ಪ್ರಿಯ ರೈತ ಬಾಂಧವರಿಗೆ, ಮೊದಲು ನೀವು ಈ ಪಹಣಿ ಅಂದರೆ ನಿಮ್ಮ ಹೊಲದ ಉತಾರನ್ನು ತೆಗೆದುಕೊಳ್ಳಲು ನೀವು ನಾಡಕಚೇರಿ ಅಥವಾ ಕಂಪ್ಯೂಟರ್ ಅಂಗಡಿಗೆ ಹೋಗುವ ಅವಶ್ಯವಿತ್ತು. ಈಗ ಅಲ್ಲಿಗೆ ಸುತ್ತಾಡುವ ಅವಶ್ಯಕತೆ ಇಲ್ಲ. ಅವರು ಅವರು ಒಂದು ಉತರನ್ನು ನಿಮಗೆ ಪ್ರಿಂಟ್ ಮಾಡಿಕೊಡಲು ತುಂಬಾ ಹಣ ತೆಗೆದುಕೊಳ್ಳುತ್ತಾರೆ ಆದಕಾರಣ ನಿಮ್ಮ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿ ಕುಳಿತು ಕೇವಲ ಐದು ನಿಮಿಷಗಳಲ್ಲಿ ನಿಮ್ಮ ಹೊಲದ ಉತಾರನ್ನು ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಬಹುದು. ಹೇಗೆ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈ ಪಹಣಿಯ ಉಪಯೋಗವೇನು?
ನಿಮಗೆ ತಿಳಿದಿದೆ ಈ ಪಹಣಿಯಲ್ಲಿ ನಿಮ್ಮ ಹೊಲದ ಸರ್ವೆ ನಂಬರ್, ನಿಮ್ಮ ಹೊಲದ ವಿಸ್ತೀರ್ಣ, ನಿಮ್ಮ ಹೊಲಕ್ಕೆ ಎಷ್ಟು ಜನ ವಾರಸ್ದಾರ ಇದ್ದಾರೆ ಎಂದು ತಿಳಿಯಲು ಈ ಉತಾರವು ತುಂಬಾ ಉಪಯೋಗಕರವಾಗುತ್ತದೆ. ಈ ಪಹಣಿಯಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಲ ಇದೆ ಅಥವಾ ಯಾರಾದರೂ ನಿಮ್ಮ ಜಮೀನ ಮೇಲೆ ಸಾಲವನ್ನು ತೆಗೆದುಕೊಂಡಿದ್ದಾರೋ ಎಂಬುದನ್ನು ಇದು ತೋರಿಸುತ್ತದೆ. ಇಷ್ಟೇ ಅಲ್ಲದೆ ಒಂದು ವೇಳೆ ಭೂಮಿ ಡಿಸ್ಪ್ಯೂಟ್ ಕೋರ್ಟಿನಲ್ಲಿ ಇದ್ದರೆ ಈ ಪಹಣಿಯಲ್ಲಿ ಸಂಪೂರ್ಣವಾಗಿ ನೋಡಬಹುದು.
ಮೊಬೈಲ್ ನಲ್ಲಿ ಪಹಣಿ ಡೌನ್ಲೋಡ್ ಮಾಡುವುದು ಹೇಗೆ?
ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ http://www.landrecords.karnataka.gov.in
ನಂತರ ಅಲ್ಲಿ ನಿಮಗೆ ಹಳೇ ವರ್ಷದ ಪಹಣಿ ಅಥವಾ ಸರದಿ ವರ್ಷದ ಪಹಣಿ ಎಂಬ ಆಯ್ಕೆ ಕಾಣುತ್ತದೆ. ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆ, ನಿಮ್ಮ ತಾಲೂಕ್, ನಿಮ್ಮ ಹೋಬಳಿ, ನಿಮ್ಮ ಗ್ರಾಮ ಅನ್ನು ಆಯ್ಕೆ ಮಾಡಿ ನಿಮ್ಮ ಸರ್ವೇ ನಂಬರ್ ಹಾಕಿದಮೇಲೆ GO ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ರೈತರು ಕೆಳಗೆ ಕಾಣುವ ಚಿತ್ರವನ್ನು ನೋಡಿಕೊಂಡು ನಾವು ಹೇಳುತ್ತಿರುವ ಆಯ್ಕೆಗಳನ್ನು ಸರಿಯಾಗಿ ಆಯ್ಕೆ ಮಾಡುತ್ತಾ ಹೋಗಬೇಕಾಗಿ ವಿನಂತಿ.
ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ಆಮೇಲೆ ಸರ್ ನಾಕ್, ನಿಮ್ಮ ಹಿಸ್ಸಾ ನಂಬರ್, ಅವಧಿ ಮತ್ತು ವರ್ಷವನ್ನು ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡಿ, ಕೊನೆಗೆ ರೈತರು “ವಿವರಗಳನ್ನು ಕರೆತರು” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಪರದೆ ಮೇಲೆ ನಿಮ್ಮ ಹೊಲದ ಪುಟ ನಿಮಗೆ ಕಾಣುತ್ತದೆ.
ಇದನ್ನೂ ಓದಿ :- 31 ಮಾರ್ಚ್ 2023 ರಂದು ಹಣ ಜಮಾ ನಿಮ್ಮ ಖಾತೆಗೆ ಜಮಾ ಆಗಿದಿಯ? ಕೂಡಲೇ ಚೆಕ್ ಮಾಡಿ ನೋಡಿ