ಆತ್ಮೀಯ ರೈತ ಬಾಂಧವರೇ, ಅರಿಷಿಣ ಒಂದು ಪ್ರಮುಖ ಸಂಬಾರು ಬೆಳೆಯಾಗಿದ್ದು, ಗಡ್ಡೆಯಿಂದ ತಯಾರಿಸಿದ ಉತ್ಪನ್ನಗಳನ್ನು ಸಾಂಬಾರು ಪದಾ ಆಗಿ ಬಣ್ಣವಾಗಿ, ಔಷಧವಾಗಿ ಮತ್ತು ಸುವಾಸನೆಯುಕ್ತ ಪದಾರ್ಥವಾಗಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸುವರು, ಇದನ್ನು ಒಣಗಿದ ಕೊಂಬಿನ ರೂಪದಲ್ಲಿ ಪುಡಿ ರೂಪದಲ್ಲಿ ಮತ್ತು ಓಲಿಯೋರೆಸಿನ್ ರೂಪದಲ್ಲಿ ಸಾಮಾನ್ಯವಾಗಿ ಮಾರಾಟ ಮಾಡಲಾಗುತ್ತದೆ.
ಇದರಲ್ಲಿ ಇರುವ ಕುಕುಮಿನ್ ಔಷಧೀಯ ಗುಣಕ್ಕೆ ಕಾರಣ, ಭಾರತ ಅರಿಷಿಣ ಉತ್ಪಾದಯಲ್ಲಿ ಮಾಡುವುದರಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ರಾಷ್ಟ್ರ ನಮ್ಮರಾಜ್ಯದಲ್ಲಿ ಬೆಳಗಾವಿ, ಬಾಗಲಕೋಟೆ, ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ.
ಅರಿಷಿಣವನ್ನು ಬೆಳೆಯುವ ಮಣ್ಣು ಮತ್ತು ಹವಮಾನದ ಬಗ್ಗೆ ತಿಳಿಯೋಣ.
ಅರಿಷಿಣ ಬೆಳೆಯನ್ನು ವೈವಿದ್ಯಮಯ ಹವಮಾನದಲ್ಲಿ ಕೃಷಿ ಮಾಡಬಹುದು ಉತ್ತಮ ಕೃಷಿಗೆ ನೀರು ಚೆನ್ನಾಗಿ ಬಸಿದು ಹೋಗುವಂತ ಸಾವಯವಯುಕ್ತ ಮರಳು ಮಿಶ್ರಿತ ಕೆಂಪು ಗೋಡು, ಮಧ್ಯಮ ಕಪ್ಪು ಭೂಮಿ ಹಾಗೂ ಒಂಬಿಟ್ಟಿಗೆ ಮಣ್ಣುಗಳು ಅತ್ಯುತ್ತಮ. ಮಣ್ಣಿನ ರಸಸಾರ 4.5 ರಿಂದ 7.5 ಹಾಗೂ ಉತ್ತಮ ಸಾವಯವ ವಸ್ತುಗಳಿಂದ ಕೂಡಿರಬೇಕು.
ನಾಟಿ ಮಾಡುವ ಕಾಲ : ಮೇ- ಜೂನ
ಅರಿಷಿಣ ಬೆಳೆ ತಳಿಗಳು :
ಹಲವಾರು ಅರಿಷಿಣ ತಳಿಗಳು ಕೃಷಿಯಲ್ಲಿದ್ದು ಜೊತೆಗೆ ಹಲವಾರು ಸುಧಾರಿತ ತಳಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ : ಸುವರ್ಣ, ಸುರೊಮ್, ಸುದರ್ಶನ್ ರಾಜಾಮರಿ, ಕೃಷ್ಣ ಸೇಲಂ, ಕಡಪಾ, ಕೋ – 1 ಬಿ.ಎಸ್.ಆರ್. –1 ಅಮಲಾಪುರಂ.
ನಮ್ಮ ರಾಜ್ಯದ ಜನಪ್ರಿಯ ತಳಿಗಳ ಬಗ್ಗೆ ತಿಳಿಯೋಣ.
ಅಮಲಾಪುರಂ: ಹೆಕ್ಟೇರಿಗೆ 5 ರಿಂದ 9 ಟನ್ ಇಳುವರಿ (ಒಣಗಿಸಿದ), ಶೇ. 34 ರಷ್ಟು ಕುರ್ಕುಮಿನ್ (ಹಳದಿ) ಬಣ್ಣ ಪ್ರಮಾಣ : ಒಣಗುವ ಪ್ರಮಾಣ ಪ್ರತಿಶತ 20 ಇರುತ್ತದೆ.
