ಆತ್ಮೀಯ ರೈತ ಬಾಂಧವರೇ,
2023-24 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಸಾಲ ಮನ್ನಾ ಆಗಿಲ್ಲ ಆದರೆ ಸಾಲ ಮನ್ನಾ ಆಗಿದೆ ಎಂಬ ಸುಳ್ಳು ಸುದ್ದಿಯನ್ನು ಎಲ್ಲರೂ ಹಬ್ಬಿಸುತ್ತಿದ್ದಾರೆ. ಹಾಗದರೆ ಬಡ್ಡಿ ಮನ್ನಾ ಆಗಿದೆಯಾ ಎಂದು ಕೂತೂಹಲದಲ್ಲಿ ಇರುವಿರೆ?? ಹಾಗದರೆ ಈ ಅಂಕಣವನ್ನು ನೀವು ಸಂಪೂರ್ಣವಾಗಿ ಓದಿರಿ. ಹೌದು ರೈತರೆ ನೀವು ಈ ಹಿಂದೆ ತೆಗೆದುಕೊಂಡಿರುವ ಸಾಲ ಯಾವುದು ಮನ್ನ ಆಗಿಲ್ಲ ಆದರೆ ಸಾಲದ ಮೇಲೆ ಇರುವ ಬಡ್ಡಿಯೂ ಮನ್ನ ಆಗಿದೆ ಎಂದು ಬ್ಯಾಂಕ್ ಗಳಿಂದ ಸೂಕ್ತ ಮಾಹಿತಿ ದೊರೆತಿದ್ದು ಯಾವೆಲ್ಲ ಸಾಲ ಗಳಿಗೆ ಬಡ್ಡಿ ಮನ್ನಾಾಗಿದೆ ಎಂದು ಈ ಕೆಳಗೆ ತಿಳಿಯಿರಿ.
ಪಶುಪಾಲನಾ ಇಲಾಖೆಯಿಂದ ಹೈನುಗಾರಿಕೆ ವೃತ್ತಿಯ ಸಲುವಾಗಿ ರೈತರು ಬ್ಯಾಂಕ್ ಮೂಲಕ ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ಸಹಾಯಧನ(loan interest Subsidy) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ರೈತ ಮಹಿಳೆಯರು ಬ್ಯಾಂಕ್ ಗಳಲ್ಲಿ ತೆಗೆದುಕೊಂಡಿರುವ ಹೈನುಗಾರಿಕೆ ಮೇಲಿನ ಸಾಲಕ್ಕೆ ಬಡ್ಡಿ ಸಹಾಯಧನ ಪಡೆಯಬಹುದಾಗಿದೆ.
ಹೇಗೆ ಈ ಅರ್ಜಿ ಸಲ್ಲಿಸುವುದು??
ಹೈನುಗಾರಿಕೆಗಾಗಿ ನಾನಾ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಪ್ರತಿ ಫಲಾನುಭವಿಗೆ ಗರಿಷ್ಠ 65 ಸಾವಿರ ರೂ. ಸಾಲದ ಮೊತ್ತಕ್ಕೆ ಶೇ.6 ಬಡ್ಡಿ ಸಹಾಯಧನವನ್ನು ಈ ಯೋಜನೆಯಡಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗಾಗಿ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಸು ಅಥವಾ ಎಮ್ಮೆ ಖರೀದಿ ಸಲುವಾಗಿ ಬ್ಯಾಂಕ್ ಗಳಿಂದ ಸಾಲವನ್ನು ಪಡೆದಿರುವ ರೈತರು ಮತ್ತು ಸಾಲವನ್ನು ಮರುಪಾವತಿ ಮಾಡಿರುವ ರೈತರು ಅರ್ಜಿ ಹತ್ತಿರದ ಪಶು ಇಲಾಖೆಗೆ ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು..
20.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಆದರೆ ತೀವ್ರತೆ ಸ್ವಲ್ಪ ಕಡಿಮೆ ಇರಬಹುದು.
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ (ತೀವ್ರತೆ ಸ್ವಲ್ಪ ಕಡಿಮೆ ಇರಬಹುದು). ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಹಾಗೂ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಒಡಿಸ್ಸಾದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆಯು ಜುಲೈ 20ರ ರಾತ್ರಿ ಒಡಿಸ್ಸಾಕ್ಕೆ ಪ್ರವೇಶಿಸುತ್ತಿದ್ದಂತೆಯೆ ಮಹಾರಾಷ್ಟ್ರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುಂದುವರಿಯುವ ಮುನ್ಸೂಚನೆ ಇದೆ.
Jobs