Breaking
Wed. Dec 18th, 2024
Spread the love

ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಯೋಜನೆ. (ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ “ರೈತರ ಬೆಳೆ ಸಮೀಕ್ಷೆ ಆ್ಯಪ್ 2020-21” ಡೌನ್ ಲೋಡ್ ಮಾಡಬೇಕು.)

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ download ಮಾಡುವುದು ಹೇಗೆ?

ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://play.google.com/store/apps/details?id=com.csk.farmer23_24.cropsurvey

ಬೆಳೆ ಸಮೀಕ್ಷೆ ಹೇಗೆ ಮಾಡುವುದು?

ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://bhoomisuddi.com/farmers-2024-monsoon-crop-survey-app-has-been-released-do-the-survey/

ಪಿಎಂ ಕಿಸಾನ್ ಸಮ್ಮಾನ್ ಅನ್ನದಾತರ ಕಾಳಜಿಗೆ ಸಾಕ್ಷಿ: ಕುಮಾರಸ್ವಾಮಿ

3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿದ ಮೊದಲ ಕ್ಯಾಬಿನೆಟ್ ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ- ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದು ಅನ್ನದಾತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ 17ನೇ ಕಂತಿನ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಾರ್ಯಕ್ರಮದ ನೇರ ವೀಕ್ಷಣೆ ಮತ್ತು ಪಶು ಸಖಿ, ಕೃಷಿ ಸಖಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದ 50 ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಕ ಕಾಲಕ್ಕೆ ರೈತರ ಖಾತೆಗೆ 17ನೇ ಕಂತಿನ 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಪೈಕಿ ಇಂದು ಸಾಂಕೇತಿಕವಾಗಿ 1458 ಕೋಟಿ ರೈತರ ಖಾತೆಗೆ ಹಂಚಿಕೆಯಾಗಿದೆ. ಧಾರವಾಡ ಜಿಲ್ಲೆಯ 1 ಲಕ್ಷ ರೈತರಿಗೆ 20 ಕೋಟಿ, ರಾಜ್ಯದ 45 ಲಕ್ಷ ರೈತರಿಗೆ 365 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಅತ್ಯಂತ ಅನುಕೂಲವಾಗಿದ್ದು, ವರ್ಷದಲ್ಲಿ ಮೂರು ಕಂತಿನಲ್ಲಿ ರೈತರ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡುತ್ತ ಬರಲಾಗುತ್ತಿದೆ. ಸದ್ಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು. ರೈತರ ಅಭ್ಯುದಯ ಕೇಂದ್ರ ಸರಕಾರದ ಮುಖ್ಯ ಧೈಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರಿಗೆ ಯೋಜನೆಯ ಫಲ ದೊರೆಯಲಿದೆ. ಈಗಾಗಲೇ 16 ಕಂತಿನಲ್ಲಿ 3.02 ಸಾವಿರ ಕೋಟಿ ಬಿಡಗುಡೆ ಮಾಡಲಾಗಿದೆ. ಇದರಿಂದ ಸಾಕಷ್ಟು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಂಡಿದ್ದಾರೆ.

ಅಲ್ಲದೇ ಇಂದು ವಾರಾಣಸಿಯಲ್ಲಿ ಪ್ರಧಾನಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ರಾಜ್ಯದ ಇಬ್ಬರು ಕೃಷಿ ಮಹಿಳೆಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ನಂತರ ಆನ್‌ಲೈನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಾರ್ಯಕ್ರಮವನ್ನು ವೀಕ್ಷಿಸಿದರು. ಕೃಷಿ ವಿವಿ ಕುಲಪತಿ ಡಾ. ವಿ.ಎಲ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಉಪಸ್ಥಿತರಿದ್ದರು. ಕಳೆದ ವರ್ಷದ ಬೆಳೆ ಹಾನಿ ಪರಿಹಾರ ಇನ್ನು ಅರ್ಧ ಜನ ರೈತರಿಗೆ ತಲುಪಿಯೇ ಇಲ್ಲ.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಬೇಕು. ಕಳಸಾ ಬಂಡೂರಿ ಯೋಜನೆ ಜಾರಿಗೆ ತರಬೇಕು ಮತ್ತು ರಾಜ್ಯದ ರೈತರ ಹಿತಕ್ಕೆ ಅನುಕೂಲವಾಗುವ ಕೆಲಸಗಳನ್ನು ಕೇಂದ್ರ ಸಚಿವರಾಗಿ ಮಾಡಿಕೊಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಕುಮಾರಸ್ವಾಮಿ ಖಂಡಿತವಾಗಿಯೂ ರಾಜ್ಯದ ರೈತರ ಹಿತ ಕಾಯುವ ಕೆಲಸ ಮಾಡುತ್ತೇನೆ ಎಂದರು.

