ಆತ್ಮೀಯ ರೈತ ಬಾಂಧವರೇ 2023 24 ನೇ ಸಾಲಿನ ಮುಂಗಾರಿನ ಹಂಗಾಮಿನ ಕರ್ನಾಟಕದ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ನಮ್ಮ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆಯನ್ನು ತುಂಬಲು ಸರ್ಕಾರವು ಕೊನೆಯ ದಿನಾಂಕವನ್ನು ಪ್ರಕಟಣೆ ಮಾಡಿದೆ. ಯಾವ ಯಾವ ಬೆಳೆಗಳಿಗೆ ಕೊನೆಯ ದಿನಾಂಕವನ್ನು ಪ್ರಕಟಣೆ ಮಾಡಿದ್ದಾರೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಯಾವ ಬೆಳೆಗಳಿಗೆ ಯಾವುದು ಕೊನೆಯ ದಿನಾಂಕ?
ಸರ್ಕಾರವು ನಿರ್ದಿಷ್ಟ ಕೊನೆ ದಿನಾಂಕವನ್ನು ಪ್ರತಿಯೊಂದು ಬೆಳೆಗಳಿಗೆ ನಿರ್ಧಾರ ಮಾಡಿ ಬಿಟ್ಟಿದ್ದಾರೆ.
# ಹೆಸರು – 15-07-2023
# ಶೇಂಗಾ – 31-07-2023
# ಮೆಕ್ಕೆಜೋಳ – 31-07-2023
# ಹತ್ತಿ – 31-07-2023
# ಸೂರ್ಯಕಾಂತಿ – 16-08-2023
# ಈರುಳ್ಳಿ – 16-08-2023
# ಒಣ ಮೆಣಸಿನಕಾಯಿ – 16-08-2023
ಒಂದು ಎಕರೆ ಹೊಲಕ್ಕೆ ಯಾವ ಬೆಳೆಗೆ ಎಷ್ಟು ಬೆಳೆವಿಮೆ ಕಂತನ್ನು ತುಂಬಬೇಕು?
ಬೆಳೆ ಮತ್ತು ಕಂತಿನ ಎಷ್ಟು ರೂಪಾಯಿಗಳು
# ಹೆಸರು – 270
# ಶೇಂಗಾ – 442
# ಮೆಕ್ಕೆಜೋಳ – 458
# ಹತ್ತಿ – 1007
# ಸೂರ್ಯಕಾಂತಿ – 340
# ಈರುಳ್ಳಿ – 1533
# ಒಣ ಮೆಣಸಿನಕಾಯಿ – 1594
ಬೇಕಾಗುವ ದಾಖಲೇಗಳು
ವಿಮಾ ಫಾರ್ಮ, ಚಾಲ್ತಿ ಉತಾರ, ಬ್ಯಾಂಕ ಪಾಸ ಬುಕ್ಕ, ಆಧಾರ ಕಾರ್ಡ, ಜಂಟಿ ಖಾತೆಯಿದ್ದರೆ ಒಪ್ಪಿಗೆ ಪತ್ರ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಬೆಳೆವಿಮೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. https://samrakshane.karnataka.gov.in/
2023 ರ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೋಂದಾಣಿಗಾಗಿ ರೈತರು FRUITS ತಂತ್ರಾಂಶದಲ್ಲಿ ಈಗಾಗಲೇ ನೋಂದಾಣೀ ಮಾಡಿಕೊಂಡಿರಬೇಕು ಹಾಗೂ FRUIT ID ಪಡೆದುಕೊಂಡಿರಬೇಕು. FRUITS ತಂತ್ರಾಂಶದಲ್ಲಿ ದಾಖಲಾದ ಸರ್ವೆ ಬೆಳೆ ವಿಮೆಯಡಿ ನೋಂದಣಿ ಮಾಡಲು ಅವಕಾಶವಿರುತ್ತದೆ. ಬೆಳೆ ವಿಮೆಗೆ ನೋಂದಾಯಿಸುವ ಮೊದಲು FRUIT ID ಇಲ್ಲದಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ, FRUITS ತಂತ್ರಾಂಶದಲ್ಲಿ ನೋಂದಣಿ ಮಾಡುವ ಮೂಲಕ ಪಡೆಯಬಹುದಾಗಿದೆ. ಜಂಟಿ ಖಾತೆದಾರರು FRUITS ತಂತ್ರಾಂಶದಲ್ಲಿ ದಾಖಲಾದ ವಿಸ್ತೀರ್ಣಕ್ಕನುಗುಣವಾಗಿ ಬೆಳೆ ವಿಮೆ ನೋಂದಾವಣಿ ಮಾಡಲು ಅವಕಾಶವಿರುತ್ತದೆ.
*ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?*
*ಕೃಷಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಮೊಬೈಲ್ ನಿಂದ ಅರ್ಜಿ, K KISAN PORTAL ನಲ್ಲಿ ಅರ್ಜಿ ಸಲ್ಲಿಸಿ*
*ಅನುಗ್ರಹ ಯೋಜನೆ ಮರುಜಾರಿ, ಮೃತಪಟ್ಟ ಕುರಿ, ಮೇಕೆಗೆ 5000 ಮತ್ತು ಹಸು, ಎಮ್ಮೆ, ಎತ್ತಿಗೆ 10000 ಪರಿಹಾರ ಧನ*
*ಕರ್ನಾಟಕ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿದ್ದು ಕೊಡುಗೆ, ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿದ್ದು*