ಅತ್ಮೀಯ ರೈತ ಭಾಂದವರೇ, ನೀವೇನಾದರೂ ಜಮೀನು, ಮನೆ, ನಿವೇಶನ ಖರೀದಿಸುವ ಉದ್ದೇಶವಿದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಏಕೆಂದರೆ ಶೀಘ್ರದಲ್ಲಿಯೇ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಅಂದರೆ ಶೇ.20-40 ಹೆಚ್ಚಳವಾಗುವ ನಿರೀಕ್ಷೆ ಇದೆ.
ಈಗಾಗಲೇ ಮಾರ್ಗಸೂಚಿ ಬೆಲೆ ಹೆಚ್ಚಳಕ್ಕೆ ಅನುಮತಿ ಕೋರಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧವಾಗಿದೆ. ಈ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ಬೆಲೆ ಹೆಚ್ಚಳವಾಗಬೇಕು. ಆದರೆ ರಾಜ್ಯದಲ್ಲಿ ಈ ಬೆಲೆ ಹೆಚ್ಚಳ ಮಾಡಿಲ್ಲ. ಕಾರಣ ಎರಡು ವರ್ಷ ಕರೋನ ಕಾಡಿದ್ದರಿಂದ ನೋಂದಣಿ ಕುಸಿದು ಹೋಗಿತ್ತು. ಹಾಗೇನಾದರೂ ಮಾರ್ಗಸೂಚಿ ಬೆಲೆ ಹೆಚ್ಚಳವಾದರೆ ಅದು ಜನರ ಮೇಲೆ ಪರಿಣಾಮ ಮತ್ತು ಒತ್ತಡವನ್ನು ಬೀರುತ್ತದೆ ಎಂದು ಮುದ್ರಾಂಕ ಮತ್ತು ನೊಂದಣಿ ಇಲಾಖೆಯು ಬೆಲೆಯನ್ನು ಹೆಚ್ಚಳ ಮಾಡಿರಲಿಲ್ಲ. ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಕಾಲ ಬೆಲೆ ಕಡಿಮೆ ಮಾಡಿದ್ದರಿಂದ ನೊಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹ ಹೆಚ್ಚಳ ಕಂಡಿತ್ತು. ರಾಜ್ಯದಲ್ಲಿ 255 ಉಪನೊಂದಣಿ ಕಚೇರಿಗಳಿವೆ. ಅವುಗಳ ಪೈಕಿ ಕಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಅತ್ಯಂತ ಕಡಿಮೆ ಇದೆ.
ಮುಂದೆ ಎಲ್ಲಾ ಕಡೆಯೂ ಮಾರ್ಗಸೂಚಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಮಾರ್ಗಸೂಚಿ ಬೆಲೆ ಹೆಚ್ಚಾದರೆ ಸಹಜವಾಗಿಯೇ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಏರಿಕೆ ಕಾಣಲಿವೆ.
ಮಾರ್ಗಸೂಚಿ ಬೆಲೆ ಹೆಚ್ಚಳಕ್ಕೂ ನಿಯಮವಿದೆ. ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಭೂ ಮೌಲ್ಯಮಾಪನ ಸಮಿತಿ ರಚನೆ ಮಾಡಲಾಗುತ್ತದೆ. ಆ ಸಮಿತಿ ವಿವಿಧ ಮಾನದಂಡಗಳನ್ನು ಅನುಸರಿಸಿ ಮಾರ್ಗಸೂಚಿ ಬೆಲೆ ನಿಗದಿ ಮಾಡಿ ವರದಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳುಹಿಸುತ್ತದೆ. ಅಲ್ಲಿ ಅಂತಿಮವಾಗಿ ಮಾರ್ಗಸೂಚಿ ಬೆಲೆ ನಿಗದಿಯಾಗುತ್ತದೆ. ಇಲಾಖೆ ನೀಡುವ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಅಧ್ಯಯನ ಮಾಡಿ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಎಷ್ಟು ಹೆಚ್ಚಳವಾಗಬೇಕು ಎಂಬುದು ಸಂಪುಟ ಸಚಿವ ಸಂಪುಟ ನಿರ್ಧಾರ ಮಾಡುತ್ತದೆ.
ನೋಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹಕ್ಕೆ ಕಳೆದ ವರ್ಷ 15,000 ಕೋಟಿ ಗುರಿ ನಿಗದಿ ಮಾಡಲಾಗಿತ್ತು. ಆದರೂ ಮಾರ್ಗ ಸೂಚಿ ಬೆಲೆಯ ಮೇಲಿನ ರಿಯಾಯಿತಿ ಕೊರೋನದಿಂದ ಕುಂಠಿತವಾಗಿದ್ದ ಆರ್ಥಿಕತೆಯ ಚೇತರಿಕೆ ಮೊದಲಾದ ಕಾರಣಗಳಿಂದ 17000 ಕೋಟಿ ರೂಗಳ ತೆರಿಗೆ ಸಂಗ್ರಹಣೆಯಾಗಿ ಗುರಿ ಮೀರಿದ ಸಾಧನೆ ಮಾಡಲಾಗಿತ್ತು. ಇದರಿಂದ ಈ ವರ್ಷ 19 ಸಾವಿರ ಕೋಟಿ ರೂಗಳ ಗುರಿ ನೀಡಿದೆ. ಆದರೆ ಹೊಸ ಸರ್ಕಾರ ಗ್ಯಾರಂಟಿಗಳ ಸಂಪನ್ಮೂಲ ಕ್ರೂಡೀಕರಣಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದು, ಅದರಲ್ಲಿ ನೋಂದಣಿ ತೆರಿಗೆ ಹೆಚ್ಚಳವು ಒಂದಾಗಿದೆ. ಬಜೆಟ್ ನಲ್ಲಿ ಕನಿಷ್ಠ ಶೇಕಡ 10% ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಇಲಾಖೆಯು ಸರ್ಕಾರಕ್ಕೆ ಆದಾಯ ತರುವ ಮೂರನೇ ದೊಡ್ಡ ಇಲಾಖೆ ಇದಾಗಿದೆ.
ಮಾರ್ಗಸೂಚಿ ಬೆಲೆ 2019 ರಿಂದ ಜಾಸ್ತಿಯಾಗಿಲ್ಲ, ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಅಂತಿಮ ತೀರ್ಮಾನ ಸರ್ಕಾರದಾಗಿರುತ್ತದೆ ಎಂದು ಮುದ್ರಾಂಕ ಆಯುಕ್ತರು, ನೋಂದಣಿ ಮಹಾನಿರ್ದೇಶಕರು ಡಾ. ಬಿ.ಆರ್ ಮಮತಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :- ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರು