ಪ್ರಿಯ ಓದುಗರೇ,ನಿಮಗೊಂದು ಮುಖ್ಯವಾದ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿಸಲು ಬಯಸುತ್ತೇವೆ.ತೆರಿಗೆ ವಂಚನೆ ಮತ್ತು ನಕಲಿ ಗುರುತಿನ ಪುರಾವೆಗಳನ್ನು ತಡೆಗಟ್ಟಲು ಭಾರತ ಸರ್ಕಾರವು ಆಧಾರ್‌ನೊಂದಿಗೆ ಪ್ಯಾನ್‌ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ ಮತ್ತು ಪ್ರಸ್ತುತ ಗಡುವು 31 ಮಾರ್ಚ್ 2023 ಆಗಿದೆ.ನಿಮ್ಮ ಪ್ಯಾನ್(pan) ಆಧಾರನೊಂದಿಗೆ ಲಿಂಕ್ ಆಗಿರುವುದನ್ನು ಹೇಗೆ ನೋಡುವುದೆಂದು ತಿಳಿಸುತ್ತೇವೆ.
ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಅತ್ಯಗತ್ಯ. ಏಕೆಂದರೆ ವಿವಿಧ ಪರಿಣಾಮಗಳಿಗೆ ಕಾರಣವಾಗಬಹುದು. ಮಾರ್ಚ 31 ಒಳಗೆ ರೂ.1000 ತುಂಬುವ ಮೂಲಕ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಅಮಾನ್ಯವಾಗುತ್ತದೆ ಮತ್ತು ಯಾವುದೇ ಹಣಕಾಸಿನ ವಹಿವಾಟುಗಳಿಗೆ ಅದನ್ನು ಬಳಸಲು ಅಥವಾ ನಿಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.ಹಾಗೆಯೇ ನೀವು ಒಂದು ವೇಳೆ ಲಿಂಕ್ ಮಾಡದಿದ್ದರೆ ರೂ.10000 ದಂಡ ತುಂಬಬೇಕಾಗುತ್ತದೆ.
ನಿಮ್ಮ ಪ್ಯಾನ್(pan) ಆಧಾರನೊಂದಿಗೆ ಲಿಂಕ್ ಆಗಿರುವುದನ್ನು ಹೇಗೆ ನೋಡುವುದು?
1.ಕೆಳಗಡೆ ನೀಡಿರುವ ಲಿಂಕ್ ಮೇಲೆ ಒತ್ತಿ.
https://eportal.incometax.gov.in/iec/foservices/#/pre-login/link-aadhaar-status
2.ಈಗ ನಿಮ್ಮ ಪ್ಯಾನ್ (pan) ಮತ್ತು ಆಧಾರ್ ನಂಬರ್ ಹಾಕಿ.
ನಂತರ ಚೆಕ್ (check) ಡೀಟೇಲ್ಸ್ (ಡೀಟೇಲ್ಸ್) ಮೇಲೆ ಕ್ಲಿಕ್ ಮಾಡಿ.
ಒಂದು ವೇಳೆ ನಿಮ್ಮ ಪ್ಯಾನ್ ಆಧಾರನೊಂದಿಗೆ ಲಿಂಕ್ ಆಗಿದ್ದರೆ ಈ ಕೆಳಗಿನಂತೆ ತೋರಿಸುತ್ತದೆ
ಇದನ್ನೂ ಓದಿ :- ಇನ್ನೂ ಮುಂದೆ ರೈತರಿಗೆ 5 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಬೆಳೆ ಸಾಲ ಸಿಗುತ್ತದೆ
ಇದನ್ನೂ ಓದಿ :- ಈ ಟ್ರಾಕ್ಟರ್ ಖರೀದಿಸಿ ಜೊತೆಗೆ ರೋಟೋವೇಟರ್ ಮತ್ತು ಒಂದು ಗ್ರಾಂ ಚಿನ್ನವನ್ನು ಬಹುಮಾನವಾಗಿ ಪಡೆಯಿರಿ
ಇದನ್ನೂ ಓದಿ :- ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ*
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡೋದು ಹೇಗೆ ?ಮೊಬೈಲ್ ನಲ್ಲಿಯೇ ಮಾಡಿ ಆಧಾರ್ ಲಿಂಕ್