Breaking
Wed. Dec 18th, 2024

ಗೃಹಬಳಕೆ ಅನಿಲ ಸಿಲಿಂಡ‌ರ್ ಗೆ ಪಂಚವಾರ್ಷಿಕ ತಪಾಸಣೆ ಕಡ್ಡಾಯ, gas update

Spread the love

ಭಾರತ್ ಗ್ಯಾಸ್ ಏಜೆನ್ಸಿ, ಧಾರವಾಡ ಇವರ ನಿಯಮಾವಳಿ ಪ್ರಕಾರ ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡುವುದು ಕಡ್ಡಾಯವಾಗಿದೆ.

ಅದರಂತೆ ಕೆ.ಎಫ್.ಸಿ.ಎಸ್.ಸಿ ಭಾರತ್ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಗೃಹ ಬಳಕೆ ಅನಿಲ ಸಿಲಿಂಡ‌ರ್ ಗ್ರಾಹಕರ ಮನೆಗಳಿಗೆ ರೂ.236/- ಗಳ ತಪಾಸಣಾ ಶುಲ್ಕದೊಂದಿಗೆ ಸಿಲಿಂಡ‌ರ್ ಸಂಪರ್ಕವನ್ನು ತಪಾಸಣೆ ಮಾಡಬೇಕಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ದೂ.ಸಂ:

08539-222770/222779/221340 ಸಂಪರ್ಕಿಸಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಪ್ರವಾಸ

ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಜನವರಿ 2ರಂದು ಕೊಪ್ಪಳ ಜಿಲ್ಲೆಯ ಗಿಣಿಗೇರಾ ಏರ್‌ಸ್ಟ್ರಿಪ್ಲೆ ಭೇಟಿ ನೀಡುವರು. ಅಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಗ್ಗೆ 10.50ಕ್ಕೆ ಕೊಪ್ಪಳ ಜಿಲ್ಲೆಯ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸುವರು.

ಅಲ್ಲಿಂದ 11 ಗಂಟೆಗೆ ನಿರ್ಗಮಿಸಿ ವಿಜಯಪುರ ಜಿಲ್ಲೆಯತ್ತ ಪ್ರಯಾಣ ಬೆಳೆಸುವರು. ವಿಜಯಪುರ ಜಿಲ್ಲೆಯ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿಗಳು ಸಂಜೆ 4.40ಕ್ಕೆ ಗಿಣಿಗೇರಾಗೆ ಆಗಮಿಸಿ ಅಲ್ಲಿಂದ ಕೇಂದ್ರ ಸ್ಥಾನ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವನಿಧಿ ಯೋಜನೆ ; ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನ ಪಡೆಯಿರಿ

ಸರ್ಕಾರದ ಮಹತ್ತರ ಯೋಜನೆಯಾದ ಯುವನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ, ಡಿಪ್ಲೋಮಾ ಪಡೆದಿರಬೇಕು. ಅಂದರೆ 2023ನೇ ವರ್ಷದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಂತಹವರು ಸೇವಾಸಿಂಧು ಜಾಲತಾಣ https://sevasindhugs.karnataka.gov.in/ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಜಿದಾರರು ನ್ಯಾಶನಲ್ ಅಕ್ಯಾಡೆಮಿಕ ಡೆಪೊಸೆಟರಿ (NAD Portal) ♡ on https://nad.karnataka.gov.in ದಲ್ಲಿ ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಮಂಡಳಿಗಳು ಪ್ರವೇಶಾತಿ ಸಂದರ್ಭದಲ್ಲಿ ನೀಡುವ ಪದವಿ, ಡಿಪ್ಲೋಮಾ, ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ದತ್ತಾಂಶವು ಲಭ್ಯವಿದೆಯೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು.

ನೊಂದಣಿ ಸಂಖ್ಯೆ ಇಲ್ಲದೇ ಇದ್ದಲ್ಲಿ NAD Portal ನಲ್ಲಿ ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಥವಾ ತಮಗೆ ಸಂಬಂಧಿಸಿದ ಕಾಲೇಜು, ಬೋರ್ಡ್, ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ, ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಅಭ್ಯರ್ಥಿಗಳು ಯುವನಿಧಿಯ ನೋಂದಣಿ ಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ತಮಗೆ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಹಾಗೂ ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲರ ಮಶಾಸನ ವೇತನ ರೂ.6000ಕ್ಕೆ ಹೆಚ್ಚಿಸಬೇಕೆಂದು ಡಿಸಿಗೆ ಮನವಿ

ಅಂಗವಿಕಲರ ಮಶಾಸನ ವೇತನ 6000 ರೂ.ವರೆಗೆ ಹೆಚ್ಚಿಸಬೇಕೆಂದು ನ್ಯೂಲೈಫ್ ಅಂಗವಿಕಲರ ಮಹಿಳೆಯರ ಸಂಘದ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಡಿಸಿ ಅವರಿಗೆ ಭೇಟಿ ನೀಡಿ ಅಂಗವಿಕಲರಿಗೆ ಈಗಾಗಲೇ ನೀಡಲಾಗುತ್ತಿರುವ ಮಶಾಸನ ತೀರ ಕಡಿಮೆ ಇದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಸ್ವಾಲಂಭಿಯಾಗಿರುವ ಬದುಕು ನಡೆಸಲು ಕಷ್ಟಕರವಾಗಿದೆ.

