ಪ್ರಿಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಕೃಷಿಗೆ ತುಂಬಾ ಆದ್ಯತೆ ಕೊಡುತ್ತಿದ್ದು ರೈತರು ಆಧುನಿಕ ಯುಗಕ್ಕೆ ಹೋಗುವುದು ತುಂಬಾ ಅವಶ್ಯವಾಗಿದೆ. ಆದಕಾರಣ ಅವರು ಮೊಬೈಲ್ ನಲ್ಲಿ ತಮಗೆ ಬೇಕಾದ ಎಲ್ಲ ಸಂಗತಿಗಳನ್ನು ಬಳಕೆ ಮಾಡಲು ಕಲಿಯಬೇಕಾಗಿದೆ. ರೈತರು ಈಗ ತಮ್ಮ ಹೆಸರಿನಲ್ಲಿ ಎಷ್ಟು ಹೊಲ ಇದೆ ಎಂದು ತಿಳಿದುಕೊಳ್ಳಬಹುದು. ಹೀಗೆ ತಿಳಿಯುವುದರಿಂದ ಆಸ್ತಿಗಾಗಿ ಜಗಳಗಳು ಕಡಿಮೆಯಾಗುತ್ತದೆ ಮತ್ತು ನಿಮಗೆ ಆಸ್ತಿ ಪಾಲುವಾಗುವ ಮುನ್ನ ನಿಮಗೇನಾದರೂ ಮೋಸವಾಗಿದ್ದರೆ ನಿಮಗೆ ಕೂಡಲೇ ತಿಳಿದು ಬರುತ್ತದೆ. ಯಾರಾದರೂ ನಿಮ್ಮ ಜಮೀನನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಂಡಿದ್ದಾರೆ ಇಲ್ಲಿ ಸುಲಭವಾಗಿ ತಿಳಿಯಬಹುದು. ಕಂದಾಯ ಇಲಾಖೆಯು ರೈತರಿಗಾಗಿ ಒಂದು ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಈ ಆ್ಯಪ್ ಹೆಸರು ಮತ್ತು ಅದರ ಉಪಯೋಗ ಏನು?
ರೈತರಿಗೆ ಸಹಾಯವಾಗಲು ಸರ್ಕಾರದಿಂದ ಒಂದು ಹೊಸ ಆ್ಯಪ್ ಬಂದಿದೆ. ಈ ಆ್ಯಪ್ ಹೆಸರು ‘ಭೂಮಿ’ ಅಂತೆ. ನಮ್ಮ ಕಂದಾಯ ಇಲಾಖೆಯು ರೈತರಿಗೆ ಉಪಯುಕ್ತವಾಗಲಿ ಎಂದು ಈ ಭೂಮಿ ಆ್ಯಪ್ ಅನ್ನು ಅಭಿವೃದ್ಧಿ ಮಾಡಿದೆ. ರೈತರು ಈಗ ಅತಿ ಸುಲಭವಾಗಿ ತಮ್ಮ ಹೆಸರಿನಲ್ಲಿ ಎಷ್ಟು ಜಮೀನಿದೆ ಮತ್ತು ತಮ್ಮ ಜಮೀನಿನ ದಾಖಲೆಗಳನ್ನು ಕೆಲವೇ ನಿಮಿಷಗಳಲ್ಲಿ ತಮ್ಮ ಮೊಬೈಲ್ ನಲ್ಲಿ ನೋಡಿ ಖಾತರಿ ಪಡಿಸಿಕೊಳ್ಳಬಹುದು. ರೈತರು ತಮ್ಮ ಹೊಲವು ತಮ್ಮ ಹೆಸರಿನಲ್ಲಿದೆಯೋ, ಅಥವಾ ತಮ್ಮ ಮನೆಯವರ ಜೊತೆ ಜಂಟಿಯಾಗಿದೆಯೋ ಎಂದು ತಿಳಿಯಲು ಈ ಆ್ಯಪ್ ತುಂಬಾ ಸಹಾಯವಾಗುತ್ತದೆ. ಈಗ ರೈತರು ತಮ್ಮ ಪಕ್ಕದಲ್ಲಿ ಹಲವಿರುವ ರೈತರ ಸರ್ವೆ ನಂಬರ್ ಏನು ಮತ್ತು ತಮ್ಮ ಹೆಸರಿನಲ್ಲಿ ಎಷ್ಟು ಎಕರೆ ಹೊಲ ಇದೆ ಎಂದು ತಿಳಿಯಲು ಸೂಕ್ತ ಮಾರ್ಗ ಈ ಆ್ಯಪ್ ನಿಂದ ಪಡೆಯಬಹುದು.
