Breaking
Thu. Dec 19th, 2024

ಜೋಳದಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳು ಹಾಗೂ ಸುಧಾರಿತ ಬೇಸಾಯ ಕ್ರಮಗಳು

Spread the love

ಹಿಂಗಾರಿ ಜೋಳ ನೂತನ ಉತ್ಪಾದನಾ ತಾಂತ್ರಿಕತೆಗಳು

ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಹಿಂಗಾರಿ ಜೋಳ ಅತಿ ಮುಖ್ಯ ಆಹಾರ ಬೆಳೆಯಾಗಿದೆ. ಕರ್ನಾಟಕದಲ್ಲಿ ಜೋಳವನ್ನು ಮುಖ್ಯವಾಗಿ ಒಟ್ಟು 7.04 ಲಕ್ಷ ಹೆಕ್ಟೇರ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇದರ ಒಟ್ಟು ಉತ್ಪಾದನೆ 8.80 ಲಕ್ಷ ಲಕ್ಷ ಟನ್ನುಗಳಷ್ಟು ಹಾಗೂ ಉತ್ಪಾದಕತೆಯು ಪ್ರತಿ ಹೇಕ್ಟರಿಗೆ 1187 ಕಿ. ಗ್ರಾಂ ನಷ್ಟಿದೆ. (2021-22). ಕರ್ನಾಟಕದಲ್ಲಿ ಜೋಳ ಬೆಳೆಯುವ ಮುಖ್ಯ ಜಿಲ್ಲೆಗಳೆಂದರೆ ವಿಜಯಪುರ, ಬಾಗಲಕೋಟೆ, ಗುಲಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿ, ಈ ಬೆಳೆಯ ಹೆಚ್ಚಿನ ಉತ್ಪಾದನೆಗೆ ಅನೇಕ ನೂತನ ತಾಂತ್ರಿಕತೆಗಳವೆ. ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ಹಿಂಗಾರಿ ಜೋಳದ ಮುಖ್ಯ ತಳಿಗಳು:

ಹವಾಮಾನ ಮತ್ತು ಮಣ್ಣಿನ ಗುಣಧರ್ಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಿದ ಹೊಸ ತಳಗಳು ಹೆಚ್ಚಿನ ಇಳುವರಿ ಕೊಡುತ್ತವೆ. ಇಂತಹ ತಳಗಳಿಗೆ ಸೂಕ್ತಪರಿಸರವನ್ನು ಒದಗಿಸಿದರೆ ಗರಿಷ್ಠ ಇಳುವರಿ ಪಡಯಬಹುದು. ಪ್ರಮುಖವಾದ ತಳಗಳು ಮತ್ತು ಅವುಗಳ ಗುಣಲಕ್ಷಣಗಳು ಈ ಕೆಳಗಿನಂತಿವೆ.

ಬಿ.ಜೆ.ವಿ 44 :- ಇದು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಆಳವಾದ ಕಪ್ಪು ಮಣ್ಣಿನ ಭೂಮಿಗೆ ಸೂಕ್ತವಾಗಿದ್ದು, ಹೆಚ್ಚು ಕಾಳು ಮತ್ತು ಮೇವಿನ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಇದು ಎಮ್ 35-1 ತಳಗಿಂತ ಉತ್ತಮ ಕಾಳನ ಇಳುವರಿ (8-10 ಕ್ವಿಂಟಾಲ್ ಪ್ರತಿ ಎಕರೆಗೆ) ಮತ್ತು ಮೇವಿನ ಇಳುವರಿ (22-25 ಕ್ವಿಂಟಾಲ್ ಪ್ರತಿ ಎಕರೆಗೆ) ನೀಡಬಲ್ಲುದಾಗಿದೆ. ಈ ತಳಿಯು 125-130 ದಿನಗಳಲ್ಲಿ ಮಾಗುವದು.. ಇದು ಇದ್ದಿಲು ಕಾಂಡ ಕೊಳೆ ರೋಗ, ಸುಳ ನೊಣ ಮತ್ತು ಹೇನುಗಳ ಭಾದೆಗಳಗೆ ಮಧ್ಯಮ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ತಳಿಯನ್ನು ವಲಯ-3 ಮತ್ತು ವಲಯ-8 ಗಳಗೆ ಶಿಫಾರಸು ಮಾಡಲಾಗಿದೆ.