ಘನತೆಯ ಬದುಕು ಕಟ್ಟಿಕೊಳ್ಳಲು ಅಂಗವಿಕಲರ ಮಶಾಸನ ವೇತನ 6000ರೂ. ಗೆ ಹೆಚ್ಚಿಸಬೇಕೆಂದು ಸಂಘದ ಸದಸ್ಯರು ಮನವರಿಗೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಶಾಸಕಿ ಪುತ್ರ ಯುವ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಸಂಘದ ಅಧ್ಯಕ್ಷರಾದ ಮಹೆಬೂಬ್ ಬಿ, ಉಪಾಧ್ಯಕ್ಷರಾದ ಆಶಾದೇವಿ, ಕಾರ್ಯದರ್ಶಿ ಶಕೀಲಾ, ಖಜಾಂಚಿ ಶಮಿಮ್ ಬೇಗಂ ಸೇರಿದಂತೆ ಹಲವರು ಇದ್ದರು.

ನೂತನ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಸಚಿವ ಶಿವಾನಂದ ಪಾಟೀಲ ಕರೆ

ರೈತರು ಹೊಸ ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯಿಂದ ಕೂಡಿದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಅದರೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಬಳಸಿಕೊಳ್ಳಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು. ಇಂದು ಆಲಮೇಲ ಪಟ್ಟಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ರೈತರು ಒಂದೇ ಬೆಳೆಗ ಸೀಮಿತವಾಗದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು ಅದರಲ್ಲಿ ಒಂದರ ಬೆಲೆ ಇಲ್ಲದಿದ್ದಲ್ಲಿ ಇನ್ನೊಂದು ಬೆಳೆಯ ಬೆಲೆ ಇರುತ್ತದೆ ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು.

ಆ ದೇಶದಲ್ಲಿ ಮಳೇ ಅತೀ ಕಡಿಮೆ ಬರುತ್ತದೆ ಆದಾಗ್ಯೂ ವಿಶ್ವದಲ್ಲಿಯೇ ಕೃಷಿ ಚಟುವಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಕೊಳ್ಳಬೇಕು ಎಂದು ಅವರು ಹೇಳಿದರು.

ಜಾಗಗಳಲ್ಲಿ ತಮ್ಮ ವ್ಯವಹಾರಗಳನ್ನು ನಡೆಸುತ್ತಿವೆ ಜಿಲ್ಲೆಯ ರೈತರು ಸದೃಡವಾಗಿರಲು, ರೈತರ ಹಿತ ಕಾಪಾಡುವ ದೃಷ್ಟಿಯಿಂದ 4 ಸಾವಿರ ಕೋಟಿಯಷ್ಟು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸಲಾಗಿದೆ. ಕಬ್ಬು ಬೆಳೆ ಬಹು ವಾರ್ಷಿಕ ಬೆಳೆಯಾಗಿದ್ದು ಇದರಿಂದ ಎಥೆನಾಲ್, ಕಾಗದ ಇನ್ನೂ ಹಲವಾರು ವಿವಿಧ ಬಗೆಗಳ ಕಾರ್ಖಾನೆಯಿಂದ ಉತ್ಪದನೆಯಾಗುತ್ತವೆ ಇದರಿಂದ ಕಬ್ಬು ಬೆಳೆಗೆ ಬೆಲೆ ಕಡಿಯಾಗುವುದು ತೀರಾ ಕಡಿಮೆ ಹಾಗಾಗಿ ರೈತರು ಕಬ್ಬು ಬೆಳೆಯ ಜೊತೆ ವಿವಿಧ ಬೆಳೆಗಳನ್ನೂ ಕೂಡ ಬೆಳೆಯಬೇಕು. ಈ ಭಾಗದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ ಕಡಣಿ ಬಾಂದಾರ ನಿರ್ಮಿಸುವುದು ಹಾಗೂ ತೋಟಗಾರಿಕೆ ಕಾಲೇಜ್ ಮಂಜೂರಾಗಿದ್ದು ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗಿದೆ.

ಆದಷ್ಟು ಶೀಘ್ರವಾಗಿ ಕ್ರಮವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಆಲಮೇಲದ ಗುರುಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಆಲಮೇಲ ದೇವರಗುಡ್ಡ ಗುರುಪೀಠದ ಒಡೆಯರಾದ ಡಾ.ಸಂದೀಪ ಜೆ.ಪಾಟೀಲ, ಅಳ್ಕೊಳ್ಳಿ ಹಿರೇಮಠದ ಪೂಜ್ಯ ಶ್ರೀ ಶ್ರೀಶೈಲಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ಸಿದ್ದರಾಮ ಕೋಳಾರಿ ಅಧ್ಯಕ್ಷತೆ ವಹಿಸಿದ್ದರು. ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ, ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ನಿವೃತ್ತ ಪಿಡಿಸಿ ಅಧಿಕಾರಿ ಆರ್. ಎಂ.ಬಣಗಾರ, ಡೆಪ್ಯೂಟಿ ಮ್ಯಾನೇಜರ್ ಎಂ.ಎಸ್.ಹತ್ತರಕಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *