ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/FarmerDeclarationReport.aspx
* ನಿಮ್ಮ ಜಿಲ್ಲೆ ತಾಲೂಕು
* ನಿಮ್ಮ ಹೋಬಳಿ
* ನಿಮ್ಮ ಗ್ರಾಮ select ಮಾಡಬೇಕು
* ನಂತರ view ಎಂಬ ಆಯ್ಕೆ ಮೇಲೆ click ಮಾಡಿ
ಆವಾಗ ನಿಮ್ಮ ಮುಂದೆ ಒಂದು ಪಟ್ಟಿ ಬರುತ್ತವೆ ಅದರಲ್ಲಿ ನಿಮ್ ಹೆಸರನ್ನು ಚೆಕ್ ಮಾಡಿ.
ಚೆಕ್ ಸ್ಟೇಟಸ್ ಮಾಡುವುದು ಹೇಗೆ?
ಮೊದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service87/
* ಅಲ್ಲಿ ನಿಮ್ಮ ಜಿಲ್ಲೆ
* ನಿಮ್ಮ ತಾಲೂಕು
* ನಿಮ್ಮ ಹೋಬಳಿ
* ನಿಮ್ಮ ಗ್ರಾಮ
* ಯಾವ ವರ್ಷ
* ಯಾವ ಹಂಗಾಮು
* ಬೆಳೆ ಹಾನಿ ಕಾರಣ
* Get report ಮೇಲೆ ಕ್ಲಿಕ್ ಮಾಡಿ
* ಕೊನೆಗೆ view status ಮೇಲೆ ಕ್ಲಿಕ್ ಮಾಡಿ
ಚಿಕಿತ್ಸೆ ಫಲಿಸದೆ ಯಶ್ ಅಭಿಮಾನಿ ಸಾವು
ಗದಗ : ರಾಕಿಂಗ್ ಸ್ಟಾರ್ ಯಶ್ ನೋಡಲು ಬಂದಿದ್ದ ಅಭಿಮಾನಿಗೆ ನಿನ್ನೆ (ಜ.8) ಬೆಂಗಾವಲು ವಾಹನ ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಯುವಕ ಮೃತಪಟ್ಟಿದ್ದಾನೆ. ಮೃತನನ್ನು ನಿಖಿಲ್ ಗೌಡ (22) ಎಂದು ಗುರುತಿಸಲಾಗಿದ್ದು, ಈತ ಗದಗದ ಬಿಂಕದಕಟ್ಟಿ ನಿವಾಸಿ. ಈತ ಲಕ್ಷೇಶ್ವರ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ. ಗದಗದಿಂದ ವಾಪಸ್ಸು ಆಗುತ್ತಿದ್ದ ನಟ ಯಶ್ ಕಾರಿನ ಹಿಂಬದಿಯಿಂದ ತನ್ನ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ನಿಖಿಲ್ ನನ್ನಿ ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾನೆ.
ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ ಆಯ್ಕೆ
ತಾಲೂಕಿನ ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿ ಕೃಷಿ ಹೊಂಡ ಹಾಕಿ ಕೊಡಲು ರೈತ- ರಿಂದ ಅರ್ಜಿ ಅಹ್ವಾನಿಸಲಾಗಿತ್ತು. ಅದರಲ್ಲಿ ಇಂಡಿ ಹೊಬಳಿಗೆ 23 ಮತ್ತು ಬಳ್ಳೋಳ್ಳಿ ಹೋಬಳಿಗೆ 23 ಕೃಷಿ ಹೊಂಡ ಗುರಿ ನಿಗದಿಪಡಿಸಲಾಗಿತ್ತು. ಹೋಬಳಿಯಿಂದ ಸಾಮಾನ್ಯರಿಗೆ 17 ಕೃಷಿಹೊಂಡ ಗುರಿ ನಿಗದಿ ಮಾಡಿದ್ದು 804 ಅರ್ಜಿ ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 236 ಅರ್ಜಿ,ಪ.ಪಂಗಡ 2 ಕೃಷಿಹೊಂಡ ಗುರಿಗೆ 72 ಅರ್ಜಿ ಹೀಗೆ ಒಟ್ಟು 23 ಕೃಷಿಹೊಂಡ ಗುರಿಗೆ 1112 ಅರ್ಜಿಗಳು ಬಂದಿದ್ದವು.
ಬಳ್ಕೊಳ್ಳಿ ಹೋಬಳಿಯಿಂದ ಸಾಮಾನ್ಯರಿಗೆ 18 ಕೃಷಿಹೊಂಡ ಗುರಿ ನಿಗದಿ ಮಾಡಿದ್ದು 583 ಅರ್ಜಿ ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 179 ಅರ್ಜಿ,ಪ.ಪಂಗಡ 1 ಕೃಷಿಹೊಂಡ ಗುರಿಗೆ 27 ಅರ್ಜಿ ಹೀಗೆ ಒಟ್ಟು 23 ಕೃಷಿಹೊಂಡ ಗುರಿಗೆ 789 ಅರ್ಜಿಗಳು ಬಂದಿದ್ದವು.ಹೀಗಾಗಿ ಫಲಾನುಭವಿಗಳ ಆಯ್ಕೆ ರೈತ ಸಂಪರ್ಕ ಕೇಂದ್ರ ಇಂಡಿ ಮತ್ತು ಬಳ್ಳೋಳ್ಳಿ ಎಲ್ಲ ಫಲಾನುಭವಿಗಳ ಎದುರಿನಲ್ಲೆ ಫಲಾನುಭವಿ ರೈತರಿಂದಲೇ ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
ಇಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಪ್ರಿಯದರ್ಶಿನಿ ಮತ್ತು ವಿ.ಎಸ್.ವಗದರಿಗಿ ಮತ್ತುಬಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಇಂಡಿಯ ಮಹಾದೇವಪ್ಪ ಏವೂರ, ಉಪ ತಹಸೀಲ್ದಾರ ಗೋಟ್ಯಾಳ, ಕೃಷಿ ಅಧಿಕಾರಿ ಎಂ.ಎಂ.ಹಿಟ್ನಳ್ಳಿ, ಬಿ.ಟಿ.ವಾಘಮೋರೆಉಪಸ್ಥಿತರಿದ್ದರು.
ಹೆಲೈಟ್, ಸೀಟ್ ಬೆಲ್ಡ ಧರಿಸಿ ಜೀವ ರಕ್ಷಣೆ ಮಾಡಿಕೊಳ್ಳಿ
ಬಹು ಆಮೂಲ್ಯವಾದ ಜೀವ ರಕ್ಷಣೆ ಅವಶ್ಯವಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರ ಹೆಲೈಟ್ ಬಳಸಿ, ಕಾರು ಚಾಲಕರು ಸೀಟ್ ಬೆಲ್ಬ ಕಡ್ಡಾಯವಾಗಿ ಬಳಸಬೇಕೆಂದು ಶಾಸಕ ಎಚ್. ವಾಯ್.ಮೇಟಿ ಹೇಳಿದರು. ವಿದ್ಯಾಗಿರಿಯ ಕಾಲೇಜ ವೃತ್ತದಲ್ಲಿ ಆಯೋಜಿಸಲಾಗಿದ್ದ 10 ಪೊಲೀಸ್ ದ್ವಿಚಕ್ರ ವಾಹನ ಲೋಕಾರ್ಪಣೆ ಹಾಗೂ ಹೆಲೈಟ್ ಕಡ್ಡಾಯವ ಅಭಿಯಾನ ಪ್ರಯುಕ್ತ ಉಚಿತ ಹೆಲೈಟ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ನಡೆದಂತಹ ಮೋಟಾರ ಸೈಕಲ್ ಅಪಘಾತದಲ್ಲಿ ಹೆಚ್ಚಿನ ಜನ ತೆಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿವೆ. ಹೆಲೈಟ್ ಬಳಸಿದ್ದರೆ ಈ ಅನಾಹುತ ಸಮಭವಿಸುತ್ತಿರಲಿಲ್ಲವೆಂದರು. ಹಿಂದೆ ಹೆಲೈಟ್ ಕಡ್ಡಾಯವ ಇಲ್ಲದ ಸಮಯದಲ್ಲಿ ಅಂದು ನಾನು ಕೂಡಾ ಹೆಲೈಟ್ ಬಳಸಿದ್ದರಿಂದ ತಲೆಒಂದು ಬಿಟ್ಟು ಉಳಿದೆಲ್ಲ ಗಾಯಗಳಾಗಿದ್ದು, ಮರೆತಿಲ್ಲ.
ಅಲ್ಲದೇ ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ ಧರಿಸಿರದರಿಂದ ಅಪಘಾತದಲ್ಲಿ ಸಿಲುಕಿ 25 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇದ್ದ ಬಗ್ಗೆ ನೆನಪಿಸಿಕೊಂಡರು. ಪ್ರತಿಯೊಬ್ಬ ಸವಾರನ ಹಿಂದೆ ಕುಟುಂಬ ಅವಲಂಭಿತವಾಗಿದ್ದು, ಅವಲಂಬಿತ ಕುಟುಂಬದವರ ರಕ್ಷಣೆ ನಿಮ್ಮದಾಗಿದ್ದು, ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸಿ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.