ಎಮ್ಮೆಗಳಲ್ಲಿ ಗರ್ಭಧರಿಸುವಿಕೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು
೧. ಉತ್ತಮ ಗುಣಮಟ್ಟದ ಮೇವು ಒದಗಿಸುವುದು,
ಉತ್ತಮ ಗುಣಮಟ್ಟದ ಹಸಿರು ಮೇವು ಮತ್ತು ದಾಣಿ ಮಿಶ್ರಣಗಳನ್ನು ಒದಗಿಸುವುದರಿಂದ ವರ್ಷಕ್ಕೊಂದು ಕರು ಪಡೆಯಬಹುದು.
೨. ಬೆದೆ ಗುರುತಿಸುವಿಕೆ
ಎಮ್ಮೆಯಲ್ಲಿ ಬೆದೆಯ ಲಕ್ಷಗಳು, ಆಕಳುಗಳಲ್ಲಿರುವಂತೆ ಸ್ಪಷ್ಟವಾಗಿಲ್ಲದ್ದರಿಂದ ಬೆದೆ ಗುರುತಿಸಲು ಕೆಳಗಿನ ಅಂಶಗಳು ಸಹಾಯಕಾರಿಯಾಗುತ್ತವೆ.
ಅ. ಉತ್ತಮ ಕಾಮೋದ್ರೇಕದ ಟೀಜರ್ ಕೋಣವನ್ನು ಪ್ರತಿ ೪ ತಾಸುಗಳಿಗೊಮ್ಮೆ
ಎಮ್ಮೆಯ ಹತ್ತಿರ ಬಿಟ್ಟು ಬೆದೆಗೆ ಬಂದಿದೆ ಎಂಬುದನ್ನು ಗುರುತಿಸುವುದು.
ಆ) ನುರಿತ, ಪ್ರಾಮಾಣಿಕ ಮತ್ತು ತರಬೇತಿಯನ್ನು ಪಡೆದ ವ್ಯಕ್ತಿಯನ್ನು ಬೆದೆ ಗುರುತಿಸಲು ನೇಮಿಸಬೇಕು.
ಇ) ಸಾಯಂಕಾಲ ೬ ಗಂಟೆಯಿಂದ ಮುಂಜಾನೆ ೬ ಗಂಟೆಯವರೆಗೆ ಹೆಚ್ಚಿನ ಗಮನ ಹರಿಸಬೇಕು. ಏಕೆಂದರೆ ಪ್ರತಿಶತ ೮೪ ರಷ್ಟು ಎಮ್ಮೆಗಳು ರಾತ್ರಿಯ ವೇಳೆಯಲ್ಲಿ ಬೆದೆಗೆ ಬರುತ್ತವೆ.
ಈ )ಎಮ್ಮೆಗಳು ಮಲಗಿದಾಗ ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಮಾಡುವುದು ಮತ್ತು ಯೋನಿಯಿಂದ ಲೋಳೆ ಬೀಳುವುದನ್ನು ಗಮನಿಸಬೇಕು.
