ಆತ್ಮೀಯ ನಾಗರಿಕರೇ, ಹಲವಾರು ಸಂಸ್ಥೆಗಳು ದೇಶದಿಂದ ನಿರುದ್ಯೋಗವನ್ನು ತೊಳೆದು ಹಾಕಬೇಕೆಂದು ಹಲವಾರು ಯೋಜನೆ ಮತ್ತು ತರಬೇತಿಗಳನ್ನು ತೆಗೆದುಕೊಂಡು ಬಂದು ಜನರಿಗೆ ಉಪಯುಕ್ತ ವಾಗುವಂತಹ ಕಾರ್ಯಗಳನ್ನು ಮಾಡುತ್ತಿವೆ. ಅದೇ ರೀತಿ ನಮ್ಮ ಕೆನರಾ ಬ್ಯಾಂಕ್ ಸ್ವಉದ್ಯೋಗಿ ತರಬೇತಿ ಸಂಸ್ಥೆಯು ಕೆಲವೊಂದು ಜಿಲ್ಲೆಗಳಲ್ಲಿ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಒಂದು ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಿದ್ದಾರೆ. ಶಿಕ್ಷಣವನ್ನು ಪಡೆಯದೆ ಅದರಿಂದ ವಂಚಿತರಾದ ಜನರಿಗೆ ಉದ್ಯೋಗವನ್ನು ನೀಡಲು ಕೆನರಾ ಬ್ಯಾಂಕ್ ಮುಂದಾಗಿದೆ.
ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ
ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರುವಂತ ಅಭ್ಯರ್ಥಿಗಳು ಮತ್ತು ಇದರ ತರಬೇತಿಯನ್ನು ಪಡೆದುಕೊಂಡು ಬ್ಯಾಂಕಿನಿಂದ ಸಾಲ ಪಡೆದು ಸ್ವಂತ ಉದ್ಯೋಗ ಮಾಡಲು ಇಲ್ಲಿದೆ ಒಂದು ಸುಲಭ ಮಾರ್ಗ. ಈ ತರಬೇತಿಯು ಕುಮಟಾ ಉತ್ತರಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು ಆಸಕ್ತಿ ಹೊಂದಿರುವಂತಹ ಜನರು ಇಲ್ಲಿಗೆ ಭೇಟಿ ನೀಡಿ ಹಲವಾರು ದಿನಗಳ ಕಾಲ ಉಚಿತ ಹೊಲಕ್ಕೆ ಕೌಶಲ್ಯವನ್ನು ಎಲ್ಲಿಂದ ಪಡೆದುಕೊಳ್ಳಬಹುದು.
ತರಬೇತಿಯ ವಿವರಗಳನ್ನು ಇಲ್ಲಿ ತಿಳಿಯಿರಿ
ಒಟ್ಟು 30 ದಿನಗಳ ತರಬೇತಿ ಇಲ್ಲಿ ನಡೆಯುತ್ತದೆ. ಜುಲೈ 3 ರಿಂದ ಅಗಸ್ಟ್ 1 ವರಗೆ ತರಬೇತಿಯನ್ನು ನೀಡಲಾಗುತ್ತದೆ. 18 ರಿಂದ 45 ವರ್ಷ ಇರುವಂತಹ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇಷ್ಟೇ ಅಲ್ಲದೆ ತರಬೇತಿಯಲ್ಲಿ ನಿಮಗೆ ಉಚಿತವಾದ ಊಟ ಮತ್ತು ವಸತಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಬಿಪಿಎಲ್ ಕಾರ್ಡ್ ಹೊಂದುವುದು ಅತಿ ಅವಶ್ಯಕವಾಗಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಪಾಸ್ ಬುಕ್, ತಮ್ಮ ಒಂದು ಫೋಟೋ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಎಲ್ಲವುಗಳನ್ನು ಎರಡು ಪ್ರತಿ ಜೆರಾಕ್ಸ್ ಮಾಡಿಕೊಂಡು ತರಬೇಕಾಗುತ್ತದೆ. ಹೊಲಿಗೆಯಲ್ಲಿ ಬಳಸುವ ಸಾಮಗ್ರಿಗಳನ್ನು ಸಂಸ್ಥೆಯು ನೀಡುತ್ತದೆ ಆದರೆ ಬಟ್ಟೆಗಳನ್ನು ನೀವೇ ತರಬೇಕೆಂದು ವಿನಂತಿ ಮಾಡಿದೆ.
ದೂರವಾಣಿ ಸಂಖ್ಯೆ ಮತ್ತು ತರಬೇತಿಯ ವಿಳಾಸ?
ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ಮತ್ತು ನಿಮಗೆ ಬೇಕಾಗುವ ದಾಖಲಾತಿಗಳನ್ನು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕು. 9449860007, 9916783825, 8880444612, 9538281989 ವಿಳಾಸ:- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ. ಕೆಳಗಿನ ವೆಬ್ ಸೈಟಿಗೆ ಭೇಟಿ ನೀಡಿ canarabankrsetikumta.org
ಕೋಳಿ ಸಾಕಾಣಿಕೆ ಮಾಡಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ, ಊಟ ಮತ್ತು ವಸತಿ ಉಚಿತ ಕೂಡಲೇ ಅರ್ಜಿ ಸಲ್ಲಿಸಿ
ಮೋದಿ ಹಣ ಪಡೆಯಲು ಜೂನ್ 30 ರ ಒಳಗೆ E-KYC ಮಾಡಿಸಲೇಬೇಕು? E-KYC ಮಾಡಿಸಿ 14ನೆ ಕಂತಿನ ಹಣ ಪಡೆಯಿರಿ
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?
ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯೂನಿಟ್ ಉಚಿತ ವಿದ್ಯುತ್ ಪಡೆಯಿರಿ