5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಘೋಷಣೆ
ಈ ಮೊದಲು ರಾಜ್ಯದ ರೈತರಿಗೆ ಒಟ್ಟು ಮೂರು ಲಕ್ಷದವರಿಗೆ ಕೃಷಿ ಸಾಲವನ್ನು ನೀಡುತ್ತಿತ್ತು. ಅದು ಬಡ್ಡಿ ರಹಿತ ಸಾಲವಾಗಿದ್ದು, ಅದೇ ರೀತಿ ಈ ಪ್ರಸಕ್ತ ವರ್ಷದ ಬಜೆಟ್ ಮಂಡನೆಯಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಹೆಚ್ಚು ಮಾಡಿ, ಸ್ವಂತ ಜಮೀನು ಹೊಂದಿರುವ ರೈತನಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಬಡ್ಡಿ ರಹಿತ ಸಾಲ ಎಂದರೆ ಏನು ?
ಬಡ್ಡಿ ರೈತ ಸಾಲ ವೆಂದರೆ ರಾಜ್ಯ ಸರ್ಕಾರವು ಪ್ರತಿ ವರ್ಷದಲ್ಲಿ ಬ್ಯಾಂಕಿಂಗ್ ವಲಯಕ್ಕೆ ಕೃಷಿ ಸಾಲವನ್ನು ವಿತರಣೆ ಮಾಡುವ ಗುರಿಗಳನ್ನು ನಿಗದಿಪಡಿಸಿರುತ್ತದೆ. ಅದರಂತೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಟರ್ ಅಂಡ್ ರೂರಲ್ ಡೆವಲಪ್ಟೆಂಟ್ ಅಂದರೆ ನಬಾರ್ಡ್ ಬ್ಯಾಂಕ್ ( NABARD BANK) ವರದಿ ಮಾಡಿರುವಂತೆ ಕಳೆದ ಮೂರು ವರ್ಷದಲ್ಲಿ ಬ್ಯಾಂಕುಗಳಿಂದ, ಕೃಷಿ ಸಾಲ ವಿತರಣೆ ಮಾಡಿರುವ ವಿವರಗಳು ಈ ಕೆಳಗಿನ ಪಟ್ಟಿಯಲ್ಲಿವೆ.
2016-2017 ರಲ್ಲಿ 9,15,510.92 ಕೋಟಿ
2017-2018 ರಲ್ಲಿ 10,65,755 ಕೋಟಿ
2018-2019 ರಲ್ಲಿ 12,54,762 ಕೋಟಿ
ರೈತರಿಗೆ ಸರ್ಕಾರವು 7% ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ( DAC AND FW ) ಇಲಾಖೆಯ ವರೆಗಿನ ಅಲ್ಪಾವಧಿ ಬೆಳೆ ಸಾಲಗಳಿಗೆ ಬಡ್ಡಿ ಯೋಜನೆ, ಜಾರಿಗೊಳಿಸುತ್ತದೆ.
ಈ ಯೋಜನೆಯಲ್ಲಿ ಬ್ಯಾಂಕುಗಳಿಗೆ ತಮ್ಮ ಸ್ವಂತ ಸಂಪನ್ಮೂಲಗಳ ಬಳಕೆಯ ಆಧಾರದ ಮೇಲೆ, ವಾರ್ಷಿಕವಾಗಿ ಎರಡು ಪರ್ಸೆಂಟ್ (2%) ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತದೆ. ಅದಲ್ಲದೆ ಸಾಲದ (interest free loan) ತ್ವರಿತವಾಗಿ ಮರುಪಾವತಿ ಮಾಡಲು ರೈತರಿಗೆ ಹೆಚ್ಚುವರಿಯಾಗಿ ಮೂರು ಪರ್ಸೆಂಟ್(3%) ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇದರಿಂದಾಗಿ ರೈತರಿಗೆ ಬಡ್ಡಿದರ ನಾಲ್ಕು ಪರ್ಸೆಂಟ್ (4%) ಇಳಿಕೆಯಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಇಂದ ಕೂಡ ರೈತರಿಗೆ ಸಾಲ( interest free loan )ಸೌಲಭ್ಯ.
ದೇಶದಲ್ಲಿ ಈಗಾಗಲೇ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಲಭ್ಯವಿದ್ದು, ಇದರ ಮುಖಾಂತರ ರೈತರಿಗೆ ಬೀಜಗಳು (seeds)ರಸಗೊಬ್ಬರಗಳು (chemicals) ಕೀಟನಾಶಕಗಳು ( pesticides) ಮುಂತಾದ ಕೃಷಿ ಯಂತ್ರೋಪಕರಣಗಳ ಬಳಕೆ, ಮತ್ತು ಖರೀದಿ ಮಾಡಲು ಅವಕಾಶ ಹಾಗೂ ಸಾಲ ಸಿಗುವಂತೆ ಸರ್ಕಾರ ಮಾಡಿದೆ.
ರೈತರು ಸಾಲವನ್ನು PLD ಬ್ಯಾಂಕುಗಳಿಂದ ಮತ್ತು ಇತರೆ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದು ಪ್ರತಿವರ್ಷ ಮರುಪಾವತಿ ಮಾಡಿ, ಮತ್ತೆ ಸಾಲ ಪಡೆದಲ್ಲಿ ರೈತರಿಗೆ, ಬ್ಯಾಂಕಿನಿಂದ ಯಾವುದೇ ತೊಂದರೆ ಇಲ್ಲದೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಒಂದು ವೇಳೆ ಪ್ರತಿ ವರ್ಷ ಮರುಪಾವತಿ ಮಾಡದಿದ್ದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುವುದಿಲ್ಲ.
ಇದನ್ನೂ ಓದಿ :- ಪರಂಪರಾಗತ್ ಯೋಜನಾ ಕೇಂದ್ರ ಸರ್ಕಾರದಿಂದ ಸಿಗುತ್ತೆ ನಿಮಗೆ 50000 ರೂಪಾಯಿ
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡೋದು ಹೇಗೆ? ಮೊಬೈಲ್ ನಲ್ಲಿಯೇ ಮಾಡಿ ಆಧಾರ್ ಲಿಂಕ್