ನೋಂದಣಿ ವಿವರಗಳು:
ಯಾರು ಹಾಜರಾಗಬೇಕು?
ನೋಂದಾಯಿತ ಪಿಎಚ್.ಡಿ. ವಿದ್ವಾಂಸರು/ಅಧ್ಯಾಪಕರು ಅಥವಾ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳ ಯಾವುದೇ UG/PG ವಿದ್ಯಾರ್ಥಿಗಳು, ಬ್ಲಾಕ್ ಚೈನ್ ಟೆಕ್ನಾಲಜಿಯಲ್ಲಿ ಪರಿಣತಿಯನ್ನು ಪಡೆಯಲು ಬಯಸುವ ಉದ್ಯಮದ ಸದಸ್ಯರು.
ಅರ್ಜಿ ಸಲ್ಲಿಸುವುದು ಹೇಗೆ?
ಭಾಗವಹಿಸುವವರು Google ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು DSLD CHEFT ಪರವಾಗಿ ನೋಂದಣಿ ಶುಲ್ಕವನ್ನು ಸಲ್ಲಿಸಬೇಕು.
ನೋಂದಣಿ ಶುಲ್ಕ
UG/PG/PhD-ರೂ. 150
ಶೈಕ್ಷಣಿಕ/ಉದ್ಯಮ/ಸಂಶೋಧನಾ ವಿದ್ವಾಂಸರು -ರೂ.200
ಶುಲ್ಕ ಪಾವತಿ
A/c ಹೆಸರು: ಸಹಾಯಕ ಕಂಟ್ರೋಲರ್, DSLD ಚೆಫ್ಟ್, ದೇವಿಹೊಸೂರು
ಎ/ಸಿ ಸಂಖ್ಯೆ: 20257905757
ಬ್ಯಾಂಕ್ ಹೆಸರು: ಎಸ್ಬಿಐ, ಎಡಿಬಿ ಶಾಖೆ, ಹಾವೇರಿ.
IFSC ಕೋಡ್: SBIN0001825
ನೋಂದಣಿಗಾಗಿ ಸ್ಕ್ಯಾನ್ ಮಾಡಿ
ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ / ನೋಂದಣಿಗಾಗಿ ಕೆಳಗಿನ ಲಿಂಕ್ ಬಳಸಿ.
https://forms.gle/iNFi55us4hwfc8yh7
Last Date for Registration: 23.09.2024
Ms. Sukthija M. P.-7676427742 Dr.Nethravathi Ashok Patil – 8904602711
Certificate will be provided for registered participants
ಕಾರ್ಯಾಗಾರದ ಬಗ್ಗೆ ಬ್ಲಾಕ್‌ಚೈನ್ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಗಳು ನಿರ್ಣಾಯಕವಾಗಿವೆ ಈ ಪರಿವರ್ತಕ ತಂತ್ರಜ್ಞಾನದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಪ್ರಸ್ತುತ ಮತ್ತು ಭವಿಷ್ಯದ ಉದ್ಯೋಗಿಗಳನ್ನು ಸಜ್ಜುಗೊಳಿಸುವುದು. ಸಾಮಾಜಿಕ ಮತ್ತು ನೈತಿಕ ಸವಾಲುಗಳನ್ನು ಎದುರಿಸುವಾಗ ವ್ಯಕ್ತಿಗಳು ಮತ್ತು ಸಂಸ್ಥೆಗಳು ನಾವೀನ್ಯತೆ, ಭದ್ರತೆಯನ್ನು ಕಾಪಾಡಿಕೊಳ್ಳಲು, ನಿಯಮಾವಳಿಗಳನ್ನು ಅನುಸರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
ಬ್ಲಾಕ್‌ಚೈನ್ ತಂತ್ರಜ್ಞಾನವು ವಿವಿಧ ಕೈಗಾರಿಕೆಗಳನ್ನು ವೇಗವಾಗಿ ಪರಿವರ್ತಿಸುತ್ತಿದೆ. ಇದು ಕೌಶಲ್ಯದ ಅಂತರವನ್ನು ಕಡಿಮೆ ಮಾಡುವುದು, ಅಂತರಶಿಸ್ತೀಯ ಜ್ಞಾನ, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ನಾವೀನ್ಯತೆಯನ್ನು ಪ್ರೇರೇಪಿಸುವ ಮೂಲಕ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು. ತರಬೇತಿ ಕಾರ್ಯಕ್ರಮಗಳು ಹೊಸ ಬ್ಲಾಕ್‌ಚೈನ್ ಆಧಾರಿತ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಜ್ಜುಗೊಳಿಸಬಹುದು ಮತ್ತು
ಸ್ಟಾರ್ಟಪ್‌ಗಳು, ಆರ್ಥಿಕ ಬೆಳವಣಿಗೆಗೆ ಚಾಲನೆ. ಭದ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುವುದು. ಇದು ಭದ್ರತಾ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬ್ಲಾಕ್‌ಚೈನ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಸಂಭಾವ್ಯ ಪ್ರಯೋಜನಗಳ ಕುರಿತು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಶಿಕ್ಷಣ ನೀಡುವ ಮೂಲಕ ನಂಬಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ, ತರಬೇತಿ ಕಾರ್ಯಕ್ರಮಗಳು ತಂತ್ರಜ್ಞಾನದಲ್ಲಿ ನಂಬಿಕೆಯನ್ನು ಬೆಳೆಸಲು ಕೊಡುಗೆ ನೀಡುತ್ತವೆ, ಇದು ಕೃಷಿ ಮತ್ತು ತೋಟಗಾರಿಕೆ ಪೂರೈಕೆ ಸರಪಳಿಯಲ್ಲಿ ವ್ಯಾಪಕ ಅಳವಡಿಕೆಗೆ ಅವಶ್ಯಕವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು. ತರಬೇತಿ ಕಾರ್ಯಕ್ರಮಗಳು ತೆಗೆದುಕೊಳ್ಳಲು ಉದ್ಯೋಗಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ
ಈ ಹೊಸ ಪಾತ್ರಗಳ ಮೇಲೆ, ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಜಾಗತಿಕ ಸ್ಪರ್ಧಾತ್ಮಕತೆಯು ಬ್ಲಾಕ್‌ಚೈನ್ ಶಿಕ್ಷಣದಲ್ಲಿ ಹೂಡಿಕೆ ಮಾಡುವ ರಾಷ್ಟ್ರಗಳು ಮತ್ತು ತರಬೇತಿಯು ಬ್ಲಾಕ್‌ಚೈನ್ ನಾವೀನ್ಯತೆಗೆ ಕಾರಣವಾಗಬಹುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಅಂಚನ್ನು ನೀಡುತ್ತದೆ. ಇದು ಸಾಮಾಜಿಕ ಮತ್ತು ನೈತಿಕ ಪರಿಣಾಮಗಳನ್ನು ಉತ್ತೇಜಿಸುತ್ತದೆ.
