ಆತ್ಮೀಯ ರೈತ ಬಾಂಧವರೇ, ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳು ಜಾರಿಗೆ ಬರುತ್ತಲೇ ಇವೆ. ರೈತರು ಬರುವ ಯೋಜನೆಗಳನ್ನು ಸದುಪಯೋಗ ಮಾಡಿಸಿಕೊಂಡರೆ ಸಾಕು ಅವರ ಬಾಳು ಹಸನಾಗುತ್ತದೆ. ನಮ್ಮ ಭಾರತೀಯ ಅಂಚೆ ಇಲಾಖೆ ಅಂದರೆ ಪೋಸ್ಟ್ ಆಫೀಸ್ ಕೂಡ ಇಂತಹ ಒಂದು ಯೋಜನೆಯನ್ನು ತೆರೆದಿದೆ. ಏನಿದು ಯೋಜನೆ, ಈ ಯೋಜನೆ ಹೆಸರೇನು? ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ. ಈ ಪತ್ರವನ್ನು ಪಡೆಯುವ ಮೂಲಕ ರೈತರು ಆರ್ಥಿಕ ಸಬಲತೆಯನ್ನು ಪಡೆಯಬಹುದಾಗಿದೆ. ಈ ಪತ್ರವನ್ನು ಹೇಗೆ ಪಡೆಯುವುದು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಕಿಸಾನ್ ವಿಕಾಸ್ ಪತ್ರ ಯೋಜನೆ
ನಮ್ಮ ದೇಶದ ಎಲ್ಲ ಜನರು ಉಳಿತಾಯ ಮಾಡುವುದು ತುಂಬಾ ಉಪಯುಕ್ತವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಉಳಿತಾಯ ಹೂಡಿಕೆಯನ್ನು ಮಾಡಲು ಅವಕಾಶವಿದೆ. ತಮ್ಮ ಹತ್ತಿರ ಇರುವ ಸ್ವಲ್ಪ ಸ್ವಲ್ಪ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಕೊನೆಗೆ ಉತ್ತಮ ಲಾಭವನ್ನು ಪಡೆಯಲು ಅರ್ಹರಾಗುತ್ತಾರೆ. ಈ ರೀತಿಯ ಹೂಡಿಕೆ ಮಾಡಲು ಈ ಕಿಸಾನ್ ವಿಕಾಸ್ ಪತ್ರವನ್ನು ಹೊಂದುವುದು ತುಂಬಾ ಅವಶ್ಯವಾಗಿದೆ. ಆದಕಾರಣ ನಿಮ್ಮ ಹಣವನ್ನು ಈ ಪತ್ರಕ್ಕೆ ಹೂಡಿಕೆ ಮಾಡಿ ನಿಮಗೆ ಬೇಕಾದ ಸಮಯದಲ್ಲಿ ಆ ಹಣವನ್ನು ತೆಗೆದುಕೊಳ್ಳಬಹುದು. ಈ ಯೋಜನೆಯು ಅಂಚೆ ಕಚೇರಿ ಮಾತ್ರವಲ್ಲ ನಮ್ಮ ದೇಶದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿದೆ.
ಈ ಯೋಜನೆಯಿಂದ ಜನರಿಗೆ ಎಷ್ಟು ಹಣ ಲಾಭವಿದೆ?
