ಅಯೋಧ್ಯೆಯಲ್ಲಿ ಜ.22ರಂದು ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯು ಬಜೆಟ್ನಲ್ಲಿ ಪ್ರಸ್ತಾಪವಾಗಿದೆ. ಒಂದು ಕೋಟಿ ಮನೆಗೆ ಉಚಿತವಾಗಿ 300 ವಾರ್ಷಿಕ 18,000 ರೂ. ಉಳಿಸುವ ಉದ್ದೇಶವನ್ನು ಹೊಂದಿದೆ.
ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ
1 ಕೋಟಿ ಮನೆಗಳಿಗೆ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ ಅಡಿಯಲ್ಲಿ ಭಾವಣಿಯಲ್ಲಿ ಸೋಲಾರ್ ಅಳವಡಿಸಲು ಕೇಂದ್ರದಿಂದ ಪ್ರೋತ್ಸಾಹ. 300 ಯೂನಿಟ್ ವಿದ್ಯುತ್ ಉಚಿತ :- ಸೂರ್ಯೋದಯ ಯೋಜನೆ ಫಲಾನುಭವಿಗಳು ಮಾಸಿಕ 300 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲಿದ್ದಾರೆ. ಸೋಲಾರ್ ಚಾವಣಿಯಿಂದಾಗಿ ಮಾಸಿಕ 18,000 ರೂ. ಉಳಿತಾಯ.
26 ಪಟ್ಟು ಹೆಚ್ಚಳ:- ಕಳೆದ 20 ವರ್ಷದಲ್ಲಿ ದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ಆಗಿರುವ ಏರಿಕೆ. 30 ಗಿಗಾ ವ್ಯಾಟ್ :- ಸೌರಶಕ್ತಿ ಆಧರಿತ ಇಂಧನ ಉತ್ಪಾದನೆ ಆಗುವ ನಿರೀಕ್ಷೆ. 5ನೇ ಸ್ಥಾನ :- ವಿಶ್ವದಲ್ಲಿ ಸೋಲಾರ್ ಶಕ್ತಿ ಉತ್ಪಾದನೆ ಸಾಮರ್ಥ್ಯದ ದೇಶಗಳ ಪಟ್ಟಿಯಲ್ಲಿ ಸದ್ದ ಭಾರತ ಹೊಂದಿರುವ ಸ್ಥಾನ.
ಯುವ ಸಂಗಮ ಯೋಜನೆಗಾಗಿ -ಆನ್‌ಲೈನ್ ನೊಂದಣಿ ಪ್ರಾರಂಭ
ಕೇಂದ್ರ ಶಿಕ್ಷಣ ಸಚಿವಾಲಯವು ಜನವರಿ 25ರಂದು ಏಕ್ ಭಾರತ ಶ್ರೇಷ್ಠ ಭಾರತ ಅಡಿಯಲ್ಲಿ ಯುವ ಸಂಗಮ ಯೋಜನೆಗಾಗಿ ಆನ್‌ಲೈನ್ ನೊಂದಣಿಯ ನಾಲ್ಕನೇ ಹಂತವನ್ನು ಪ್ರಾರಂಭಿಸಿದೆ. ಭಾರತ ಸರ್ಕಾರವು ವಿವಿಧ ಭಾರತೀಯ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಜನರ ನಡುವೆ ಪರಸ್ಪರ ಸಂಬಂಧಗಳನ್ನು ಸುಧಾರಿಸಲು ಯುವ ಸಂಗಮ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ তেত. ವೀರೇಶ್ ಕಸಬೆಗೌಡ ಅವರು ತಿಳಿಸಿದ್ದಾರೆ.2023ರಲ್ಲಿ ಪ್ರಾರಂಭವಾದ ವಿಶೇಷ ಕಾರ್ಯಕ್ರಮದ ನಾಲ್ಕನೇ ಹಂತ ಈಗ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಳ್ಳಲು 18ರಿಂದ 30 ವರ್ಷ ವಯಸ್ಸಿನ ಆಸಕ್ತ ಯುವಕರು, ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆಯ ಮತ್ತು ನೆಹರು ಯುವ ಕೇಂದ್ರದ ಸ್ವಯಂ ಸೇವಕರು, ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ಯುವ ಸಂಗಮ್ ಪೋರ್ಟಲ್ ಮೂಲಕ ನೊಂದಾಯಿಬಹುದು. ಫೆಬ್ರವರಿ 4ರವರೆಗೆ ನೊಂದಣಿ ಪೋರ್ಟಲ್ ಚಾಲ್ತಿಯಲ್ಲಿರುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ. ನೋಡಲ್ ಸಂಸ್ಥೆಯಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ಐಐಟಿ ಕಾನ್ಸುರದ ಸಹಯೋಗದೊಂದಿಗೆ ಕಾರ್ಯಕ್ರಮ ವಿಶೇಷ ಸಂಯೋಜಿಸುತ್ತಿದೆ. ನೊಂದಣಿ ಮತ್ತು ಹೆಚ್ಚಿನ ವಿವರಗಳಿಗಾಗಿ 9422248488ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.