ವಿಶ್ವವಿದ್ಯಾಲಯದ ಬಗ್ಗೆ
ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರಲ್ ಸೈನ್ಸಸ್ ಬಾಗಲಕೋಟ (UHSB),
2008 ರಲ್ಲಿ ಬಾಗಲಕೋಟ, ಕಮತಕದಲ್ಲಿ ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯವು ತೋಟಗಾರಿಕಾ ವಿಜ್ಞಾನದಿಂದ ಆಹಾರ ತಂತ್ರಜ್ಞಾನದವರೆಗೆ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳ ವ್ಯಾಪಕ ಶ್ರೇಣಿಯನ್ನು ನೀಡುತ್ತದೆ. UHSB ಬೆಳೆ ಕೃಷಿ ಮತ್ತು ನಿರ್ವಹಣೆಯಲ್ಲಿ ನಾವೀನ್ಯತೆ ಮತ್ತು ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುತ್ತದೆ. ಅದರ ಸಹಯೋಗದ ಪ್ರಯತ್ನಗಳು ಮತ್ತು ಔಟ್ರೀಚ್ ಕಾರ್ಯಕ್ರಮಗಳ ಮೂಲಕ, UHSB ತೋಟಗಾರಿಕಾ ಅಭ್ಯಾಸಗಳು ಮತ್ತು ಆಹಾರ ಉತ್ಪನ್ನ ಅಭಿವೃದ್ಧಿಯ ಪ್ರಗತಿಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ.
ಕಾಲೇಜಿನ ಬಗ್ಗೆ
ದಾನವೀರ ಸಿರಸಂಗಿ ಕಾಲೇಜು ಶ್ರೀ ಲಿಂಗರಾಜ ದೇಸಾಯಿ ಕಾಲೇಜ್ ಆಫ್ ಹಾರ್ಟಿಕಲ್ಚರಲ್ ಇಂಜಿನಿಯರಿಂಗ್ ಮತ್ತು ಫುಡ್ ಟೆಕ್ನಾಲಜಿ (DSLD CHEFT) ಅನ್ನು ದೇವಿಹೊಸೂರಿನಲ್ಲಿ 2016 ರಲ್ಲಿ ಸ್ಥಾಪಿಸಲಾಯಿತು. ದೇವಿಹೊಸೂರು ಹಾವೇರಿಯಿಂದ 6 ಕಿಮೀ ದೂರದಲ್ಲಿದೆ ಮತ್ತು ಆಹಾರ ತಂತ್ರಜ್ಞಾನದ ಮೊದಲ ಕಾಲೇಜನ್ನು ಪ್ರಾರಂಭಿಸಲು ಸೂಕ್ತ ಸ್ಥಳವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆಯ ವ್ಯಾಪ್ತಿ ಮತ್ತು ಪ್ರಾಮುಖ್ಯತೆಯನ್ನು ಗುರುತಿಸುವ ಮೂಲಕ. ಆಹಾರ ತಂತ್ರಜ್ಞಾನವು ಅಂತರಶಿಸ್ತಿನ ಕೋರ್ಸ್ ಆಗಿದ್ದು, ಹೆಚ್ಚು ತರಬೇತಿ ಪಡೆದ ಆಹಾರ ತಂತ್ರಜ್ಞರೊಂದಿಗೆ ಆಹಾರ ಉದ್ಯಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅನುಭವದೊಂದಿಗೆ ವಿಸ್ತೃತ ಕೋರ್ಸ್ ಪಠ್ಯಕ್ರಮವು ಸಮಕಾಲೀನ ಸವಾಲುಗಳನ್ನು ಎದುರಿಸಲು ಮತ್ತು ಆಹಾರ ವಲಯದಲ್ಲಿ ಭವಿಷ್ಯದ ತುರ್ತುಸ್ಥಿತಿಗಳಿಗೆ ಉತ್ತರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸಜ್ಜೆ ಬೆಳೆಯ ಕ್ಷೇತ್ರೋತ್ಸವ
ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಜೈವಿಕ ಬಲವರ್ಧನೆಗೊಳಿಸಿದ ಸಜ್ಜೆ ಬೆಳೆಯ ಸಂಕರಣ ತಳಿ ವಿ.ಪಿ.ಎಮ್.ಹೆಚ್.- 14 ಬೆಳೆಯ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾನಾಡಿ, ವಿ.ಪಿ.ಎಮ್.ಹೆಚ್.-14 ಸಜ್ಜೆ ಬೆಳೆಯ ಸಂಕರಣ ತಳಿಯನ್ನು ಕೃಷಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿ ಡಾ. ಅಥೋನಿ ಬಂಡೇನವಾಜ್ ಅವರು ಅಭಿವೃದ್ಧಿಪಡಿಸಿದ್ದಾರೆ. ಮುಂಚೂಣಿ ಪ್ರಾತ್ರಕ್ಷಿಕೆಯಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ಯಲಬುರ್ಗಾ ತಾಲ್ಲೂಕಿನ ಎರಡು ಗುಚ್ಛ ಗ್ರಾಮಗಳಾದ ವಣಗೇರಿ ಮತ್ತು ಮಂಗಳೂರುಗಳಿಂದ 10 ಜನ ರೈತ ಫಲಾನುಭವಿಗಳನ್ನು ಆಯ್ಕೆಮಾಡಿ ಉಚಿತವಾಗಿ ನೀಡಲಾಗಿದೆ.