ಸೇಲಂ: ಹೆಕ್ಟೇರಿಗೆ 7 ರಿಂದ 8 ಟನ್ ಇಳುವರಿ, ಹಳದಿ ಬಣ್ಣದ ಪ್ರಮಾಣ ಪ್ರತಿಶತ 3.5 ಕ್ಯೂರಿಂಗ್ ಪ್ರಮಾಣ ಪ್ರತಿಶತ 21.
ರಾಜಾಸುರಿ : ಹೆಕ್ಟೇರಿಗೆ 7 ರಿಂದ 7.5 ಟನ್ ಇಳುವರಿ, ಹಳದಿ ಬಣ್ಣದ ಪ್ರಮಾಣ ಪ್ರತಿಶತ 35 ಕ್ಯೂರಿಂಗ್ ಪ್ರಮಾಣ ಪ್ರತಿಶತ 21.
ಕಡಬ: ಹೆಕ್ಟೇರಿಗೆ 16 ರಿಂದ 75 ಟನ್ ಇಳುವರಿ, ಹಳದಿ ಬಣ್ಣದ ಪ್ರಮಾಣ ಪ್ರತಿಶತ 3.5, ಕ್ಯೂರಿಂಗ್ ಪ್ರಮಾಣ ಪ್ರತಿಶತ 21.
ಸುವರ್ಣ (ಪಿ.ಸಿ.ಟಿ – 8): 200 ದಿನಗಳಲ್ಲಿ ಕೊಯ್ಲಿಗೆ ಬರುವ ಅಲ್ಪಾವಧಿ ತಳಿ, ಮಾಡಲಿಕೆ ಯೋಗ್ಯವಾದ ತಳಿ, ಹೆಕ್ಟೇರಿಗೆ 5 ರಿಂದ 6 ಟನ್, ಹಳದಿ ಬಣ್ಣದ ಪ್ರಮಾಣ ಪ್ರತಿಶತ 8.2, ಕ್ಯೂರಿಂಗ್ ಪ್ರಮಾಣ ಪ್ರತಿಶತ 24.
ಸುದರ್ಶನ (ಪಿ.ಸಿ.ಟಿ – 14): 190 ದಿನಗಳಲ್ಲಿ ಕೊಯ್ಲಿಗೆ ಬರುವ ಅಲ್ಪಾವಧಿ ತಳಿ, ರಫ್ತು ಮಾಡಲಿಕ್ಕೆ ಯೋಗ್ಯವಾದ ತಳಿ – ಹೆಕ್ಟೇರಿಗೆ 6 ರಿಂದ 7 ಟನ್, ಹಳದಿ ಬಣ್ಣದ ಪ್ರಮಾಣ ಪ್ರತಿಶತ 7.8, ಕ್ಯೂರಿಂಗ್ ಪ್ರಮಾಣ ಪ್ರತಿಶತ 20.
ಸುರೋಮಾ (ಪಿ.ಸಿ.ಟಿ – 24): 253 ದಿನಗಳಲ್ಲಿ ಕೊಯ್ಲಿಗೆ ಬರುವ ಮಧ್ಯಮಾವಧಿ ತಳಿ, ರಫ್ತ ಮಾಡಲಿಕ್ಕೆ ಯೋಗ್ಯವಾದ ತಳಿ, ಹೆಕ್ಟೇರಿಗೆ 5 ರಿಂದ 6 ಟನ್, ಹಳದಿ ಬಣ್ಣದ ಪ್ರಮಾಣ ಪ್ರತಿಶತ 9.3 , ಕ್ಯೂರಿಂಗ್ ಪ್ರಮಾಣ ಪ್ರತಿಶತ 20.
ಇವುಗಳಲ್ಲದೆ ಸುಧಾರಿತ ತಳಿಗಳಾದ ರೋಮ, ರಂಗ, ರಶ್ಮಿ, ಐಐಎಸ್‌ಆರ್ ಅಲೆಪ್ಪಿ ಸುಪ್ರಿಮ್ ಮತ್ತು ಕೀಹಾರಮ್ ತಳಿಗಳು ಸಹ ಅಲ್ಪಮಟ್ಟಿಗೆ ಕೃಷಿಯಲ್ಲಿದೆ.
ಬೀಜದ ಕೊಂಬುಗಳ ಉಪಚಾರ ಮಾಡುವುದು ಹೇಗೆ?