ಸಿ.ಎಸ್.ವಿ.29 ಆರ್: ಇದು 2013 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಬಿಡುಗಡೆಯಾಗಿದ್ದು, ಕರ್ನಾಟಕದ ಎಲ್ಲ ಹಿಂಗಾರಿ ಜೋಳ ಬೆಳೆಯುವ ಪ್ರದೇಶಗಳಗೆ ಶಿಫಾರಸು ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಆಳವಾದ ಕಪ್ಪು ಮಣ್ಣಿನ ಭೂಮಿಗೆ ಸೂಕ್ತವಾಗಿದ್ದು, ಹೆಚ್ಚು ಕಾಳು ಮತ್ತು ಮೇವಿನ ಇಳುವರಿ ಕೊಡುವ ತಳಿಯಾಗಿದೆ. ಇದನ್ನು. ಇದು ಎಕರೆಗೆ 9 ರಿಂದ 10 ಕ್ವಿಂಟಾಲ್ ಕಾಳು ಮತ್ತು 25 ರಿಂದ 30 ಕ್ವಿಂಟಾಲ್ ಮೇವಿನ ಇಳುವರಿ ಕೊಡುವುದು. ಉತ್ತಮ ಕಾಳನ ಗುಣಮಟ್ಟ ಹೊಂದಿದೆ.
3.ಎಮ್ 35-1 (ಮಾಲ್ದಂಡಿ): ಈ ತಳಿ ರಾಷ್ಟ್ರ ಮಟ್ಟದಲ್ಲಿಯೇ ಅತ್ಯಂತ ಜನಪ್ರಿಯವಾಗಿದೆ. ಇದು ಬರ ತಡೆದುಕೊಳ್ಳುವ ಶಕ್ತಿ, ಉತ್ಕೃಷ್ಠ ಕಾಳನ ಗುಣಮಟ್ಟ ಮತ್ತು ಅತೀ ಹೆಚ್ಚು ಕೀಟ ಬಾಧೆಯ ಸಹನತೆಯನ್ನು ಹೊಂದಿರುವುದರಿಂದ ಹೆಚ್ಚಿನ ಕ್ಷೇತ್ರವನ್ನು ಆವರಿಸಿದೆ. ಈ ತ ಆಳವಾದ ಕಪ್ಪು ಭೂಮಿಯಲ್ಲಿ ಎಕರೆಗೆ 6-8 ಕ್ವಿಂಟಾಲ್ ಕಾಳು ಮತ್ತು 15-20 ಕ್ವಿಂಟಾಲ್ ಮೇವಿನ ಇಳುವರಿಯನ್ನು ಕೊಡುವುದು.

ಮೂಗುತಿ (೮-4-1): ಮೂಗುತಿ ತಳ ಅನೇಕ ಅಂಶಗಳಲ್ಲಿ ಮಾಲ್ದಂಡಿಯನ್ನು ಹೋಲುತ್ತಿದ್ದರೂ ಇದರ ಮೇವಿನ ಗುಣಮಟ್ಟ ಬಹಳ ಉತ್ತಮವಾಗಿದೆ. ಏಕೆಂದರೆ, ಇದರ ಕಾಂಡ, ಮಧ್ಯಮ ದಪ್ಪವಾಗಿದ್ದು, ಎಲೆಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ಉದ್ದವಿದ್ದು ಉದುರುವಿಕೆಯೂ ಕಡಿಮೆ.

