ಕೊಪ್ಪಳ ತೋಟಗಾರಿಕೆ ಇಲಾಖೆ(ಜಿ.ಪಂ) ವತಿಯಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಕೊಪ್ಪಳ ಜಿಲ್ಲೆಯ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ-2024 (ರೈತರಿಂದ ನೇರ ಗ್ರಾಹಕರಿಗೆ)ವನ್ನು ಮಾರ್ಚ್ 06 ರಿಂದ 09 ರವರೆಗೆ ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಜೇನು ಮತ್ತು ಹಣ್ಣುಗಳ ಮೇಳವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟಿಸುವರು. ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಕರಡಿ ಸಂಗಣ್ಣ, ಗಂಗಾವತಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ ಪಾಲ್ಗೊಳ್ಳುವರು ಅಧ್ಯಕ್ಷರಾದ ರಸೂಲ್‌ಸಾಬ್ ದನ್ನೂರ, ಕೊಪ್ಪಳ ರೈತ ಜಾಗೃತಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ರಾಹುಲ್ ರೆಡ್ಡಿ, ಕನಕಗಿರಿಯ ರೈತ ಜೀವ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಶರಣೇಗೌಡ, ಕನಕಗಿರಿ ತಪಸ್ಸು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಜಾಡಿ, ಕುಷ್ಟಗಿಯ ಸ್ನೇಹಿತರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಪಾಟೀಲ ಅವರು ಉಪನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಜೆ.ಶಂಕರಪ್ಪ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಕಾನ್ಸಟೇಬಲ್ ಹುದ್ದೆ ಪರೀಕ್ಷಾ ಪೂರ್ವ ತರಬೇತಿ
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವಿಜಯಪುರ ವತಿಯಿಂದ “ಸ್ಪಡಿ ಸರ್ಕಲ್ಸ್” ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಪೋಲೀಸ್ ಕಾನ್ಸೆಬಲ್ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಜೇರಿ ಕರಿಯರ್ ಅಕಾಡಮಿ, ನಾಗಪಾಲ ಬಿಲ್ಡಿಂಗ್ ಸೌರಭ ಫಾರ್ಮಾ ಎದುರಿಗೆ, ಮಿನಾಕ್ಷಿ ಚೌಕ, ವಿಜಯಪುರದಲ್ಲಿ ದಿನಾಂಕ: 04-03- 2024 ರಿಂದ 16-03-2024ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮಕ್ಕನುಸಾರವಾಗಿ ಉಚಿತ ತರಬೇತಿ ಆಯೋಜಿಸಲಾಗಿದೆ.
ಉಚಿತ ತರಬೇತಿಗೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು, ಕೆ.ಎಸ್.ಪಿ. ನಲ್ಲಿ ಅಧಿಸೂಚಿತ ಪೋಲೀಸ್ ಕಾನ್ಸಬಲ್ ಹುದ್ದೆಗೆ ಸಲ್ಲಿಸಿದ ತಮ್ಮ ಅರ್ಜಿಯ ಪ್ರತಿ(ಝರಾಕ್ಸ್) ಹಾಗೂ ಆಧಾರ ಕಾರ್ಡ ಪ್ರತಿ(ಝರಾಕ್ಸ್)ಯೊಂದಿಗೆ ದಿನಾಂಕ: 04-03-2024 ರ ಒಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವಿಜಯಪುರದಲ್ಲಿ ಖುದ್ದಾಗಿ ಸಲ್ಲಿಸಿ ಅಥವಾ ಕಚೇರಿಯ ಇ-ಮೇಲ್ ವಿಳಾಸಕ್ಕೆ empbjp@gmail.com ಕಳುಹಿಸಿ ನೋಂದಾಯಿಸಿಕೊಳ್ಳಬಹುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ಲಾಟ್ ನಂ.55, ಕೆ.ಎಚ್.ಬಿ. ಕಾಲೋನಿ, ಸರ್ಕಾರಿ ಪ್ರಾಥಮಿಕ ಶಾಲೆ ನಂ.24 ಹತ್ತಿರ ಸೋಲಾಪೂರ ರಸ್ತೆ, ವಿಜಯಪುರ ಅಥವಾ ದೂರವಾಣಿ ಸಂಖ್ಯೆ 08352-250383, 9071055557/9341777757 ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
JOBS