೩. ಗರ್ಭಧಾರಣೆ ಮಾಡಿಸಲು ನಿರ್ದಿಷ್ಟ ಅವಧಿ
ಎಮ್ಮೆಗಳಲ್ಲಿ ಬೆದೆಯ ಅವಧಿ ಹೆಚ್ಚು ಆಗಿರುವುದರಿಂದ ಬೆದೆಯ ಲಕ್ಷಣಗಳು ಕಂಡು ಬಂದ ೧೪ ರಿಂದ ೨೦ ಗಂಟೆಯ ಅವಧಿಯಲ್ಲಿ ಗರ್ಭಧಾರಣೆ ಮಾಡಿಸಬೇಕು. ದಿನಕ್ಕೆ ಎರಡು ಸಲ ಕೋಣ ಹಾರಿಸುವುದು/ ಕೃತಕ ಗರ್ಭಧಾರಣೆ ಮಾಡಿಸುವುದರಿಂದ ಗರ್ಭ ಧರಿಸುವದನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿ ಬೆರೆಗೆ ಬಂದ ಎಮ್ಮೆಗಳನ್ನು ಮರುದಿನ ಮುಂಜಾನೆ ಮತ್ತು ಸಾಯಂಕಾಲದ ವೇಳೆಯಲ್ಲಿ ಹಾಗೂ ಹಗಲು ಅವಧಿಯಲ್ಲಿ ಬೆದೆಗೆ ಬಂದ ಎಮ್ಮೆಗಳಿಗೆ ಅದೇ ದಿನ ಸಾಯಂಕಾಲ ಮತ್ತು ಮರುದಿನ ಮುಂಜಾನೆ ಕೋಣ ಬಿಡಬೇಕು / ಕೃತಕ ಗರ್ಭಧಾರಣೆ ಮಾಡಿಸಬೇಕು.
೪. ಬೇಸಿಗೆಯಲ್ಲಿ ಎಮ್ಮೆಗಳ ಬೆದೆ ನಿರ್ವಹಣೆ
ಎಮ್ಮೆಗಳು ಬೇಸಿಗೆಯಲ್ಲಿ ಬೆದೆಗೆ ಬಂದಾಗ ಆ ವೇಳೆಯಲ್ಲಿ ಗರ್ಭಕಟ್ಟಿಸುವುದರಿಂದ ಹಾಲು ಉತ್ಪಾದನೆಯನ್ನು ಮುಂದಿನ ಬೇಸಿಗೆಯಲ್ಲಿ ಹೆಚ್ಚಿಸಲು ಉಪಯೋಗಕಾರಿ, ಇದಕ್ಕೆ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
ಬೇಸಿಗೆಯಲ್ಲಿ ಎಮ್ಮೆಗಳನ್ನು ಹೊಂಡದಲ್ಲಿ ಈಜಾಡಲು ಬಿಡುವುದರಿಂದ ಬಿಸಿಲಿನ ತಾಪ ಕಡಿಮೆಯಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಕ್ರಮವಾಗಿ ಬೆದೆಗೆ ಬರಲು ಸಹಾಯಕಾರಿಯಾಗುತ್ತದೆ. ಬೇಸಿಗೆಯಲ್ಲಿ ಕೃತಕ ಗರ್ಭಧಾರಣೆ ಮಾಡಿಸಿದ ನಂತರ ತಣ್ಣೀರಿನಿಂದ ಮೈತೊಳೆದು ಕೊಟ್ಟಿಗೆ ನೆರಳಿನಲ್ಲಿ ಕಟ್ಟುವುದರಿಂದ ಗರ್ಭಧರಿಸುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಔಷಧೋಪಚಾರದಿಂದ ಎಮ್ಮೆಗಳು ಬೆದೆಗೆ ಬರುವಂತೆ ಮಾಡಿಸಲು ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಬೇಕು.
