ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ತಪ್ಪಲು ಗುಡುಗು ಸ್ವಲ್ಪ ಜಾಸ್ತಿ ಇರಬಹುದು. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಚಿಕ್ಕಬಳ್ಳಾಪುರ, ತುಮಕೂರು (ಪಾವಗಢ ಸಹಿತ) ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.
ಈಗಿನಂತೆ ಅರಬ್ಬಿ ಸಮುದ್ರದ ಗುಜರಾತ್ ಕರಾವಳಿ ಸಮೀಪದ ಚಂಡಮಾರುತವು ಸೆಪ್ಟೆಂಬರ್ 2 ರಂದು ಮಸ್ಕತ್ ಕರಾವಳಿಗೆ ಅಪ್ಪಳಿಸುವ ಲಕ್ಷಣಗಳಿವೆ. ಇದರಿಂದ ಮುಂಗಾರು ಮಾರುತಗಳು ಉತ್ತರಕ್ಕೆ ಸೆಳೆಯಲ್ಪಡುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಬಂಗಾಳಕೂಲ್ಲಿಯ ವಾಯುಭಾರ ಕುಸಿತವು ಇವತ್ತು ವಿಶಾಖಪಟ್ಟಣದ ಸಮೀಪ ಭೂಮಿಗೆ ಪ್ರವೇಶಿಸುವ ಲಕ್ಷಣಗಳಿರುವುದರಿಂದ ಉತ್ತರ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಸೆಪ್ಟೆಂಬರ್ 2ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಕೃಷಿ – ತೋಟಗಾರಿಕೆ ಮೇಳ – 2024
ಪೌಷ್ಟಿಕ ಆಹಾರಕ್ಕಾಗಿ ವಿಕಾಸಿತ್ ಕೃಷಿ
ಈ ವರ್ಷ ಕೃಷಿ ತೋಟಗಾರಿಕೆ ಮೇಳ -2024 ಅನ್ನು “ಪೌಷ್ಠಿಕ ಆಹಾರಕ್ಕಾಗಿ ವಿಕಾಸಿತ್ ಕೃಷಿ” (ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ) ಎಂಬ ವಿಷಯದೊಂದಿಗೆ ಆಯೋಜಿಸಲಾಗಿದೆ.
ಕೃಷಿ-ತೋಟಗಾರಿಕೆ ಮೇಳ-2024 ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಪ್ರದರ್ಶನವಾಗಿದ್ದು, 18-21″ ಅಕ್ಟೋಬರ್, 2024 ರಂದು ಕೃಷಿ ಮಹಾವಿದ್ಯಾಲಯ, ನವಿಲ್ ಕ್ಯಾಂಪಸ್, KSNUAHS, ಶಿವಮೊಗ್ಗ, ಈ ವರ್ಷದ ಮೇಳವು ಆಹಾರ ಮತ್ತು ಅಡಿಕೆ ಉತ್ಪಾದನೆಗೆ ವಿಶೇಷ ಒತ್ತು ನೀಡುತ್ತದೆ. ಕೃಷಿ ತಂತ್ರಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು.
ಪ್ರಶಸ್ತಿಗಳು ಮತ್ತು ಗೌರವಗಳು
ಮೇಳದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಏಳು ಜಿಲ್ಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುವುದು. ಜೊತೆಗೆ, ಮೇಳದಲ್ಲಿ “ಅತ್ಯುತ್ತಮ ಸ್ಟಾಲ್ ಪ್ರದರ್ಶಕರು” ಗೌರವಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಮೇಳವು ಸುಮಾರು 5 ಲಕ್ಷ ರೈತರು ಮತ್ತು ಮಧ್ಯಸ್ಥಗಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಒಟ್ಟು 250 ಜನಪ್ರಿಯ ಕೃಷಿ ಆಧಾರಿತ ಕಂಪನಿಗಳು ಮತ್ತು ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುವ ಮತ್ತು ಅಂತಿಮ ಬಳಕೆದಾರರನ್ನು ತಲುಪುವ ನಿರೀಕ್ಷೆಯಿದೆ. ಈ ಮೆಗಾ ಈವೆಂಟ್ ಕೃಷಿ-ಪೂರ್ವಭಾವಿಗಳಿಗೆ, ಅಭಿವೃದ್ಧಿ ಇಲಾಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಭಾಗವಹಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.
ಬೆಂಗಳೂರು ಕೃಷಿ ವಿವಿಯಿಂದ ಖಾಸಗೀ ಕೃಷಿ ಕಾಲೇಜುಗಳಿಗೆ ಅನುಮತಿ: ಕೃಷಿ ಪದವೀಧರರು ಬೀದಿಗೆ
ಬೆಂಗಳೂರು ಕೃಷಿ ವಿವಿ ದಿ:08.07.2024 ರಂದು ಅಧಿಸೂಚನೆಯನ್ನು ಹೊರಡಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ 402 ನೇ ಸಭೆಯ (20.06.24) ತೀರ್ಮಾನದಂತೆ ಖಾಸಗೀ ಕಾಲೇಜುಗಳಿಗೆ ಅಫಿಲಿಯೇಷನ್ ನೀಡಲು ದಿ:15.07.2024 ರಂದು ವಿಶ್ವವಿದ್ಯಾಲಯದ ಅಧಿಕಾರಿಗಳ ಜೊತೆಗೆ ಆಡಳಿತ ಮಂಡಳಿಯ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಈಗಾಗಲೆ AICTE ಅನುಮತಿಯೊಂದಿಗೆ ಖಾಸಗೀ ಇಂಜಿನಿಯರಿಂಗ್ ಕಾಲೇಜುಗಳಿಂದ ಪದವಿಗಳನ್ನು ಪಡೆದ ವಿದ್ಯಾರ್ಥಿಗಳು ಕೃಷಿ ಇಲಾಖೆಯ ಸರ್ಕಾರಿ ಕೆಲಸಕ್ಕೆ ಅರ್ಹತೆ ಗಳಿಸಿರುವುದು ಅತಿ ದೊಡ್ಡ ವಂಚನೆ. ಇದರ ಹಿಂದೆ ಹಲವಾರು ಕಾಣದ ಬಂಡವಾಳಶಾಯಿಗಳು & ಸರ್ಕಾರಿ ಅಧಿಕಾರಿಗಳು ಇದ್ದಾರೆ. ಪ್ರಸ್ತುತ ಬೆಂಗಳೂರು ಕೃವಿವಿ ಸಹ ಖಾಸಗೀ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲು ಹೊರಟಿರುವುದು ಮಹಾವಂಚನೆ.
ನೂರಾರು ಖಾಸಗೀ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಿರುವ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಕೃಷಿ ಶಿಕ್ಷಣದ ಗುಣಮಟ್ಟ ಚಿಂತಾಜನಕವಾಗಿದ್ದು ಇದನ್ನು ಐಸಿಎಆರ್ ಸಹ ಪ್ರಶ್ನಿಸಿದೆ. ಒಂದು ವೇಳೆ ಯಾವುದೇ ಖಾಸಗೀ ಕಾಲೇಜು ಕೃಷಿ ಶಿಕ್ಷಣವನ್ನು ನೀಡಬೇಕೆಂದಲ್ಲಿ Iಅಂಖ 5ನೇ ಡೀನ್ ಕಮಿಟಿಯ ಮಾನದಂಡಗಳನ್ನು ಪಾಲಿಸಿದರೆ ಸಾಕು ಸ್ವತಃ ಐಸಿಎಆರ್ ಅಫಿಲಿಯೇಶನ್ ನೀಡುತ್ತದೆ. ಉದಾಹರಣೆಗೆ ಒರಿಸ್ಸಾ ಮತ್ತು ಯಾವುದೇ ಸಮಯದಲ್ಲಿ ಬೇಕಾದರು ಅನುಮತಿಯನ್ನು ರದ್ದುಪಡಿಸಬಹುದು. ಆದರೆ ಖಾಸಗೀಯವರು ಸೌಕರ್ಯಗಳ ಕೊರತೆಯಿಂದ ರಾಜಕೀಯ ಮತ್ತು ಹಣದ ಬಲದೊಂದಿಗೆ ವಿವಿಗಳ ಮೇಲೆ ಒತ್ತಡ ತಂದು ಅನುಮತಿಯನ್ನು ಪಡೆಯುವುದು ಹುನ್ನಾರ, ಸತತ 14 ವರ್ಷಗಳಿಂದ ಇದು ನಡೆಯುತ್ತಲೇ ಇದೆ.
ಕೊರೋನ ನಂತರ ದೇಶ ಮತ್ತು ರಾಜ್ಯದಲ್ಲಿ ಪದವೀಧರರ ಸಂಖ್ಯೆ ಸಹ ಹೆಚ್ಚಾಗಿರುವ ಪರಿಣಾಮ ನಿರುದ್ಯೋಗದ ಸಂಖ್ಯೆಯು ಹೆಚ್ಚಾಗಿದೆ. ಈಗಾಗಲೆ ಕೃಷಿ ಪದವೀಧರರು ಕೃಷಿ ರಂಗದ ಕೆಲಸಗಳನ್ನು ಬಿಟ್ಟು ಬ್ಯಾಂಕ್ ಸೆಕ್ಟರ್, ಎಲ್‍ಐಸಿ, & ಖಾಸಗೀ ಕಂಪೆನಿಗಳಲ್ಲಿ 15 ರಿಂದ 20 ಸಾವಿರಕ್ಕೆ ದುಡಿಯುತ್ತಿದ್ದಾರೆ. ಕೃಷಿ ಇಲಾಖೆಯು ಸಹ 6 ರಿಂದ 7 ವರ್ಷಕ್ಕೊಮ್ಮೆ ನೇಮಕಾತಿಯನ್ನು ಹಮ್ಮಿಕೊಳ್ಳುತ್ತದೆ. ಆದರೆ, ಎಲ್ಲಾ ವಿವಿಗಳಿಂದ ಪ್ರತೀ ವರ್ಷ ಹೊರಹೊಮ್ಮುವ ಪದವೀ ಹಾಗೂ ಸ್ನಾತಕ ಪದವೀದರರ ಸಂಖ್ಯೆ ಸಾವಿರಾರು. 2016 ರಲ್ಲಿಯೆ ಕೃಷಿ ಇಲಾಖೆ ಕರೆದ ಹುದ್ದೆಗಳಿಗೆ 8 ಸಾವಿರ ಅಪ್ಲಿಕೇಶನ್ ಬಂದಿದ್ದವು, ಈಗ 2024, ಅಂದರೆ ಸುಮಾರು 15 ಸಾವಿರಕ್ಕು ಅಧಿಕ ಪದವೀಧರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿಷಯ ಹೀಗಿರುವಾಗ ಖಾಸಗೀ ಕಾಲೇಜು ಏಕೆ ಬೇಕು?
