ಆತ್ಮೀಯ ರೈತ ಬಾಂಧವರೇ,
ಈಗಾಗಲೇ ಬೆಳೆ ವಿಮೆ ಕಟ್ಟುವ ದಿನಾಂಕವನ್ನು ಸರ್ಕಾರ ಬಿಡುಗಡೆ ಮಾಡಿದ್ದು ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು ಎನ್ನುವುದರ ಸಂಪೂರ್ಣ ಮಾಹಿತಿ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಬಹುದು. ಈ ಬೆಳೆ ವಿಮೆ ಮುಂಗಾರು ಸೀಸನ್ ಗೆ ಆದಲ್ಲಿ ನೀವು ಬೆಳೆಯುತ್ತಿರುವ ಬೆಳೆಯ 2% ಹಾಗೂ ಹಿಂಗಾರು ಸೀಸನ್ ನಲ್ಲಿ ಬೆಳೆಯುತ್ತಿದ್ದಲ್ಲಿ ನೀವು ಬೆಳೆಯುತ್ತಿರುವ ಬೆಳೆಯ 1.5% ಹಣವನ್ನು ಬೆಳೆಬಿಮೆಯಾಗಿ ಕಟ್ಟುತ್ತೀರಾ. ಅಂತೆಯೇ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದಲ್ಲಿ 5% ಹಣವನ್ನು ಕಟ್ಟಬೇಕು. ಹಾಗಾದರೆ ಯಾವ ಬೆಳೆಗೆ ಎಷ್ಟು ಎಷ್ಟು ಹಣವನ್ನು ಬೆಳೆವಿಮೆ ಆಗಿ ಕಟ್ಟಬೇಕೆಂದು ಈ ಕೆಳಗೆ ತಿಳಿಯೋಣ.
ಹಂತ 1 – ಮೊದಲಿಗೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಪ್ರೆಸ್ ಮಾಡಿದ ನಂತರ
https://samrakshane.karnataka.gov.in
ನಿಮಗೆ ಈ ಪುಟವು ದೊರೆಯುತ್ತದೆ. ಆಮೇಲೆ kharif ಮೇಲೆ ಕ್ಲಿಕ್ ಮಾಡಿ.
ಹಂತ 2 – ನಂತರ ಫಾರ್ಮರ್ಸ್ ಕಾಲಂನಲ್ಲಿ crops you can insure ಎಂದು ಕಾಣುತ್ತಿರುವ ಶಬ್ದಗಳ ಮೇಲೆ ಕ್ಲಿಕ್ ಮಾಡಿ.
ಹಂತ 3 – ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ನಿಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿ. ಮುಂದೆ ಎಂದು ಕೊಡಿ.
ಹಂತ 4 – ನಂತರ ನಿಮ್ಮ ಜಿಲ್ಲೆಯಲ್ಲಿ ಮತ್ತು ನಿಮ್ಮ ಗ್ರಾಮದಲ್ಲಿ ಯಾವ ಯಾವ ಬೆಳೆಗೆ ಎಷ್ಟು ಎಷ್ಟು ಹಣವನ್ನು ಕಟ್ಟಬೇಕೆಂದು ಅಲ್ಲಿ ನೀಡುತ್ತಾರೆ ಅದನ್ನು ಗಮನಿಸಿ ಅದನ್ನು ಗಮನಿಸಿದ ನಂತರವೇ ನೀವು ಬೆಳೆ ವಿಮೆಯನ್ನು ಕಟ್ಟಿರೆ ಅಥವಾ ಬೇರೆ ಬೆಳೆ ವಿಮೆಯ ಹಣವನ್ನು ನೀವು ಕಟ್ಟಿ ಮೋಸ ಹೋಗಬೇಡಿ.
