Breaking
Wed. Dec 18th, 2024

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?

Spread the love

ಆತ್ಮೀಯ ನಾಗರಿಕರೇ ಈಗಾಗಲೇ ನೀವು ನಮ್ಮ ಕಾಂಗ್ರೆಸ್ ಸರ್ಕಾರವು ತಿಳಿಸಿದ ಗ್ಯಾರಂಟಿ ಹಾಗೆ ನಿಮ್ಮ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ಅರ್ಜಿಯು ಈಗ ಸರ್ಕಾರದಿಂದ ಪರಿಶೀಲನೆಗೆ ಒಳಗಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮಗೆ ಈ ಯೋಜನೆಯಿಂದ ಲಾಭ ದೊರೆಯುವುದೇ ನಿಮ್ಮ ಅರ್ಜಿಯು ಸ್ವೀಕಾರಗೊಂಡಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಅದನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಒಮ್ಮೊಮ್ಮೆ ನೀವು ಅರ್ಜಿ ಸಲ್ಲಿಸಿದ ಅರ್ಜಿಗಳು ರಿಜೆಕ್ಟ್ ಆಗುವ ಸಂಭವನತೆ ಇರುತ್ತದೆ. ಆದಕಾರಣ ನಿಮ್ಮ ಅರ್ಜಿ ಯು ಈಗ ಯಾವ ಮಟ್ಟದಲ್ಲಿ ಮುಟ್ಟಿದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ನಾವು ತಿಳಿಸಿದ ಹಾಗೆ ಕೆಳಗಿನ ಹಂತಗಳನ್ನು ಬಳಸಿಕೊಂಡು ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ತಿಳಿಯಬಹುದು.

ಅರ್ಜಿ ಸ್ಥಿತಿ ಪರಿಶೀಲನೆ ಮಾಡಲು ಕೆಳಗಿನ ಹಂತಗಳನ್ನು ಪಾಲಿಸಿ?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.https://sevasindhu.karnataka.gov.in/StatucTrack/Track_Status

ಆಗ ನೀವು ಈ ಯೋಜನೆಗಳನ್ನು ಸಲ್ಲಿಸುವ ಒಂದು ವೆಬ್ ಸೈಟಿಗೆ ನೀವು ಭೇಟಿ ನೀಡುತ್ತೀರಿ. ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಒಂದು ಪರದೆ ನಿಮ್ಮ ಮುಂದೆ ತೆರೆಯುತ್ತದೆ. ಅಲ್ಲಿ ನೀವು SELECT ESCOM NAME ಎಂಬ ಆಯ್ಕೆ ಯಲ್ಲಿ ನಿಮ್ಮ ಜಿಲ್ಲೆಯು ಸಂಸ್ಥೆ ಕೆಳಗಡೆ ಬರುತ್ತದೆಯೋ ಆಯ್ಕೆ ನೀವು ಆಯ್ದು ಕೊಳ್ಳಬೇಕು. ಕೆಳಗಿನ ಚಿತ್ರದಲ್ಲಿ ಕಾಣುವ ಒಂದು ಆಯ್ಕೆಯನ್ನು ನೀವು ಮಾಡಿಕೊಂಡು ಮುಂದೆ ನೀವು ಅಲ್ಲಿ ನಿಮ್ಮ ವಿದ್ಯುತ್ ಬಿಲ್ಲನ್ನು ತೆಗೆದುಕೊಂಡು ಅಲ್ಲಿರುವ ಅಪ್ಲಿಕೇಶನ್ ನಂಬರ್ ಅಂದರೆ ನಿಮ್ಮ ವಿದ್ಯುತ್ ಬಿಲ್ ಸಂಖ್ಯೆಯನ್ನು ನಮೂದನೆ ಮಾಡಬೇಕು.

ಇಷ್ಟಾದ ಮೇಲೆ ಮುಂದೆ ನೀವು CHECK STATUS ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ನಿಮ್ಮ ಅಪ್ಲಿಕೇಶನ್ ಯಾವ ಸ್ಟೇಟಸ್ ನಲ್ಲಿದೆ ಎಂದು ತಿಳಿದುಬರುತ್ತದೆ. ಈ ರೀತಿ ಸುಲಭವಾಗಿ ನಿಮ್ಮ ಅರ್ಜಿಯಸ್ಥಿತಿಯನ್ನು ತಿಳಿಯಬಹುದು. ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನಿಮ್ಮ ಮುಂದೆ ಒಂದು ಸ್ಥಿತಿ ಬರುತ್ತದೆ.

*ಅನುಗ್ರಹ ಯೋಜನೆ ಮರುಜಾರಿ, ಮೃತಪಟ್ಟ ಕುರಿ, ಮೇಕೆಗೆ 5000 ಮತ್ತು ಹಸು, ಎಮ್ಮೆ, ಎತ್ತಿಗೆ 10000 ಪರಿಹಾರ ಧನ*

*ಕೃಷಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಮೊಬೈಲ್ ನಿಂದ ಅರ್ಜಿ, K KISAN PORTAL ನಲ್ಲಿ ಅರ್ಜಿ ಸಲ್ಲಿಸಿ*

*ಕರ್ನಾಟಕ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿದ್ದು ಕೊಡುಗೆ, ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿದ್ದು*

*ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?, ಲಿಂಕ್ ಮಾಡಿದರೆ ಮಾತ್ರ ನಿಮಗೆ ಮುಂದೆ ಸೌಲಭ್ಯಗಳು ಸಿಗುತ್ತವೆ*

Related Post

Leave a Reply

Your email address will not be published. Required fields are marked *