ಆತ್ಮೀಯ ರೈತರೇ, ಸರ್ಕಾರವು ಮತ್ತು ಹಲವಾರು ವಿವಿಧ ಸಂಸ್ಥೆ ಮತ್ತು ಸಂಘಗಳು ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದು ತುಂಬಾ ಉಪಯುಕ್ತಕರವಾದ ಕೆಲಸಗಳನ್ನು ಮಾಡಿವೆ. ಹಲವಾರು ಜನರು ಕೃಷಿಯನ್ನು ಬಿಟ್ಟು ಪಟ್ಟಣಕ್ಕೆ ಹೋಗಿ ಅಲ್ಲಿ ಕಾರ್ಮಿಕ ಆಗುವುದು ಈಗಿನ ಕಾಲದಲ್ಲಿ ನಿಜವಾಗಿ ಬಿಟ್ಟಿದೆ. ಇದನ್ನೆಲ್ಲ ತಪ್ಪಿಸಲು ಒಂದು ಕಂಪನಿಯು ರೈತರಿಗೆ ಕೃಷಿ ಉಪಕರಣಗಳನ್ನು ಸಹಾಯಧನದಲ್ಲಿ ನೀಡಿ ಅವರು ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಅನುವು ಮಾಡಿಕೊಟ್ಟಿದೆ. ಯಾವ ಉಪಕರಣಗಳು ಸಹಾಯಧನದಲ್ಲಿ ಸಿಗುತ್ತವೆ ಮತ್ತು ಅದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಮತ್ತು ಅವುಗಳನ್ನು ಹೇಗೆ ಪಡೆಯಬೇಕು? ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ನಮ್ಮ ರಾಜ್ಯದ ರೈತರೇ ಕೃಷಿಗೆ ಬಳಸುವ ಉಪಕರಣಗಳನ್ನು ಸಹಾಯಧನದಲ್ಲಿ ಕೊಡಲು ಒಂದು ಕಂಪನಿ ಸಜ್ಜಾಗಿದೆ. ಆ ಕಂಪನಿ ಹೆಸರು ಈಜಿ ಲೈಫ್ ಎಂಟರ್ಪ್ರೈಸಸ್ ಅಂತ ಇದೆ. ಈ ಕಂಪನಿಯು ಮಾರಾಟ ಮತ್ತು ಕೃಷಿ ಉಪಕರಣಗಳ ಸೇವಾ ಕೇಂದ್ರವಾಗಿ ಹಲವಡೆ ಪ್ರಾಮುಖ್ಯತೆಯನ್ನು ಹೊಂದಿದೆ. ಆದಕಾರಣ ರೈತರು ಈ ಕಂಪನಿಯ ಸದುಪಯೋಗವನ್ನು ಪಡಿಸಿಕೊಂಡು ತಮಗೆ ಬೇಕಾದ ಕೃಷಿ ಉಪಕರಣಗಳನ್ನು ತರಿಸಿ ಅವುಗ ಬಯಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕಾಗಿ ವಿನಂತಿ
ಈ ಕಂಪನಿಯಲ್ಲಿ ಸಿಗುವ ಉಪಕರಣಗಳು
ಜನರೇಟರ್, ಮೇವು ಕಟ್ಟಾವ ಯಂತ್ರ, ತೆಂಗಿನ ಮರವನ್ನು ಹತ್ತುವ ಯಂತ್ರ, ಹಾಲು ಕರೆಯುವ ಯಂತ್ರ, ಸೋಲ್ ಡೈಯರ್, ಜೇನುಗೂಡು, ಕಾಲು ಮೆಣಸನ್ನು ಬಿಡಿಸುವ ಕೃಷಿ ಯಂತ್ರ, ಬ್ಯಾಟರಿ ಸ್ಪ್ರೇಯರ್, ಪವರ್ ಸ್ಪ್ರೇಯರ್, ಹುಲ್ಲು ಕತ್ತರಿಸುವ ಯಂತ್ರ, ಭತ್ತ ಕತ್ತರಿಸುವ ಯಂತ್ರ ಮತ್ತು ಸೋಲ ಡೇಯರ್ ಗಳನ್ನು ಉಚಿತವಾಗಿಕೊಳ್ಳಲು ಈ ಕಂಪನಿಯು ನಿರ್ಧಾರ ಮಾಡಿದೆ.
ಯಾವ ಉಪಕರಣಗಳು ಸಬ್ಸಿಡಿಯಲ್ಲಿ ಸಿಗುತ್ತವೆ?
ರೋಟೋವೇಟರ್, ಮಹಾರಾಜ ಅಡಿಕೆ ಸುಲಿಯುವ ಯಂತ್ರ, ರೊಟೇಟ್ಲರ್, ಪವರ್ ಟಿಲ್ಲರ್, ಕೈಗಾಡಿ ಕಲ್ಟಿವೇಟರ್, ಔಷಧಿ ಹೊಡೆಯುವ ಯಂತ್ರ, ಮೋಟೋ ಕಾರ್ಟ್ ಮತ್ತು ಅಡಿಕೆ ತೆಗೆಯುವ ಇಂಟರ್ಲಾಕ್ ಕಾರ್ಬನ್ ಫೈಬರ್ ಯಂತ್ರಗಳನ್ನು ಸಹಾಯಧನದಲ್ಲಿ ನೀಡಲು ಈ ಕಂಪನಿ ಸಜ್ಜಾಗಿದೆ.
ಯಾವ ಊರಿನಲ್ಲಿ ಸಬ್ಸಿಡಿ ಕೊಡುತ್ತಾರೆ ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು?
ಶಿರಸಿ, ಯಲ್ಲಾಪುರ, ಕುಂದಾಪುರ್, ಬನ್ನೂರು, ಉಡುಪಿ ಭಟ್ಕಲ್, ಮುಂಡಗೋಡ, ಬನವಾಸಿ, ಕುಂದಾಪುರ್, ಕುಮಟಾ ಮತ್ತು 10 ಹಲವಾರು ಕಡೆ ಈ ಯೋಜನೆ ಜಾರಿಯಲ್ಲಿದೆ. ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಭೇಟಿ ನೀಡಿ ಈ ಸಬ್ಸಿಡಿ ಬಗ್ಗೆ ಹಲವಾರು ಮಾಹಿತಿಗಳನ್ನು ಪಡೆದು ಈ ಕೃಷಿ ಉಪಕರಣಗಳನ್ನು ಖರೀದಿ ಮಾಡಿ ನಿಮ್ಮ ಹೊಲದಲ್ಲಿ ಬಳಸಿಕೊಳ್ಳಬೇಕಾಗಿ ವಿನಂತಿ.