ಈಗಾಗಲೇ ಶೇಕಡಾ 70ರಷ್ಟು ರೈತರಿಗೆ ಬೆಳೆ ಹಾನಿ ಪರಿಹಾರದ ಹಣವು ಜಮಾ ಆಗಿದೆ ಇನ್ನೂ 30% ರೈತರಿಗೆ ಇನ್ನು ಕೂಡ ಹಣ ಜಮವಾಗಿಲ್ಲ. ನೀವು ಬೆಳೆ ಹಾನಿ ಪರಿಹಾರದ ಹಣ ಬಾರದೇ ಸಂಕಷ್ಟ ಪೀಡಿತರಾಗಿದ್ದೀರಾ? ನೀವು ಎಷ್ಟೇ ಕಚೇರಿಗೆ ತಿರುಗಾಡಿದರು ಕೂಡ ನಿಮಗೆ ಹಣ ದೊರಕುತ್ತಿಲ್ಲವೇ? ಹಾಗಾದರೆ ನೀವು ಈ ಕೆಳಗಿನ ತಪ್ಪುಗಳನ್ನು ಮಾಡಿರುತ್ತೀರಾ. ಅಥವಾ ಈ ಕೆಳಗಿನ ಯಾವುದಾದರೂ ಒಂದು ಭಾಗದಲ್ಲಿನ ಪಟ್ಟಿಗೆ ನೀವು ಸೇರಿರುತ್ತೀರಾ. ಈ ತಪ್ಪನ್ನು ಈ ಕೂಡಲೇ ಸರಿಪಡಿಸಿಕೊಳ್ಳಿ. ಹಾಗಾದರೆ ಸರಿಪಡಿಸಿಕೊಳ್ಳುವುದು ಹೇಗೆ ಎಂದು ಆಲೋಚಿಸುತ್ತೀರಾ ಹಾಗಾದರೆ ಈ ಕೆಳಗಿನ ಮಾಹಿತಿಯನ್ನು ಗಮನವಿಟ್ಟು ಓದಿ ತಿಳಿದುಕೊಳ್ಳಿರಿ ಮತ್ತು ಬೆಳೆ ಹಾನಿ ಪರಿಹಾರದ ಹಣವನ್ನು ಕೂಡಲೇ ನಿಮ್ಮ ಅಕೌಂಟಿಗೆ ಜಮಾ ಆಗುವಂತೆ ಮಾಡಿಕೊಳ್ಳಿ.
- 68-A/c Blocked or Frozen:
ಇದರರ್ಥ ಖಾತೆಯನ್ನು ನಿರ್ಬಂಧಿಸಲಾಗಿದೆ ಅಥವಾ ಫ್ರೀಜ್ ಮಾಡಲಾಗಿದೆ: ಖಾತೆದಾರನು ತನ್ನ ಬ್ಯಾಂಕ್ ಖಾತೆಯಲ್ಲಿ ದೀರ್ಘಕಾಲದವರೆಗೆ ಯಾವುದೇ ವಹಿವಾಟನ್ನು ಮಾಡದಿದ್ದರೆ, ಆ ಸಂದರ್ಭದಲ್ಲಿ ಸಂಬಂಧಿಸಿದವರ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ನಂತರ ಹಣವನ್ನು ನಮೂದಿಸಲು ಅಥವಾ ಹಿಂಪಡೆಯಲು ಕಷ್ಟವಾಗುತ್ತದೆ. ಆ ಖಾತೆಯಲ್ಲಿ ಸಂಬಂಧಿಸಿದವರು ಯಾವುದೇ ರೀತಿಯ ವಹಿವಾಟು ಮಾಡಲು ಸಾಧ್ಯವಿಲ್ಲ. ಅಂತಹ ಖಾತೆಗಳಿಗೆ ನೇರ ನಗದು ವರ್ಗಾವಣೆ ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸಂಬಂಧಿಸಿದವರು ಬ್ಯಾಂಕ್‌ಗೆ ಹೋಗಿ, ಖಾತೆಯನ್ನು ಮತ್ತೆ ಅನ್ ಫ್ರೀಜ್ ಮಾಡಲು ತಿಳಿಸಬೇಕು. ನಂತರವೇ ಸಂಬಂಧಿಸಿದವರ ಬ್ಯಾಂಕ್ ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ.