೫. ಕರು ಹಾಕಿದ ನಂತರ ಬೆದೆಗೆ ಬಾರದೇ ಇರುವುದನ್ನು ನಿಯಂತ್ರಿಸುವದು
ಕರು ಹಾಕಿದ ನಂತರ ಬೆದೆಯ ಚಕ್ರದಲ್ಲಿ ಬೆದೆಯ ಪುನರಾರಂಭ ಕಂಡು ಹಿಡಿಯುವುದು ಪ್ರಮುಖ ಸಮಸ್ಯೆಯಾಗಿದೆ. ಕೆಲವು ಸಮಯಗಳಲ್ಲಿ ದನಗಳು ಮೂಕ ಬೆದೆಯನ್ನು ತೋರಿಸಬಹುದು. ಇಂತಹ ಬೆದೆಯನ್ನು ಗುರುತಿಸಲು ಅವುಗಳ ಹಿಂಬೆನ್ನಿನ ಮೇಲೆ ಎರಡು ಕೈಗಳಿಂದ ಅದುಮಿದರೆ ಅವು ಸುಮ್ಮನೆ ನಿಂತುಕೊಳ್ಳುತ್ತವೆ ಮತ್ತು ಬಾಲವನ್ನು ಎತ್ತಿ ಒಂದು ಕಡೆ ಹಿಡಿಯುತ್ತದೆ. ಆರೋಗ್ಯವಾಗಿರುವಂತಹ ಎಮ್ಮೆಗಳು ೨೧ ದಿವಸಗಳಿಗೆ ಒಮ್ಮೆ ಬೆದೆಗೆ ಬರುತ್ತಿರುತ್ತವೆ. ಈ ಬೆದೆಯು ಗರ್ಭ ಧರಿಸಿದ ನಂತರ ಅಥವಾ ಗರ್ಭಕೋಶಕ್ಕೆ ರೋಗ ತಗುಲಿದ್ದರೆ ಕಾಣಿಸಿಕೊಳ್ಳುವುದಿಲ್ಲ. ಎಮ್ಮೆಗಳಿಗೆ ಕರು ಹಾಕಿದ ೩ ತಿಂಗಳ ನಂತರ ಬರುವ ಬೆದೆಯಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು ಅಥವಾ ಕೋಣವನ್ನು ಹಾರಿಸಬೇಕು. ಕರುವನ್ನು ಬೇಗನೆ ಬೇರ್ಪಡಿಸುವುದು ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಬೆದೆಯ ಚಕ್ರ ಪುನರಾರಂಭಿಸಲು ಸಹಾಯಕಾರಿಯಾಗುತ್ತದೆ. ಇದರ ಔಷಧೋಪಚಾರದ ನಿರ್ವಹಣೆಗಾಗಿ ರೈತರು ಹತ್ತಿರದ ಪಶುವೈದ್ಯರನ್ನು ಕಾಣಬೇಕು.
ಜಾನುವಾರುಗಳಲ್ಲಿ ಕರು ಹಾಕುವ ಲಕ್ಷಣಗಳು ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆಗಳು ಕರು ಹಾಕುವ ಒಂದು ತಿಂಗಳ ಮುಂಚೆಯೇ ಗರ್ಭ ಧರಿಸಿದ ದನಗಳನ್ನು ಸ್ವಚ್ಛವಾಗಿರುವ ಮತ್ತು ಜಾರದೆ ಇರುವಂತಹ ಕದು ಹಾಕುವ ಜಾಗಕ್ಕೆ ಬದಲಾಯಿಸಬೇಕು. ಈ ಜಾಗಕ್ಕೆ ಮೆತ್ತಗೆ ಇರುವ ಹುಲ್ಲನ್ನು ಹಾಸಬೇಕು. ಕರು ಹಾಕುವ ಒಂದು ವಾರದ ಮುಂಚೆಯೇ ಯೋನಿಯ ತುಟಿಗಳು ದಪ್ಪವಾಗಿ ಊದಿಕೊಂಡಿರುತ್ತವೆ ಮತ್ತು ಚಪ್ಪೆಯ ಎಲಬುಗಳು ಸಡಿಲವಾಗುತ್ತವೆ. ಕೆಲವು ದನಗಳಿಗೆ ತುಂಬುಗರ್ಭದಲ್ಲಿ ಕೆಚ್ಚಲಿನಿಂದ ಹಾಲು ಸೋರಿ ಹೋಗುವುದು. ಇಂತಹ ದನಗಳಿಗೆ ಪಶು ಆಹಾರ ಮತ್ತು ಹಸಿರು ಹುಲ್ಲನ್ನು ನಿಲ್ಲಿಸಿ ಕುಡಿಯುವ ನೀರನ್ನು ಕಡಿಮೆ ಪ್ರಮಾಣದಲ್ಲಿ ಕೊಡಬೇಕು, ಕರು ಹಾಕಲಿರುವ ದನಗಳನ್ನು ದಿನಕ್ಕೆ ೨ ಕಿ. ಮೀ., ದೂರ ತಿರುಗಾಡಿಸಿ ವ್ಯಾಯಾಮ ನೀಡಬೇಕು. ಅಥವಾ ಅವುಗಳನ್ನು ಉದ್ದನೆಯ ಹಗ್ಗದಿಂದ ಕಟ್ಟಿದರೆ ಅವು ಅಲ್ಲಿಯೇ ತಿರುಗಾಡಿ ಸಾಕಷ್ಟು ವ್ಯಾಯಾಮವನ್ನು ಪಡೆದುಕೊಳ್ಳುತ್ತವೆ. ಇದರಿಂದಾಗಿ ಕರು ಹಾಕುವಾಗ ಅವುಗಳಿಗೆ ಹೆಚ್ಚು ತೊಂದರೆಯಾಗುವುದಿಲ್ಲ.
