Breaking
Sat. Dec 21st, 2024

ಮನೆಯಲ್ಲೇ ಕುಳಿತು ಒಂದೇ ನಿಮಿಷದಲ್ಲಿ ನಿಮ್ಮ ಆಸ್ತಿಯನ್ನು ನಿಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಿ

Spread the love

ಆತ್ಮೀಯ ರೈತ ಬಾಂಧವರೇ ಹಿಂದೆ ಆಸ್ತಿ ನೊಂದಣಿ ಮಾಡುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಈಗ ಅದನ್ನು ಸುಲಭ ಮಾಡಲು ಸರ್ಕಾರವು ಹೊಸ ತಂತ್ರಾಂಶವನ್ನು ತಂದಿದೆ. ಆ ತಂತ್ರಾಂಶದ ಹೆಸರು
ಕಾವೇರಿ -2. ಈ ತಂತ್ರಾಂಶವನ್ನು ಬಳಸಿಕೊಂಡು ಅತಿ ಸುಲಭವಾಗಿ ನಿಮ್ಮ ಆಸ್ತಿಯನ್ನು ನೋಂದಾವಣೆ ಮಾಡಿಕೊಳ್ಳಬಹುದು. ಕೆಳಗಿರುವ ಲಿಂಕನ್ನು ಬಳಸಿಕೊಂಡು ಈ ತಂತ್ರಾಂಶಕ್ಕೆ ಭೇಟಿ ಕೊಡಿ.

https://kaverionline.karnataka.gov.in/Layout/Layout

ರಾಜ್ಯಾದ್ಯಂತ ಸಬ್ ರಿಜಿಸ್ಟಾರ್ ಕಚೇರಿಗಳ ಕಾರ್ಯ ವೈಖರಿ ಸಂಪೂರ್ಣ ಬದಲಾಗಲಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರಗೊಳಿಸುವ ನಾಗರಿಕ ಸ್ನೇಹಿ ‘ಕಾವೇರಿ -2’ ತಂತ್ರಾಂಶ ಶೀಘ್ರದಲ್ಲೇ ಜಾರಿಗೆ ಬರಲಿದೆ. ಸಾರ್ವಜನಿಕರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ -2 ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಹಾಗೂ ಉಯಿಲು (ವಿಲ್) ಸೇರಿ ನಾನಾ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಈ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದೆ.

ಕಂದಾಯ ಇಲಾಖೆಯ ಬಹುನಿರೀಕ್ಷಿತ ಈ ತಂತ್ರಾಂಶದ ಪ್ರಾಯೋಗಿಕ ಜಾರಿ ಕಲಬುರಗಿಯ ಚಿಂಚೋಳಿ ಸಬ್‌ರಿಜಿಸ್ಟ್ರಾ‌ ಕಚೇರಿಯಲ್ಲಿ ಯಶಸ್ವಿಯಾಗಿದೆ. ರಾಮನಗರ, ಮಂಡ್ಯ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲೂ ಕಾವೇರಿ- 2 ಸಾಫ್ಟ್‌ವೇರ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಅನುಷ್ಠಾನ ಹಂತದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ಬಳಿಕ ಹಂತಹಂತವಾಗಿ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚೊಂಚೋಳಿಯಲ್ಲಿ ಕಾವೇರಿ ತಂತ್ರಾಂಶದಿಂದ ಪಡೆದ ಮೊದಲ ದಾಖಲೆಯನ್ನು ಮಹಿಳೆಗೆ ಹಸ್ತಾಂತರಿಸಿದ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ಡಾ.ಬಿ.ಆರ್. ಮಮತಾ. ಆಸ್ತಿ ನೋಂದಣಿ ಮತ್ತಿತರ ಸೇವೆಗಳಿಗಾಗಿ ಮಧ್ಯವರ್ತಿ ಮೇಲೆ ಅವಲಂಬನೆ, ಭ್ರಷ್ಟಾಚಾರ ಮತ್ತು ನಕಲಿ ದಾಖಲೆಗಳಿಂದಾಗುವ ವಂಚನೆ, – ಸರ್ವರ್ ಸಮಸ್ಯೆ, ದಿನವಿಡೀ ಕಾಯುವಿಕೆ ತಾಪತ್ರಯ ಸೇರಿ ಎಲ್ಲ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗಲಿದೆ.

