ಪ್ರಿಯ ನಾಡ ಜನರೇ, ಈ ಲೇಖನದಲ್ಲಿ ನೀವು ಒಂದು ಹೊಸ ಯೋಜನೆ ಬಗ್ಗೆ ತಿಳಿಯಿರಿ. ಈ ಯೋಜನೆ ಹೆಸರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. ಈ ಯೋಜನೆಯು ನಿಮಗೆ ತಿಳಿದಂತೆ ಒಂದು LIC ಯೋಜನೆಯಾಗಿದ್ದು, ಯಾವುದೇ ಕಾರಣದಿಂದ ಮರಣಕ್ಕೆ ಜೀವ ವಿಮಾ ರಕ್ಷಣೆಯನ್ನು ನೀಡಿ ಸಹಾಯ ಮಾಡುತ್ತದೆ. ಈ ವಿಮಾ ಯೋಜನೆಯು ಬ್ಯಾಂಕ್ ಅವರೊಂದಿಗೆ ಲಿಂಕ್ ಆಗಿದ್ದು ಅತಿ ಸುಲಭವಾಗಿ ಯೋಜನೆಯ ಕಂತುಗಳನ್ನು ತುಂಬಬಹುದು.
ಈ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಲಾಭವಿದೆ ಎಂದು ತಿಳಿಯೋಣ, ಅರ್ಜಿದಾರನು ಮೊದಲು ಬ್ಯಾಂಕ್ ನಲ್ಲಿ ಈ ಅರ್ಜಿಯನ್ನು ಸಲ್ಲಿಸಿ, ಪ್ರತಿ ವರ್ಷಕ್ಕೂ ಒಮ್ಮೆ ಮೇ 31ರಂದು ಈ ಯೋಜನೆಗೆ 436 ರೂಪಾಯಿಗಳನ್ನು ಕಂತಿನ ರೂಪದಲ್ಲಿ ತುಂಬಬೇಕು. ನಿಮ್ಮ ಉಳಿತಾಯ ಖಾತೆಯು ಆಧಾರ್ ಕಾರ್ಡ್ ಮತ್ತು ಈಗ ಬಯಸಿ ಅಪ್ಡೇಟ್ ಆಗಿದ್ದರೆ ಈ 436 ರೂಪಾಯಿಗಳು ಆಟೋ ಡೆಬಿಟ್ ಎಂಬ ಅಪ್ಡೇಟ್ನಿಂದ ತಾನಾಗಿ ನಿಮ್ಮ ಖಾತೆಯಿಂದ ಕಟ್ ಆಗುತ್ತದೆ. ಹೀಗೆ ಮಾಡುವುದರಿಂದ ಬ್ಯಾಂಕಿಗೆ ಪರದಾಡುವ ಅವಶ್ಯಕತೆ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಅರ್ಜಿದಾರನು ಯಾವುದೇ ಕಾರಣದಿಂದ ಮರಣ ಹೊಂದಿದರೆ, ಆ ವ್ಯಕ್ತಿಯ ನಾಮಿನಿದಾರನಿಗೆ ಎರಡು ಲಕ್ಷ ಜೀವ ವಿಮಾ ದೊರೆಯುತ್ತದೆ.
ಈ ಯೋಜನೆಯು ಒಂದು ವರ್ಷದ ಕವರ್ ಆಗಿರುತ್ತದೆ, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದು, ವಿಮಾ ಯೋಜನೆಯು ಯಾವುದೇ ಕಾರಣದಿಂದ ಮರಣಕ್ಕೆ ಜೀವ ವಿಮಾ ರಕ್ಷಣೆಯನ್ನು ನೀಡಲಾಗುವುದು. PMJJBY ಯೋಜನೆಯಲ್ಲಿ 30 ದಿನಗಳ ಲೈಯನ್ ಷರತ್ತು ವಿಧಿಸಬಹುದು, ಆ ಮೂಲಕ ದಾಖಲಾತಿ ದಿನಾಂಕದಿಂದ ಮೊದಲ 30 ದಿನಗಳಲ್ಲಿ ಕ್ಲೈಮ್ ಪ್ರಕರಣಗಳನ್ನು ಪಾವತಿಸುವುದಿಲ್ಲ. ಆದಾಗ್ಯೂ ಅಪಘಾತದಿಂದಾಗುವ ಸಾವುಗಳನ್ನು ಲೈನ್ ಷರತ್ತಿನಿಂದ ವಿನಾಯಿತಿ ನೀಡುತ್ತದೆ.
ಯೋಜನೆಗೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರನಿಗೆ 18 ರಿಂದ 50 ವರ್ಷ ವಯಸ್ಸು ಇರಬೇಕು. ಅರ್ಜಿ ಸಲ್ಲಿಸುವವನು ಒಂದು ಅಥವಾ ಬೇರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಆ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರಬೇಕು ಮತ್ತು ಆ ಖಾತೆಯು ಕೆವೈಸಿ ಅಪ್ಡೇಟ್ ಹೊಂದಿರಬೇಕು. ಆಗ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭವನ್ನು ಪಡೆಯಬಹುದು. ಕೂಡಲೇ ನಿಮ್ಮ ಹತ್ತಿರದ ಎಸ್ ಬಿ ಐ ಬ್ಯಾಂಕಿಗೆ ಭೇಟಿ ಕೊಡಿ ಮತ್ತು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸಿ.
ಇದನ್ನೂ ಓದಿ :- ಪಿಎಂ ಕಿಸಾನ್ ಹಣ ಮತ್ತು ಬೆಳೆ ವಿಮಾ ಹಣ ಜಮಾ ಆಗಿಲ್ಲವೇ? ಈ ನಂಬರ್ ಗೆ ಕರೆ ಮಾಡಿ ಮತ್ತು ಹಣ ಪಡೆಯಿರಿ
ಇದನ್ನೂ ಓದಿ :- ಇನ್ನೂ ಮುಂದೆ ರೈತರಿಗೆ 5 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಬೆಳೆ ಸಾಲ ಸಿಗುತ್ತದೆ
ಇದನ್ನೂ ಓದಿ :- ಈ ಟ್ರಾಕ್ಟರ್ ಖರೀದಿಸಿ ಜೊತೆಗೆ ರೋಟೋವೇಟರ್ ಮತ್ತು ಒಂದು ಗ್ರಾಂ ಚಿನ್ನವನ್ನು ಬಹುಮಾನವಾಗಿ ಪಡೆಯಿರಿ