ರೈತರು ಜೂನ್ ತಿಂಗಳ ಕೊನೆವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಕಟಾವಿಗೆ ಸಿದ್ಧವಾದ ಸಂದರ್ಭದಲ್ಲಿ ಈ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದೊಂದು ಉತ್ತಮ ಸಂಕರಣ ತಳಿಯಾಗಿದ್ದು, ಮೊದಲಬಾರಿಗೆ ಜಿಲ್ಲೆಯಲ್ಲಿ ಪರಿಚಯಿಸಲಾಗುತ್ತಿದೆ. ಕೇವಲ 90 ದಿನಗಳ ಅವಧಿಯಲ್ಲಿ ಕಟಾವಿಗೆ ಬರುವ ಈ ತಳಿ ಸತು ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿದ್ದು, ಉತ್ತಮ ತೂಕವುಳ್ಳದ್ದಾಗಿದೆ. ಮಧುಮೇಹಿ ಮತ್ತು ಸಂದೀವಾತ ರೋಗಗಳಿಗೆ ಇದೊಂದು ಉತ್ತಮ ಔಷಧಿಯಾಗಿದ್ದು, ದಿನನಿತ್ಯ ಆಹಾರದಲ್ಲಿ ರೊಟ್ಟಿ ಅಲ್ಲದೆ ಸಜ್ಜೆ ಬಾತ್, ಸಜ್ಜೆ ಪಾಯಸ ಹೀಗೆ ಅನೇಕ ತರಹದ ಖಾದ್ಯಗಳನ್ನು ಮಾಡಿ ಸೇವಿಸಬಹುದಾಗಿದೆ ಎಂದರು.
ಸಂಘಟನಾ ಸಮಿತಿ
ಪೋಷಕ:
ಡಾ.ವಿಷ್ಣುವರ್ಧನ್ ಉಪಕುಲಪತಿ, ಯುಎಚ್‌ಎಸ್, ಬಾಗಲಕೋಟ
ಸಹ-ಪೋಷಕ:
ಡಾ.ಎನ್.ಕೆ.ಹೆಗಡೆ
ಶಿಕ್ಷಣ ನಿರ್ದೇಶಕರು, UHS, ಬಾಗಲಕೋಟ,
ಡಾ. ಟಿ.ಬಿ. ಅಲಿಯೊಳ್ಳಿ ವಿಸ್ತರಣಾ ನಿರ್ದೇಶಕರು, ಯುಎಚ್‌ಎಸ್, ಬಾಗಲಕೋಟ,
ಡಾ.ಮಹೇಶ್ವರಪ್ಪ ಎಚ್.ಪಿ. ಸಂಶೋಧನಾ ನಿರ್ದೇಶಕರು, ಯುಎಚ್‌ಎಸ್, ಬಾಗಲಕೋಟ,
ಶ್ರೀ ಮಹಾದೇವ ಎ ಮುರಗಿ ರಿಜಿಸ್ಟ್ರಾರ್, UHS, ಬಾಗಲಕೋಟ
ಡಾ. ಲಕ್ಷ್ಮೀನಾರಾಯಣ ಹೆಗಡೆ ಡೀನ್ ಪಿಜಿಎಸ್, ಯುಹೆಚ್ಎಸ್, ಬಾಗಲಕೋಟ,
ಅಧ್ಯಕ್ಷರು:
ಡಾ. ಬಿ. ಫಕ್ರುದಿನ್ ಡೀನ್, ಡಿಎಸ್ಎಲ್ಡಿ ಚೆಫ್ಟ್, ದೇವಿಹೊಸೂರು-ಹಾವೇರಿ,
ಸಂಘಟನಾ ಕಾರ್ಯದರ್ಶಿ:
ಡಾ. ನೇತ್ರಾವತಿ ಅಶೋಕ್ ಪಾಟೀಲ್ ಸಹಾಯಕ ಪ್ರಾಧ್ಯಾಪಕ,
ಆಹಾರ ವ್ಯವಹಾರ ನಿರ್ವಹಣೆ ವಿಭಾಗ, DSLD ಚೆಫ್ಟ್, ದೇವಿಹೊಸೂರು-ಹಾವೇರಿ
ಸದಸ್ಯರು:
ಡಾ. ಶೋಬಾ ಎಸ್ ಅಸೋಸಿಯೇಟ್ ಪ್ರೊಫೆಸರ್ ಮತ್ತು ಎಚ್‌ಒಡಿ ಆಹಾರ ಪ್ರಕ್ರಿಯೆ ಇಂಜಿನಿಯರಿಂಗ್ ವಿಭಾಗ. DSLD ಚೆಫ್ಟ್, ದೇವಿಹೊಸೂರು-ಹಾವೇರಿ
ಶ್ರೀಮತಿ ಸುಕ್ತಿಜಾ ಎಂ.ಪಿ.