ತೆಲಂಗಾಣ್ ಮಾದರಿಯಲ್ಲಿ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ, ಜೀವ ವಿಮೆಗೆ ಆಗ್ರಹಿಸಿ ಫೆಬ್ರವರಿ 6ರಂದು ಬೆಂಗಳೂರು ಚಲೋ ಚಳುವಳಿ
ತೆಲಂಗಾಣ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವು ರೈತರ ಸಾಲ ಮನ್ನಾ ಮಾಡಿದ್ದಲ್ಲದೇ ರೈತರಿಗೆ ಜೀವ ವಿಮಾ ಮಾಡಿಸಿದೆ. ಅದೇ ರೀತಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇದೇ ಫೆಬ್ರವರಿ 6ರಂದು ಕಬ್ಬು ಬೆಳೆಗಾರರು ಹಾಗೂ ರೈತ ಮಹಿಳೆಯರು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಂಡಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಧರ್ಮರಾಜ್ ಬಿ. ಸಾಹು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ರಾಜ್ಯ ಸರ್ಕಾರವು 2024ರಲ್ಲಿ ಮಂಡಿಸುವ ಬಜೆಟ್‌ನಲ್ಲಿ ರಾಜ್ಯದ ರೈತರ ಒತ್ತಾಯಗಳ ಕುರಿತು ಗಮನಸೆಳೆಯುವ ಉದ್ದೇಶವನ್ನು ಹೋರಾಟವು ಹೊಂದಿದೆ ಎಂದರು. ಇದೇ ಕಾಂಗ್ರೆಸ್ ಪಕ್ಷವು ತೆಲಂಗಾಣ್‌ದಲ್ಲಿ ಅಧಿಕಾರದಲ್ಲಿದ್ದು, ಅಲ್ಲಿ ರೈತರ ಸಾಲ ಮನ್ನಾ ಮಾಡಿದೆ.
ಹಿರೇಬೇವನೂರ ಗ್ರಾಮದಲ್ಲಿ ಜವೆ ಗೋದಿ ಬೆಳೆಯ ಕ್ಷೇತ್ರೋತ್ಸವ
ಫೆ.3:ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಜವೆ ಗೋದಿ ಬೆಳೆಯ ತಳಿ ಡಿ.ಡಿ.ಕೆ.-1029 ಕುರಿತು ಕ್ಷೇತ್ರೋತ್ಸವ ತಾಲೂಕಿನ ಹಿರೇಬೇವನೂರ ಗ್ರಾಮದ ನಿವಾಸಿ ಸಂತೋಷ ಬಿರಾದರ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ವಿ.ಕೆ. ವತಿಯಿಂದ 2023- 24ನೇ ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ವಿವಿಧ ಗ್ರಾಮದ 10 ಜನ ರೈತರಿಗೆ ಜವೆ ಗೋದಿ ಬೀಜಗಳನ್ನು ವಿತರಣೆ ಮಾಡಿ ಅವುಗಳ ಬೇಸಾಯ ಕ್ರಮಗಳ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ನೀಡಲಾಗಿತ್ತು.
ಕಾರ್ಯಕ್ರಮದ ಆಯೋಜ- ಕರಾದ ಡಾ. ಪ್ರಕಾಶ ಜಿ. ವಿಜ್ಞಾನಿ ಮಾತನಾಡಿ ಜವೆ ಗೋದಿ ಡಿ.ಡಿ.ಕೆ.-1029 ತಳಿ ಹಿಂಗಾರಿಗೆ ತಳಿಯು ಡೈಕೊಕಮ ಜಾತಿಗೆ ಸೇರಿದ ತಳಿಯಾಗಿದೆ ಇದನ್ನು ಸ್ಥಳೀಯವಾಗಿ ಕಪಲಿ ಅಥವಾ ಸದಕ ಎಂದು ಕರೆಯುತ್ತಾರೆ. ಈ ತಳಿಯು 105-110 ದಿನಗಳಲ್ಲಿ ಕಟಾವಿಗೆ ಬರುತ್ತದೆ ಹಾಗೂ ಚಪಾತಿ ಹಾಗೂ ರವಾ ಮಾಡಲು ಸೂಕ್ತವಾಗಿದೆ ಹಾಗೂ ಗೋದಿ ಸಸ್ಯವು ಸುಮಾರು 150-180 ಸೆಂ.ಮಿ. ಎತ್ತರಕ್ಕೆ ಬೆಳೆದು ತುಕ್ಕು ರೋಗವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ ಮತ್ತು ನಾರಿನಂಶ ಹೆಚ್ಚಿಗೆ ಇರುವದರಿಂದ ಸಕ್ಕರೆ ಕಾಯಿಲೆ ರೋಗಿಗಳ ಸೇವನಗೆ ಉತ್ತಮ ಆಹಾರ ಧಾನ್ಯವಾಗಿದೆ ಎಂದು ತಿಳಿಸಿದರು.