ಡಿ.ಎಸ್.ವಿ 4 (9-13): ಈ ತಳಿಯು 1995-96 ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದು ಎಕರೆಗೆ 8-10 ಕ್ವಿಂಟಾಲ್‌ ಕಾಳು ಮತ್ತು 25-30 ಕ್ವಿಂಟಾಲ್ ಮೇವು ಕೊಡುತ್ತದೆ, ಇದ್ದಿಲು ಕಾಂಡ ಕೊಳೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವುದರಿಂದ ನೆಲಕ್ಕೆ ಬೀಳುವುದಿಲ್ಲ. ಈ ತಳಿಯು ಅರೆ ಮಲೆನಾಡು (ಧಾರವಾಡ-ಬೆಳಗಾವಿ) ಪ್ರದೇಶಕ್ಕೆ ಸೂಕ್ತವಾಗಿದೆ. ಇದು ನೀರಾವರಿಯಲ್ಲಿ ಅತ್ಯುತ್ತಮ ಇಳುವರಿಯನ್ನು ಕೊಡುತ್ತದೆ.

ಡಿ.ಎಸ್.ವಿ.5 (ಜಿ.ಆರ್.ಎಸ್.-1): ಈ ತಳಿ ಎಕರೆಗೆ 8-10 ಕ್ವಿಂಟಾಲ್ ಕಾಳು ಮತ್ತು 25-30 ಕ್ವಿಂಟಾಲ್ ಮೇವು ಕೊಡುತ್ತದೆ. ಇದ್ದಿಲು ಕಾಂಡ ಕೊಳೆ ರೋಗ ಮತ್ತು ಸುಳನೊಣದ ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಮಾಲ್ದಂಡಿ ತಳಗಿಂತ 10-12 ದಿನ ತಡವಾಗಿ ಮಾಗುವ ಈ ತಳಗೆ ಆಳವಾದ ಕಪ್ಪು ಮಣ್ಣಿನ ಭೂಮಿ ಅತ್ಯವಶ್ಯಕ,

ಸಿ.ಎಸ್.ವಿ 216 ಆರ್(ಫುಲೆ ಯಶೋಧಾ) :- ಈ ತಳಿಯು 2000-01 ನೇ ಸಾಲನಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಎಕರೆಗೆ 8-10 ಕ್ವಿಂಟಾಲ್ ಕಾಳು ಮತ್ತು 25-30 ಕ್ವಿಂಟಾಲ್ ಮೇವನ್ನು ಕೊಡುತ್ತದೆ. ಕಾಳನ ಗುಣಮಟ್ಟ ಉತ್ತಮವಾಗಿದ್ದು ಸುಳನೊಣದ ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಇದು 5-8 ದಿನ ತಡವಾಗಿ ಮಾಗುವುದರಿಂದ, ಇದ್ದಿಲು ಕೊಳೆ ರೋಗ ಜಾಸ್ತಿಯಾಗಿ ಕಾಳು ಸಣ್ಣಗಾಗುವುದರ ಜೊತೆಗೆ ಇಳುವರಿ ಕುಂಠಿತವಾಗುತ್ತದೆ.

ಸಿ.ಎಸ್.ವಿ 18 ಆರ್ :- ಈ ತಳಿಯನ್ನು ನೀರಾವರಿ ಆಶ್ರಯದಲ್ಲಿ ಬೆಳೆಯಲು 2004 ರಲ್ಲಿ ರಾಷ್ಟ್ರಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿದೆ. ನೀರಾವರಿಯಲ್ಲಿ ಎಕರೆಗೆ 15-20 ಕ್ವಿಂಟಾಲ್‌ ಕಾಳು ಮತ್ತು 30-35 ಕ್ವಿಂಟಾಲ್ ಮೇವನ್ನು ನೀಡುವುದರ ಜೊತೆಗೆ ಉತ್ತಮ ಕಾಳಿನ ಗುಣಮಟ್ಟ ಹೊಂದಿದೆ.

ಸಿ.ಎಸ್.ವಿ 22 ಆರ್ :- ಈ ತಳಿಯು 2005 ರಲ್ಲಿ ರಾಷ್ಟ್ರಮಟ್ಟದಲ್ಲಿ ಬಿಡುಗಡೆಗೊಂಡಿದೆ. ಎಕರೆಗೆ 15-20 ಕ್ವಿಂಟಾಲ್ ಕಾಳು ಮತ್ತು 30-35 ಕ್ವಿಂಟಾಲ್ ಮೇವನ್ನು ನೀಡುತ್ತದೆ. ಕಾಳನ ಗುಣಮಟ್ಟ ಉತ್ತಮವಾಗಿದೆ.