ನೀರು ಸೇರಿಕೊಳ್ಳಬಹುದು. ಇಂತಹ ದನಗಳಿಗೆ ಉಪ್ಪು ಕೊಡುವುದನ್ನು ಕಡಿಮೆ ಮಾಡಬೇಕು. ಮತ್ತು ಕರು ಹಾಕಿದ ನಂತರ ದಿನಕ್ಕೆ ೩-೪ ಬಾರಿ ಹಿಂಡಬೇಕಾಗುತ್ತದೆ.
ಕರು ಹಾಕುವ ಸಮಯ ಬಂದಾಗ ದನಗಳು ಪದೇ ಪದೇ ಮಲಗುತ್ತವೆ ಮತ್ತು ಏಳುತ್ತವೆ. ಹೊಟ್ಟೆಯ ಕಡೆ ನೋಡುತ್ತವೆ ಮತ್ತು ಗೊರಸುಗಳಿಂದ ನೆಲವನ್ನು ಕೆರೆಯುತ್ತವೆ. ಈ ಲಕ್ಷಣಗಳು ಎಂಟು ಗಂಟೆಗಳ ಕಾಲ ಕಂಡು ಬರುವವು. ಈ ಸಮಯ ಮುಗಿಯುತ್ತಿದ್ದಂತೆ ಮಡಿಲಿನ ತುಟಿಗಳ ಒಳಗೆ ನೀರು ತುಂಬಿಕೊಂಡಿರುವ ನೀಲಿ ಬಣ್ಣದ ಚೀಲ ಕಂಡು ಬರುತ್ತದೆ. ಇದು ಕಾಣದಿದ್ದಲ್ಲಿ ಗರ್ಭಕೋಶ ಸುರುಳಿ ಸುತ್ತಿಕೊಂಡಿರಬಹುದು ಅಥವಾ ಗರ್ಭಕೋಶದ ಕಂಠ ಸಡಿಲವಾಗಿರದೆ ಇರಬಹುದು. ಈ ಸಂದರ್ಭಗಳಲ್ಲಿ ಪಶುವೈದ್ಯರ ನೆರವನ್ನು ಪಡೆಯಬೇಕು. ಈಯುವ ಕ್ರಿಯೆಯು ಸರಿಯಾದ ರೀತಿಯಲ್ಲಿ ಜರುಗುತ್ತಿದ್ದರೆ ನೀರು ತುಂಬಿಕೊಂಡಿರುವ ನೀಲಿ, ಚೀಲ ಮಾದಲು ಒಡೆಯುತ್ತದೆ. ಇದರ ನಂತರ ನೀರು ತುಂಬಿಕೊಂಡಿರುವ ಹಳದಿ ಚೀಲ ಕರೆಸಿಕೊಳ್ಳುತ್ತದೆ, ಈ ಹಳದಿ ಚೀಲದಲ್ಲಿ ಕರುವಿನ ಅಲುಗಳು ಅಣಿಸಿಕೊಳ್ಳಬಹುದು. ಈ ಚೀಲವು ಒಡೆದ ನಂತರ ಕರುವಿನ ಮುಂಗಾಲು ಮತ್ತು ತಲೆ ಮಡಲಿನ ತುಟಿಗಳಿಂದ ಹೊರಗೆ ಕಾಣಿಸಿಕೊಳ್ಳತ್ತವೆ. ಕರುವು ಅರ್ಧಗಂಟೆಯಿಂದ ನಾಲ್ಕು ಗಂಟೆಯ ಒಳಗಾಗಿ ಹೊರಗೆ ಬರಬೇಕು. ನಾಲ್ಕು ಗಂಟೆಯ ನಂತರವೂ ಮುಂಗಾಲು ಅಥವಾ ಹಿಂಗು ಹೊರಗೆ ಕಾಣಿಸಿಕೊಳ್ಳದಿದ್ದರೆ ಪಶುವೈದ್ಯರ ನೆರವನ್ನು ಪಡೆದುಕೊಳ್ಳಬೇಕು.