ತುಂಗಭದ್ರಾ ಜಲಾಶಯದಲ್ಲೂ ನೀರಿನ ಹರಿವಿನ ಪ್ರಮಾಣ ಕಡಿಮೆ

ಮಳೆ ಕೊರತೆಯಿಂದಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಹತ್ತಿ, ನವಣೆ, ಸಜ್ಜೆ, ತೊಗರಿ ಬೆಳೆ ಬೆಳವಣಿಗೆ ಹಂತದಲ್ಲೇ ಬಾಡುವ ಸ್ಥಿತಿ ತಲುಪಿದೆ. ಮಳೆ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ ದಟ್ಟ ಮೋಡ ಆವರಿಸಿದರೂ, ಬೀಸುವ ಗಾಳಿಗೆ ಮೋಡ ಮುಂದೆ ಸಾಗುತ್ತಿದೆ. ಮಳೆಗಾಗಿ ಕಾಯುತ್ತಿರುವ ರೈತರಲ್ಲಿ ನಿರಾಸೆ ಮೂಡಿಸಿದೆ.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದು, ಭತ್ತ, ಮೆಣಸಿನಕಾಯಿ, ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುವ ನೀರಾವರಿ ಭೂಮಿ ಹೊಂದಿರುವ ರೈತರಲ್ಲಿ ಆತಂಕ ಮನೆಮಾಡಿದೆ. ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 17,500 ನೀರಾವರಿ ಕೃಷಿ ಭೂಮಿ ಇದೆ. ಮಳೆಯಾಶ್ರಿತ ಭೂಮಿಯಲ್ಲಿ 100 ಹೆಕ್ಟೇರ್ ತೊಗರಿ, 25 ಹೆಕ್ಟೇ‌ರ್ ಔಡಲ, 10 ಹೆಕ್ಟೇರ್ ಸಜ್ಜೆ ಮತ್ತು 15 ಹೆಕ್ಟೇ‌ರ್ ಹತ್ತಿ ಬಿತ್ತನೆಯಾಗಿದೆ. ನೀರಾವರಿ ರೈತರು ಭೂಮಿ ಹದ ಮಾಡಿಕೊಂಡು ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಈವರೆಗೆ 11.3 ಸೆಂ.ಮೀ. ಮಳೆಯಾಗಿದೆ.

ಭೂಮಿಯಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ನಷ್ಟ ಅನುಭವಿಸ ಬೇಕಾಯಿತು. ಈ ವರ್ಷ ರೈತರಲ್ಲಿ ಆಸೆ ಮೂಡಿಸಿದ್ದ ಮುಂಗಾರು. ಬಿತ್ತನೆಯ ನಂತರ ಕೈಕೊಟ್ಟಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂಬುದು ರೈತ ಮೂರ್ತಿ ಅವರ ಅಳಲು. ಆಶ್ವಿನಿ ಮತ್ತು ಕೃತಿಕಾ ಮಳೆ ಕೈಕೊಟ್ಟಿವೆ. ಮೃಗಶಿರ ಮತ್ತು ಆರಿದ್ರ ಮಳೆ ರೈತರನ್ನು ಕೈಬಿಡುವುದಿಲ್ಲ ಎಂಬ ಮಾತು ಹುಸಿಯಾಗುವ ಹಂತ ತಲುಪಿದೆ. ಭರಣಿ ಮಳೆ ಬಂದ್ರೆ ಧರಣಿ ತುಂಬ ಕಾಳು ಎನ್ನು ಮಾತಾದರೂ ನಿಜವಾಗಬಹುದು ಎನ್ನುವ ಆಶಾಭಾವನೆಯಲ್ಲಿ ರೈತರು ಕಾಯುತ್ತಿದ್ದಾರೆ.

