ನಮ್ಮ ಹಾವೇರಿ ಜಿಲ್ಲೆಯಲ್ಲಿ ಇರುವ ತಾಲೂಕಾಗಿರುವ ಬ್ಯಾಡಗಿ ಎಂಬ ಊರಿನಲ್ಲಿ ಒಂದು ಮೆಣಸಿನಕಾಯಿ ಮಾರುಕಟ್ಟೆ ಇದೆ. ಅಲ್ಲಿ ಎಪಿಎಂಸಿ ಯಲ್ಲಿ ಮೆಣಸಿನಕಾಯಿ ದರ ದಿಢೀರ್ ಇಳಿಕೆ ಆಗಿದೆ. ಕೇವಲ 1 ಕ್ವಿಂಟಲ್ ಗೆ 8000 ರೂ ಆಗಿದೆ. ಆಗ ರೈತರು ಆಕ್ರೋಶಗೊಂಡು ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದರು. ಈ ಘಟನೆ ಸಂಬಂಧಪಟ್ಟ 81 ಜನರನ್ನು ಪೊಲೀಸರು ಬಂಧಿಸಿದರು, ಇಲ್ಲಿ ರೂ. 5 ಕೋಟಿಗೂ ಹೆಚ್ಚು ಹಾನಿಯಾಗಿದೆ.
ವಿಸಿ ನಾಲೆಯಲ್ಲಿ ಮತ್ತೊಂದು ದುರಂತ : 25 ಅಡಿ ಆಳಕ್ಕೆ ಬಿದ್ದ ಕಾರು, ಓರ್ವ ಸಾವು
ತಡೆಗೋಡೆ ಇಲ್ಲದ ಕಾರಣ ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ, ತಡೆಗೋಡೆ ಇಲ್ಲದ ಕಾರಣ ಕಾರು ನಾಲೆಗೆ ಉರುಳಿ ಬಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಮಂಡ್ಯದ ಅವೇರಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ನಾಲೆಗೆ ಸ್ವಿಫ್ಟ್ ಕಾರು ಉರುಳಿದೆ. ಇದರಿಂದ ಕಾರು ಸಂಪೂರ್ಣ ಜಖಂ ಆಗಿದೆ. ಈ ಪರಿಣಾಮ ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಗೊಂಡ ವ್ಯಕ್ತಿಯ ವಿಳಾಸ ಇನ್ನೂ ತಿಳಿದು ಬಂದಿಲ್ಲ.
ಗಾಯಗೊಂಡ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ವಿಸಿ ನಾಲೆಯ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸಹ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನವರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾವೇರಿ ನೀರಾವರಿ ನಿಗಮ ಹಲವು ದಿನಗಳಿಂದ ನಾಲೆಗೆ ನೀರು ನಿಲ್ಲಿಸಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ರಾಗಿ, ಜೋಳದ ಖರೀದಿ ಪ್ರಕ್ರಿಯೆ ಆರಂಭ
ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ರಾಗಿ ಮತ್ತು ಜೋಳದ ಖರೀದಿ ಪ್ರಕ್ರಿಯೆ ಮಾರ್ಚ 18ರಂದು ಪ್ರಾರಂಭವಾಯಿತು. ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮಾರ್ಚ 18ರಂದು ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ, ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮೂಲಕ ರೈತರಿಂದ ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು.
ಪ್ರಸ್ತುತ ಈ ಖರೀದಿ ಕೇಂದ್ರದಲ್ಲಿ 59 3 1132.50 ರಾಗಿಯನ್ನು, 23 ರೈತರು 910 ಕ್ವಿಂಟಾಲ್ ಬಿಳಿಜೋಳವನ್ನು ನೋಂದಾಯಿಸಿದ್ದಾರೆ. ಸರ್ಕಾರವು ಈ ಬಾರಿ ಎಫ್.ಎ.ಕ್ಯೂ. ಗುಣಮಟ್ಟದ ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂ. ಮತ್ತು ಎಫ್.ಎ.ಕ್ಯೂ. ಗುಣಮಟ್ಟದ ಜೋಳಕ್ಕೆ 3180 ರೂ. ಗಳನ್ನು ಘೋಷಿಸಿರುತ್ತದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನಲ್ಲಿ ಹೊಸಪೇಟೆ ಖರೀದಿ ಕೇಂದ್ರವು ಆರಂಭವಾಗಿದೆ. 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತ, ರಾಗಿ ಮತ್ತು ಜೋಳ ಉತ್ಪನ್ನಗಳನ್ನು ಖರೀದಿಸಲು ವಿಜಯನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಎಜೆನ್ಸಿಯಾಗಿರುತ್ತದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ವಿಜಯನಗರ ಜಿಲ್ಲೆಯ ಹೊಸಪೇಟೆ ಎಪಿಎಂಸಿ ಪ್ರಾಂಗಣದಲ್ಲಿ ಡಿಸೆಂಬರ್ 1 ರಿಂದ ನೋಂದಣಿ ಕೇಂದ್ರವನ್ನು ತೆರೆದಿರುತ್ತದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಖರೀದಿ ಮಾಡಿದ ಉತ್ಪನ್ನವನ್ನು ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಉದ್ದೇಶವಿರುವುದರಿಂದ ರಾಗಿ ಮತ್ತು ಜೋಳವನ್ನು ಬೆಳೆದ ರೈತರು ತಾವು ಬೆಳೆದ ಉತ್ಪನ್ನವನ್ನು ಚೆನ್ನಾಗಿ ಒಣಗಿಸಿ, ಯಾವುದೇ ಕಸ, ಕಡ್ಡಿ, ಧೂಳು, ಮಣ್ಣಿರದಂತೆ ಸ್ವಚ್ಚಗೊಳಿಸಿ ಖರೀದಿ ಕೇಂದ್ರಗಳಿಗೆ ತರಲು ರೈತರಲ್ಲಿ ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ, ಕೃಷಿ ಮಾರಾಟ ಮಂಡಳಿಯ ಸಿದ್ದು ಸ್ವಾಮಿ, ಖರೀದಿ ಏಜೆನ್ಸಿದಾರರು, ಜಿಲ್ಲಾ ವ್ಯವಸ್ಥಾಪಕರು ಈ ಸಂದರ್ಭದಲ್ಲಿ ಇದ್ದರು.
ಇದನ್ನೂ ಓದಿ: 2100 ಕೊಟಿಯ ನೀರಾವರಿ ಯೋಜನೆ. ರೈತರಿಗೆ ಭರ್ಜರಿ ಕೊಡುಗೆ
ಇದನ್ನೂ ಓದಿ : ಕೃಷಿ ನವೋದಯದ ಕಾರ್ಯಕ್ರಮ 50ಲಕ್ಷದ ವರೆಗೆ ಸಾಲ ಸೌಲಭ್ಯ