ಬೆಳೆವಿಮೆ ಪರಿಹಾರ ಸ್ಟೇಟಸ್ ಚೆಕ್ ಹೇಗೆ ಮಾಡಬೇಕು?
ಈ ಬೆಳೆ ವಿಮೆಯನ್ನು ಎಲ್ಲಿ ಮಾಡಿಸುವುದೆಂದರೆ’ ಪ್ರಧಾನ್ ಮಂತ್ರಿ ಫಸಲ್ ಭೀಮ ಯೋಜನೆ ‘ ಅಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ.ಬೆಳೆ ಸಾಲ ಪಡೆಯದ ರೈತರು’ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ’
ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕುಗಳಲ್ಲಾಗಲಿ ಅಥವಾ ಗ್ರಾಮಾ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ ಜಮೀನು ಹೊಂದಿದ ಪಹಣಿಯನ್ನು ನೀಡಬೇಕು. ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ನೀಡಬೇಕು.ಅರ್ಜಿಯೊಂದಿಗೆ ಯಾವ ಬೆಳೆಗೆ ವಿಮೆ ಮಾಡಿಸಿದ್ದೋರೋ ವಿಮೆ ಕಂಪನಿಗೆ ನೀವು ಬೆಳೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.
ಬೆಳೆ ವಿಮಾ ಸ್ಟೇಟಸ್ ಚೆಕ್ ಮಾಡಿ
ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ರೈತರು http://www.samrakshane.karnataka.gov ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ.
ಮಳೆಹಾನಿ ಪರಿಹಾರ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು?
ಮುಖ್ಯವಾಗಿ ಹೇಳಬೇಕೆಂದರೆ ಈಗಾಗಲೇ ಬಿಡುಗಡೆಯಾದ ಪರಿಹಾರ ಹಣವನ್ನು ರೈತರು ಈ ವಿಧಾನದಲ್ಲಿ ತಮ್ಮ ಹಣದ ಮಾಹಿತಿಯನ್ನು ಪಡೆಯಬಹುದು. ಮುಖ್ಯವಾಗಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ https://landrecords.karnataka.gov.in/PariharaPayment/
ಫ್ಲಡ್ ಆಯ್ಕೆ ಮಾಡಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹೋದ ನಂತರ ನಿಮಗೆ ಈ ಕೆಳಗಿನಂತೆ ಚಿತ್ರ ಕಾಣಿಸುತ್ತದೆ.ಆ ಲಿಂಕ್ ಮೇಲೆ ಕ್ಲಿಕ್ ಮಾಡಿ,ಮಾಡಿದ ನಂತರ ಏನು ಮುಂದುವರೆಸುವುದು ಎಂದು ತಿಳಿಸಿಕೊಡುತ್ತೆವೆ ನೋಡಿ.ಮುಖಪುಟದಲ್ಲಿ ‘ಫಾಮರ್ಸ್ ಕಾರ್ನರ್’ (farmer’s corner) ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ‘ಫಲಾನುಭವಿ ಸ್ಥಿತಿ’ (beneficiary status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.ಈಗ ನೀವು ನಿಮ್ಮ ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನೀವು ಅದನ್ನು ಸರಿಯಾಗಿ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.ನಿಮಗೆ ನೋಂದಣಿ ಸಂಖ್ಯೆ ಗೊತ್ತಿಲ್ಲವಾದಲ್ಲಿ ಅದನ್ನು ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹಾಗೂ OTP ಬರುತ್ತದೆ ಬಂದ ನಂತರ ಕಾಪ್ಕ್ಯ ಟೈಪ್ ಮಾಡಿ ಹಾಕಿದರೆ ನಿಮ್ಮ ನೋಂದಣಿ ಸಂಖ್ಯೆ ಗೊತ್ತಾಗುತ್ತದೆ. ನೀವು ಸರಿಯಾಗಿ ಎಲ್ಲಾ ಪ್ರಕ್ರಿಯೆಯನ್ನು ಭರ್ತಿ ಮಾಡಿದ್ದೀರಿ ಅಥವಾ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ನಿಮಗೆ ಪಿಎಂ ಕಿಸಾನ್ ಹಣ ದೊರಕುತ್ತದೆಯೊ ಇಲ್ಲೋ ಎಂದು ತಿಳಿಯಿರಿ.
ಇದನ್ನೂ ಓದಿ :- ಎಲ್ಲಾ ಬೆಳೆಗಳ ಮಾರುಕಟ್ಟೆ ದರಗಳನ್ನು ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿಯಿರಿ
ಇದನ್ನೂ ಓದಿ :- ದನಗಳ ಶೆಡ್ ನಿರ್ಮಾಣ ಮಾಡಲು 57,000 ರೂಪಾಯಿಗಳ ಸಹಾಯಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ :- ನಿಮ್ಮ ಮನೆಯಲ್ಲಿ ಗರ್ಭಿಣಿ ಹೆಂಗಸರು ಇದ್ದರೆ ನಿಮಗೆ ಸಿಗುತ್ತೆ 6000 ರೂಪಾಯಿ
ಇದನ್ನೂ ಓದಿ :- ಮನೆ ಇಲ್ಲದವರಿಗೆ 2BHK ಮನೆ ನಿರ್ಮಿಸಲು ಸಹಾಯಧನ ಅರ್ಜಿ ಸಲ್ಲಿಸುವುದು ಹೇಗೆ?
ಇದನ್ನೂ ಓದಿ :- ರೈತರು ನಿಮ್ಮ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಇದೆ ಎಂದು ತಿಳಿಯುವುದು ಹೇಗೆ?