ದನಗಳು ಕರು ಹಾಕಿದ ನಂತರ ಬಲಹೀನವಾಗಿರುತ್ತವೆ ಮತ್ತು ಅವು ಆ ಸಮಯದಲ್ಲಿ ಗರ್ಭ ಧರಿಸುವ ಮುಂಚಿನ ತೂಕಕ್ಕಿಂತ ಕಡಿಮೆ ತೂಕವಿರುತ್ತವೆ. ಆದರಿಂದಾಗಿ ಈ ಸಮಯದಲ್ಲಿ ಅವಕ್ಕೆ ಒಳ್ಳೆಯ ಪಶು ಆಹಾರ, ಹಸಿರು ಮೇವು ಮತ್ತು ಲವಣ ಮಿಶ್ರಣಗಳನ್ನು ಒದಗಿಸಬೇಕು. ಆಗ ಅವು ೬೦ ದಿವಸಗಳೊಳಗೆ ತನ್ನ ಮೊದಲಿನ ತೂಕವನ್ನು ಪಡೆಯುತ್ತವೆ. ಮತ್ತೆ ಈ ಅವಧಿಯೊಳಗಾಗಿ ಅವು ಜಿದಗೆ ಬರುತ್ತವೆ.
ಈ ಮೇಲ್ಕಂಡ ಸಲಹೆಗಳನ್ನು ಸರಿಯಾಗಿ ಪಾಲಿಸಿದಲ್ಲಿ ದನಗಳಿಂದ ವರ್ಷಕ್ಕೆ ಒಂದು ಕರುವನ್ನು ಪಡೆದು ಹೈನುಗಾರಿಕೆಯನ್ನು ಲಾಭದಾಯಕ ಮಾಡಿಕೊಳ್ಳಬಹುದು.
ಕರುಗಳು ಮತ್ತು ಮಣಕಗಳ ಪಾಲನೆ
ಹುಟ್ಟಿದ ಕರುಗಳ ಪೋಷಣೆ ಮತ್ತು ನಿರ್ವಹಣೆ ಸರಿ ಇಲ್ಲದಿದ್ದಲ್ಲಿ ಎರಡರಿಂದ ಮೂರು ತಿಂಗಳ ಅವಧಿಯಲ್ಲಿಯೇ ಶೇ. ೬೦ ರಿಂದ ೭೦ ರಷ್ಟು ಕರುಗಳು ಸಾಯುತ್ತವೆ ಮತ್ತು ಉಳಿದಂಥ ಕರುಗಳಿಗೆ ಸರಿಯಾದ ಸಮತೋಲನ ಆಹಾರ ಸಿಗದೇ ಹೋದಲ್ಲಿ ಬೆಳವಣಿಗೆ ಕುಂಠಿತಗೊಂಡು ಇಂತಹ ಮಣಕಗಳು ಸರಿಯಾದ ವಯಸ್ಸಿಗೆ ಬೆದೆಗೆ ಬರುವುದಿಲ್ಲ. ಆದ್ದರಿಂದ ವೈಜ್ಞಾನಿಕ ಪದ್ಧತಿಯ ಕರುವಿನ ಪಾಲನೆ ತಾಯಿಯ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ.
