Breaking
Fri. Dec 20th, 2024

ಶ್ರಮಿಕ್ ನಿವಾಸ್ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕರ್ನಾಟಕ ಸರ್ಕಾರದಿಂದ ಉಚಿತ ಮನೆ ನಿರ್ಮಾಣ

Spread the love

ಆತ್ಮೀಯ ಜನರೇ, ಕಾರ್ಮಿಕರು ನಮ್ಮ ದೇಶದ ಮೂಲ ಸಂಪತ್ತು. ಈ ಕೂಲಿ ಕಾರ್ಮಿಕರಿಗಾಗಿ ನೂರಾರು ಕಲ್ಯಾಣ ಕಾರ‍್ಯಕ್ರಮಗಳನ್ನು ಸರ್ಕಾರ ನೀಡಿದೆ. ಆದರೆ ಅವುಗಳ ಉಪಯೋಗ ಸರಿಯಾಗಿ ಆಗಿಲ್ಲ. ಆದ್ದರಿಂದ ಸರ್ಕಾರ ಜನರಿಗೆ ಮನೆ ಇಲ್ಲದ ಬಡವರಿಗೆ ಉಚಿತ ಮನೆ ಕಟ್ಟಿಕೊಡಲು ಯೋಚಿಸಿದೆ. ನಿಮಗೆ ತಿಳಿದಿರಬಹುದು ಬಹಳ ಜನರು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿದರು ಉಪಯೋಗ ಸರಿಯಾಗಿ ಮಾಡಿಕೊಂಡಿಲ್ಲ ಏಕೆಂದರೆ ಜನರಿಗೆ ಈ ಯೋಜನೆಗಳ ಬಗ್ಗೆ ಸರಿಯಾದ ವಿಷಯಗಳು ತಿಳಿದಿಲ್ಲ ಆದಕಾರಣ ಈ ಲೇಖನವನ್ನು ಓದಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸುವ ಆಶಯದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಾರ್ಮಿಕ ವರ್ಗದವರೂ ಹೆಮ್ಮೆಯಿಂದ ಬದುಕುವ ವಸತಿ ವ್ಯವಸ್ಥೆಗಾಗಿ “ಶ್ರಮಿಕ್ ನಿವಾಸ” ಜಾರಿಯಾಗುತ್ತಿದೆ.

ಕಾರ್ಮಿಕರಿಗೆ ಶ್ರಮಿಕ್ ನಿವಾಸ್ ಯೋಜನೆ ಬಗ್ಗೆ ತಿಳಿಯಿರಿ?

ನಮ್ಮ ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಮುಖ್ಯ ಪಾತ್ರವಾಗಿದೆ. ಹಾಗಾಗಿ ಕಾರ್ಯನಿರ್ವಹಿಸಲು ಆಗಮಿಸುವ ಕಾರ್ಮಿಕ ವರ್ಗ ರಸ್ತೆ ಬದಿ ಮತ್ತು ನೈರ್ಮಲ್ಯಯುತ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸಲು ತುಂಬಾ ಕಷ್ಟ ಪಡುತಿದ್ದು, ಸರಕಾರವು ಅವರ ಕಷ್ಟ ನೋಡಲು ಆಗದೆ ಮೂಲಭೂತ ಸೌಕರ್ಯದ ಕಾರ್ಯನಿರ್ವಹಿಸುಲು ಒಂದು ಸುವರ್ಣ ಅವಕಾಶ ಮಾಡಿ ಕೊಟ್ಟಿದೆ. ಈ ತರಹದ ಸ್ಥಳಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಬದುಕು ಸಾಗಿಸುವುದರಿಂದ ಅವರ ಆರೋಗ್ಯ ಸರಿಯಾಗಿ ಇರುವುದಿಲ್ಲ. ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಹಾಗೂ ಬಿಡಿ ಮನೆಗಳ ನಿರ್ಮಾಣ ಮಾಡುತ್ತಿದೆ.

ನಮ್ಮ ಕಾರ್ಮಿಕ ಇಲಾಖೆಯು ಕಾರ್ಮಿಕ ವರ್ಗಕ್ಕೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಶ್ರಮಿಕ್ ನಿವಾಸ್ ಯೋಜನೆ ಅನುಷ್ಟಾನ ಮಾಡಿದೆ. ಈ ಯೋಜನೆ ಅಡಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ದೊಡ್ಡ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಕಾರ್ಮಿಕ ವರ್ಗಕ್ಕೆ ವಸತಿ ಕಲ್ಪಿಸಲು ವಸತಿ ಸಂಕೀರ್ಣಗಳು ಮತ್ತು ಬಿಡಿ ಮನೆಗಳ ನಿರ್ಮಾಣವನ್ನು ಶುರು ಮಾಡಿದೆ. ಈ ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶ್ರಮಿಕ್ ನಿವಾಸ್ ಯೊಜನೆ ಉದ್ಘಾಟನೆಗೊಳ್ಳಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯವಾದ ಬ್ಯಾಡನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿ ಸಮುಚ್ಚಯ ಶುರು ಮಾಡಿದ್ದಾರೆ. ನಮ್ಮ ಕಾರ್ಮಿಕ ಇಲಾಖೆಯು ಸುಮಾರು 19 ಕೋಟಿ ಹಣ ವೆಚ್ಚ ಮಾಡಿ ಮನೆ ನಿರ್ಮಿಸಲು ವ್ಯವಸ್ಥೆ ಮಾಡಿದೆ.

19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಿವೆ,1) ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿ. ಏಕ ಹಾಸಿಗೆ ವ್ಯವಸ್ಥೆಯಲ್ಲಿ 96 ಕಾರ್ಮಿಕರು 2) ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರ ವಸತಿ. ಕಾರ್ಮಿಕರು ಕುಟುಂಬದೊಂದಿಗೆ ಉಳಿದುಕೊಳ್ಳ ಇಷ್ಟ ಪಡುವವರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡದೆ. ಒಂದು ಕುಟುಂಬದಲ್ಲಿ 4 ಮಂದಿ ಅಂತೆ 48 ಕಾರ್ಮಿಕ ಕುಟುಂಬಗಳಿಗೆ ಈ ಯೋಜನೆಯ ಉಪಯುಕ್ತವಾಗಿದೆ. ಕಾರ್ಮಿಕರಿಗೆ ಶ್ರಮಿಕ ನಿವಾಸ್ ಯೋಜನೆ ಅಡಿ ಉಚಿತವಾಗಿ ಮನೆ ಕಟ್ಟಿಸಿಕೊಡುತ್ತದೆ. ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ಈ ಯೋಜನೆಗೆ ಆರ್ಜಿ ಸಲ್ಲಿಸಿ.

ಇದನ್ನು ಓದಿ:- ವೇತನ ನೀಡಲಾಗುತ್ತಿದೆ ಮಹಿಳೆಯರಿಗೆ ಎಷ್ಟು ಪುರುಷರಿಗೆ ಎಷ್ಟು?

ಇದನ್ನೂ ಓದಿ:- ಕೃಷಿ ಯಂತ್ರೋಕರಣಗಳನ್ನು ಖರೀದಿಸಲು 90% ಸಬ್ಸಿಡಿ ಈಗಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ :- ಬಡ್ಡಿ ರಹಿತ ಸಾಲ ಪಡೆಯುವ ಮೊದಲು ಈ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ,

Related Post

Leave a Reply

Your email address will not be published. Required fields are marked *