ಬೀಜದ ಕೊಂಬುಗಳನ್ನು ಶೇ. 03 ರ ಮ್ಯಾಂಕೊಜೆಟ್ ಅಥವಾ 3 ಗ್ರಾಂ ಕ್ಯಾಪ್ಟಾನ್ 0.5 ಗ್ರಾಂ ಸೈಪೊಸೈನ್, 2 ಮಿ.ಲೀ. ಕ್ಲೋರಿಪೈರಿಫಾಸ್ ಒಂದು ಲೀಟರ್ ನೀರಿನಲ್ಲಿ ಹಾಕಿ ಅರಿಷಿಣದ ಗಡ್ಡೆಗಳನ್ನು 4-8 ತಾಸು ನೆನೆಸಬೇಕು. ಇದರಿಂದ ರೋಗ ಮತ್ತು ಕೀಟ ಹಾವಳಿಗಳಾದ ಗಡ್ಡೆ ಕೊಳೆಯುವುದು, ಗಡ್ಡ ಕೊರಕ ಹುಳುಗಳ ಬಾಧೆ ನಿಯಂತ್ರಿಸಬಹುದು.
ನಾಟಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಭೂಮಿಯನ್ನು ಉಳುಮೆ ಮಾಡಿ, ಕುಂಟೆ ಹೊಡೆದು ಹದಕ್ಕೆ ತರಬೇಕು. ಉಳುಮೆ ಮಾಡುವಾಗಲೇ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ನಾಟಿ ಮಾಡುವ ಮೊದಲು ಶೇ. 50 ಸಾರಜನಕ, ಶಿಫಾರಸ್ಸು ಮಾಡಿದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಸಾಲಿನಲ್ಲಿ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ಬೀಜದ ಕೊಂಬುಗಳನ್ನು 45 ಸೆಂ.ಮೀ. ಸಾಲುಗಳಲ್ಲಿ 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಉಳಿದ ಶೇ. 50 ಸಾರಜನಕವನ್ನು ನಾಟಿ ಮಾಡಿದ 45 ದಿವಸಗಳ ನಂತರ ಕೊಡಬೇಕು. ಪ್ರತಿ ಹೆಕ್ಟೇರಿಗೆ 5 ಕಿ.ಗ್ರಾಂ, ಸತು ಮತ್ತು 2 ಟನ್’ ಎಣ್ಣೆ ಹಿಂಡಿಗಳನ್ನು ಗೆಡ್ಡೆಗಳನ್ನು ನಾಟಿ ಮಾಡುವ ಸಮಯದಲ್ಲಿ ಒದಗಿಸುವುದು ಅಗತ್ಯ. ಇದರಿಂದ ಅಲ್ಪ ಮಟ್ಟಿಗೆ ಕೊಟ್ಟಿಗೆ ಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಬಹುದು. ಪಾಯವಾಗಿ ಸಮಗ್ರ ಪೋಷಕಾಂಶ ನಿರ್ವಹಣೆ ಪದ್ಧತಿಯನ್ನು ಪ್ರತಿ ಹೆಕ್ಟೇರಿಗೆ 2.5 ಟನ್ ತೆಂಗಿನ ನಾರಿನ ಹುಡಿ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ (ಅಜೋಸ್ಪಿರಿಲ್ಲಂ) ಮತ್ತು ಶಿಫಾರಸ್ಸು ಮಾಡಿದ ಅರ್ಧಭಾಗ ಸಾರಂ:ಖೋ ಒದಗಿಸುವುದರ ಮೂಲಕ ಅನುಸರಿಸಬಹುದು.
ಕಳೆಗಳ ನಿಯಂತ್ರಣ ಮತ್ತು ನೀರಾವರಿ ಮುಖ್ಯ.
ಕಳೆಗಳು ಬೆಳೆದಿರುವ ಸಾಂದ್ರತೆಯನ್ನು ಅನುಸರಿಸಿ ನಾಟಿಯಾದ ನಂತರದಲ್ಲಿ ಕಳೆಗಳನ್ನು ತೆಗೆದು ಸಚ್ಛಮಾಡಬೇಕು. ಅರಿಷಿಣ ಬೆಳೆಯನ್ನು ಗೋಡು ಮಣ್ಣುಗಳಲ್ಲಿ ನೀರಾವರಿ ಬೆಳೆಯಾಗಿ ಕೃಷಿ ಮಾಡಿದಲ್ಲಿ ಹವಮಾನ ಮತ್ತು ಮಣ್ಣಿನ ಹದವನ್ನರಿತು 15 ರಿಂದ 23 ಸಲ ನೀರಾವರಿ ಮಾಡುವ ಅಗತ್ಯತೆಯಿದೆ. ಮರಳುಗೋಡು ಇರುವ ಭೂಮಿಗಳಲ್ಲಿ 40 ಸಲ ನೀರಾವರಿ ಮಾಡಬೇಕಾಗುವುದು.
ಯಾವ ಮಿಶ್ರ ಬೆಳೆ ಬೆಳೆಯಬಹುದು.
