ಎಲೆಕ್ಷನ್ ಅಪ್ಡೇಟ್, 2024 ಅಂತಿಮ ಮತದಾರರ ಪಟ್ಟಿ ಪ್ರಕಟ
ರಾಜ್ಯದಲ್ಲೀಗ ಒಟ್ಟು 5,37,85,815 ಮತದಾರರು. ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-2024 ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಾಮಾನ್ಯ ಮತದಾರರ 0 5,37.85.815 ಇದರಲ್ಲಿ 2,69,33,750 ಪುರುಷ ಮತದಾರರು. 2,68,47,145 ಮಹಿಳಾ ಮತದಾರರು ಮತ್ತು 4.920 ಇತರೆ ಮತದಾರರು ಇದ್ದಾರೆ. ಇದರಲ್ಲಿ ಮಹಿಳಾ ಮತದಾರರಿಗೂ ಹಾಗೂ ಪುರುಷ ಮತದಾರರಿಗೂ ಸ್ವಲ್ಪ ಮಾತ್ರ ವ್ಯತ್ಯಾಸವಿರುವುದು ಸಂತಸದ ವಿಷಯವಾಗಿದೆ. ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಪ್ರಕಟಿಸಲಾದ ರಾಜ್ಯದ ಅಂತಿಮ ಮತದಾರರ ಪಟ್ಟಿ 2024 ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರಲ್ಲಿ 1.30 ಮತ್ತು ಇತರೆ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆ 17,937 ಆಗಿದೆ.
ಆದರೆ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟ ವಯಸ್ಸಿನ 23,377 ಇತ್ತು. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ. 18-19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರಡುಪಟ್ಟಿಯಲ್ಲಿ 6.45 ಲಕ್ಷ ಮತದಾರರಿದ್ದರೆ, ಅಂತಿಮಪಟ್ಟಿಯಲ್ಲಿ 10.34 ಮತದಾರರಿದ್ದಾರೆ.
ಒಟ್ಟು 3.88 ಲಕ್ಷ ಮತದಾರರ ಅಧಿಕವಾಗಿದ್ದಾರೆ. ಸೇವಾ ಮತದಾರರು ಒಟ್ಟು 46,501 ರಷ್ಟು ಇದ್ದಾರೆ. 3,164 ಸಾಗರೋತ್ತರ ಮತದಾರರಿದ್ದಾರೆ. ವಿಕಲಚೇತನ ಮತದಾರರು 5.62 ಲಕ್ಷ ಮಂದಿ ಇದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು 7,17,201 ಮತದಾರರಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಒಟ್ಟು 1,67,556 ಮತದಾರರಿದ್ದಾರೆ.
ಅಂತಿಮ ಮತದಾರರ ಪಟ್ಟಿ ಪ್ರಕಟ; ಹೆಸರು ಪರಿಶೀಲನೆಗೆ ಅವಕಾಶ
ಅರ್ಹ ಮತದಾರರ ಸೇರ್ಪಡೆ ಮತ್ತು ಮತದಾರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2024ಗೆ ಸಂಬಂಧಿಸಿದಂತೆ ಜ.22ರಂದು ಅಂತಿಮ ಮತದಾರ ಪಟ್ಟಿಯನ್ನು ಜಿಲ್ಲೆಯ 1234 ಮತಗಟ್ಟೆ ಕೇಂದ್ರಗಳಲ್ಲಿ ಪ್ರಚುರಪಡಿಸಲಾಗಿದೆ. ಮುಂದುವರೆದು ಅಂತಿಮ ಮತದಾರ ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟಿನಲ್ಲಿ (vijayanagar.nic.in) ಹಾಗೂ ಆಯೋಗದ ವೋಟರ್ ಹೆಲ್ಪಲೈನ್ ಆಪ್‌ನಲ್ಲಿನಲ್ಲಿ ಅಪಡೇಟ್ ಮಾಡಲಾಗಿದ್ದು ಮತದಾರರು ತಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜನವರಿ 22ರಂದು ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ 88-ಹಡಗಲಿ, 89-ಹೆಚ್.ಬಿ.ಹಳ್ಳಿ, 90-ವಿಜಯನಗರ, 96-ಕೂಡ್ಲಗಿ, 104-ಹರಪನಹಳ್ಳಿಯ ಅರ್ಹತಾ 01.01.2024 ಮತದಾರ ಪಟ್ಟಿ ಪರಷ್ಕರಣೆ ಅಂತಿಮ ಮತದಾರ ಪಟ್ಟಿಯನ್ನು, ಜಿಲೆಯ ಎಲ್ಲಾ ಮತದಾರ ನೋಂದಣಾಧಿಕಾರಿ ಕಚೇರಿ, (ಸಹಾಯಕ ಆಯುಕ್ತರು), ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ (ತಹಶೀಲ್ ಕಚೇರಿ) ಹಾಗೂ ತಾಲ್ಲೂಕು ಪಂಚಾಯತ್, ನಗರಸಭೆ, ಪುರಸಭೆ ಮತ್ತು ಜಿಲ್ಲೆಯ ಒಟ್ಟು 1234 ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಅಂತಿಮ ಮತದಾರ ಪಟ್ಟಿಯನ್ನು ಪ್ರಚುರಪಡಿಸಲಾಗಿರುತ್ತದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆವಾರು ಬಿಎಲ್‌ಇ ಅವರ ಮುಖಾಂತರ ಮತದಾರರ ಹೆಸರು ನೋಂದಣೆಯಾಗಿರುವ ಕುರಿತು ಹಾಗೂ ಯಾವುದೇ ತಪ್ಪುಗಳಿದ್ದರೆ ನೇರವಾಗಿ ಮತದಾರರ ನೋಂದಣಾಧಿಕಾರಿ ಕಚೇರಿಗೆ ಮಾಹಿತಿ ನೀಡಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಗಿದೆ. ಅಂತಿಮ ಮತದಾರ ಪಟ್ಟಿ ಪ್ರಕಟಣೆ ನಂತರ ಸಹ ಯಾವುದೇ ಮತದಾರರ ನೋಂದಣೆ ಮಾಡಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಆಯೋಗದ ವೆಬ್‌ಸೈಟಿನಲ್ಲಿ ಹಾಗೂ ವೋಟರ್ ಹೆಲ್ಪಲೈನ್‌ದಲ್ಲಿ ನಿರಂತರ ನೋಂದಣೆ ಮಾಡಲು ಅವಕಾಶವಿರುತ್ತದೆ. ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 21,919 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.