ತಾಯಿಯ ಗರ್ಭದಲ್ಲಿನ ಕರುವಿನ ಪಾಲನೆ
ಸಾಮಾನ್ಯವಾಗಿ ಹೈನುಗಾರರು. ಕರುವಿನ ಪೋಷಣೆಯನ್ನು ಕರು ಹುಟ್ಟಿದ ಮೇಲೆ ಪ್ರಾರಂಭಿಸುತ್ತಾರೆ. ಆದರೆ ನಿಜವಾಗಿಯೂ ಕರುವಿನ ಪಾಲನೆ ತಾಯಿಯ ಗರ್ಭದಲ್ಲಿದ್ದಾಗಲೇ ಪಾರಂಭವಾಗುವದು. ತಾಯಿಯ ಗರ್ಭದ ೬ನೆಯ ತಿಂಗಳದ ನಂತರ ಬೆಳವಣಿಗೆ ಬಹಳ ರಭಸದಿಂದ ಆಗುತ್ತದೆ. ಇದಕ್ಕಾಗಿ ತಾಯಿಗೆ ಮತ್ತು ಬೆಳೆಯುತ್ತಿರುವ ಕರುವಿನ ಬೆಳವಣಿಗೆಗಾಗಿ ಸರಿಯಾದ ಸಮತೋಲನ ಆಹಾರ ಒದಗಿಸಬೇಕು, ತಾಯಿಗೆ ಒಂದರಿಂದ ಎರಡೂವರೆ ಕಿ. ಗ್ರಾಂ ಹೆಚ್ಚಿಗೆ ದಾಣಿ ಮಿಶ್ರಣವನ್ನು ಅವಶ್ಯವಾಗಿ ಕೊಡಬೇಕು. ತಾಯಿಯು ೬ ನೆಯ ತಿಂಗಳ ಗರ್ಭಾವಸ್ಥೆಯಲ್ಲಿರುವಾಗ ಜಂತು ನಿವಾರಕ ಔಷಧಿಯನ್ನು ಪಶುವೈದ್ಯರ ಸಲಹೆ ಮೇರೆಗೆ ಹಾಕಬೇಕು. ಏಕೆಂದರೆ ಅದೇ ತಾನೆ ಹುಟ್ಟಿದ ಕರು ತನ್ನ ತಾಯಿಯ ದೇಹದಿಂದ ಜಂತುಗಳನ್ನು ಪಡೆದುಕೊಳ್ಳುವ ಸಂಭವವಿರುತ್ತದೆ. ಸಾಮಾನ್ಯವಾಗಿ ಶೇ. ೪೦ ರಿಂದ ೫೦ ರಷ್ಟು ಕರುಗಳ ಸಾವು ಜಂತುವಿನ ಬಾಧೆಯಿಂದ ಆಗುತ್ತದೆ. ದನಗಳು ದುರ್ಬಲಗೊಂಡು ಕರು ಹಾಕುವಾಗ ತೊಂದರೆ ಆಗಬಹುದು ಮತ್ತು ಕರು ಹಾಕಿದ ಮೇಲೆ ಹಾಲಿನ ಪ್ರಮಾಣ ಕಡಿಮೆಯಾಗುವದು.
ಕರುಗಳ ಜೋಪಾನ
ರೈತರು ಉತ್ತಮ ತಳಿಯ ದನಗಳ ಹಿಂಡನ್ನು ಹೆಚ್ಚಿಸಬೇಕಾದರೆ ಮಾರುಕಟ್ಟೆಯಿಂದ ಹಸು ಖರೀದಿ ಮಾಡುವುದಕ್ಕಿಂತ ತಮ್ಮಲ್ಲಿಯೇ ಹುಟ್ಟಿ ಬೆಳೆಸಿದ ಕರುವನ್ನು ಸರಿಯಾಗಿ ಪಾಲನೆ ಮಾಡಿದರೆ ಅದು ಮುಂದೆ ಉತ್ತಮ ಹಾಲು ಕೊಡುವ ಹಸು ಆಗುವುದಲ್ಲದೇ, ಇತರೇ ಲಾಭಾಂಶಗಳು ಕೆಳೆಗಿನಂತಿವೆ.
- ತಮ್ಮಲ್ಲಿಯೇ ಹುಟ್ಟುವಂತಹ ಮಿಶ್ರತಳಿ, ಎಮ್ಮೆ ಕರುಗಳ ಸಂಕಿರಣದ ಗುಣಮಟ್ಟ ಮತ್ತು ಹಾಲು ಕೊಡುವ ಸಾಮರ್ಥ್ಯದ ಬಗ್ಗೆ ಅಂದಾಜು ಸಿಗುವುದು. ಕರುವಿನ ಸರಿಯಾದ ಪಾಲನೆ ಪೋಷಣೆಯೇ, ಮುಂದೆ ಅದರ ಹಾಲು ಕೊಡುವ ಸಾಮರ್ಥ್ಯಕ್ಕೆ ಬುನಾದಿಯಾಗಿರುತ್ತದೆ.
ಹುಟ್ಟಿದ ಕರುವಿನ ಪಾಲನೆ
ಕರು ಹುಟ್ಟಿದ ಮೊದಲ ಘಂಟೆಯಲ್ಲಿ ಅತ್ಯವಶ್ಯವಾಗಿ ಮಾಡಬೇಕಾದ ನಿರ್ವಹಣೆಯ ಕಾರ್ಯಗಳು,
- ಕರು ಹುಟ್ಟಿದ ಕೂಡಲೇ ಅದರ ಬಾಯಿ, ಮೂಗು ಮತ್ತು ದೇಹವನ್ನು ಸ್ವಚ್ಛ ಮಾಡಬೇಕು.
*ಹೊಕ್ಕಳ ಹುರಿಯನ್ನು ದೇಹದಿಂದ ೧.೫ ಯಿಂದ ೨ ಅಂಗುಲ ಬಿಟ್ಟು ತುಕ್ಕು ರಹಿತ ಹರಿತವಾದ ಉಪಕರಣದಿಂದ ಕತ್ತರಿಸಬೇಕು. ನಂತರ ಆ ಸ್ಥಳಕ್ಕೆ ಟಿಂಕ್ಚರ್ ಆಯೋಡಿನ್ ದ್ರಾವಣವನ್ನು ಲೇಪಿಸಿ ದಾರದಿಂದ ಕಟ್ಟಬೇಕು. ಹುಟ್ಟಿದ ಕರುವಿನ ಕಾಲುಗಳ ಕೊಳಗದ ಮುಂತುದಿಯನ್ನು ಸಮನಾಗಿ ಕತ್ತರಿಸಬೇಕು. - ಕರುಗಳನ್ನು ಶ್ವಾಸಕೋಶದ ರೋಗ (ನ್ಯೂಮೋನಿಯಾ) ಬರದಂತೆ ಮಳೆ ಮತ್ತು ಚಳಿಯಿಂದ ರಕ್ಷಿಸಿ ಬೆಚ್ಚಗಿಡಬೇಕು.
ಕರು ಹುಟ್ಟಿದ ಅರ್ಧ ಗಂಟೆಯೊಳಗೆ ಗಿಣ್ಣದ ಹಾಲನ್ನು ಕುಡಿಸಲೇಬೇಕು. ಏಕೆಂದರೆ ಹುಟ್ಟಿದ ಕರುವಿಗೆ ರೋಗ ನಿರೋಧಕ ಶಕ್ತಿ ಇರುವದಿಲ್ಲ. ಹುಟ್ಟಿದ ಅರ್ಧ ಗಂಟೆಯೊಳಗೆ ಗಿಣ್ಣದ ಹಾಲು ಕುಡಿಸಿದಾಗ ಅದು ಪಚನವಾಗದೆ ಹಾಗೆ ಸಂಪೂರ್ಣವಾಗಿ ಅನ್ನನಾಳದ ಮುಖಾಂತರ ರಕ್ತದಲ್ಲಿ ಸೇರಿಕೊಂಡು ಕರುವಿಗೆ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಗಿಣ್ಣದ ಹಾಲಿನಲ್ಲಿ ಪ್ರತಿಶತ ೯೦ ರಷ್ಟು ರೋಗ ನಿರೋಧಕ ಶಕ್ತಿಯನ್ನು ಕೊಡುವ ಅಂಶಗಳಾದ ಗ್ಯಾಮಾ ಗ್ಲೋಬ್ಯುಲಿನ್‌ಗಳು ಇರುತ್ತವೆ.
ಆ. ಮಣಕಗಳ ಪಾಲನೆ
ಮಣಕಗಳು ಬಹು ಬೇಗನೆ ಸರ್ವತೋಮುಖ ಬೆಳವಣಿಗೆ ಹೊಂದಿ ಗರ್ಭ ಕಟ್ಟಿಕೊಂಡು ಕರು ಹಾಕಿ, ಹಾಲು ಕೊಡುವಂತೆ ನಿರ್ವಹಣೆ ಮಾಡಬೇಕು.
ಮಣಕಗಳ ಸಮತೋಲನ ಆಹಾರ
ಮಣಕಗಳ ಆಹಾರದಲ್ಲಿ ಮೊದಲನೆಯ ಆದ್ಯತೆ ಬೆಳವಣಿಗೆ ಹೆಚ್ಚಿಸುವಂತಹ ಪೌಷ್ಟಿಕಾಂಶಗಳನ್ನೊಳಗೊಂಡ ಸಮತೋಲನ ಆಹಾರ ಕೊಡಬೇಕು. ಅಂದರೆ ಪ್ರತಿದಿನ ೧-೧2 ಕಿ. ಗ್ರಾಂ ದಾಣಿ ಮಿಶ್ರಣ ಹಾಗೂ ಹೊಟ್ಟೆ ತುಂಬಾ ಒಳ್ಳೆಯ ಹಸಿರು ಮೇವು ಅಥವಾ ಒಣ ಮೇವನ್ನು ಕೊಡಬೇಕು ಮತ್ತು ಯಾವಾಗಲೂ ಸಾಕಷ್ಟು ಶುದ್ಧ ಕುಡಿಯುವ ನೀರಿನ ಲಭ್ಯತೆ ಇರಬೇಕು. ಮಣಕಗಳು ಅತೀ ಹೆಚ್ಚಿನ ಆಹಾರ ಸೇವಿಸಿ, ಅವು ಕೊಟ್ಟದಂತೆ ನೋಡಿಕೊಳ್ಳಬೇಕು, ಇದರಿಂದ ಸಂತಾನೋತ್ಪತ್ತಿಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಬೆಡಗೆ ಬ೦ದ ಮಣಕಗಳನ್ನು ಗರ್ಭ ಕಟ್ಟಿಸುವ ಮಾಹಿತಿಯನ್ನು ಕೃತಕ ಗರ್ಭಧಾರಣೆ ಆಧ್ಯಾಯದಲ್ಲಿ ನೀಡಲಾಗಿದೆ.