ಆತ್ಮೀಯ ರೈತ ಬಾಂಧವರೇ, ಸರ್ಕಾರವು ರೈತರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದೆ. ರೈತರು ಅದನ್ನು ಸದುಪಯೋಗ ಪಡಿಸಿಕೊಳ್ಳಲು ಸುಲಭವಾಗುತ್ತಿಲ್ಲ. ಆದಕಾರಣ ನಾವು ಈ ಲೇಖನದಲ್ಲಿ ನಿಮಗೆ ಕೃಷಿಯಲ್ಲಿ ನೀರು ನಿರ್ವಹಣೆ ಮಾಡಲು ಪೈಪ್ ಲೈನ್ ಅನ್ನು ಸಬ್ಸಿಡಿ ಮುಖಾಂತರ ಕೊಡಲು ಸರ್ಕಾರ ತಿಳಿಸುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ.
ಈ ಯೋಜನೆಯ ಹೆಸರು ಏನು ಮತ್ತು ಎಷ್ಟು ಸಹಾಯಧನ ನೀಡುತ್ತಾರೆ?
ನಮ್ಮ ಸರ್ಕಾರವು ಕೃಷಿ ಸಿಂಚಾಯಿ ಯೋಜನೆಯಿಂದ ರೈತರಿಗೆ ಸಹಾಯಧನವನ್ನು ನೀಡಿ ಅವರ ಉದ್ಧಾರಕ್ಕಾಗಿ ಸಜ್ಜಾಗಿ ನಿಂತಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಪೈಪ್ ಲೈನ್ ನೀಡುವ ಮುಖಾಂತರ ಅವರ ಕೃಷಿ ಚಟುವಟಿಕೆಗಳನ್ನು ಉತ್ತೇಣಗೊಳಿಸಲು ಸರ್ಕಾರ ತೀರ್ಮಾನ ಮಾಡಿದೆ. ಈ ಬಾರಿ ಸರ್ಕಾರವು ರೈತರಿಗೆ 50% ಸಹಾಯಧನವನ್ನು ನೀಡಿ ರೈತರಿಗೆ ಸಹಾಯ ಮಾಡಿದೆ. ಹಾಗಾದರೆ ರೈತರಿಗೆ ಒಟ್ಟು 80,000 ಸಹಾಯ ಸಹಾಯಧನ ಬಂದು ತಲುಪುತ್ತದೆ. ಇದರಿಂದ ರೈತರಿಗೆ ಅತಿ ಸುಲಭವಾಗಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಮತ್ತು ಎಲ್ಲಿ ಸಲ್ಲಿಸಬೇಕು?
ರೈತನ ಆಧಾರ್ ಕಾರ್ಡ್, ರೈತನ ಮೊಬೈಲ್ ಸಂಖ್ಯೆ, ರೈತನ ಜನನ ಪ್ರಮಾಣ ಪತ್ರ, ರೈತನ ಪಾನ್ ಕಾರ್ಡ್, ರೈತನ ಬ್ಯಾಂಕ್ ಪಾಸ್ ಬುಕ್, ಹೊಲದ ಪಹಣಿ ಮತ್ತು ರೈತನ ನಿವಾಸ ಪ್ರಮಾಣ ಪತ್ರವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ. ಅಲ್ಲಿ ನೀವು ಸರ್ಕಾರದ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ರೈತರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಕಚೇರಿಗೆ ಭೇಟಿ ನೀಡಿ ಅಥವಾ ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ 1800-180-1551