Breaking
Thu. Dec 19th, 2024

ಸರ್ಕಾರದ ಯಾವ ಯೋಜನೆಗಳಿಂದ ಇಲ್ಲಿಯವರೆಗೆ ನಿಮಗೆ ಏಷ್ಟು ಹಣ ಬಂದಿದೆ?

Spread the love

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.dbtkarnataka
ಆಮೇಲೆ DBT Karnataka ಎಂಬ app download ಮಾಡಿಕೊಳ್ಳಿ.

ಆಮೇಲೆ ಕೆಳಗಿನ ಚಿತ್ರಗಳಲ್ಲಿ ಕಾಣುವ ಹಾಗೆ ಆಧಾರ್ ನಂಬರ್ ಹಾಕಬೇಕು. ನಂತರ ನೀವು get opt ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಸಂಖ್ಯೆಗೆ OTP ಬರುತ್ತದೆ. ಅದನ್ನು ಹಾಕಿ verify OTP ಮೇಲೆ ಕ್ಲಿಕ್ ಮಾಡಿ.

ಇಷ್ಟಾದ ಮೇಲೆ ನೀವು 4 ಸಂಖ್ಯೆ ಇರುವ ನಿಮಗೆ ಇಷ್ಟವಾದ mpin ಹಾಕಿಕೊಳ್ಳಿ. ಮತ್ತೊಮ್ಮೆ confirm mpin ಮಾಡಿ. ಕೊನೆಗೆ sumbit ಮೇಲೆ ಕ್ಲಿಕ್ ಮಾಡಿ.

ಚಿತ್ರದಲ್ಲಿ ಕಾಣುವ ಹಾಗೆ payment status ನೋಡಿ ಎಲ್ಲಿ ಎಲ್ಲಾ ಯೋಜನೆ ಇಂದ ಏಷ್ಟು ಹಣ ಬಂದಿದೆ ಎಂದು ನಿಮಗೆ ಮಾಹಿತಿ ದೊರೆಯುತ್ತದೆ.

ಶ್ರೀಗಂಧ ಬೆಳೆ ಹಾಗೂ ಗೋಡಂಬಿ ಬೆಳೆ ಕುರಿತು ವಿಚಾರ ಸಂಕಿರಣಗಳು

ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ದಿನಾಂಕ 23-01-2024, ಮಂಗಳವಾರ ಮುಂಜಾನೆ 10.30 ಗಂಟೆಗೆ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ “ಶ್ರೀಗಂಧ ಬೆಳೆ ಆಧಾರಿತ ಕೃಷಿ ಅರಣ್ಯ ಮಾದರಿಗಳು” ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ.

ಇದೇ ರೀತಿಯಾಗಿ 24-01-2024, ಬುಧವಾರ ಮುಂಜಾನೆ 10.30 ಗಂಟೆಗೆ ಗೋಡಂಬಿ ಅಭಿವೃದ್ಧಿ ಮಂಡಳಿ, ಕೋಚಿನ ಇವರ ಸಹಯೋಗದೊಂದಿಗೆ “ಗೋಡಂಬಿ ಬೆಳೆಯ ಕುರಿತು ವಿಚಾರ ಸಂಕಿರಣ” ವನ್ನು ಏರ್ಪಡಿಸಲಾಗಿದೆ. ಆಯಾ ದಿನದಂದು ಮಧ್ಯಾಹ್ನ ಕ್ಷೇತ್ರ ಭೆಟ್ಟಿಗಳನ್ನು ಹಮ್ಮಿಕೊಳ್ಳಲಾಗಿದೆ. ಸದರಿ ವಿಚಾರ ಸಂಕಿರಣಗಳಲ್ಲಿ ಹಾಗೂ ಕ್ಷೇತ್ರ ಭೆಟ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತಬಾಂಧವರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕೆವಿಕೆ ಫಾರ್ಮ ಮ್ಯಾನೇಜರ, ಶ್ರೀ ಸುರೇಶ ಹಳೇಮನಿ, ಮೊಬೈಲ್ ಸಂಖ್ಯೆ : 9480622772 ಇವರನ್ನು ಸಂಪರ್ಕಿಸಿರಿ.