ಕೊಟ್ಟೂರು: ತಾಲ್ಲೂಕಿನಾದ್ಯಂತ ಈ ಬಾರಿಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಕಾರಣ ರೈತರು ಉತ್ಸಾಹದಿಂದ ಬಿತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಎಳೆ ಪೈರು ಬಾಡುವುದನ್ನು ಕಂಡು ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಉತ್ತಮವಾಗಿ ಸುರಿದ ಮಳೆಯಿಂದ ಬಿತ್ತನೆಗೆ ಮುಂದಾದೆವು. ನಂತರ ಮಳೆ ಬಾರದಿರುವುದರಿಂದ ಎಳೆ ಪೈರು ಬಾಡುತ್ತಿರುವುದು ಚಿಂತೆಯಾಗಿದೆ’ ಎಂದು ಹುಣಸಿಕಟ್ಟೆ ಗ್ರಾಮದ ರೈತ ಬಸವರಾಜಪ್ಪ ಅಳಲು ತೋಡಿಕೊಂಡರು. ಅತಿವೃಷ್ಟಿ, ಅನಾವೃಷ್ಟಿಗಳಿಂದ ಬಳಲುತ್ತಿರುವ ನಮಗೆ ಎಲ್ಲ ಕಡೆಯಿಂದಲೂ ಹೊಡೆತವೇ ಬೀಳುತ್ತಿದೆ. ಮಳೆ ಕೃಪೆ ತೋರಬೇಕು ಎಂಬ ಹಾರೈಕೆ ಬಿಟ್ಟರೆ ನಮಗೆ ಬೇರೆ ದಾರಿಯೇ ಕಾಣಿಸುತ್ತಿಲ್ಲ’ ಎಂದರು.

ಗೋಮಾಳಗಳಲ್ಲಿ ಹುಲ್ಲಿನ ಬೀಜ ಬಿತ್ತನೆ

ರಾಯಚೂರು ತಾಲ್ಲೂಕಿನಲ್ಲಿ ಪಶುಪಾಲನೆಯಲ್ಲಿ ತೊಡಗಿಸಿಕೊಂಡ ಭೂ ರಹಿತರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇವಿನ ಬೀಜ ಬಿತ್ತನೆಗೆ ಅವಕಾಶ ನೀಡಿದ್ದು, ಹೊಸ ಭರವಸೆ ಮೂಡಿದಂತಾಗಿದೆ. ಗ್ರಾಮೀಣ ಭೂ ರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ, 2023-24ং য ಆಯವ್ಯಯದಲ್ಲಿ ರಾಜ್ಯದಲ್ಲಿ 5 ಸಾವಿರ ಗೋಮಾಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದೆ.

ನರೇಗಾ ಯೋಜನೆ ಮೂಲಕ ಪಶುಸಂಗೋಪನೆ ಸಂರಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದಲ್ಲಿ ಗೋಮಾಳ ಅಭಿವೃದ್ಧಿಗಾಗಿ ಗೋಮಾಳ ಅಂಚಿನ ಸುತ್ತಲು ಕಂದಕ ಬದು ನಿರ್ಮಾಣ, ಗೋಮಾಳದಲ್ಲಿ ಜಲಾನಯನ ಪರಿಕಲ್ಪನೆ ಅನುಷ್ಠಾನ, ಬಹುವಾರ್ಷಿಕ ಮೇವಿನ ಗಿಡಗಳು, ಹಣ್ಣಿನ ಗಿಡ ಬೆಳೆಸುವುದು, ಬಹು ವಾರ್ಷಿಕ ಹುಲ್ಲಿನ ಬೀಜಗಳ ಬಿತ್ತನೆ. ಜಾನುವಾರುಗಳಿಗೆ ನೀರಿನ ಲಭ್ಯತೆಗೆ ಗೋಕಟ್ಟೆ ನಿರ್ಮಾಣ ಮಾಡುವುದಾಗಿದೆ. ಗ್ರಾ.ಪಂ ವ್ಯಾಪ್ತಿಯ ಗೋಮಾಳ ಪ್ರದೇಶದವನ್ನು ವಿವಿಧ ಅನುಷ್ಠಾನ(ಪಶುಸಂಗೋಪನೆ. ಅರಣ್ಯ, ಕೃಷಿ, ತೋಟಗಾರಿಕೆ ಮತ್ತು ಕಂದಾಯ) ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗಿರುತ್ತದೆ.

ರಾಯಚೂರು ತಾಲೂಕಿನ ಆತ್ತೂರು, ಬಿಚ್ಚಾಲಿ, ಬಿಜನಗೇರಾ, ಚಂದ್ರಬಂಡ, ಗಾಣಧಾಳ, ಎನ್. ಮಲ್ಕಾಪುರ, ಗಿಲ್ಲೇಸೂಗುರು, ಗುಂಜಳ್ಳಿ, ಹಿರಾಪೂರು, ಇಡಪನೂರು, ಜೇಗರಕಲ್, ಜಾ.ವೆಂಕಟಪೂರು, ಕಮಲಾಪುರು, ಎಲ್.ಕೆ.ದೊಡ್ಡಿ, ಮಮದಾಪುರ, ಮಿಟ್ಟಿಮಲ್ಕಾಪುರು, ಯದ್ಲಾಪುರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗೋಮಾಳ ಪ್ರದೇಶಗಳನ್ನು ಗುರುತಿಸಲಾಗಿದೆ. ಖಾಲಿ ಇರುವ ಪ್ರದೇಶದಲ್ಲಿ ಭೂ ಕಬಳಿಕೆಯಡಿ ಒತ್ತುವರಿಯಾಗುವ ಚಿಂತೆಯಿಂದ ಮುಕ್ತವಾಗಲು ಸರ್ಕಾರ ಆಯವ್ಯಯದಲ್ಲಿ ಮಂಡಿಸಿದತೆ ಗೋಮಾಳ ಪ್ರದೇಶಗಳ ಸದ್ಬಳಕೆ ಮುಂದಾಗಿದ್ದು, ಅದರ ಭಾಗವಾಗಿ ಭೂಮಿಯಿಲ್ಲದೆ ಇರುವ ಪಶುಪಾಲನೆ ಮಾಡುವ ರೈತರಿಗೆ ಮೇವಿನ ಬೀಜ ಬಿತ್ತನೆ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ನಿರ್ಧಾರ ವರದಾನವಾಗಿದ್ದರೂ ಇಲಾಖೆಗಳ ಸಮನ್ವಯತೆಯೂ ಸವಾಲಾಗಿದ್ದು ಎಷ್ಟರ ಮಟ್ಟಿಗೆ ಕಾರ್ಯಸಾಧುವಾಗಲಿದೆ ಎಂದು ಕಾದು ನೋಡಬೇಕಿದೆ.

ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಗೋಮಾಳ ಅಭಿವೃದ್ಧಿ ಮಾಡುವುದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬುಗಳಾಗಿ ಸುಸ್ಥಿರ ಜೀವನ ಸಾಗಿಸಲು ಒಂದು ವರದಾನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಪವಾ‌ರ್ ಹೇಳಿದರು. ನರೇಗಾ ಯೋಜನೆಯಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ, ಸುಸ್ಥಿರ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ನರೇಗಾ ಯೋಜನೆಯ ತಾಲ್ಲೂಕಿನ ಸಹಾಯಕ ನಿರ್ದೇಶಕ ಹನುಮಂತ ಹೇಳಿದರು.

ಹುಲಕೋಟಿಯ ಕೆವಿಕೆಯಲ್ಲಿ ಮಾಸಿಕ ಕಾರ್ಯಾಗಾರ

ಹುಲಕೋಟಿ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ದೈಮಾಸಿಕ ಕಾರ್ಯಾಗಾರವನ್ನು ಆರ್.ಬಿ.ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು ಉದ್ಘಾಟಿಸಿದರು. ಜಂಟಿ ಕೃಷಿ ನಿರ್ದೇಶಕರಾದ ಜಿ.ಎಚ್. ತಾರಾಮಣಿ ಅವರು ಮಾತನಾಡಿ ಜಿಲ್ಲೆಯ ಮಳೆ ಬೆಳೆ ಪರಿಸ್ಥಿತಿ, ವಾತಾವರಣ, ಬೆಳೆಗಳಿಗೆ ತಗಲುವ ಕೀಟ/ ರೋಗ ಬಾಧೆ ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಿ ಮಾಹಿತಿ ನೀಡಲಾಗುತ್ತಿದೆ . ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಸಕಾಲದಲ್ಲಿ ರೈತರಿಗೆ ಪರಿಕರಗಳನ್ನು ಪೂರೈಸುವುದು, ವಿವಿಧ ಪರಿಕರಗಳ ಗುಣಮಟ್ಟ ಕಾಪಾಡಲು ಗುಣನಿಯಂತ್ರಣ ಅಭಿಯಾನ ಕೈಗೊಳ್ಳುವುದು, ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಹಾರ ಒದಗಿಸುವುದು, ಒಟ್ಟಾರೆಯಾಗಿ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಉಪ ಕೃಷಿ ನಿರ್ದೇಶಕರು ಗದಗ/ ರೋಣ, ಜಿಲ್ಲೆಯ ಎಲ್ಲ ಸಹಾಯಕ ಕೃಷಿ ನಿರ್ದೇಶಕರು ಹಾಗೂ ತಾಂತ್ರಿಕ ಸಿಬ್ಬಂದಿಯು ಸಕಾಲದಲ್ಲಿ ರೈತರಿಗೆ ಕೃಷಿ ಪರಿಕರಗಳು, ಉಪಕರಣಗಳು ದೊರೆಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು. ಅಲ್ಲದೇ, ಬೆಳೆಗಳಿಗೆ ಬರುವ ಕೀಟ/ರೋಗಗಳ ನಿರ್ವಹಣೆ ಕುರಿತು ಮತ್ತು ನೂತನ ಕೃಷಿ ತಾಂತ್ರಿಕತೆಗಳ ಕುರಿತು ಸಕಾಲಕ್ಕೆ ರೈತರಿಗೆ ತಿಳಿಸಬೇಕು ಎಂದು ನಿರ್ದೇಶಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿಯಾದ ಡಾ ಮೊಟಗಿ ಇವರು ಹೆಸರು, ತೊಗರಿ, ಸೂರ್ಯಕಾಂತಿ, ಮತ್ತಿತರೆ ಬೆಳೆಗಳ ಸುಧಾರಿತ, ರೋಗ/ಕೀಟ ನಿರೋಧಕ ಶಕ್ತಿಯನ್ನು ಹೊಂದಿದ ಹಾಗೂ ನವೀನ ತಳಿಗಳ ಕುರಿತು ಮಾಹಿತಿ ನೀಡಿದರು. ಒಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕೃಷಿ ತಾಂತ್ರಿಕತೆಗಳ ಕುರಿತು ಡಾ ಎಂ.ಪಿ.ಪೋತ್ಪಾರ ಹಾಗೂ ಈ ಭಾಗದಲ್ಲಿ ಬೆಳೆದಿರುವ ಬೆಳೆಗೆ ಬರುವ ರೋಗಗಳ ನಿರ್ವಹಣಾ

