ್ಲಿ ತೊಂದರೆ ಕೊಡದಂತೆ ಸೂಚಿಸಲಾಗಿದೆ.

ನಾಗರಬೆಟ್ಟ ಗ್ರಾಮವು ಹೈದರಾಬಾದ್ ನಿಜಾಮರ ಕೊನೇಯ ಹಳ್ಳಿಯಾಗಿದ್ದು ರೈತರ ಜಮೀನುಗಳಿಗೆ ಸರಿಯಾದ ದಾರಿಗಳನ್ನು ನಕ್ಷೆಯಲ್ಲಿ ಗುರ್ತಿಸಲಾಗಿಲ್ಲ. ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಕೊಳ್ಳಬೇಕು. ಮನವಿಗೆ ಸ್ಪಂಧನೆ ದೊರಕದಿದ್ದಲ್ಲಿ ಡಿ.18ರಿಂದ ತಹಶೀಲ್ದಾರ್ ಕಚೇರಿ ಎದುರು ನೊಂದ ರೈತರೊಂದಿಗೆ ಹಗಲು ರಾತ್ರಿ ಧರಣಿ ಸತ್ಯಾಗ್ರಹವನ್ನು ತೊಂದರೆಗೊಳಗಾದ ರೈತರ ಸಹಯೋಗದೊಂದಿಗೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಪರಮಪ್ಪ ಗುರಿಕಾರ, ಸಂಗಪ್ಪ ಗುರಿಕಾರ, ಅಮರಪ್ಪ ಬಂಗಾರಗುಂಡ. ಮುರ್ತುಜಸಾಬ ವಾಲಿಕಾರ, ಸಂಗಪ್ಪ ಗುರಿಕಾರ, ಹಣಮಂತರಾಯ ಗುರಿಕಾರ, ಯಮನಪ್ಪ ನಂದಿಹಾಳ, ವೀರೇಶ ಬಾರಡ್ಡಿ, ಯಮನಪ್ಪ ನಂದ್ಯಾಳ, ದಾವಲಸಾಬ ನಾಲತವಾಡ, ಸಂಘದ ಸದಸ್ಯರು ಇದ್ದರು.

Related Post

Leave a Reply

Your email address will not be published. Required fields are marked *