ಆಯುರ್ ಕೌಶಲ್ಯ ವಿದ್ಯಾರ್ಥಿ ಸಂಘದ ಉದ್ಘಾಟನೆ

ಗದಗ : ನಗರದ ಪ್ರತಿಷ್ಠಿತ ಶ್ರೀ ಡಿ.ಜಿ.ಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನೂತನ ವಿದ್ಯಾರ್ಥಿ ಸಂಘ ಆಯುರ್ ಕೌಶಲ್ಯ-2024 ರ ಉದ್ಘಾಟನೆ ದಿ.20 ಶನಿವಾರ ಬೆಳಿಗ್ಗೆ 10:00 ಘಂಟೆಗೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಡಾ. ಶರಣಪ್ಪಗೌಡ ಪಾಟೀಲ ಶ್ರೇಷ್ಠ ವಾಗ್ನಿಗಳು ಮುದ್ದೇಬಿಹಾಳ ಇವರು ಉದ್ಘಾಟನೆಯನ್ನು ಮಾಡಲಿದ್ದಾರೆ.

ಅತಿಥಿಗಳಾಗಿ ಡಾ. ಜಿ.ಬಿ. ಪಾಟೀಲ ಇವರು ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಸಕ್ತ ಪ್ರಾಚಾರ್ಯ ಡಾ.ಎಸ್.ಎನ್. ಬೆಳವಡಿ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಯುರ್ ಕೌಶಲ್ಯ-2024 ವಿದ್ಯಾರ್ಥಿ ಸಂಘದ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಲಕ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ವಿರೇಶ ಆಡೂರ ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಕು. ಗಿರೀಶ ಜಾಧವ ಮತ್ತು ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ಕು. ಚಂದ್ರಲಾ ಗ್ರಾಮಪುರೋಹಿತ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಶಾಲಾಕ್ಯ ತಂತ್ರ ನೇತ್ರ-ಕಿವಿ- ಮೂಗು-ಗಂಟಲು ಸಂಬಂಧಿಸಿದ ಮಾಡೆಲ್‌ಗಳು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯೇಕ ರಾಜ್ಯ ಹೋರಾಟದಿಂದ ಸ್ಥಗಿತಗೊಂಡ ರೈಲು ಸೇವೆ

ಜಲೈಗುರಿ : ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಲು ಪಶ್ಚಿಮ ಬಂಗಾಳದ ಜಲೈಗುರಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಆಲ್ ಕಮ್ರಾಪುರ್ ವಿದ್ಯಾರ್ಥಿಗಳ ಒಕ್ಕೂಟದ (ಎಕೆಎಯು) ಸದಸ್ಯರು ರೈಲು ಹಳಿಗಳನ್ನು ತಡೆದಿದ್ದರಿಂದ ರೈಲು ಸೇವೆಗಳಲ್ಲಿ ಭಾರಿ ವ್ಯತ್ಯಯವಾಗಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೆಯ ನ್ಯೂ ಜಲೈಗುರಿ-ಹೊಸ ಬೊಂಗೈಗಾಂವ್ ವಿಭಾಗದ ಬೆಳೆಗಾರ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆಗೆ ದಿಬ್ಬಂಧನ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಗ್ವಂಧನವು ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ರೈಲು ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಇದರ ಪರಿಣಾಮ ನ್ಯೂ ಜಲೈಗುರಿ-ಗುವಾಹಟಿ ವಂದೇ ಭಾರತ್ ಎಸ್‌ಪ್ರೆಸ್ ಸೇರಿದಂತೆ ಹಲವಾರು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಆಪಿಎಫ್ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತಿದ್ದರು ಮತ್ತು ದಿಗ್ವಂಧನವನ್ನು ತೆಗೆದುಹಾಕಲು ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿಭಟನೆಯು ರಾತ್ರಿ 7 ಗಂಟೆಯವರೆಗೆ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು, ಆದರೆ ರೈಲ್ವೆ ಅಧಿಕಾರಿಗಳು ಮೊದಲೇ ಸೇವೆಗಳನ್ನು ಪುನರಾರಂಭಿಸುವ ಭರವಸೆ ಹೊಂದಿದ್ದಾರೆ.

ತಮ್ಮ ಬೇಡಿಕೆಯನ್ನು ಈಡೇರಿಸದ ಟಿಎಂಸಿ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಎಕೆಎಪಿಯು ಕಮ್ರಾಪುರ್ ಪೀಪಲ್ಸ ಪಾರ್ಟಿ ಯುನೈಟೆನ ವಿದ್ಯಾರ್ಥಿಗಳ ವಿಭಾಗವಾಗಿದೆ. ಇದು ಪ್ರತ್ಯೇಕ ಕಮ್ರಾಪುರ ರಾಜ್ಯಕ್ಕಾಗಿ ಆಂದೋಲನ ನಡೆಸುತ್ತಿದೆ. ಇದನ್ನು ಪಶ್ಚಿಮ ಬಂಗಾಳದ ಉತ್ತರ ಭಾಗಗಳು ಮತ್ತು ಪಶ್ಚಿಮ ಅಸಾಂನಿಂದ ಕೆತ್ತಲಾಗಿದೆ.

ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಣೆ

ವಿಕಲಚೇತನರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ ಹೇಳಿದರು. ನಗರದ ನವಜೀವನ ವೃದ್ದಾಶ್ರಮದ ಆವರಣದಲ್ಲಿ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಟ್ರೈನ್ ಸಂಸ್ಥೆಯ ಸಹಯೋಗದಲ್ಲಿ ಪಂಕ್ ಯೋಜನೆಯಡಿ ಉಚಿತ ಕಂಪ್ಯೂಟರ್, ಕೌಶಲ್ಯ ತರಬೇತಿ ಪಡೆದ ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂಬೈಯ ಟ್ರೈನ್ ಸಂಸ್ಥೆ ವಿಕಲಚೇನತರಿಗೆ ಉಚಿತ ಊಟ, ವಸತಿ ನೀಡಿ, ರಿಟೈಲ್ ಉದ್ಯಮದ ಬಗ್ಗೆ ಮಾಹಿತಿ, ಕಂಪ್ಯೂಟರ ತರಬೇತಿ, ಕೌಶಲ್ಯ, ತರಬೇತಿ ನೀಡಿ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುತ್ತಿದೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ಸಮಾನತೆಯ ಜೀವನ ನಡೆಸಲು ಸಹಾಯಕವಾಗಿದೆ ಆದರಿಂದ ಪಂಕ್ ಯೋಜನೆಯಡಿ, ತರಬೇತಿ ಪಡೆದವರು ಉದ್ಯೋಗ ಮಾಡುವುದರ ಮೂಲಕ ತರಬೇತಿಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಬೆಳೆವಣಿಯಾಗಿ ಉತ್ತಮ ಜೀವನ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದರು.

ಇದೇ ಸಂದರ್ಭದಲ್ಲಿ ತರಬೇತಿ ಪಡೆದ 25 ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಉದ್ಯಮಿದಾರರು. ನಗರಸಭೆಯ ನೂತನ ನಾಮನಿರ್ದೇಶನ ಸದಸ್ಯರಾದ ರಾಧೇಶ್ಯಾಮ್ ದರಕ, ಪಂಪಣ್ಣ ಮಾಗನೂರ, ಮಲ್ಲಿಕಾರ್ಜುನ ಮಡಿವಾಳರ, ಯಲ್ಲಪ್ಪ ರಾಜಾಪೂರ, ಹಿರಿಯ ಪತ್ರಕರ್ತರಾದ ಸುಲೇಮಾನ ಚೋಪದಾರ, ಮಹಾಂತೇಶ ಗೊರಜನಾಳ, ಪಂಕ್ ಯೋಜನೆಯ ಮುಖ್ಯ ತರಬೇತಿದಾರ ಮಲ್ಲಪ್ಪ ಎಮ್, ತರಬೇತಿದಾರ ಎಚ್.ಎಚ್.ಬೇಪಾರಿ.

Related Post

Leave a Reply

Your email address will not be published. Required fields are marked *