ಈ ಆ್ಯಪ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಬಳಕೆ ಮಾಡುವುದು ಹೇಗೆ?
ರೈತರು ತಮ್ಮ ಹಳ್ಳಿಯಲ್ಲಿ ಯಾವ ಯಾವ ರೈತರ ಹೆಸರಿನಲ್ಲಿ ಎಷ್ಟು ಹೊಲವಿದೆ ಎಂದು ತಿಳಿಯಲು ರೈತರು ಪ್ಲೇಸ್ಟೋರ್ ನಿಂದ ನಾವು ಮೇಲೆ ತಿಳಿಸಿರುವ ಭೂಮಿ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈ ಆಪನ್ನು ಡೌನ್ಲೋಡ್ ಮಾಡಲು ಮೊದಲು ರೈತರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=app.bmc.com.BHOOMI_MRTC
ರೈತರು ಈ ಆಪನ್ನು ಇನ್ಸ್ಟಾಲ್ (install) ಮಾಡಿಕೊಳ್ಳಬೇಕು. ನಾವು ಮೇಲಿನ ಚಿತ್ರದಲ್ಲಿ ಕಾಣಿಸುವ ಹಾಗೆ ಅಲ್ಲಿ ನಿಮಗೆ View RTC by Owner Name ಎಂಬ ಆಯ್ಕೆಯು ಕಾಣುತ್ತದೆ. ಆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇಷ್ಟಾದ ಮೇಲೆ ನಿಮಗೆ ಇನ್ನೊಂದು ಮುಖಪುಟ ತೆರೆಯುತ್ತದೆ.
ನಿಮ್ಮ ಹೆಸರಿನಲ್ಲಿ ಎಷ್ಟು ಎಕರೆ ಹೊಲ ಇದೆ?
ಆ ಮುಖಪುಟದಲ್ಲಿ ನಮ್ಮ ರೈತರು ತಮ್ಮ ಜಿಲ್ಲೆ ತಮ್ಮ ತಾಲೂಕ್ ತಮ್ಮ ಹುಬ್ಬಳ್ಳಿ ಮತ್ತು ತಮ್ಮ ಗ್ರಾಮವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಇಷ್ಟಾದ ಮೇಲೆ ನೀವು View Details ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಬೇರೊಂದು ಪೇಜ್ ತೆರೆಯುತ್ತದೆ. ಅಲ್ಲಿ ನಿಮಗೆ ಜಮೀನು ಮಾಲೀಕರ ವಿವರ ಅಂದರೆ ನಿಮ್ಮ ಹಳ್ಳಿಯ ಎಲ್ಲಾ ರೈತರ ಪಟ್ಟಿ ನಿಮಗೆ ಸಿಗುತ್ತದೆ. ಅಲ್ಲಿ ಆ ಹೊಲದ ಮಾಲೀಕರ ಹೆಸರು, ಸರ್ವೆ ನಂಬರ್ ಮತ್ತು ಆಕ್ಷನ್ ಎಂಬ ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಅಲ್ಲಿ ಕಾಣಿಸುವ ಆಕ್ಷನ್(action) ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿದರೆ ಸಾಕು ನಿಮಗೆ ನಿಮ್ಮ ಹೆಸರಿನಲ್ಲಿ ಎಷ್ಟು ಎಕರೆ ಹೊಲ ನೊಂದಣಿ ಆಗಿದೆ ಎಂದು ನಿಮಗೆ ಖಚಿತವಾಗುತ್ತದೆ.
ಇದನ್ನೂ ಓದಿ :- ರೈತರು ಕೇವಲ 5 ನಿಮಿಷದಲ್ಲಿ ಮೊಬೈಲ್ ನಲ್ಲಿ ನಿಮ್ಮ ಊರಿನ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
ಇದನ್ನೂ ಓದಿ :- ಸರ್ಕಾರದಿಂದ ಏಪ್ರಿಲ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡಲು ಆರಂಭ
ಈ ಯೋಜನೆಗೆ ಅರ್ಹ ಮಹಿಳೆಯರು ಕೂಡಲೇ ಉಚಿತ ಪಾಸ್ ಪಡೆಯಲು ಅರ್ಜಿಯನ್ನು ಸಲ್ಲಿಸಿ
ಇದನ್ನೂ ಓದಿ :- ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ಸಂಖ್ಯೆ ಹಾಕಿ ನಿಮಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಿರಿ