ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ.ಆತ್ಮೀಯ ರೈತ ಬಾಂಧವರೇ 2023 ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ, ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿದ್ದು ರೈತರ ಖಾತೆಗಳಿಗೆ ಜಮಯಾಗಲಿದೆ. ಸರ್ಕಾರದ ಮನವಲಿದು ರೈತರ ಉದ್ದಾರಕ್ಕಾಗಿ ಈಗ ಬೆಳೆವಿಮೆ ಕಟ್ಟಿದ ರೈತರಿಗೆ ಹಲವು ಕೋಟಿ ರೂಪಾಯಿ ಹಣ ಮಂಜೂರು ಮಾಡಿದೆ. ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ಪಾವತಿ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಕೃಷಿ ಅಧಿಕಾರಿಗಳು ವಿಮಾ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ಹೇಳಿದರು.
ಬೆಳೆ ವಿಮೆ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗಲ್ಲ?
ಬೆಳೆ ವಿಮೆ ಮಾಡಿಸಿದ ನಂತರ ಯಾವ ರೈತರು ಬೆಳೆ ಹಾಳಾದಾಗ ವಿಮಾ ಕಂಪನಿಗೆ ದೂರು ನೀಡುತ್ತಾರೋ ಆ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ. ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮೆ ಹಣ ಪಾವತಿಸಲು ವರದಿ ಕಳಿಸುತ್ತಾರೆ. ಆ ಆಧಾರದ ಮೇಲೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
ಬೆಳೆ ವಿಮೆ ಕಟ್ಟಿದ ರೈತರು ಬೆಳೆ ಸಂಪೂರ್ಣ ಹಾಳಾದರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಹೋದರೆ ರೈತರಿಗೆ ನಯಾ ಪೈಸೆ ಜಮೆಯಾಗುವುದಿಲ್ಲ. ಕೆಲವು ಸಲ ಹಳೆ ವಿಮಾ ಆಧಾರದ ಮೇಲೆ ನೂರಕ್ಕೆ ಒಬ್ಬ ರೈತರಿಗೆ ವಿಮೆ ಹಣ ಜಮೆಯಾಗಬಹುದು. ಆದರೆ ವಿಮೆಹಣ ಕಟ್ಟಿದ ನಂತರ ವಿಮಾ ಕಂಪನಿಗೆ ರೈತರು ದೂರು ನೀಡಿದರೆ ಹೋದರೆ ವಿಮೆ ಹಣ ಜಮೆಯಾಗುವುದಿಲ್ಲ.
ಇಂದು ನನ್ನ ಖಾತೆಗೆ ಬೆಳೆ ವಿಮೆ ಹಣ ಬಂದಿದೆ, ಇನ್ನು ಕೆಲವೇ ದಿನಗಳಲ್ಲಿ ನಿಮಗೂ ಈ ಹಣ ಬಂದು ತಲುಪುತ್ತದೆ. ಈ ಹಣವು ನಮ್ಮ ಗದಗ್ ಜಿಲ್ಲೆಯ ರೈತರಿಗೆ ಬಂದು ತಲುಪುತ್ತದೆ. ನೀವು ಬೇರೆ ಜಿಲ್ಲೆಯ ರೈತರು ಆಗಿದ್ದರೆ ನಿಮ್ಮ ಬೆಳೆಗೆ ಎಷ್ಟು ಹಣ ಬರುತ್ತದೆ ಎಂದು ನೀವು ಈಗ ನಿಮ್ಮ ಫೋನಿನಲ್ಲಿ ನೋಡಬಹುದು. ನೀವು ಆನ್ಲೈನ್ ಮೂಲಕವೇ ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.
ಮುಂಗಾರು ಸಾಲಿನಲ್ಲಿ ರೈತರಿಗೆ ತುಂಬಾ ನಷ್ಟವಾದ ಕಾರಣ ಸರ್ಕಾರವು ಬೆಳೆ ವಿಮೆ ಮುಖಾಂತರ ರೈತರಿಗೆ ಡಿವಿಟಿ ಮೂಲಕ ಹಣವನ್ನು ನೀಡಲು ಸರ್ಕಾರ ಯೋಚಿಸಿದೆ. ನಿಮಗೆಲ್ಲ ತಿಳಿದ ಹಾಗೆ ನಮ್ಮ ಉತ್ತರ ಕರ್ನಾಟಕದ ಮುಖ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯು ತುಂಬಾ ಮಳೆಗೆ ಸಿಕ್ಕು ಫಸಲು ನೀರು ವಶವಾಗಿದೆ. ಆದಕಾರಣ ಈ ಬೆಳೆಗೆ ಹೆಚ್ಚಾಗಿ ಬೆಳೆಯುಮೆ ಹಣವನ್ನು ಬಹಳ ಶೇಕಡಾ ಮುಖಾಂತರ ರೈತರಿಗೆ ನೀಡುವ ಯೋಚನೆ ಬಂದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಆಧಾರದ ಮೇಲೆ ಮತ್ತು ಈಶಾನ್ಯ ರಾಜ್ಯಗಳ ಸಂದರ್ಭದಲ್ಲಿ 90:10 ರ ಸಮತೋಲನವನ್ನು ಹಂಚಿಕೊಳ್ಳುತ್ತವೆ.ಆಧಾರ್ ಕಾರ್ಡ್ ಜೋಡಣೆ ಆಗದೇ ಇರುವ ರೈತರ ಸಂಖ್ಯೆ ಸಾಕಷ್ಟು ಇರುವುದನ್ನು ಗಮನಿಸಿದ ಅವರು, ‘ಬೆಳೆ ವಿಮೆಗೆ ಆಧಾರ್ ಕಾರ್ಡ್ ಜೋಡಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ವಿಮಾ ಕಂಪನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ನನ್ನ ಗಮನಕ್ಕೆ ತರಬೇಕು. ರೈತರೂ ಇದನ್ನು ಗಮನಿಸಬೇಕು’ ಎಂದೂ ಸಲಹೆ ನೀಡಿದರುಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೇಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.