ಎಲ್ಲಾ ರೈತ ಭಾಂದವರಿಗೆ ನಮಸ್ಕಾರ, ರೈತರಿಗೂ ಕಂದಾಯ ಇಲಾಖೆಗೂ ನೇರ ಸಂಪರ್ಕ, ಜಮೀನು, ಆಸ್ತಿಗೆ ಸಂಬಂಧಪಟ್ಟ ಏನೇ ದಾಖಲೆ ಪತ್ರ ಬೇಕಿದ್ದರೂ ಕಂದಾಯ ಇಲಾಖೆಯನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ, ಸರಕಾರಿ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆಯಷ್ಟು ಜಡತ್ವದ ಮತ್ತು ಜನ ವಿರೋಧಿ ಧೋರಣೆಯ ಇಲಾಖೆ ಮತ್ತೊಂದಿಲ್ಲ ಎಂಬ ಅಪವಾದವಿತ್ತು. ಇದನ್ನು ತೊಡೆದು ಹಾಕಲು ಕಂದಾಯ ಇಲಾಖೆ ಯನ್ನೇ ಜನರ ಮನೆ ಬಾಗಿಲಿಗೆ ಕೊಂಡೊಯ್ದ ಶ್ರೇಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ್ದಾಗಿದೆ.
ಇನ್ನು ಮುಂದೆ ರೈತರು ಪೋಡಿ, 11-ಇ ನಕ್ಷೆ ಭೂಪರಿವರ್ತನೆಯ ಪೂರ್ವ ನಕ್ಷೆ, ಆಸ್ತಿ ವಿಭಜನೆ ಕುರಿತ ನಕ್ಷೆ ಮಾಡಿಸಿಕೊಳ್ಳುವುದೂ ಸರಾಗವಾಗಿದೆ. ಈ ಉದ್ದೇಶಕ್ಕೆ ‘ಸ್ವಾವಲಂಬಿ’ ಎಂಬ ಯೋಜನೆ ತರಲಾಗಿದೆ. ಸಣ್ಣ ದಾಖಲೆ ತೆಗೆದುಕೊಳ್ಳುವುದಕ್ಕೂ ತಾಲೂಕು ಕಚೇರಿಗೆ ಹತ್ತಾರು ಬಾರಿ ಎಡತಾಕುವ ಸ್ಥಿತಿಯಿತ್ತು. ಹಾಗಾಗಿ ಜನರ ಮನೆ ಬಾಗಿಲಿಗೇ ಕಂದಾಯ ಇಲಾಖೆಯನ್ನು ಕೊಂಡೊಯ್ಯುವ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಡಿ 50 ಲಕ್ಷಕುಟುಂಬಗಳಿಗೆ 4 ಕೋಟಿ ರೂ.ಗೂ ಹೆಚ್ಚು ಕಂದಾಯ ದಾಖಲೆ ಪತ್ರ ತಲುಪಿಸಲಾಗಿದೆ.
ಸ್ವಾವಲಂಬಿ ಆ್ಯಪ್ ನಲ್ಲಿ ತತ್ಕಾಲ್ ಪೋಡಿ ಮತ್ತು 11ಇ ನಕ್ಷೆಗಾಗಿ ಅರ್ಜಿ ಸಲ್ಲಿಸಬೇಕು?
ರೈತರು ಮನೆಯಲ್ಲಿಯೇ ಕುಳಿತು, ತತ್ಕಾಲ್ ಪೋಡಿ, 11ಇ ನಕ್ಷೆ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಬೇಕಾದರೆ ಈ
ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, https://bhoomojini.karnataka.gov.in/Service27. ನಂತರ ನಿಮಗೆ ಪರದೆ ಮೇಲೆ ಒಂದು ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಬೇಕು ಮತ್ತು ಕೆಳಗೆ ನೀಡಿರುವ ಕೂಡನ್ನು ಅಲ್ಲಿ ನೀವು ನಮೂದಿಸಬೇಕು. ಈ ಕ್ರಿಯೆ ಮುಗಿದ ಮೇಲೆ ನೀವು ಅಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಈ ಓಟಿಪಿಯನ್ನು ಬಳಸಿಕೊಂಡು ರೈತರು ಅಧಿಕೃತ ಮುಖಪುಟಕ್ಕೆ ಲಾಗಿನ್ ಆಗಬೇಕು. ಇಷ್ಟಲ್ಲಾದ ಮೇಲೆ ರೈತರು ನಿಮ್ಮ ಬಲಗಡೆಗೆ ಕಾಣಿಸುವ ಹೊಸ ಅರ್ಜಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದು ಆದಮೇಲೆ ಇನ್ನೊಂದು ಪೇಜ್ ನಿಮ್ಮ ಮುಂದೆ ತೆರೆಯುತ್ತದೆ. ಅಲ್ಲಿ ಖರೀದಿ ಮಾಡುವವರ ಹೆಸರು, ಜಮೀನಿನ ವಿವರಗಳು ಮತ್ತು ಅರ್ಜಿಯನ್ನು ಯಾರು ಸಲ್ಲಿಸುತ್ತಿದ್ದಾರೆ ಎಂಬ ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡಬೇಕು.
ಅಲ್ಲಿ ನಿಮಗೆ ಎರಡು ಆಯ್ಕೆಗಳು ಇರುತ್ತವೆ. ಒಂದು ನಾನೇ ಸ್ಕೆಚ್ ಸಿದ್ಧಪಡಿಸಿ ಅಪ್ಲೋಡ್ ಮಾಡುತ್ತೇನೆ ಮತ್ತು ಇನ್ನೊಂದು ಭೂಮಾಪನ ಇಲಾಖೆಯಿಂದ ಸಿದ್ಧಪಡಿಸಲು ನಾನು ಬಯಸುತ್ತೇನೆ ಎಂಬ ಎರಡು ಆಯ್ಕೆಗಳಲ್ಲಿ ಒಂದು ಆಯ್ಕೆಯನ್ನು ನೀವು ಆಯ್ಕೆ ಮಾಡಬೇಕು. ಇಲ್ಲಿ ನೀವು 11ಇ ನಕ್ಷೆಯನ್ನು ಪಡೆಯಲು ಇಚ್ಚಿಸಿದ್ದರೆ ನೀವು ಮೊದಲನೇ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಕೊನೆಗೆ ನಿಮ್ಮ ಹೆಸರು, ನಿಮ್ಮ ಆಧಾರ್ ನಂಬರ್, ನಿಮ್ಮ ಗ್ರಾಮ, ನಿಮ್ಮ ತಾಲೂಕು, ನಿಮ್ಮ ಜಿಲ್ಲೆ, ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ತಂದೆ ಹೆಸರು ಅನ್ನು ಸರಿಯಾಗಿ ನಮೂದಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಒಂದು ಮುದ್ರಣವನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ದಿನಾಂಕ ವಿಸ್ತರಣೆ
ಇದನ್ನೂ ಓದಿ :- ಈ ತರ ಕಳೆ ನಿರ್ವಹಣೆ ಮಾಡಿದರೆ ಒಂದು ವರ್ಷದ ವರೆಗೂ ಕಳೆನಾಶಕ ಉಪೋಯೋಗಿಸುವುದು ಬೇಡ
ಇದನ್ನೂ ಓದಿ :- ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದಿಯಾ? ಇಲ್ಲವಾ? ಸ್ಟೇಟಸ್ ಚೆಕ್ ಮಾಡಿ