ನೋಂದಣಿ ಸುಸೂತ್ರ

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಿ, ತಮಗೆ ಅನುಕೂಲದ ನೋಂದಣಿ ದಿನಾಂಕ ಆಯ್ಕೆ ಮಾಡಿಕೊಂಡು ಸಮಯ ನಿಗದಿಪಡಿಸಿಕೊಳ್ಳುವ ಪಾಸ್‌ಪೋರ್ಟ್ ಕಚೇರಿ ಮಾದರಿ ವ್ಯವಸ್ಥೆಯನ್ನು ಆಸ್ತಿ ನೋಂದಣಿಗೆ ಆರಂಭಿಸಲಾಗುತ್ತಿದೆ. ನಿಗದಿತ ಸಮಯಕ್ಕೆ ಉಪ ನೋಂದಣಾಧಿಕಾರಿ ಕಚೇರಿಗೆ ಬಂದು ಬೆರಳಚ್ಚು ನೀಡಿದರಷ್ಟೇ ಸಾಕು. ನೋಂದಣಿ ಪ್ರಕ್ರಿಯೆಯ ಪ್ರತಿ ಹಂತದಲ್ಲೂನಾಗರಿಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಆಸ್ತಿ ನೋಂದಣಿ ಸಂಬಂಧಿತ ಎಲ್ಲ ಸಮಸ್ಯೆ, ಅನಾನುಕೂಲಗಳಿಗೆ ಈ ತಂತ್ರಾಂಶದ ಮೂಲಕ ಶಾಶ್ವತ ಪರಿಹಾರ ಸಿಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮ ಸಿದ್ಧತೆ

ಸೆಂಟರ್ ಫಾರ್ ಸ್ಟಾರ್ಟ್ ಗವರ್ನೆನ್ಸ್ ಸಂಸ್ಥೆ ನೆರವಿನೊಂದಿಗೆ ಕಾವೇರಿ- 2 ತಂತ್ರಾಂಶವನ್ನು ಅಪ್‌ಡೇಟ್ ಮಾಡಿ ಫೆ.1ರಂದು ಚಿಂಚೋಳಿ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಯಿತು. ಈ ಸಾಫ್ಟ್‌ವೇರ್‌ನಲ್ಲಿ ಸಾರ್ವಜನಿಕರೇ ಆನ್‌ಲೈನ್‌ನಲ್ಲಿ ದಾಖಲೆಪತ್ರಗಳನ್ನು ಸ್ಕ್ಯಾನ್ ಮಾಡಿಸಿ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆ. ಈ ವೇಳೆ ಎದುರಾದ ಸಣ್ಣ ಪುಟ್ಟ ತಾಂತ್ರಿಕ ತೊಡಕುಗಳ ಬಗ್ಗೆ ತಜ್ಞರ ತಂಡ ನಿಗಾ ವಹಿಸಿ, ಸರಿಪಡಿಸಲಾಗಿದೆ. ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ಡಾ.ಬಿ.ಆರ್. ಮಮತಾ ಅವರ ನೇತೃತ್ವದಲ್ಲಿ ತಾಂತ್ರಿಕ ತಂಡ ಈ ಪರಿಶೀಲನೆ ನಡೆಸಿದ್ದು, ಉಳಿದ ಐದು ಕಡೆಗಳಲ್ಲೂ ಪ್ರಾಯೋಗಿಕ ಪರೀಕ್ಷೆನಡೆಯುತ್ತಿದೆ.