ಅರಿಷಿಣ ಬೆಳೆಯನ್ನು ಮನಕಾಯಿ, ಕೋಲಕೇಶಿಯ, ಈರುಳ್ಳಿ, ಬದನೆ, ಧಾನ್ಯದ ಬೆಳೆಯಾದ ಮೆಕ್ಕೆಜೋಳ, ಮುಂತಾದ ಬೆಳೆಗಳಲ್ಲಿ ಮಿಶ್ರಬೆಳೆಯಾಗಿ ಕೃಷಿ ಮಾಡಬಹುದು.
ಮುಖ್ಯವಾದ ಭಾಧೆಗಳೆಂದರೆ ಯಾವುವು.
ಕೀಟಗಳು : ಶಲ್ಕ ಕೀಟ, ಎಲೆ ತಿನ್ನುವ ಹುಳು, ಕಾಂಡ ಕೊರೆಯುವ ಹುಳು, ಗೆಡ್ಡೆ ಶಲ್ಕ ಕೀಟ, ಎಲೆ ಸುತ್ತುವ ಹುಳು.
ರೋಗಗಳು : ಎಲೆ ಚುಕ್ಕೆರೋಗ, ಎಲೆ ಮಚ್ಚೆ ರೋಗ, ಕೊಂಬು ಮತ್ತು ಬೇರು ಕೊಳೆಯುವ ರೋಗ.
ಹತೋಟಿ ವಿಧಾನ ಹೇಗೆ ತಿಳಿಯಿರಿ?
- ಎಲೆ ತಿನ್ನುವ ಕೀಟ ಬಾಧೆ ಕಂಡುಬಂದಲ್ಲಿ, 2 ಮಿ.ಲೀ, ಕ್ವಿನಾಲ್ ಫಾಸ್ ಅಥವಾ 2 ಮಿ.ಲೀ, ಹೋಸಲೋನ್ ಹಾಗೂ ರೋಗಗಳ ಬಾಧೆ ಕಂಡುಬಂದಲ್ಲಿ 2 ಗಾರ ಮ್ಯಾಂಕೋಜೇಬ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಿಸಬೇಕು.
- ಕಾಂಡ ಕೊರೆಯುವ ಹುಳುವಿನ ಹತೋಟಿಗೆ ಪ್ರತಿ ಹೆಕ್ಟೇರಿಗೆ 25 ಕಿ.ಗ್ರಾಂ ಕಾರ್ಬೊಪುರಾಣಿ ಹರಳುಗಳನ್ನು ಮಣ್ಣಿನಲ್ಲಿ ಬೆರೆಸಬೇಕು.
- ಶಲ್ಕ ಕೀಟದ ಬಾಧೆಯ ಹತೋಟಿಗೆ 1.7 ಮಿ.ಲೀ. ಡೈಮಿಥೋಯೇಟ್ ಅಥವಾ 5 ಮಿ.ಲೀ. ಫಾಸ್ವಾಮಿಡಾನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿ.
- ತ್ರಿಪ್ಸ್ ನುಶಿ ಕೀಟದ ಬಾಧೆಯ ಹತೋಟಿಗೆ 1.7 ಮಿ.ಲಿ. ಡೈಮಿಥೋಯೇಟ್ ಅಥವಾ 5 ಮಿ.ಲೀ. ಪಾಸ್ವಾಮಿಡಾನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು.
- ಚಿಟ್ಟು ರೋಗ ಬಾಧೆ ಕಂಡುಬಂದಲ್ಲಿ 2 ಗ್ರಾಂ ಮ್ಯಾಂಕೋಜೇಟ್ ಅಥವಾ 1 ಗ್ರಾಂ ಕಾರ್ಬನ್‌ಡೈಜಿಮ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಿಸಬೇಕು.
- ಕೊಂಬು ಕೊಳೆ ರೋಗಕ್ಕೆ, ಏರುಮಡಿಗಳಲ್ಲಿ ಬೆಳೆ ಬೆಳೆಯಬೇಕು. ಶೇಕಡ 1ರ ಬೋರ್ಡೋ ದ್ರಾವಣ ಸಿಂಪರಿಸಬೇಕು. ಕೊಂಬುಗಳನ್ನು ಕ್ಯಾಪ್ಟಾನ್ (ಶೇ. 0.3) ನಲ್ಲಿ ಅಥವಾ ಮೆಟಲಾಕ್ಸಿಲ್ ಮ್ಯಾಂಕೋಜೆಬ್ ಎಂಜೆಡ್‌ನಲ್ಲಿ ಅದ್ದಿ ನಾಟಿ ಮಾಡಬೇಕು, ಮುಂದೆ ಬೆಳೆಯುವ ಹಂತದಲ್ಲಿ ರೋಗ ಕಂಡಾಗ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ ಅಥವಾ ಮೆಟಲಾಕ್ಸಿಲ್ ಮ್ಯಾಂಕೊಜೆಟ್: 1 ಲೀಟರ್ ನೀರಿನಲ್ಲಿ ಕರಗಿಸಿ ಭೂಮಿಗೆ ಹಾಕಬೇಕು.