ವಿಶೇಷ ಗುಣಗಳನ್ನು ಹೊಂದಿದ ತಳಿಗಳು

ಉತ್ತರ ಕರ್ನಾಟಕದ ಹಿಂಗಾರಿ ಜೋಳದ ವಲಯದಲ್ಲಿ ನಿರ್ದಿಷ್ಟ ಆಹಾರ ಪದಾರ್ಥಗಳ ತಯಾರಿಕೆಗೆ (ಅವಲಕ್ಕಿ, ಅರಳು, ಸೀತನಿ ಇತ್ಯಾದಿ) ಸೂಕ್ತವಾದ ವಿಭಿನ್ನ ಕಾಳಿನ ಗುಣಗಳಿರುವ ಗುಣಗಳರುವ ತಳಿಗಳನ್ನು ರೈತರು ಬಹುದಿನಗಳಿಂದ ಬೆಳೆಯುತ್ತಿದ್ದಾರೆ. ಈ ವಿಶಿಷ್ಟ ತಳಗಳನ್ನು ಉತ್ತರ ಕರ್ನಾಟಕದ ಒಣವಲಯಕ್ಕೆ (ವಲಯ-3) ಶಿಫಾರಸು ಮಾಡಲಾಗಿದ್ದು, ಅವುಗಳನ್ನು ಆಯ್ಕೆಮಾಡಿ ಅಭಿವೃದ್ದಿ ಪಡಿಸಲಾಗಿದೆ.ಅವುಗಳೆಂದರೆ

1.ಎ.ಕೆ.ಜೆ-1 (ಅಥರ್ಗಾ ಕೆಂಪು ಜೋಳ):- ಇದು ಹಿಂಗಾರಿ ಜೋಳದ ತಳಿಯಾಗಿದ್ದು ಉತ್ತಮ ಅವಲಕ್ಕಿ ತಯಾರಿಸಲು ಸೂಕ್ತವಾಗಿದೆ. ಇದು ಎಮ್-35-1 ತಳಿಯ ಸಮನಾದ ಕಾಳನ ಇಳುವರಿ (5–6 ಕ್ವಿಂಟಾಲ್ ಪ್ರತಿ ಎಕರೆಗೆ) ಮತ್ತು ಮೇವಿನ ಇಳುವರಿ (18-20 ಕ್ವಿಂಟಾಲ್‌ ಪ್ರತಿ ಎಕರೆಗೆ) ನೀಡಬಲ್ಲುದಾಗಿದೆ. ಈ ತಳಿಯಿಂದ ತಯಾರಿಸಿದ ಅವಲಕ್ಕಿ: ಉತ್ತಮ ಗುಣಮಟ್ಟತೆ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿದೆ. ಈ ತಳಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ಸ (ಕ್ಯಾನ್ಸರ ನಿರೋಧಕ) ಅಂಶಗಳವೆಯಂದು ಕಂಡುಬಂದಿದೆ. ಇದಲ್ಲದೆ ಕಬ್ಬಿಣ ಹಾಗೂ ಸತುವಿನ ಪ್ರಮಾಣ ಹೆಚ್ಚಾಗಿದ್ದು

  1. ಎಸ್.ಎಮ್.ಜೆ-1 (ಸಕ್ಕರೆ ಮುಕ್ಕರಿ ಜೋಳ):- ಇದು ಹಿಂಗಾರಿ ಜೋಳದ ವಿಶಿಷ್ಟ ತಳಿಯಾಗಿದ್ದು ಶೀತನಿ/ಬೆಳಸಿ/ಹುರ್ಡಾ ತಯಾರಿಸಲು ಸೂಕ್ತವಾಗಿದೆ. ಈ ತಳಿಯು ಪ್ರತಿ ಎಕರೆಗೆ ಸುಮಾರು 7.5 ರಿಂದ 8.5 ಕ್ವಿಂಟಾಲ್ ಹಸಿ ಶೀತನಿ ಕಾಳುಗಳನ್ನು ಮತ್ತು ಶೀತನಿ ಒಣಗಿದ ಮೇಲೆ ಪ್ರತಿ ಎಕರೆಗೆ ಸುಮಾರು 4.5 ರಿಂದ 5.5 ಕ್ವಿಂಟಾಲ್ ಇಳುವರಿ ಕೊಡಬಲ್ಲುದಾಗಿದೆ. ಈ ತಳಯು 110 ರಿಂದ 115 ದಿನಗಳ ಮಾಗುವ ಅವಧಿ ಹೊಂದಿದ್ದು, ಪ್ರತಿ ಹೆಕ್ಟೇರಿಗೆ 3 ರಿಂದ 4 ಕ್ವಿಂಟಾಲ್ ಕಾಳು ಮತ್ತು ಎಮ್ 35-1 ತಳಗಿಂತ ಪ್ರತಿಶತ 10.7 ರಷ್ಟು ಕಡಿಮೆ ಮೇವಿನ ಇಳುವರಿಯನ್ನು ಕೊಡುವುದು. ಇದು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಬೇಕಾದ ಧಾತುಗಳಾದ ಕಬ್ಬಿಣ ಮತ್ತು ಸತುವಿನ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಈ ತಳಯ ಬೆಳಸಿಯನ್ನು 48 ಘಂಟೆಗಳವರೆಗೆ ಸಂಗ್ರಹಿಸಿಟ್ಟು ತಿನ್ನಬಹುದು.
  2. ಕೆ.ಎಮ್.ಜೆ-1 (ಕಾಗೆ ಮೋತಿ ಜೋಳ):– ಇದು ಹಿಂಗಾರಿ ಜೋಳದ ವಿಶಿಷ್ಟ ತಳಿಯಾಗಿದ್ದು, ಅರಳು ತಯಾರಿಸಲು ಸೂಕ್ತವಾಗಿದೆ. ಇದು ಪ್ರತಿ ಎಕರೆಗೆ 4 ರಿಂದ 5 ಕ್ವಿಂಟಾಲ್ ಕಾಳನ ಇಳುವರಿ ಮತ್ತು ಎಮ್-35-1 ತಳಗಿಂತ ಪ್ರತಿಶತ 10 ರಷ್ಟು ಕಡಿಮೆ ಮೇವಿನ ಇಳುವರಿಯನ್ನು ಕೊಡುವುದು. ಇದು ಪ್ರತಿ ಕ್ವಿಂಟಾಲ್ ಕಾಳಗೆ ಸುಮಾರು 75 ಕೆ.ಜಿ. ಅರಳು ನೀಡುವ ಸಾಮರ್ಥ್ಯ ಹೊಂದಿದೆ.

ಕಪ್ಪು ಮಣ್ಣಿನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಳವಾದ ಮಾಗಿ ಉಳುಮೆ ಮಾಡಬೇಕು. ಜುಲೈ ತಿಂಗಳೊಳಗೆ ಎರಡು ಮೂರು ಸಲ ಹರಗಿ, ಜುಲೈ ತಿಂಗಳ ಎರಡನೇ ವಾರದಲ್ಲಿ (ಬಂಡ ಫಾರ್ಮರ್ ಉಪಯೋಗಿಸಿ) ಚೌಕು ಮಡಿಗಳನ್ನು ಮಾಡುವುದರಿಂದ ಮಳೆ ನೀರನ್ನು ಇಂಗಿಸಬಹುದು. ಇದರಿಂದ ಮಣ್ಣಿನ ತೇವಾಂಶ ಹೆಚ್ಚಾಗಿ ಹಾಕಿದ ಗೊಬ್ಬರ ಸದುಪಯೋಗವಾಗಿ ಹೊಸ ತಳಿಗಳು ಹೆಚ್ಚಿನ ಇಳುವರಿ ನೀಡುತ್ತವೆ.