ವಂಚನೆಗೆ ಕಡಿವಾಣ

ಭೂಮಿ, ಇ-ಆಸ್ತಿ, ಇ-ಸ್ವತ್ತು ಎಲ್ಲದಕ್ಕೂ ಕಾವೇರಿ -2 ತಂತ್ರಾಂಶ ಲಿಂಕ್ ಆಗಿರಲಿದೆ. ಇದೊಂದು ಇಂಟೆಗ್ರೇಟೆಡ್ ತಂತ್ರಾಂಶವಾಗಿದ್ದು, ಆಸ್ತಿ ನೋಂದಣಿಗೆ ಸಲ್ಲಿಕೆಯಾದ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಕಲಿ ದಾಖಲೆ ಸೃಷ್ಟಿಸಿ ನೋಂದಣಿಗೆ ಯತ್ನಿಸಿದರೆ ಸಿಕ್ಕಿಬೀಳುತ್ತಾರೆ. ಬೆಂಗಳೂರಿನಲ್ಲಿ ಕೇಂದ್ರೀಯ ಸರ್ವರ್ ಹೊರತು ಪಡಿಸಿ ಬೇರಾವುದೇ ಸ್ಥಳೀಯ ಸರ್ವರ್ ಇರುವುದಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಯ ಉತ್ತರದಾಯಿತ್ವವನ್ನು ತಂತ್ರಾಂಶದ ಮೂಲಕ ನಿಗದಿಯಾಗಿರುತ್ತದೆ. ವೆಬ್ ಆಧಾರಿತ ಈ ತಂತ್ರಾಂಶದಲ್ಲಿ ಆಪರೇಟಿಂಗ್ ಸಿಸ್ಟಂ ಸಮಸ್ಯೆಗಳು ಇರುವುದಿಲ್ಲ. ನಾಗರಿಕ ಸ್ನೇಹಿ ಮತ್ತು ಸರಳ ವ್ಯವಸ್ಥೆಯಾಗಿರಲಿದೆ.

ನೋಂದಣಿ ಪ್ರಕ್ರಿಯೆ ಹೇಗೆ?

https://kaverionline.karnataka.gov.in/Layout/Layout

ಆಸ್ತಿ ಖರೀದಿ ಮಾಡುವವರು ನೋಂದಣಿಗಾಗಿ ದಾಖಲೆಗಳನ್ನು ಆನ್‌ಲೈನ್‌ ನಲ್ಲಿ ಕಾವೇರಿ -2 ತಂತ್ರಾಂಶದ ಮೂಲಕ ಉಪ ನೋಂದಣಾಧಿಕಾರಿಗೆ ಕಳಿಸಬೇಕು. ಸ್ವತಃ ಅಥವಾ ವಕೀಲರ ಮೂಲಕ ಇದನ್ನು ಮಾಡಬಹುದು. ನೋಂದಣಿಗೆ ನಿಗದಿಯಾದ ಮುದ್ರಾಂಕ ಶುಲ್ಕ, ಸೆಸ್ ಸೇರಿ ಶುಲ್ಕವನ್ನು ಲೆಕ್ಕಹಾಕುವ ವ್ಯವಸ್ಥೆಯೂ ಇದ್ದು, ಚಲನ್ ತುಂಬಿ ಶುಲ ಪಾವತಿಸಬೇಕು. ಬಳಿಕ, ನೋಂದಣಿ ದಿನಾಂಕ ಆಯ್ಕೆ ಮಾಡಿಕೊಂಡು ಸಮಯ
ನಿಗದಿಪಡಿಸಿಕೊಳ್ಳಬಹುದು. ನೋಂದಣಿಯಾದ ದಾಖಲೆಗಳನ್ನು ಡಿಜಿಟಲ್ ಲಾಕರ್‌ನಲ್ಲಿ ಪಡೆಯಬಹುದು.

ಇದನ್ನೂ ಓದಿರಿ :- ನಿಮ್ಮ ಜಮೀನಿನ ಮೇಲೆ ಎಷ್ಟು ಬೆಳೆಸಾಲ ಇದೆ ಎಂದು ಮೊಬೈಲ್ ನಲ್ಲಿಯೇ ತಿಳಿಯಿರಿ

Related Post

Leave a Reply

Your email address will not be published. Required fields are marked *