- AADHAAR NOT MAPPED TO ACCOUNT:
ಸಂಬಂಧಿಸಿದವರ ಆಧಾರ್ ಅನ್ನು NPCI ಗೆ ಮ್ಯಾಪ್ ಮಾಡದಿದ್ದರೆ, ಬ್ಯಾಂಕಿನ ಶಾಖೆಗೆ ಭೇಟಿ ನೀಡಬೇಕು ಮತ್ತು NPCI ಗೆ ಮ್ಯಾಪ್ ಮಾಡದ ಆಧಾರ್ ಕುರಿತು ವಿಚಾರಿಸಬೇಕು. ಮ್ಯಾಪಿಂಗ್ ಅನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
- ACCOUNT CLOSED:
ಖಾತೆದಾರರಿಂದ ಅಥವಾ ಕೌಂಟ್ ರ್ವಾರ್ಟಿಯಿಂದ ಡಿ-ಅಕ್ಟಿವೇಟ್ ಅಥವಾ ಮುಕ್ತಾಯಗೊಳಿಸಲಾದ ಯಾವುದೇ ಖಾತೆಯನ್ನು ಮುಚ್ಚಿದ ಖಾತೆ ಎಂದು ಕರೆಯಲಾಗುತ್ತದೆ. ಒಮ್ಮೆ ಖಾತೆಯನ್ನು ಮುಚ್ಚಿದರೆ, ಖಾತೆಯ ಮೂಲಕ ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ವಹಿವಾಟುಗಳನ್ನು ಮಾಡಲಾಗುವುದಿಲ್ಲ.
- ACCOUNT HOLDER EXPIRED:
ಖಾತೆದಾರರು ಇನ್ನಿಲ್ಲದಿರುವಾಗ, ಕಾನೂನುಬದ್ಧ ಉತ್ತರಾಧಿಕಾರಿಗಳು ಅದರ ಬಗ್ಗೆ, ಬ್ಯಾಂಕ್ ಗಳಿಗೆ ಆದಷ್ಟು ಬೇಗ ತಿಳಿಸಬೇಕು. ಅವರು ಸಾವಿನ ಪ್ರಮಾಣಪತ್ರ ಐಡಿ ಪುರಾವೆ ಮತ್ತು ಖಾತೆಯ ವಿವರಗಳನ್ನು ಒದಗಿಸುವ ಮೂಲಕ ಸಾವಿನ ಬಗ್ಗೆ, ಬ್ಯಾಂಕ್‌ಗೆ ಸೂಚಿಸಬೇಕು
- INACTIVE AADHAAR:
ಎ) ನಿಮ್ಮ ಬಯೋಮೆಟ್ರಿಕ್‌ಗಳ ಮರು ಪರಿಶೀಲನೆ ಅಥವಾ ನಿಮ್ಮ ಆಧಾರ್ ಕಾರ್ಡ್ ನವೀಕರಣದ ನಂತರ ನಿಷ್ಕ್ರಿಯಗೊಳಿಸಿದ ಆಧಾರ್ ಅನ್ನು ಮತ್ತೆ ಸಕ್ರಿಯಗೊಳಿಸಬಹುದು. ಬಿ) ನೀವು ಗುರುತಿನ ವಿಳಾಸ ಮತ್ತು ಜನ್ಮ ದಿನಾಂಕದ ಪುರಾವೆಗಾಗಿ ವಿವಿಧ ದಾಖಲೆಗಳೊಂದಿಗೆ ಹತ್ತಿರದ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು.
- INVALID RECEIVER IFSC CODE:
ನೀವು IFSC ಕೋಡ್ ಅನ್ನು ತಪ್ಪಾಗಿ ಟೈಪ್ ಮಾಡಿದ್ದರೆ “O” ಬದಲಿಗೆ “0” ಅಥವಾ । ಗೆ 1, ಇತ್ಯಾದಿ. ಇದು ಹೊಸ ಶಾಖೆಯಾಗಿದ್ದು ಇತರ ಬ್ಯಾಂಕ್‌ನ CBS ಸಿಸ್ಟಮ್‌ನಲ್ಲಿ IFSC ಕೋಡ್ ಅನ್ನು ನವೀಕರಿಸಲಾಗಿಲ್ಲ. ಅಂತಹ ಸಂದರ್ಭದಲ್ಲಿ ಇತರ ಬ್ಯಾಂಕ್ ವಿನಂತಿಯ ಮೇರೆಗೆ, ತಮ್ಮ CBS ಡೇಟಾಬೇಸ್‌ನಲ್ಲಿ IFSC ಕೋಡ್ ಅನ್ನು ನವೀಕರಿಸಬಹುದು (ಅಗತ್ಯ ಮೌಲೀಕರಣ ಅಥವಾ ಪರಿಶೀಲನೆಯ ನಂತರ).
- NPCI Seeding Issue:
ಹಂತ 1: ಸ್ಥಿತಿಯನ್ನು ನವೀಕರಿಸಲು ಬ್ಯಾಂಕ್ ಅನ್ನು ವಿನಂತಿಸುವುದು. ಹಂತ 2: ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಬ್ಯಾಂಕ್ ಅನ್ನು ಅನುಸರಿಸುವುದು. ಹಂತ 3: ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರಕ್ರಿಯೆಯನ್ನು ವೇಗಗೊಳಿಸಲು ಬ್ಯಾಂಕ್ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ.
ಮುಂಗಾರ ಬೆಳೆ ಪರಿಹಾರಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಸಹಾಯವಾಣಿ ಪ್ರಾರಂಭಗೊಂಡೆದೆ.
ರೋಣ : ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರಿಗೆ 2023-24ನೇ ಸಾಲಿನ ಮುಂಗಾರು ಬೆಳೆ ಪರಿಹಾರದ ಸಂಬಂಧಿಸಿದಂತೆ ರೈತ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಮುಂಗಾರು ಬೆಳೆ ಪರಿಹಾರದ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ನಾಗರಾಜ ಕೆ. ಹೇಳಿದರು.
ಇದನ್ನೂ ಓದಿ : – ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಕೂಡಲೇ ಚೆಕ್ ಮಾಡಿ
ಮಂಗಳವಾರ ಪಟ್ಟಣದ ತಹಶಿಲ್ದಾರರ ಕಾರ್ಯಾಲದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಲು ಮಾಹಿತಿ ತಿಳಿಸಿದ ಅವರು ತಾಲೂಕಿನ ರೈತರು ಬೆಳೆ ಪರಿಹಾರದ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಗೊಂದಲಕ್ಕೆ ಸಿಗುತ್ತಿದ್ದು,ಆದ ಕಾರಣ ಅವರ ಸಮಸ್ಯೆ ಬಗ್ಗೆಹರಿಸುವ ನಿಟ್ಟಿನಲ್ಲಿ ಸಹಾಯವಾಣಿ ತೆರೆಲಾಗಿದೆ.ರೋಣ ತಹಶಿಲ್ದಾರರ ಕಚೇರಿಯ ಕಾರ್ಯಾಲಯದಲ್ಲಿ ದಿ.14.5.24 ರಿಂದ ಸಹಾಯವಾಣಿ ತೆರೆಯಲಾಗಿದ್ದು,ಸಹಾಯವಾಣಿ ನಂ.08381-267239ಗೆ ಬೆಳ್ಳಿಗ್ಗೆ 9.ಘಂಟೆಯಿಂದ ಸಾಯಂಕಾಲ 6.ಘಂಟೆ ವರೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.