ಈ ಯೋಜನೆ ಅಡಿಯಲ್ಲಿ ಜನರು ಕೇವಲ ರೂ.1000 ಹೂಡಿಕೆ ಮಾಡಿದರೆ ಸಾಕು ಅವರಿಗೆ ಅದರ ದ್ವಿಗುಣ ಹಣ ಬರುತ್ತದೆ. ಈ ಯೋಜನೆಗೆ ಕನಿಷ್ಠ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವುದು ಅವಶ್ಯವಾಗಿದೆ. ನಮ್ಮ ರಾಜ್ಯ ರೈತರು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಂಡು ಬಹಳಷ್ಟು ಹಣವನ್ನು ಹೂಡಿಕೆ ಮಾಡಿದರೆ ಈ ಯೋಜನೆಯಿಂದ 7.5% ಬಡ್ಡಿ ದರವನ್ನು ನಿಮ್ಮ ಹಣಕ್ಕೆ ಹಾಕಿ ನಿಮಗೆ ಬಹಳಷ್ಟು ಹಣವನ್ನು ಮರಳಿ ನೀಡುತ್ತಾರೆ. ನೀವು ಹಣವನ್ನು ಹೂಡಿಕೆ ಮಾಡಿ ಕೇವಲ 15 ತಿಂಗಳಲ್ಲಿ ನಿಮ್ಮ ಹಣವು ಪಕ್ವವಾಗಿ ನಿಮ್ಮ ಕೈ ಸೇರುತ್ತದೆ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಎಲ್ಲಿ ಸಲ್ಲಿಸಬೇಕು?
ನಮ್ಮ ದೇಶದ ಎಲ್ಲ ಪ್ರಜೆಗಳು ಅಂದರೆ 18 ವರ್ಷ ವಯಸ್ಸಾದ ಎಲ್ಲಾ ಪ್ರಜೆಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಈ ಕಿಸಾನ್ ವಿಕಾಸ್ ಪತ್ರ ಪಡೆಯಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಯೋಜನೆಯ ಪಾರ್ವನ್ ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಮತ್ತು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅದನ್ನು ಅಪ್ಲೋಡ್ ಮಾಡಬೇಕು. ಆ ಫಾರ್ಮ್ ನಲ್ಲಿ ನಿಮ್ಮ ಸಂಪೂರ್ಣ ವಿಳಾಸ, ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ತುಂಬಬೇಕು. ನೀವು ಯೋಜನೆಗೆ ಎಷ್ಟು ಹಣವನ್ನು ಹೂಡಿಕೆ ಮಾಡುತ್ತೀರಿ ಅದನ್ನು ನಮೂದಿಸಬೇಕು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಅರ್ಜಿದಾರರು ಜನನ ಪ್ರಮಾಣ ಪತ್ರ, ತಮ್ಮ ಬ್ಯಾಂಕಿನ ಅಕೌಂಟ್ ನಂಬರ್ ತಮ್ಮ ಪಾಸ್ಪೋರ್ಟ್ ಫೋಟೋ ತಮ್ಮ ಪಾನ್ ಕಾರ್ಡ್, ತಮ್ಮ ಆಧಾರ್ ಕಾರ್ಡ್, ತಮ್ಮ ವೋಟರ್ ಐಡಿ, ತಮ್ಮ ಡ್ರೈವಿಂಗ್ ಲೈಸೆನ್ಸ್, ತಮ್ಮ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಾರ್ಮ್ ತಮ್ಮ ಸಂಪೂರ್ಣ ವಿಳಾಸ ಪತ್ರ ವನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ :- ಒಂದು ಎಕರೆಗೆ 3 ರಿಂದ 4 ಲಕ್ಷ ರೂಪಾಯಿ ಲಾಭವನ್ನು ಪಡೆಯಲು ಸುವರ್ಣ ಅವಕಾಶ
ಇದನ್ನೂ ಓದಿ :- ಯುವ ರೈತರಿಗೆ ಈ ಸಂಸ್ಥೆಯಿಂದ 5 ಲಕ್ಷ ರೂಪಾಯಿಗಳು ಸಾಲವನ್ನು ನೀಡುತ್ತಾರೆ
ಇದನ್ನೂ ಓದಿ :- ನಿಮಗೆ ಬೆಳೆ ವಿಮೆ ಹಣ ಜಮಾ ಆಗಿಲ್ಲವೇ? ಈಗ ಏನು ಮಾಡಬೇಕು?
ಇದನ್ನೂ ಓದಿ :- ಒಂದೇ ನಿಮಿಷದಲ್ಲಿ ಪಿಎಂ ಕಿಸಾನ್,ಬೆಳೆವಿಮೆ,ಬೆಳೆಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