ಕುಸುಬೆ ಈ ಭಾಗದ ಪ್ರಮುಖ ಎಣ್ಣೆಕಾಳಿನ ಬೆಳೆಯಾಗಿದ್ದು, ಕುಸುಬೆ ಹೂವಿನ ದಳಗಳು ಅತಿ ಹೆಚ್ಚಿನ ಔಷಧೀಯ ಹಾಗೂ ರೋಗ ಚಿಕಿತ್ಸಾ ಗುಣಗಳ ಮೌಲ್ಯ ಹೊಂದಿವೆ. ನಿತ್ಯ ಕುಸುಬೆ ಹೂವಿನ ದಳಗಳ ಚಹಾ ಸೇವನೆಯಿಂದ ಆರೋಗ್ಯದ ಮೇಲಾಗುವ ಲಾಭಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
• ಭಾರತೀಯ ಕುಸುಬೆಯ ತಳಿಗಳ ಹೂವಿನ ದಳಗಳು ಸುಮಾರು ಶೇ. 5 ಎಣ್ಣಿ ಹೊಂದಿದ್ದು, ಅವುಗಳಲ್ಲಿರುವ ಆಲ್ಟಾ-ಲೀನೋಲೆನಿಕ್ (ಶೇ. 15-19), ಗಾಮಾ-ಲೀನೋಲೆನಿಕ್ ( ಶೇ. 2-3), ಮತ್ತು ಪಾಮಿಟಿಕ್ (ಶೇ. 14-16) ಆಮ್ಲಗಳು ಔಷಧೀಯ ಗುಣಗಳಿಗೆ ಕಾರಣ.
ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ರೋಗಗಳ ತೊಂದರೆಗಳು ಕಡಿಮೆಯಾಗುತ್ತವೆ. ಇತ್ತೀಚಿನ ಸಂಶೋಧನೆಯ ಫಲಿತಾಂಶಗಳ ಪ್ರಕಾರ ಕುಸುಬೆ ಹೂವಿನ ಚಹಾ ಸೇವನೆಯಿಂದ ರಕ್ತದ ಕೊಲೆಸ್ಟರಾಲ್ ಮಟ್ಟ ತಗ್ಗುತ್ತದೆ ಎಂದು ತಿಳಿದು ಬಂದಿದೆ.
• ಸಂಧಿವಾತ, ಕುತ್ತಿಗೆ ನೋವು ಹಾಗೂ ಉಸಿರಾಟದ ತೊಂದರೆಗಳು ಕಡಿಮೆಯಾಗುತ್ತವೆ. ಬಿಸಿ ನೀರಿನಿಂದ ತಯಾರಿಸಿದ ಚಹಾ ಪೇಯವು ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆಗಳಿಗೆ ರಾಮಬಾಣವಾಗಿದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ರಸ ಗೊಬ್ಬರಗಳ ಬೆಲೆ ಏರಿಕೆ?ರಷ್ಯಾದಿಂದ ಬರುವ ರಸಗೊಬ್ಬರಗಳ ರಿಯಾಯಿತಿ ರದ್ದು
ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಹೇಗೆ?
PM ದಕ್ಷ್ ಯೋಜನೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ನೋಂದಾಯಿಸಿ