ಆತ್ಮೀಯ ರೈತ ಬಾಂಧವರಿಗೆ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಬರಗಾಲವು ಬಂದ ಕಾರಣ ಎಲ್ಲರಿಗೂ ಪರಿಹಾರವನ್ನು ನೀಡಲು ನಿರ್ಧಾರ ಮಾಡಿದ್ದಾರೆ. ಈ ಪರಿಹಾರವನ್ನು ಸರ್ಕಾರವು ನೀಡಲು ಅವರಿಗೆ ಏನೇನು ದಾಖಲಾತಿಗಳನ್ನು ನೀಡಬೇಕು ಮತ್ತು ಯಾವ ಆದರದ ಮೇಲೆ ನಿಮಗೆ ಈ ಬೆಳೆ ಪರಿಹಾರವನ್ನು ನೀಡುತ್ತಾರೆ ಎಂದು ತಿಳಿಯುವುದು ಮುಖ್ಯವಾಗಿದೆ. ರೈತರು ಪರಿಹಾರದ ಮೊತ್ತವನ್ನು ಪಡೆದುಕೊಳ್ಳಲು ಏನು ಮಾಡಬೇಕು ಎಂದು ತಿಳಿಯಲು ಸಂಪೂರ್ಣವಾಗಿ ಓದಿ.
ಯಾವ ಆಧಾರದ ಮೇಲೆ ಬೆಳೆ ಪರಿಹಾರ ನೀಡುತ್ತಾರೆ?
ನೀವು ಈಗಾಗಲೇ ಕೇಳಿರಬಹುದು ಸರ್ಕಾರವು 191 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ. ನಿನ್ನಷ್ಟೇ ಈ 191 ತಾರೀಕುಗಳಿಗೆ ಇನ್ನು 43 ತಾಲೂಕುಗಳನ್ನು ಹೊಸದಾಗಿ ಸೇರಿಸಿ ಈ ಎಲ್ಲ ತಾಲೂಕುಗಳಿಗೆ ಪರಿಹಾರ ಧನವನ್ನು ನೀಡಲು ಸರ್ಕಾರವು ಮುಂದಾಗಿದೆ. ಇದರಲ್ಲಿ ಎರಡು ರೀತಿಯ ಬರಪೀಡಿತ ತಾಲೂಕುಗಳಿವೆ. ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಒಂದು ಅತಿ ಬರಪೀಡಿತ ತಾಲೂಕು ಮತ್ತು ಇನ್ನೊಂದು ಸಾಧಾರಣ ತಾಲೂಕು.
ಬೆಳೆ ಪರಿಹಾರವನ್ನು ಪಡೆಯಲು ರೈತರು ಏನು ಮಾಡಬೇಕು?
ಬೆಳೆ ಪರಿಹಾರವನ್ನು ಪಡೆಯಲು ರೈತರು ಬೆಳೆ ಸಮೀಕ್ಷೆ ಮಾಡುವುದು ಅತಿ ಮುಖ್ಯವಾಗಿದೆ. ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಸರ್ಕಾರಕ್ಕೆ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆದಿದ್ದೀರಿ ಎಂದು ತಿಳಿಯುತ್ತದೆ. ನೀವು ಯಾವ ಬೆಳೆಯನ್ನು ಬೆಳೆದಿದ್ದೀರಿ ನಿಮ್ಮ ಹೊಲದಲ್ಲಿ ಎಷ್ಟು ನಷ್ಟ ನಿಮಗೆ ಆಗಿದೆ ಅದರ ಮೇಲೆ ಸರ್ಕಾರವು ನಿಮಗೆ ಪರಿಹಾರ ಧನವನ್ನು ನೀಡುತ್ತದೆ. ಆದಕಾರಣ ನೀವು ಬೆಳೆ ಸಮೀಕ್ಷೆ ಮಾಡುವುದು ಅತಿ ಮುಖ್ಯವಾಗಿದೆ. ಹಾಗಾದರೆ ಈ ಬೆಳೆ ಸಮೀಕ್ಷೆ ಮಾಡುವುದು ಹೇಗೆ ಮತ್ತು ನೀವು ಬೆಳೆ ಸಮೀಕ್ಷೆ ಮಾಡಿದ್ದನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂದು ತಿಳಿಯೋಣ.
ಮೊದಲು ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.csk.farmer23_24.cropsurvey ಆಗ ನಿಮ್ಮ ಮುಂದೆ ಒಂದು ಆ್ಯಪ್ ತೆರೆದುಕೊಳ್ಳುತ್ತದೆ. ಪ್ಲೇ ಸ್ಟೋರ್ ನಿಂದ ಈ ಆಪ್ ಅನ್ನು ಮೊದಲು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅದನ್ನು ಓಪನ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನೊಂದಣಿ ಮಾಡಿಕೊಳ್ಳಬೇಕು. ನೊಂದಣಿ ಮಾಡಿಕೊಳ್ಳಲು ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ನೀವು ಹಾಕಿದರೆ ನಿಮ್ಮ ನೋಂದಣಿ ಮುಕ್ತಾಯಗೊಳ್ಳುತ್ತದೆ.
ನೊಂದಣಿಯಾದ ನಂತರ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ನಿಮ್ಮ ಬೆಳೆ ಸಮೀಕ್ಷೆಯನ್ನು ಮಾಡಲು ಪ್ರಾರಂಭಿಸಬೇಕು. ಇಲ್ಲಿ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://bhoomisuddi.com/2023-24-monsoon-crop-survey-app-has-been-released/ ಸಾಕು ಬೆಳೆ ಸಮೀಕ್ಷೆ ಮಾಡುವ ಸಂಪೂರ್ಣ ಮಾಹಿತಿ ದೊರೆತು ಬಿಡುತ್ತದೆ.
ನೀವು ಬೆಳೆ ಸಮೀಕ್ಷೆ ಮಾಡಿರೋದು ಖಚಿತಪಡಿಸುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.crop.offcskharif_2021 ಆಗ ನೀವು ಪ್ಲೇ ಸ್ಟೋರ್ ಗೆ ಹೋಗುತ್ತೀರಿ ಅಲ್ಲಿ ನಿಮ್ಮ ಮುಂದೆ ಬೆಳೆ ದರ್ಶಕ ಎಂಬ ಆಪ್ ಕಾಣುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು.
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ಅಲ್ಲಿ ವರ್ಷ ಋತು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ವಿವರ ಪಡೆಯಿರಿ, ಸರ್ವೆ ನಂಬರ್ / ಹಿಸ್ಸಾ ವಿವರಕ್ಕೆ ಕ್ಲಿಕ್ ಮಾಡಿ, ಮಾಲೀಕರ ವಿವರಕ್ಕಾಗಿ ಕ್ಲಿಕ್ ಮಾಡಿ. ಇಷ್ಟಲ್ಲಾದ ಮೇಲೆ ಕೊನೆಗೆ ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಯಾವ ಬೆಳೆಯನ್ನು ಸರ್ವೇ ಮಾಡಿದ್ದೀರಿ ಎಂಬ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರುತ್ತದೆ.