ಸುಧಾರಿತ ಬೇಸಾಯ ಕ್ರಮಗಳು:

ಕಪ್ಪು ಮಣ್ಣಿನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಳವಾದ ಮಾಗಿ ಉಳುಮೆ ಮಾಡಬೇಕು. ಜುಲೈ ತಿಂಗಳೊಳಗೆ ಎರಡು ಮೂರು ಸಲ ಹರಗಿ, ಜುಲೈ ತಿಂಗಳ ಎರಡನೇ ವಾರದಲ್ಲಿ (ಬಂಡ ಫಾರ್ಮರ್ ಉಪಯೋಗಿಸಿ) ಚೌಕು ಮಡಿಗಳನ್ನು ಮಾಡುವುದರಿಂದ ಮಳೆ ನೀರನ್ನು ಇಂಗಿಸಬಹುದು. ಇದರಿಂದ ಮಣ್ಣಿನ ತೇವಾಂಶ ಹೆಚ್ಚಾಗಿ ಹಾಕಿದ ಗೊಬ್ಬರ ಸದುಪಯೋಗವಾಗಿ ಹೊಸ ತಳಿಗಳು ಹೆಚ್ಚಿನ ಇಳುವರಿ ನೀಡುತ್ತವೆ. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಪ್ರತೀ ಎಕರೆಗೆ 8-12 ಕ್ವಿಂಟಾಲನ್ನು 2-3 ವರ್ಷಕ್ಕೊಮ್ಮೆ ಭೂಮಿಗೆ ಹಾಕಬೇಕು.

ಬೀಜ :- ಉತ್ತಮ ಗುಣಮಟ್ಟದ ಮೂಲ ಅಥವಾ ಪ್ರಾಮಾಣಿಕೃತ (ಸರ್ಟಿಫೈಡ್) ಎಕರೆಗೆ 2.5 ರಿಂದ 3 ಕಿ.ಗ್ರಾಂ ಬೀಜ ಸಾಕುವುದು.

ಬೀಜೋಪಚಾರ:- ಸುಳಿನೊಣದ ನಿಯಂತ್ರಣಕ್ಕಾಗಿ ಪ್ರತಿ ಕಿ.ಗ್ರಾಂ ಬೀಜಕ್ಕೆ ಕ್ಲೋರ್ ಪೈರಿಫಾಸ್ 20 ಇ.ಸಿ. 5 ಮಿಶ್ರಣಮಾಡಿ ಬೀಜೋಪಚಾರ ಮಾಡಬೇಕು. ಫಾಲ್ ಸೈನಿಕ ಹುಳುವಿನ ನಿರ್ವಹಣೆಗಾಗಿ ಪ್ರತಿ ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಕಿ.ಗ್ರಾಂ. ಥೈಯೋಮಿಥಾಕ್ಸಾಮ್ + ಸೈಯಾಂಟ್ರಾನಿಅಸ್ತೋಲ್ @5 ಗ್ರಾಂ. ಬೀಜೋಪಚಾರ ಮಾಡಿರಿ. ಆಮೇಲೆ ಪ್ರತಿ 1.5 ಲೀಟರ್ ನೀರಿಗೆ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡನ್ನು ಬೆರೆಸಿ, ಅದರ ತಿಳಿ ನೀರಿನಲ್ಲಿ ಬೀಜಗಳನ್ನು 8-10 ತಾಸುಗಳ ಕಾಲ ನೆನೆಯಿಸಬೇಕು. ನಂತರ ಬೀಜಗಳನ್ನು ನೆರಳನಲ್ಲಿ ಒಣಗಿಸಿ ಆಮೇಲೆ ಪ್ರತಿ ಕಿ.ಗ್ರಾಂ ಬೀಜಕ್ಕೆ 50 ಗ್ರಾಂ ಅಜೋಸ್ಪಿರಿಲಮ್ ಮತ್ತು 4 ಗ್ರಾಂ ಟ್ರೈಕೋಡರ್ಮಾ ಹಾಗೂ 2 ಗ್ರಾಂ ಗಂಧಕದಿಂದ ಬೀಜೋಪಚಾರ ಮಾಡಬೇಕು.

10.ಅಂತರ ಬೇಸಾಯ:– 3-4 ಸಲ ಎಡೆ ಹೊಡೆಯುವುದು ಸೂಕ್ತ. ಕಳೆ ನಿರ್ವಹಣಿಗಾಗಿ ಜೋಳ ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಎಕರೆಗೆ 0.40 ಕಿ. 50 ಡಬ್ಲ್ಯುಪಿ ಕಳೆನಾಶಕವನ್ನು 300-350 ಲೀಟ‌ ನೀರಿನಲ್ಲಿ ಬೆರಸಿ ತೇವಾಂಶದಿಂದ ಕೂಡಿದ ಮಣ್ಣಿನ ಮೇಲೆ ಸಿಂಪಡಿಸಬೇಕು.

11 .ಸಸ್ಯ ಸಂರಕ್ಷಣೆ:– ಸುಳಿನೊಣದ ಬಾಧಿತ ಗಿಡಗಳು ಸಸಿಯ ಅವಸ್ಥೆಯಲ್ಲಿ ಸುಳಿಬಾಗಿ ಸಾಯುತ್ತವೆ, ಜಿಗಿಹುಳು ಹಾಗೂ ಸುಗಣಿಗಳು, ಎಲೆಗಳಿಂದ ರಸಹೀರಿ ಎಲೆಗಳ ಮೇಲೆ ಜಿಗುಟಾದ ಸಿಹಿ ಪದಾರ್ಥವನ್ನು ಸ್ರವಿಸುವುದರಿಂದ ಮೇವಿನ ಗುಣಮಟ್ಟ ಕಡಿಮೆಯಾಗುತ್ತದೆ.

ಫಾಲ್ ಸೈನಿಕ ಹುಳು :– ಕೀಡೆ ಸುಳಿಯನ್ನು ಸೇರಿ ಎಲೆಯನ್ನು ತಿನ್ನುವದರಿಂದ ಎಲೆಗಳಲ್ಲಿ ಅಡ್ಡಡ್ಡಾಗಿ ಸಾಲಾಗಿ ರಂಧ್ರಗಳು ಹಾಗೂ ಸುಳೆಯಲ್ಲಿ ಕೀಡೆಯ ಲದ್ದಿಯು ಕಾಣುತ್ತದೆ.

ನಿರ್ವಹಣೆ:– 5 ಮಿ.ಲೀ. ಕ್ಲೋರಪೈರಿಫಾಸ್ 20 ಇ.ಸಿ. ಕೀಟನಾಶಕವನ್ನು 30 ಮಿ.ಲೀ ನೀರಿನಲ್ಲಿ ಬೆರೆಸಿ ಬೀಜಕ್ಕೆ ಲೇಪನ ಮಾಡಿ ಒತ್ತಿರಿ. ಕಾಂಡ ಕೊರೆಯುವ ಹಾಗೂ ಇತರೇ ರಸ ಹೀರುವ ಕೀಟಗಳ ನಿರ್ವಹಣೆಗೆ 0.50 ಮಿ.ಲೀ/ಅ ಸೈಪರಮೆಗ್ರಿನ್ ಕೀಟನಾಶಕವನ್ನು ಸಿಂಪಡಿಸಿ ಅಥವಾ ಪ್ರತಿ ಕಿ.ಗ್ರಾಂ ಥೈಯೋಮಿಥಾಕ್ಸಾಮ್ + ಸೈಯಾಂಟ್ರಾನಿಪ್ರೋಲ್ @ 5 ಗ್ರಾಂ. ಬೀಜೋಪಚಾರ ಮಾಡಿ, 30 ದಿನಗಳ ನಂತರ ಸಿಂಪರಣೆಯಾಗಿ 0.30 ಮಿ.ಲೀ. ಕ್ಲೋರಾಂಟ್ರಾನಿಮ್ರಲ್ ಅಥವಾ 0.50 ಮಿ.ಲೀ. ಸ್ಪೈನೋಟೀರಂ ಮಾಡಿರಿ.

Related Post

Leave a Reply

Your email address will not be published. Required fields are marked *