ಆತ್ಮೀಯ ರೈತ ಬಾಂಧವರೇ, ಸರ್ಕಾರವು ರೈತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದೆ. ಈ ಯೋಜನೆಗಳಲ್ಲಿ ಒಂದಾದ ಗಂಗಾ ಕಲ್ಯಾಣ ಯೋಜನೆ ಅತಿ ಜನಪ್ರಿಯವಾಗಿ ರೈತರಿಗೆ ಹಲವಾರು ಲಾಭಗಳನ್ನು ದೊರಕಿಸಿಕೊಟ್ಟಿದೆ. ಈ ಯೋಜನೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಲವಾರು ಲಾಭದಾಯಕ ಕೆಲಸಗಳು ಆಗಿವೆ. ಈ ಯೋಜನೆಯು ಮತ್ತೊಮ್ಮೆ ತೆರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಯೋಜನೆಯ ಲಾಭ ಪಡೆಯಲು ಯಾವ ಯಾವ ಜಾತಿಯ ರೈತರು ಅರ್ಹರು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈಗ ಈ ಯೋಜನೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್ ಅನ್ನು ಹಾಕಿಸಿ ಕೊಡಲು ಸರಕಾರವು ನಿರ್ಧಾರ ಮಾಡಿದೆ. ಈ ಯೋಜನೆಯಲ್ಲಿ ನಮ್ಮ ರಾಮನಗರ, ತುಮಕೂರು, ಕೋಲಾರ್, ಚಿಕ್ಕಬಳ್ಳಾಪುರ್ ಮತ್ತು ಬೆಂಗಳೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಈ ಬೋರ್ವೆಲ್ ಘಟಕವನ್ನು ಸ್ಥಾಪನೆ ಮಾಡಲು 4 ಲಕ್ಷ ಗಳನ್ನು ನಿಗದಿತ ಪಡಿಸಿದ್ದಾರೆ. ಈ 4 ಲಕ್ಷ ರೂಪಾಯಿಯಲ್ಲಿ 3,50,000 ಗಳನ್ನು ಸಹಾಯಧನವಾಗಿ ನೀಡುತ್ತಾರೆ. ಇನ್ನೂ ಉಳಿದ ಹಣವಾದ 50,000ಗಳನ್ನು ನೀವು ಮರಳಿ ಸರಕಾರಕ್ಕೆ ತುಂಬ ಬೇಕಾಗುತ್ತದೆ. ಈ 50 ಸಾವಿರ ರೂಪಾಯಿಗಳನ್ನು ನೀವು ಶೇಕಡ 4 ರಲ್ಲಿ ನೀವು ಸರ್ಕಾರಕ್ಕೆ ಹಣವನ್ನು ತುಂಬಿ ಈ ಯೋಜನೆಯ ಸದ್ದುಪಯೋಗ ಪಡೆದುಕೊಳ್ಳಬೇಕು ಎಂಬುದೇ ನಮ್ಮ ಆಶಯ.
ಯೋಜನೆಯ ಲಾಭ ಪಡೆಯಲು ನಿಮ್ಮ ಹೊಲ ಎಷ್ಟಿರಬೇಕು ?
ಈ ಯೋಜನೆಯ ಲಾಭವನ್ನು ಪಡೆಯಲು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕಾಗುತ್ತದೆ. ಅಂದರೆ ನೀವು 1.2 ಎಕರೆ ಹೊಲವನ್ನು ಹೊಂದಿರಲೇಬೇಕು ಮತ್ತು ನೀವು 5 ಎಕರೆ ಜಮೀನ ಮೇಲೆ ಹೊಂದಿರಬಾರದು. ಅಂದಾಗ ಮಾತ್ರ ಈ ಯೋಜನೆಯ ಲಾಭ ಪಡೆಯಲು ನೀವು ಅರ್ಹರಾಗುತ್ತೀರಿ.
ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲಾತಿಗಳು?
ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ, ನಿಮ್ಮ ಹೊಲದ ಪಹಣಿ, ನಿಮ್ಮ ರೇಷನ್ ಕಾರ್ಡ್, ರೈತರ FID ಸಂಖ್ಯೆ ಇಷ್ಟೆಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮೋನ್ ಅಥವಾ ಕರ್ನಾಟಕವನ್ನು ಸೇವಾ ಕೇಂದ್ರಗಳಿಗೆ. ಅಲ್ಲಿ ನೀವು ಸೇವಾಸಿಂದು ಪೋರ್ಟಲ್ ನಲ್ಲಿ ಈ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಯಾವ ಸಮುದಾಯದ ರೈತರು ಈ ಯೋಜನೆಗೆ ಅರ್ಹರು?
ವಿಶ್ವಕರ್ಮ ಜಾತಿಯ ರೈತರು, ಲಿಂಗಾಯತ ಜಾತಿಯ ರೈತರು, ಹಿಂದುಳಿದ ವರ್ಗ ಜನರು, ಉಪ್ಪಾರ್ ಸಮಾಜದ ರೈತರು, ಆದಿ ಜಾಂಬವ ಸಮುದಾಯದ ರೈತರು, ಅಲ್ಪಸಂಖ್ಯಾತ ವರ್ಗದ ಜನರು, ಪ್ರತಿಷ್ಠಿತಪಂಗಡ ಮತ್ತು ಪ್ರತಿಷ್ಠಿತ ಜಾತಿಯ, ಅಂಬಿಗರ ಸಮಾಜದ ರೈತರು. ಈ ಯೋಜನೆಯಲ್ಲಿ ರೈತರ ಆಯ್ಕೆ ಮಾಡುವುದು ತುಂಬಾ ಸುಲಭವಾಗಿದೆ ಮೊದಲು ರೈತರು ಅರ್ಜಿಯನ್ನು ಸಲ್ಲಿಸಬೇಕು ನಂತರ ಜಿಲ್ಲಾ ವ್ಯವಸ್ಥಾಪಕರು ಈ ಎಲ್ಲಾ ಅರ್ಜಿಯನ್ನು ಶಾಸಕರಿಗೆ ವರ್ಗಾಯಿಸುತ್ತಾರೆ ಮತ್ತು ಒಂದು ಸಮಿತಿಯಲ್ಲಿ ಈ ಎಲ್ಲ ದಾಖಲಾತಿಗಳು ಒಮ್ಮೆ ಚೆಕ್ ಮಾಡಿ ನಿಮ್ಮನ್ನು ಈ ಯೋಜನೆಗೆ ಆಯ್ಕೆ ಮಾಡುತ್ತಾರೆ.
ಇದನ್ನೂ ಓದಿ :- ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಹಾಕಿ ಮತ್ತು ಬೆಳೆಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