2016 ರಲ್ಲೆ ಬೆಂಗಳೂರು ಕೃವಿವಿ ರಾಜ್ಯದ 3 ಖಾಸಗೀ ಕಾಲೇಜುಗಳಿಗೆ ಅಫಿಲಿಯೇಶನ್ ನೀಡಲು ಮುಂದಾಗಿತ್ತು. ಅಂದು ಕರ್ನಾಟಕದ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆ ವಿದ್ಯಾರ್ಥಿಗಳು ರಾಜ್ಯದಲ್ಲಿ ಯಾವುದೇ ಕಾರಣಕ್ಕು ಖಾಸಗೀಯವರಿಗೆ ಅಫಿಲಿಯೇಶನ್ ನೀಡಬಾರದೆಂದು 2018 ರ ವರೆಗು ಪ್ರತಿಭಟಿಸಿದರು. ಬೆಂಗಳೂರು ಚಲೋ ಎಂದು ರಾಜ್ಯ ಮಟ್ಟದ ರ್ಯಾಲಿಗಳನ್ನು ಸಹ ರಾಜಧಾನಿಯಲ್ಲಿ ಹಮ್ಮಿಕೊಂಡರು. ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಕೃಷಿ ಮಂತ್ರಿಗಳಾದ ಶಿವಶಂಕರರೆಡ್ಡಿ ಪ್ರತಿಭಟನೆಗೆ ಆಗಮಿಸಿ ವಿದ್ಯಾರ್ಥಿ ಅಹವಾಲಗಳನ್ನು ಸ್ವೀಕರಿಸಿ ರಾಜ್ಯದಲ್ಲಿ ಯಾವುದೇ ಕಾಲೇಜಿಗೆ ಅಫಿಲಿಯೇಶನ್ ನೀಡದಂತೆ ಕ್ರಮ ಕೈಗೊಂಡರು ಮತ್ತು ರೈ ಟೆಕ್ ಎಂಬ ಖಾಸಗೀ ವಿಶ್ವವಿದ್ಯಾಲಯವು ಕೃಷಿ ಪದವಿಯನ್ನು ನಿಲ್ಲಿಸುವಂತೆ ಸದನದಲ್ಲಿ ತಿದ್ದುಪಡಿಯನ್ನು ಸಹ ತಂದರು. ಈ ಹೋರಾಟ ಆಂಧ್ರಪ್ರದೇಶದಲ್ಲು ನಡೆಯಿತು ಮುಂದೆ ಗುಜರಾತ್, ಹರಿಯಾಣ ಮತ್ತು ಐಎಆರ್‍ಐ ಕ್ಯಾಂಪಸ್ ನಲ್ಲು ಸಹ ನಡೆಯಿತು. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಉಚ್ಚನ್ಯಾಯಾಲಯದಲ್ಲಿ ರೈಟೆಕ್ ಖಾಸಗೀ ಕೃಷಿ ಶಿಕ್ಷಣದ ಬಗ್ಗೆ ಪ್ರಕರಣವು ಸಹ ಇದೆ.
ಸುಮಾರು 6 ವರ್ಷಗಳ ನಂತರ ಇಂದು ಇದೇ ಬೆಂಗಳೂರು ಕೃವಿವಿ ಖಾಸಗೀ ಕೃಷಿ ಕಾಲೇಜಿಗೆ ಅಫಿಲಿಯೇಶನ್ ನೀಡಿ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಲು ಹೊರಟಿದೆ. ಟೈಮ್ ಪಾಸ್ ಗೆ ವಿದ್ಯಾಭ್ಯಾಸ ಮಾಡುವ ಖಾಸಗೀಯವರಿಗು Iಅಂಖ ಪದವಿ ನೀಡಿದರೆ ನ್ಯಾಯ ಎಲ್ಲಿದೆ?. ವಿದ್ಯಾರ್ಥಿಗಳನ್ನು ಕಾಯಬೇಕಿದ್ದ ಕುಲಪತಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಖಾಸಗೀಯವರನ್ನು ಕಾಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಬ್ಬ ಅನ್‍ಆರ್‍ಐ ವಿದ್ಯಾರ್ಥಿ ಲಕ್ಷ ಲಕ್ಷ ಶುಲ್ಕ ನೀಡಿ ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ತಿಳಿದಿದೆ. ಬೆಂಗಳೂರಿನ ಬೀದಿ ಬೀದಿಯಲಿರುವ ಖಾಸಗೀ ಇಂಜಿನಿಯರಿಂಗ್ ಕಾಲೇಜುಗಳ ಕಥೆ ನಮಗೆಲ್ಲಾ ತಿಳಿದಿದೆ. ಆದ್ದರಿಂದ ಈ ಕೂಡಲೆ ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ವಿದ್ಯಾರ್ಥಿಗಳ ಜೀವನ ಹಾಳು ಮಾಡದಂತೆ ಎಚ್ಚರಿಸಬೇಕಿದೆ.