ಕೊಯ್ದು ಮತ್ತು ಇಳುವರಿ ಹೇಗೆ ಮಾಡುವುದು.
ಆರಿಶಿಣ ತಳಿಗಳಿಗನುಗುಣವಾಗಿ ಸುಮಾರು ಏಳರಿಂದ ಒಂಭತ್ತು ತಿಂಗಳುಗಳಲ್ಲಿ ಕೊಯ್ಲಿಗೆ ಬರುತ್ತದೆ. ಕೊಯ್ಲಿಗೆ 4-5 ದಿವಸ ಮೊದಲು ಒಣಗಿದ ಎಲೆ ಮತ್ತು ಕಾಂಡದ ಭಾಗಗಳನ್ನು ತೆಗೆದು ನೀರು ಹರಿಸಬೇಕು. ಗೆಡ್ಡೆಗಳಿಗೆ ಹಾನಿಯಾಗದಂತೆ ಅವುಗಳನ್ನು ಅಗೆದು ಇಲ್ಲವಾದರೆ ಭೂಮಿಯನ್ನು ನೇಗಿಲಿನಿಂದ ಉಳುಮೆ ಮಾಡಿ ತೆಗೆಯಬೇಕು. ಪ್ರತಿ ಹೆಕ್ಟೇರಿಗೆ ಸರಾಸರಿ 20-25 ಟನ್ ಹಸಿ ಅರಿಷಿಣ ದೊರಕುತ್ತಿದ್ದು ಅದರಿಂದ 4-5 ಟನ್ ಸಂಸ್ಕರಿಸಿದ ಅಧಿಶೀಲ ಪಡೆಯಬಹುದು. ಅರಿಷಿಣದ ಕೊಂಬುಗಳನ್ನು ನಾಯ ಕಂಡದಿಂದ ಬೇರ್ಪಡಿಸಬೇಕು. ತಾಯಿ ಕಾಂಡವನ್ನು ಬಿತ್ತನೆ ಬೀಜವಾಗಿ ಉಪಯೋಗಿಸುತ್ತಾರೆ, ಬೇರ್ಪಡಿಸಿದ ಕೊಂಬುಗಳನ್ನು ಒಂದೆರಡು ದಿನ ನೆರಳಿನಲ್ಲಿ ಒಗಿಸಬೇಕು. ಇದರಿಂದ ಕೊಂಬುಗಳಿಗೆ ಅಂಟಿಕೊಂಡಿರುವ ಮಣ್ಣನ್ನು ಬೇರ್ಪಡಿಸುವುದು ಸುಲಭವಾಗುತ್ತದೆ.
ಅರಿಶಿಣ ಸಂಸ್ಕರಣೆ ಹಂತಗಳು ಯಾವುವು
ಕುದಿಸುವುದು, ಒಣಗಿಸುವುದು, ಪಾಲಿಷ್ ಮಾಡುವುದು/ ಹೊಳದು ಕೊಡುವುದು, ಬಣ್ಣ ಹಾಕುವುದು
ಹದ ಮಾಡುವಿಕೆ ಬಗ್ಗೆ ತಿಳಿಯೋಣ.
ತಾಜ ಆರಿಸಿ ಗಡ್ಡೆಗಳಿಂದ ತಾಯಿ ಗಡ್ಡೆಗೆ ಅಂಟಿಕೊಂಡಿರುವ ಕೊಂಬುಗಳನ್ನು ಬೇರ್ಪಡಿಸಿ ತಾಯಿ ಗಡ್ಡೆಗಳನ್ನು ಬೀಜದ ಗದ್ದೆಗೆ ಬಳಸಲಾಗುವುದು. ಇದರ ಜೊತೆಗೆ ಬೀಜಕ್ಕೆ ಪಾಥಮಿಕ ಕೊಂಬುಗಳನ್ನು ಸಹ ಬಳಸಬಹುದು, ಕಾಯಿ ಗೆಡ್ಡೆಯಿಂದ ಬೇರ್ಪಡಿಸಿದ ಆರಿಶಿನ ಕೊಂಬುಗಳನ್ನು ನೀರಿನಲ್ಲಿ ಬೇಯಿಸಿ ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಹದ ಮಾಡುವುದು ರೂಢಿಯಲ್ಲಿದೆ.
ಕುದಿಸುವಿಕೆ ವಿಧಾನ.
ಸಾಂಪ್ರದಾಯಿಕ ಪದ್ಧತಿ :- ನೀರಿನಿಂದ ತೊಳೆದು ಸ್ವಚ್ಛಮಾಡಿದ ಅರಿಷಿಣ ಕೊಂಬುಗಳನ್ನು ಕಬ್ಬಿಣದ ಬಾಣಲೆ ಅಥವಾ ಮಡಿಕೆಯಲ್ಲಿ ತುಂಬಿ, ಅವು ಮುಳುಗುವಷ್ಟು ನೀರನ್ನು ಹಾಕಬೇಕು, ನಂತರ, ಉರಿ, ಹಾಕಿ ಕುದಿಸಬೇಕು. ಬಿಳಿ ಸೊರ ಬರುವ ತನಕ 45-60 ನಮಿಷಗಳ ತನಕ ಬೇಯಿಸಿ, ಕೊಂಬುಗಳು ಮೃದುವಾಗಿ ಅರಿಷಿಣದ ವಾಸನೆ ಹೊತ್ತ ಹೊಗೆ ಬರಲಾರಂಭಿಸಿದಾಗ ಕುದಿಸುವುದನ್ನು ನಿಲ್ಲಿಸಬೇಕು, ಸರಿಯಾದ ಹಂತದವರೆಗೆ ಕುದಿಸುವುದರಿಂದ ಹದ ಮಾಡಿದೆ. ನಂತರ ಉತ್ತಮ ಬಣ್ಣ ಮತ್ತು ವಾಸನೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಅತಿಯಾಗಿ ಕುದಿಸಿದಲ್ಲಿ ಅರಿಷಿಣ ಕೊಂಬುಗಳ ಬಣ್ಣ ಮತ್ತು ಗುಣಮಟ್ಟ ಹಾಳಾಗುವುದು, ಸರಿಯಾದ ಹಂತಕ್ಕಿಂತ ಕಡಿಮೆ ಕುದಿಸಿದಲ್ಲಿ ಒಣಗಿಸಿದ ನಂತರ ಕೊಂಬುಗಳು ಬಿರುಸಾಗಿ ಮುಂದಿನ ಸಂಸ್ಕರಣಾ ಕ್ರಮಗಳಲ್ಲಿ ತುಂಡು ತುಂಡುಗಳಾಗುವ ಸಂಭವವಿರುತ್ತದೆ. ಆದ ಕಾರಣ ಕುಡಿಸುವ ಸಮಯ ಅತೀ ಮಹತ್ವವಾದದ್ದು.
ಸುಧಾರಿತ ವಿಧಾನದಲ್ಲಿ ಕುದಿಸುವಿಕೆ:- ಸುಧಾರಿತ ವಿಧಾನದಲ್ಲಿ 50 ಕಿ.ಗ್ರಾಂ. ತೂಕದ ಅರಿಷಿಣ ಗಡ್ಡೆಗಳನ್ನು ಹಿಡಿಯುವಂತ, 0.9 ಮೀ x 0.5 ಮೀ x 0.4ಮೀ ಗಾತ್ರದ ಜಿ.ಐ.ಅಥವಾ ಎಂ.ಎಸ್. ತಗಡಿನಿಂದ ಕೈ ಹಿಡಿಯಿರುವಂತೆ ರೂಪಿಸಿದ ಬಾಣಲೆ ಅಥವಾ ಪಾತ್ರೆಯಲ್ಲಿ ಆರಿಷಿಣ ಗಡ್ಡೆಗಳನ್ನು ತುಂಬಾ ದೊಡ್ಡ ಬಾಣಲೆಯಲ್ಲಿ ಇಟ್ಟು 100 ಲೀಟರ್ ನೀರನ್ನು ಗೆಡ್ಡೆ ತುಂಬಿದ ಪಾತ್ರೆಯಲ್ಲಿ ಕೊಂಬುಗಳು ಮುಳುಗುವವರೆಗೂ ಹಾಕುವರು, ನಂತರ ದೊಡ್ಡ ಪಾತ್ರೆಗೆ ಉರಿ ಹಾಕಿ ಗೆಡ್ಡೆಗಳು ಮೃದುವಾಗುವವರೆಗೆ ಕುದಿಸುವುದು, ಬೆಂದ ಕೊಂಬುಗಳನ್ನು ಹೊಂದಿರುವ ಪಾತ್ರೆಯನ್ನು ಮೇಲಕ್ಕೆ ಎತ್ತಿ ನೀರನ್ನು ದೊಡ್ಡ ಪಾತ್ರೆಯಲ್ಲೇ ಬಿಟ್ಟು, ಬೇಯಿಸಿದ ಕೊಂಬುಗಳನ್ನು ರ್ಬಗುವುದಕ್ಕೆ ರವಾನಿಸಿ, ಹೊಸ ಕೊಂಬುಗಳನ್ನು ಪುನಃ ಪಾತ್ರೆಯಲ್ಲಿ ತುಂಬಿ ಅದೇ ಬಿಸಿ ನೀರಿನಲ್ಲಿ ಮುಳುಗಿಸಿ ಬೇಯಿಸುವುದು. ಹೀಗೆ 2-3 ಬಾರಿ ಆದೇ ಬಿಸಿ ನೀರಿನಿಂದ ಹೊಸ ಗೆಡ್ಡೆಗಳನ್ನು ಬೇಯಿಸುವುದಕ್ಕೆ ಸಹಕಾರಿಯಾಗುತ್ತದೆ. ಹೀಗೆ ಕೊಯ್ದು ಮಾಡಿದ ನಂತರ 2-3 ದಿವಸಗಳವರೆಗೆ ಅರಿಷಿಣ ಹದ ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ.
ದೊಡ್ಡ ಪ್ರಮಾಣದಲ್ಲಿ ನೀರಿನ ಆವಿಯ ಮುಖಾಂತರ ಕುದಿಸುವಿಕೆ:- ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಕೊಯಮತ್ತೂರಿನ ಕೃಷಿ ಉತ್ಪನ್ನಗಳನ್ನು ಹದಮಾಡುವ ವಿಭಾಗವು ಒಂದು ಸಲಕ್ಕೆ 150 ರಿಂದ 250 ಕಿ. ಗ್ರಾಂ ಪ್ರಮಾಣದ ಅರಿಷಿಣ ಕೊಂಬುಗಳನ್ನು ಕುದಿಸುವ ಸಲಕರಣೆಯನ್ನು ವೃದ್ಧಿ ಮಾಡಿರುತ್ತಾರೆ. ಈ ಸಲಕರಣೆಯು ಆಂಶಿನ ಬೆಳೆಗಾರರ ಪ್ರಾಂತ್ಯಗಳಲ್ಲಿ ಬಹು ಪ್ರಸಿಧ್ಯತೆಯನ್ನು ಪಡೆದಿದೆ. ಈ ವಿಧಾನದಲ್ಲಿ ಪ್ರತಿ ಸಾರಿಗೆ 250-270 ಕಿ. ಗ್ರಾಂ ನ್ನು ಬೇಯಿಸಬಹುದಲ್ಲದೆ ದಿನಕ್ಕೆ 8 ಗಂಟೆಯಂತೆ 35 – 4 ಟನ್ ಅರಿಷಿಣ ಗಡ್ಡೆಗಳನ್ನು ಬೇಯಿಸಬಹುದು.
ಒಣಗಿಸುವ ವಿಧಾನ
ಬೇಯಿಸಿದ ಗೆಡ್ಡೆಗಳನ್ನು ಬಿದಿರಿನ ಚಾಪೆ ಅಥವಾ ಕಾಂಕ್ರಿಟ್ ನೆಲದ ಮೇಲೆ S 7 ಸೆಂ. ಮೀ. ದಪ್ಪದಲ್ಲಿ ಹರಡಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಲಾಗುವುದು, ತೆಳುವಾಗಿ ಹರಡಿ ಒಣಗಿಸಿದ ಪಕ್ಷದಲ್ಲಿ ಒಣಗಿದ ನಂತರ ಗೆಡ್ಡೆಗಳ ಬಣ್ಣ ಅಪೇಕ್ಷಣೆ ರೀತಿಯಲ್ಲಿರುವುದಿಲ್ಲ. ಹಗಲಿನಲ್ಲಿ ಹರಡಿ ಒಣಗಿಸುವುದು, ರಾತ್ರಿಯ ವೇಳೆಯಲ್ಲಿ ಗುಡ್ಡೆ ಮಾಡಿ ಗಾಳಿಯಾಡುವಂತೆ ಹೊದಿಕೆಯಿಂದ ಮುಚ್ಚಬೇಕು, ಗಡ್ಡೆಗಳು ಪೂರ್ಣ ಒಣಗಲು 10-15 ದಿವಸಗಳು ಬೇಕಾಗುತ್ತದೆ. ಬೇಯಿಸಿದ ಗಡ್ಡೆಗಳನ್ನು ಕೃತಕವಾಗಿ ಒಣಗಿಸಲು 60 ಸೆಲ್ಸಿಯಸ್ ಉಷ್ಣತೆಯನ್ನು ಹೊಂದಿರುವ ಬಿಸಿ ಗಾಳಿಯನ್ನು ಹಾಯಿಸುವುದರಿಂದ ತೃಪ್ತಿಕರ ಉತ್ಪನ್ನ ದೊರೆಯುತ್ತದೆ, ಕತ್ತರಿಸಿದ ಗಡ್ಡೆಗಳನ್ನು .ಕೃತಕ ವಿಧಾನದಿಂದ ಒಣಗಿಸುವುದರಿಂದ ತೃಪ್ತಿಕರವಾದ ಬಣ್ಣವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಬಿಸಿಲಿನಿಂದ ಒಣಗಿಸಿದ ಕೊಂಬುಗಳಲ್ಲಿ ಬದಿ ಅಂಚಿನ ಬ ಬಿಳಿಚಿಕೊಳ್ಳುವುದರಿಂದ ಬರುವ ಉತ್ಪನ್ನ ಆರ್ಶನವಾಗಿರುವುದಿಲ್ಲ ೩೧ ಇಳುವರಿ ತಳಿ. ಮತ್ತು ಬೆಳೆ ಬೆಳೆಯುವ ಸ್ಥಳವನ್ನು ಆಧರಿಸಿ ಶೇ. 10 ರಿಂದ 30 ರಷ್ಟು ನಿರೀಕ್ಷಿಸಬಹುದು.