ಕ್ರಮಗಳ ಕುರಿತು ಡಾ ಶಿವಲಿಂಗಪ್ಪ ಹೋಟಕರ ಚರ್ಚಿಸಿದರು. ಜಿಲ್ಲೆಯ ಬೆಳೆಗಳಲ್ಲಿ ಕಂಡುಬರುವ ಕೀಟಗಳ ನಿರ್ವಹಣೆ ಕುರಿತು ಡಾಸಿ.ಎಂ.ರಫಿ ತಿಳಿಸಿದರು. ವಿವಿಧ ಬೆಳೆಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡಿರುವ ಕುರಿತು ಚರ್ಚಿಸಲಾಯಿತು. ಕೃಷಿ ವಿಜ್ಞಾನಿಗಳಾದ ಡಾಎಸ್. ಎಲ್.ಪಾಟೀಲ, ಡಾಶ್ರೀಮತಿ ಹೇಮಾವತಿ ಹಿರೇಗೌಡರ, ಡಾಎನ್. ಎಚ್.ಬಂಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಸುಧಾ ಮಂಕಣಿ ಹಾಗೂ ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಗದಗ/ರೋಣ, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮಾ ಸಿಬ್ಬಂದಿ ಹಾಗೂ ಕೃಷಿ ಸಂಜೀವಿನಿಯ ತಾಂತ್ರಿಕ ಸಹಾಯಕರು ಹಾಜರಿದ್ದರು.

ಗೃಹಲಕ್ಷ್ಮೀ ಯೋಜನೆಯಡಿ 15 ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಸಲ್ಲಿಕೆ

ವಿಜಯಪುರ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ 15 ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿದ್ದು, ಬಾಕಿ ಉಳಿದ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿ ಗೃಹಲಕ್ಷ್ಮೀ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಸರ್ಕಾರ ಮಹಿಳೆಯರ ಸರಿಸಮಾನವಾಗಿ ಲಿಂಗತ್ವ ಅಲ್ಪಸಂಖ್ಯಾಥರನ್ನೂ ಗೃಹಲಕ್ಷ್ಮಿ ಫಲಾನುಭವಿಗಳೆಂದು ಪರಿಗಣಿಸಿ ಅವರ ಖಾತೆಗಳಿಗೂ ಸಹ ಹಣ ಜಮೆ ಮಾಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರಿದ್ದು, ಸಧ್ಯ 260 ಜನರು ಮಾತ್ರು ಗುರುತಿನ ಚೀಟಿ ಹೊಂದಿದ್ದು, ಅವರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಹ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಡಳಿತ ನೀಡುವ ಗುರುತಿನ ಚೀಟಿ ಪಡೆದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅವರ ಖಾತೆಗೂ ಮಾಸಿಕ ಎರಡು ಸಾವಿರ ರೂ. ಜಮೆಯಾಗಲಿದ್ದು, ಈ ಯೋಜನೆಯಡಿ ಜಿಲ್ಲೆಯ ಎಲ್ಲ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಡಳಿತದಿಂದ ಗುರುತಿನ ಚೀಟಿ ಪಡೆದು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *