ನಮಸ್ಕಾರ ಕರ್ನಾಟಕ ಬಾಂಧವರೇ, ಈಗಾಗಲೇ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇನ್ನು ಮೊದಲನೇಯ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಲ್ಲಾ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಈಗಾಗಲೇ ಮೊದಲನೇಯ ಕ್ಯಾಬಿನೆಟ್ ಮೀಟಿಂಗ್ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ನ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ಕೊಡಲಾಗಿದ್ದು, ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರು ಅಂದ್ರೆ ಕರ್ನಾಟಕ ರಾಜ್ಯದ ಪ್ರತಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ಕೊಡಲಾಗುವುದು. ಬಸ್ ಪಾಸ್ ನೊಂದಿಗೆ ರಾಜ್ಯಾದ್ಯಂತ ಎಲ್ಲಿಯಾದರೂ ಕೂಡ ಬಸ್ ಗಳಲ್ಲಿ ಪ್ರಯಾಣಿಸಬಹುದು ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಸರ್ಕಾರ ರಚನೆ ಬಳಿಕ ಹಲವು ಕೆಲಸಗಳನ್ನು ಮಾಡುವುದಿದೆ.
ಕಾಂಗ್ರೆಸ್ ನ ಜನಪ್ರಿಯ ಯೋಜನೆಯಾದ ‘ಇಂದಿರಾ ಕ್ಯಾಂಟೀನ್’ ಮತ್ತೆ ಆರಂಭ ಮಾಡಲಾಗುತ್ತದೆ. ಹಾಗೆ ಕಾಂಗ್ರೆಸ್ ನ ಐದು ಗ್ಯಾರಂಟಿಗಳನ್ನ ಜಾರಿಗೆ ತರುವುದಕ್ಕೆ ಸುಮಾರು ₹50,000/- ಸಾವಿರ ಕೋಟಿ ರೂಪಾಯಿಗಳಷ್ಟು ವೆಚ್ಚ ತಗಲುತ್ತೆ. ಎಲ್ಲ ರೀತಿಯ, ಎಲ್ಲ ಬಗೆಯ ಟ್ಯಾಕ್ಸ್ ಗಳನ್ನ ವಸೂಲಿ ಮಾಡುವ ಮೂಲಕ ಮಾಧ್ಯಮ ವರ್ಗದವರಿಗೆ ಹಾಗು ಎಲ್ಲ ಬಡ ಜನಸಾಮಾನ್ಯರಿಗೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಉಚಿತ ಬಸ್ ಪಾಸ್, ಹಾಗು ಯುವ ನಿಧಿ ಯೋಜನೆ ಅಡಿಯಲ್ಲಿ ಎಲ್ಲಾ ನಿರುದ್ಯೋಗಿ ಪದವೀಧರರಿಗೆ 2,000/- ರೂಪಾಯಿ ಹಾಗು ಡಿಪ್ಲೋಮಾ ಪದವೀಧರರಿಗೆ 1,500/-, ಹಾಗು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಮನೆಯ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಸೇರಿದಂತೆ, ಹಾಗು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ 2,000/- ರೂಪಾಯಿ ಹಣ ಸಹಾಯಧನ ಸೇರಿದಂತೆ ವಿವಿಧ ಘೋಷಣೆಗಳನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಕೊಡಲಾಗಿದೆ. ಹಾಗಾಗಿ ಇವುಗಳನ್ನ ಹೇಗೆ ಪಡೆದುಕೊಳ್ಳುವುದು.? ಹೇಗೆ ಅರ್ಜಿ ಸಲ್ಲಿಸುವುದು? ಬೇಕಾಗುವ ದಾಖಲಾತಿಗಳು ಏನು? ಹಾಗು ನೇರವಾಗಿ ಅಕೌಂಟ್ ಗೆ ಹಣ ಜಮಾವಣೆಯಾಗುತ್ತೆ ಎನ್ನುವುದರ ಕುರಿತು ಎರಡನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿಯೇ ತಿಳಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ :- ಸ್ವಾವಲಂಬಿ ಆ್ಯಪ್ ಮೂಲಕ ರೈತರು ನಿಮ್ಮ ಮನೆಯಲ್ಲಿ ಕುಳಿತು ಹೊಲದ ಪೋಡಿ ಮತ್ತು 11-ಇ ನಕ್ಷೆ ಪಡೆಯಿರಿ
ಇದನ್ನೂ ಓದಿ :- ಒಂದು ಲೀಟರ್ ಎಣ್ಣೆಗೆ 1500 ರೂಪಾಯಿಗಳು ಅತಿ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಹಣ ಗಳಿಸುವ ಸುಲಭ ಕೃಷಿ
ಇದನ್ನೂ ಓದಿ :- ಕೃಷಿ ಮಾಡಲು ಸಾಲ ಸೌಲಭ್ಯ ಟ್ರಾಕ್ಟರ್ ಖರೀದಿಸಲು, ,ಕುರಿ ಸಾಕಾಣಿಕೆಗೆ HDFC ಬ್ಯಾಂಕ್ ನಿಂದ ಸಾಲ