ಸಹಾಯಕ ಪ್ರಾಧ್ಯಾಪಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗ, DSLD ಚೆಫ್ಟ್, ದೇವಿಹೊಸೂರು-ಹಾವೇರಿ
ಮೆಸ್ ಅನ್ನಪೂರ್ಣ ನೀರಲಗಿ ಸಹಾಯಕ ಪ್ರಾಧ್ಯಾಪಕಿ, ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗ ಡಿಎಸ್‌ಎಲ್‌ಡಿ ಚೆಫ್ಟ್, ದೇವಿಹೊಸೂರು, ಹಾವೇರಿ
ಡಾ.ಪವನ್ ತೇಜಸ್ವಿ ಟಿ.
ಫುಡ್ ಪ್ಲಾಂಟ್ ಆಪರೇಷನ್ ಡಿಎಸ್‌ಎಲ್‌ಡಿ ಚೆಫ್ಟ್‌ನ ಸಹಾಯಕ ಪ್ರಾಧ್ಯಾಪಕ ವಿಭಾಗ, ದೇವಿಹೊಸೂರು, ಹಾವೇರಿ
ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ : ಬೆಳೆ ಕಟಾವಿಗೆ ಯಂತ್ರಗಳ ಮೊರೆ
ಹಾವೇರಿ : ಜಿಲ್ಲೆಯಲ್ಲಿ ಬೆಳೆದಿರುವ ಗೋವಿನ ಜೋಳ, ಸೋಯಾಬೀನ್, ಹೆಸರು, ಭತ್ತ ಹಾಗೂ ಇತರೆ ಬೆಳೆಗಳು ಕಟಾವು ಹಂತಕ್ಕೆ ಬರುತ್ತಿವೆ. ಕಾರ್ಮಿಕರ ಕೊರತೆ ಹಾಗೂ ನಾನಾ ಸಮಸ್ಯೆ ಎದುರಿಸುತ್ತಿರುವ ರೈತರು, ಫಸಲು ಕಟಾವು ಮಾಡಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ.
ಕೆಲ ರೈತರು ತಮ್ಮ ಕುಟುಂಬದ ಸದಸ್ಯರ ಜೊತೆ ಸೇರಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕಡಿಮೆ ಜನ ಇದ್ದರೆ, ಅಂಥವರು ಕೃಷಿ ಕೆಲಸಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ಕಾರ್ಮಿಕರ ಕೂಲಿ ದರವೂ ಹೆಚ್ಚಾಗುತ್ತದೆ. ದರ ಕೊಟ್ಟು ಕೆಲವೆಡೆ ಕಾರ್ಮಿಕರು ಲಭ್ಯವಾಗುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ಕಟಾವು ಮಾಡಿ ಮಾರಲು ರೈತರು ಸಜ್ಜಾಗಿದ್ದಾರೆ. ಇಂಥ ರೈತರಿಗೆ, ಕಾರ್ಮಿಕರ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ರೈತರು, ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಕೃಷಿ ಯಂತ್ರ ಹೊಂದಿರುವವರಿಗೆ ಬೇಡಿಕೆ ಹೆಚ್ಚಾಗಿದೆ. ಸೋಯಾಬಿನ್, ಹೆಸರು, ಭತ್ತ ಸೇರಿದಂತೆ ಸಣ್ಣ ಬೆಳೆಗಳನ್ನು ಹಾಗೂ ಗೋವಿನ ಜೋಳದಂಥ ದೊಡ್ಡ ಬೆಳೆಗಳನ್ನು ಕಟಾವು ಮಾಡಲು ತರಹೇವಾರಿ ಯಂತ್ರಗಳು ಮಾರುಕಟ್ಟೆಗೆ ಬಂದಿದೆ. ಇಂಥ ಯಂತ್ರಗಳನ್ನು ಖರೀದಿಸಿರುವ ಕೆಲವರು, ಅವುಗಳನ್ನು ಬಳಸಿಕೊಂಡು ಬಾಡಿಗೆ ಆಧಾರದಲ್ಲಿ ಬೆಳೆ ಕಟಾವು ಮಾಡುತ್ತಿದ್ದಾರೆ. ಜಿಲ್ಲೆಯ ಹಲವು ತಾಲ್ಲೂಕಿನಲ್ಲಿರುವ ವ್ಯಾಪಾರಿಗಳು ಹಾಗೂ ರಿಯಾಯಿತಿ ಸಹ ಸಿಗುತ್ತಿದೆ.
ಉದ್ಯಮಿಗಳು, ಹೆಚ್ಚಾಗಿ ಯಂತ್ರಗಳನ್ನು ಹೊಂದಿದ್ದಾರೆ. ಇವರ ಬಳಿಯ ಯಂತ್ರಗಳನ್ನು ರೈತರು ಬಾಡಿಗೆಗಾಗಿ ಪಡೆಯುತ್ತಿದ್ದಾರೆ. ಸದ್ಯದ ಮಾರುಕಟ್ಟೆಯಲ್ಲಿ ಯಂತ್ರದ ಬಳಕೆಗಾಗಿ ಪ್ರತಿ ಗಂಟೆಗೆ 2,300 ರಿಂದ 2.500 ರ ವರೆಗೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಕಾಯಂ ರೈತರು ಹಾಗೂ ಪರಿಚಯಸ್ಥರ ರೈತರಿಗೆ ಹಣ, ಸಮಯ ಉಳಿತಾಯ: ಆಯಾ ಬೆಳೆಗಳ ಕಟಾವಿಗೆ ಅಗತ್ಯವಿರುವ ಉಪಕರಣಗಳನ್ನು ಒಳಗೊಂಡಿರುವ ಯಂತ್ರಗಳು ಇಂದು ಲಭ್ಯವಿವೆ. ಕಡಿಮೆ ಸಮಯದಲ್ಲಿ ಕಟಾವು ಮುಗಿಸುವ ಸಾಮರ್ಥ್ಯವನ್ನೂ ಹೊಂದಿದೆ. ಕಾರ್ಮಿಕರ ಕೂಲಿಗಿಂತ ಕಡಿಮೆ ಹಣದಲ್ಲಿ ಕಟಾವು ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ರೈತರು ಹೇಳುತ್ತಿದ್ದಾರೆ.
ಕಾರ್ಮಿಕರನ್ನು ಬಳಸಿಕೊಂಡು ಒಂದು ಎಕರೆ ಸೋಯಾಬೀನ್ ಕಟಾವು ಮಾಡಲು ಸುಮಾರು 5,700 ಬೇಕಾಗುತ್ತದೆ. ಗಿಡ ಕಿತ್ತು ಬಣವೆ ಮಾಡಲು 2,600 ಹಾಗೂ ಕಾಳು ಬೇರ್ಪಡಿಸುವ ಯಂತ್ರಕ್ಕೆ ಹಾಕಲು 1,500 ಕೊಡಬೇಕು. ಯಂತ್ರದ ಸಹಾಯಕ್ಕಾಗಿ ಕೆಲಸ ಮಾಡಲು ನಾಲ್ವರು ಕಾರ್ಮಿಕರು ಬೇಕು. ಅವರಿಗೆ ತಲಾ 400 ರಂತೆ 1,600 ನೀಡಬೇಕು’ ಎಂದು ದೇವಗಿರಿ ರೈತ ಅಶೋಕ ಮೇಗಿಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾತಿ ಅರ್ಜಿ ಆಹ್ವಾನ
2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳ (ಸಾಮಾನ್ಯ ಪದವಿ ಮಟ್ಟದ ಕೋರ್ಸ್ ವೃತ್ತಿಪರ ಕೋರ್ಸ್ ಮತ್ತು ಸ್ನಾತಕೊತ್ತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಾತಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರವೀಣ ಕುಮಾರ ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ಕಾರ್ಯನಿರ್ವಹಿಸುತ್ತಿರುವ 1.ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಶಹಾಪುರ 2.ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಶಹಾಪುರ ಪಿ 3. ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಸುರಪುರ 4.ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಸುರಪುರ (50 ಸಂಖ್ಯಾಬಲ) 5.ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಸುರಪುರ (100 ಸಂಖ್ಯಾಬಲ) 6.ಮೆಟ್ರಿಕ್ ನಂತರ ಬಾಲಕಿಂ- ಯರ ವಸತಿ ನಿಲಯ ಗುರುಮಠಕಲ್ 7.ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಯಾದಗಿರಿ 8. ಮೆಟ್ರಿಕ್ ನಂತರ ಬಾಲಕರ ವಸತಿ ಯಾದಗಿರಿ (50 ಸಂಖ್ಯಾಬಲ) ಮತ್ತು 9.ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಯಾದಗಿರಿ (100 ಸಂಖ್ಯಾಬಲ), 10.ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಯಾದಗಿರಿ (ಹೊಸದು). 11.ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಯಾದಗಿರಿ (ಹೊಸದು).
ವಸತಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ 2.50 ಲಕ್ಷ ರೂ.ಗಳ ಆದಾಯ ಮಿತಿ ಒಳಗಿರಬೇಕು, ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಗೆ ಶೇ.75ರಷ್ಟು ಮತ್ತು ಇತರೆ ಜನಾಂಗಗಳಿಗೆ ಶೇ.25ರಷ್ಟು ಮೀಸಲಾತಿ ಪ್ರಕಾರ ವಿದ್ಯಾರ್ಥಿಗಳಿಂದ 2023-24ನೇ ಸಾಲಿನಲ್ಲಿ ವಸತಿ ನಿಲಯ ಪ್ರವೇಶಕ್ಕಾಗಿ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ ಅರ್ಜಿಸಲ್ಲಿಸಬೇಕು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ಸಾಮಾನ್ಯ ಪದವಿ ಮಟ್ಟದ, ವೃತ್ತಿಪರ ಮತ್ತು ಸ್ನಾತಕೊತ್ತರ ಕೋರ್ಡ್ಗಳ) ಪ್ರವೇಶಾತಿಗೆ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ 2024ರ ಅಕ್ಟೋಬರ್ 5ರ ಒಳಗೆ ಅರ್ಜಿಸಲ್ಲಿಸಬೇಕು, ಮುಕ್ತಾಯಗೊಳಿಸಲು ಉದ್ದೇಶಿಸಿ, ನಿಯಮಾನುಸಾರ ಸೀಟುಗಳ ಭರ್ತಿ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾ- ರಿಗಳ ಕಾರ್ಯಾಲಯ, ಕೊಠಡಿ ಸಂಖ್ಯೆ ಸಿ-7, ಮೊದಲನೇ ಮಹಡಿ, ಮಿನಿ ವಿಧಾನ ಸೌಧ,ಚಿತ್ತಾಪುರ ರಸ್ತೆ, ಯಾದಗಿರಿ. 08473253235, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ 08095971486, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ 9731090143, ಅಲ್ಪಸಂಖ್ಯಾತರ ಮಾಹಿತಿ 7795592068 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವನಿಧಿ ಯೋಜನೆಯಡಿ ಫಲಾನುಭವಿಗಳ ಚಾಲ್ತಿ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ
ಜಿಲ್ಲಾಡಳಿತ, ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಯಾದಗಿರಿ ಜಿಲ್ಲಾ ವಾಪ್ತಿಯಲ್ಲಿರುವ ಪದವಿ ಹಾಗೂ ಡಿಪ್ಲೋಮಾ ಪದವೀಧರರು 2022-23 ನೇ ಸಾಲಿನಲ್ಲಿ ವಾಸ್ಯಾಂಗಮಾಡಿ ಉತ್ತೀರ್ಣರಾಗಿ 6 ತಿಂಗಳನಂತರ ಅಥವಾ 180 ದಿನಗಳನ ಮೇಲ್ಪಟ್ಟು 5. ನಿರುದ್ಯೋಗ ಯುವಕ, ಯುವತಿಯರು ಯುವನಿಧಿ ಯೋಜನಡಿಯಲ್ಲಿ ನಿರುದ್ಯೋಗ ಭತ್ಯಯನ್ನು ಪಡೆಯಲು ಈಗಾಗಲೇ ಜಿಲ್ಲಾ ವ್ಯಾಪ್ತಿಯಿಂದ 85 ಪದವಿ ಕಾಲೇಜು 05 ಡಿಪ್ಲೋಮಾ ಕಾಲೇಜುಗಳು ಹಾಗೂ 01 ಇಂಜಿನಿಯರ್ ಕಾಲೇಜು ಗುರುತಿಸಿದ್ದು ಅದರಂತೆ ಯುವನಿಧಿ ಯೋಜನಡಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ (ಪದವೀಧರರಿಗೆ 3000 ರೂ.ಗಳ ಹಾಗೂ ಡಿಪ್ಲೋಮಾ ಪದವೀದರ 1500 ರೂ.ಗಳ) ಫಲಾನುಭವಿಗಳಿಗೆ ಒಟ್ಟು 2,86,17,000 ರೂ.ಗಳ ಫಲಾನುಭವಿಗಳ ಚಾಲ್ತಿ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾಮಾಡಲಾಗುತ್ತದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ.
ಅರ್ಜಿ ನೋಂದಣಿಗಾಗಿ ಷರತ್ತು ಮತ್ತು ನಿಬಂದನೆಗಳಿಗೆ ಒಳಪಟ್ಟಿರಬೇಕು, ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 6 ವರ್ಷ ವಾಸವಾಗಿರಬೇಕು, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ವಾಸಾಂಗ ಮಾಡಿ ಪಾಸಾದ ಅಭ್ಯರ್ಥಿಗಳು ಕನಿಷ್ಠ 6 ತಿಂಗಳಾಗಿಬೇಕು. ಸೌಲಭ್ಯವು 2 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗುತ್ತದೆ ಈ 2 ವರ್ಷಗಳ ಅವಧಿಯೋಳಗೆ ಉದ್ಯೋಗ ದೊರಕಿದ್ದಲ್ಲಿ ಸೌಲಭ್ಯವನ್ನು ಸ್ಥಗಿ- ತಗೋಳಿಸಲಾಗುವುದು.ನಿರುದ್ಯೋಗ ಭತ್ಯೆಯನ್ನು ಡಿ.ಬಿ.ಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು ಅಭ್ಯರ್ಥಿಗಳು ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
ನಿರೂದ್ಯೋಗ ಸ್ಥಿತಿಗತಿ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. ಈಗಾಗಲೇ ಪ್ರತಿ ತಿಂಗಳು ಡಿ.ಬಿ.ಟಿ ಮುಖಾಂತರ ಹಣ ವರ್ಗಾವಣೆಯಾದ ಫಲಾನುಭವಿಗಳು ಮುಂದಿನ ಡಿ.ಬಿ.ಡಿ ಹಣ ಪಡೆಯುವ ಸಲುವಾಗಿ ಪ್ರತಿ ತಿಂಗಳು 25ರ ಒಳಗೆ ಕಡ್ಡಾಯವಾಗಿ ಸ್ವಯಂ ಘೋಷಣೆ ಪೋರ್ಟಲ್ ನಲ್ಲಿ ಘೋಷನೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18005999918 ಅಥವಾ ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾ ಉದ್ಯೋಗಾಧಿಕಾರಿ, 08473253718 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಣವಿಕಲ್ಲು ಗ್ರಾಮದಲ್ಲಿ ಪೆಟ್ರೋಲಿಯಂ ರಿಟೈಲ್ ಚೌಟ್‌ಲೇಟ್ ಸ್ಥಾಪನೆ : ಆಕ್ಷೇಪಣೆ ಸಲ್ಲಿಸಲು ಅವಕಾಶ
ಹೊಸಪೇಟೆ : ಬಳ್ಳಾರಿಯ ಡಿವಿಜನಲ್ ರಿಟೇಲ್ ಸೇಲ್ಸ್ ಹೆಡ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಇವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಯ ಬಣವಿಕಲ್ಲು ಗ್ರಾಮದ ಸರ್ವೆ ನಂ.142 ರಲ್ಲಿ ಪೆಟ್ರೋಲಿಯಂ ರಿಟೈಲ್ ಜೇಟ್‌ಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಆ ಕಂಪನಿಯನವರು ಅರ್ಜಿದಾರರಾದ ಗುರುಲಿಂಗ ತಂದೆ ಲೇಟ್ ಬಸಪ್ಪ ವಾಸ:ಹೊಸಪೇಟೆ ತಾಲೂಕು ಇವರನ್ನು ಫ್ರಾಂಚೈಸ್ಸಿಯನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ. ಪ್ರಯುಕ್ತ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿಯ ಬಣವಿಕಲ್ಲು ಗ್ರಾಮದ ಸರ್ವೆ ನಂ.142 ರಲ್ಲಿ ಪೆಟ್ರೋಲಿಯಂ ರಿಟೈಲ್ ಚೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ ಹತ್ತು ದಿನದೊಳಗಾಗಿ ಆಕ್ಷೇಪಣೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯನಗರ ಜಿಲ್ಲೆ, ಹೊಸಪೇಟೆ ಇಮೇಲ್ ಐಡಿ vijayanagaradc@gmail.com ಈ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಬಹುದು ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೂವಿನಹಡಗಲಿ ಗ್ರಾಮದಲ್ಲಿ ಪೆಟ್ರೋಲಿಯಂ ರಿಟೈಲ್ ಜೇಟ್‌ಲೇಟ್ ಸ್ಥಾಪನೆ : ಆಕ್ಷೇಪಣೆ ಸಲ್ಲಿಸಲು ಅವಕಾಶ
ಹೊಸಪೇಟೆ : ಕಲಬುರಗಿಯ ಟೆರಿಟೋರಿ ಮಾನೇಜರ್ ಭರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೂವಿನಹಡಗಲಿ ಹೋಬಳಿಯ ಹೂವಿನಹಡಗಲಿ ಗ್ರಾಮದ ಸ.ನಂ: 181*8/1 ರಲ್ಲಿ ಪೆಟ್ರೋಲಿಯಂ ರಿಟೈಲ್ ಚೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಆ ಕಂಪನಿಯನವರು ಅರ್ಜಿದಾರರಾದ ಚೇತನ್ ಲಕ್ಷಣ ಹೊನ್ನಪ್ಪನವರ ತಂದೆ ಎಲ್. ಹೊನ್ನಪ್ಪನವರ, ಜೈನ್ ಬಸದಿ, ಬಸವೇಶ್ವರ ನಗರ, ಹೂವಿನಹಡಗಲಿ ತಾಲೂಕು ಇವರನ್ನು ಫ್ರಾಂಚೈಸ್ಸಿಯನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ. ಪ್ರಯುಕ್ತ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೂವಿನಹಡಗಲಿ ಹೋಬಳಿಯ ಹೂವಿನಹಡಗಲಿ ಗ್ರಾಮದ ಸ.ನಂ: 181*8/1 ರಲ್ಲಿ ಪೆಟ್ರೋಲಿಯಂ ರಿಟೈಲ್ ಚೌಟಲೇಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ ಹತ್ತು ದಿನದೊಳಗಾಗಿ ಆಕ್ಷೇಪಣೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ವಿಜಯನಗರ ಜಿಲ್ಲೆ, vijayanagaradc@gmail.com ಗೆ ಹಾಗೂ ನೇರವಾಗಿ ಈ ಕಾರ್ಯಾಲಯದ ಎಂಎಜಿ- 2 ಶಾಖೆಗೆ ಸಲ್ಲಿಸಬಹುದು ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರಿಗೆ ರಾಜ್ಯ ಮಟ್ಟದ ಪ್ರಶಸ್ತಿ : ಅರ್ಜಿ ಆಹ್ವಾನ
ಹೊಸಪೇಟೆ : ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸಂಸ್ಥೆಗಳಿಗೆ, ವಿಶೇಷ ಶಿಕ್ಷಕರಿಗೆ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕಿನ ಎಮ್ಆರ್ಡಬ್ಲೂ ಮೊ: 994525991, ಹರಪನಹಳ್ಳಿ ತಾಲ್ಲೂಕಿನ ಎಮ್ಆರ್ಡಬ್ಲೂ ಮೊ: 9901182525, ಕೂಡ್ಲಿಗಿ ತಾಲ್ಲೂಕಿನ ಎಮ್ಆರ್ಡಬ್ಲೂ ಮೊ: 217626361, ಹೂವಿನಹಡಗಲಿ ತಾಲ್ಲೂಕಿನ ಎಮ್‌ಆರ್‌ಡಬ್ಲ್ಯೂ ಮೊ: 9900890403, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಎಮ್ ಆರ್‌ಡಬ್ಲೂ ಮೊ: 9741185924, ಕೊಟ್ಟೂರು ತಾಲ್ಲೂಕಿನ ಎಮ್ಆರ್ಡಬ್ಲೂ ಮೊ: 8296859012ಗೆ ಅಥವಾ ಸಂಡೂರು ರಸ್ತೆಯಲ್ಲಿರುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯಕ್ಕೆ ಕಚೇರಿಯ ಅವಧಿಯಲ್ಲಿ ಸಂಪರ್ಕಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
2024-25ನೇ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ಪ್ರವರ್ಗ-1ರ ವಿದ್ಯಾರ್ಥಿಗಳಿಂದ, ಅರ್ಹ ಪಿಯುಸಿ ಸಮನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸ್ಟಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಅವಧಿ ವಿಸ್ತರಿಸಿದೆ ಎಂದು ಯಾದಗಿರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಗಂಗಾಧರ ಎಂ.ದೊಡ್ಡಮನಿ ಅವರು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಗೂ ಅಲೆಮಾರಿ. ಅರೆ ಅಲೆಮಾರಿ ಪ್ರವರ್ಗ-1ರ ವಿದ್ಯಾರ್ಥಿಗಳಿಂದ, ಅರ್ಹ ಪಿಯುಸಿ ಸಮನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಡ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಮತ್ತು ಪ್ರವರ್ಗ- 1ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ವಿದ್ಯಾಸಿರಿ, ಊಟ, ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‌ಲೈನ್ ನಲ್ಲಿ ಅರ್ಜಿಸಲ್ಲಿಸಬೇಕು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಅರ್ಜಿ ಅವಧಿ 2024ರ ಅಕ್ಟೋಬರ್ 15ರ ವರೆಗೆ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮಗಳ ವಿವರ ಅರ್ಹತೆ, ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಬಗ್ಗೆ ಮಾಹಿತಿಗಾಗಿ ವೆಬ್ ಸೈಟ್ bcwd.karnataka.gov.in ಭೇಟಿ ನೀಡಬಹುದು.ಇಲಾಖೆ ಸಹಾಯವಾಣಿ 08050770005 bcwdhelpline@gmail.com ನಲ್ಲಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್ post- matrichelp@karnataka.gov.in ನಲ್ಲಿ ದೂ.ಸಂ.1902ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.21 ರಂದು ಉದ್ಯೋಗ ಮೇಳ
ಬೆಳಗಾವಿ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೆ.21 ರ ಬೆಳಗ್ಗೆ 9.30 ರಿಂದ ಮದ್ಯಾಹ್ನ 4 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಎಂ ಕತ್ತಿ ಗ್ರುಪ್ ಆಫ್ ಇನ್‌ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿ ಖಾಸಗಿ ಕಂಪನಿಗಳಿಂದ ಬೃಹತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಹೊಂದಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು https://tinyurl.com/2wc7pzp7 សំដ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್: 7975856566 ಸಂಖ್ಯೆಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಬ್ರಾಯ್ಡರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಬೆಳಗಾವಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ, ಆರಿ ವರ್ಕ್ & ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಗಾಗಿ ಗ್ರಾಮೀಣ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್‌ನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ಆಸಕ್ತರು ತಮ್ಮ ಹೆಸರನ್ನು ಅಕ್ಟೋಬರ್ 08 ರೊಳಗಾಗಿ ನೊಂದಾಗಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಅರಿಶಿನಕುಂಟೆಯ ರುಡ್‌ಸೆಟ್ ಸಂಸೆ ದೂರವಾಣಿ:9740982585, 9380162042 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಶಾಖೆಯ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಮ
ಟ್ಟದ ದಸರಾ ಕ್ರೀಡಾಕೂಟ ಆಯ್ಕೆ
ಬೆಳಗಾವಿ : ಪ್ರಸ್ತಕ ಸಾಲಿನ ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋಖೋ, ಕಬಡ್ಡಿ, ಥೋಬಾಲ್ ಹಾಗೂ ಯೋಗ ಕ್ರೀಡೆಗಳ ಆಯ್ಕೆಯನ್ನು ಸೆ.18 ರಿಂದ 23 ರವರೆಗೆ ನಡೆಸಲಾಗುತ್ತಿದೆ. ದಸರಾ ಕ್ರೀಡಾಕೂಟ ಆಯ್ಕೆಯ ಕ್ರೀಡೆಗಳು ಸೆ.19 ರಂದು ಗೋಕಾಕ ಕಿತ್ತೂರನಲ್ಲಿ ನಡೆಯುತ್ತಿದ್ದು, ಅನುಷ್ಠಾನಾಧಿಕಾರಿಗಳಾದ ಬಸವರಾಜ ಹೊಸಮಠ ದೂ:7019699077, ಸೆ.20 ರಂದು
ನಿಪ್ಪಾಣಿ, ಹುಕ್ಕೇರಿ ನಡೆಯಲಿರುವ ದೂ:7022378777, ಕುತುಜಾ ಮುಲ್ತಾನಿ ದೂ:7259080818, ಸೆ.21 ರಂದು ಅಥಣಿ, ಕಾಗವಾಡ ನಡೆಯಲಿರುವ ಎನ್.ಎ. ಮೀರಜಕರ ದೂ:9566677999, ಸವದತ್ತಿ, ಖಾನಾಪೂರ ಹಣಮಂತ ಪಾಟೀಲ ದೂ:8050485113, ಸೆ.22 ರಂದು ಅಥಣಿ, ಕಾಗವಾಡ ಎನ್.ಎ. ಮೀರಜಕರ 5:9566677999, ವಿ.ಎಸ್.ಪಾಟೀಲ್ ದೂ: 8317456301, ಬೆಳಗಾವಿ ಸಮ್ಮೇದ ಚೌಗಲೆ ದೂ:9632487391 ಸಂಖ್ಯೆಗೆ ಸಂಪರ್ಕಿಸಬಹುದು. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸಂಬಂಧಪಟ್ಟ ತಾಲ್ಲೂಕಿನ ಅನುಷ್ಠಾನಾಧಿಕಾರಿಗಳನ್ನು ಸಂಪರ್ಕಿಸಿ ಭಾಗವಹಿಸಬಹುದು ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.