ಹೊಳಪು ಕೊಡುವಿಕೆ
ಒಣಗಿಸಿದ ಅಧಿart ಕೊಂಬುಗಳನ್ನ ಒರಟಾಗಿರುವ ನೆಲಕ್ಕೆ ಅಥವಾ ಗೋಣಿ ಚೀಲದಲ್ಲಿ ತುಂಬಿ ಕಾಲಿನಿಂದ ತುಳಿದು ಅಥವಾ ಪಾಲೀಷು ಡ್ರಮ್ ಅಥವಾ ಕಡಾಯಿಗಳಿಗೆ ತುಂಬಿ ಉಜ್ಜುವುದರಿಂದ ಸೊರೆ, ತುಂಡು ಬೇರುಗಳು ಉದುರಿ ಹೋಗಿ ಆಕರ್ಷಿತವಾಗಿ ನಯವಾಗುವುವು. ಹೀಗೆ ನಯ ಮಾಡಿದ ಇಳುವರಿ ಶೇ. 15- 25 ರಷ್ಟು ಇರುತ್ತದೆ.
ಬಣ್ಣ ಹಾಕುವುದು
ಅರಿಷಿಣ, ಆಕರ್ಷಕ ಹಳದಿ ಬಣ್ಣವಿದ್ದಲ್ಲಿ ಉತ್ತಮ ಮಾರುಕಟ್ಟೆ ದರ ದೊರೆಯುತ್ತದೆ, ಆದದರಿಂದ ಆರಿಷಿ ಕೊಂಬುಗಳನ್ನು ಡಬ್ಬಿನಲ್ಲಿ ಪಾಲಿಸು ಮಾಡುತ್ತಿರುವಾಗ ಕೊನೆಯ ಹತ್ತು ನಿಮಿಷಗಳಲ್ಲಿ ಅರಿಷಿಣ ಪುಡಿಯನ್ನು ಹಾಕಿ ತಿರುಗಿಸಬೇಕು. ಇಲ್ಲವಾದರೆ ಅರಿಷಿಣ ಪುಡಿಯ ದ್ರಾವಣ ಮಾಡಿ ಡ್ರಮ್‌ನಲ್ಲಿನ ಕೊಂಬುಗಳ ಮೇಲೆ ಸಿಂಪರಣೆ ಮಾಡಿ ತಿರುಗಿಸಬೇಕು. ನಂತರ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣಗಿಸಬೇಕು.
ಬೀಜದ ಕೊಂಬುಗಳ ಸಂಗ್ರಹಣೆ
ಬೀಜದ ಕೊಂಬುಗಳನ್ನು ಶೇ. 0.2 ರ ಕ್ಯಾಪ್ಟಾನ್ ಅಥವಾ ಶೇ. 0.3 ರ ಮ್ಯಾನ್ ಕೋಜೆಬ್ + ಶೇ. 0.1 ರ ಮಾನೊಟೋಫಾಸ್ ಅಥವಾ ಶೇ. 0.2 ರ ಕ್ವಿನಾಲ್ ಫಾಸ್ ದ್ರಾವಣದಲ್ಲಿ 30 ನಿಮಿಷಗಳ ವರೆಗೆ ಅಡ್ಡಿ ತೆಗೆದು, ನೆರಳಿನಲ್ಲಿ ಒಣಗಿಸಿ ನಂತರ: ಶೂನ್ಯ ಶಕ್ತಿ ತಂಪ ತೊಟ್ಟಿಯಲ್ಲಿ ಶೇಖರಿಸಿಡಬಹುದು. ಈ ಕ್ರಮದಿಂದ ಶೇಖರಣೆಯಲ್ಲಿ ನಷ್ಟವು ಗಣನೀಯವಾಗಿ ಕಡಿಮೆಯಾಗುವುದರ ಜೊತೆಗೆ ಶೇ. 90 ಕ್ಕಿಂತ ಹೆಚ್ಚು ದೊಳಗೆ ಬರುವುದು.