ಆತ್ಮೀಯ ನಾಡ ಜನರೇ ನಿಮ್ಮ ಹತ್ತಿರ ಇರುವ ನಿಮ್ಮ ವೋಟರ್ ಐಡಿ ಅದು ಕಳೆದು ಹೋಗಿದ್ದರೆ ಏನು ಮಾಡಬೇಕು. ನೀವು ಮೊದಲೇ ನಿಮ್ಮ ಮತದಾರ ಚೀಟಿಯನ್ನು ಹೊಂದಿದ್ದು ಯಾವುದೋ ಸಮಯದಲ್ಲಿ ಅದು ಕಳೆದು ಹೋಗಿದ್ದರೆ ಮುಂದೆ ಏನು ಮಾಡಬೇಕೆಂಬ ಪರಿಯನ್ನು ನಾವು ತಿಳಿಸಿಕೊಡುತ್ತೇವೆ. ನಿಮ್ಮ ಹತ್ತಿರ ಒಂದು ಮೊಬೈಲ್ ಫೋನ್ ಇದ್ದರೆ ಸಾಕು, ನೀವು ಕೇವಲ ಹತ್ತು ನಿಮಿಷದಲ್ಲಿ ನಿಮ್ಮ ವೋಟರ್ ಐಡಿ ಅನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ನಿಮ್ಮ ಕಂಪ್ಯೂಟರ್ನಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.
ಈ ವೋಟರ್ ಐಡಿಯನ್ನು ಡೌನ್ಲೋಡ್ ಮಾಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://eci.gov.in/e-epic/
ನಂತರ ಅಲ್ಲಿ ಕಾಣುವ Download e- EPIC card ಎಂಬ ಆಯ್ಕೆಯು ನಿಮಗೆ ಕಾಣುತ್ತದೆ. ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಅಲ್ಲಿ ಕಾಣುವ “don’t have account, register as a new user” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ಅದು ನಿಮ್ಮನ್ನು ಬೇರೆ ಪೇಜ್ ಗೆ ಕರೆದುಕೊಂಡು ಹೋಗುತ್ತದೆ. ಆಮೇಲೆ ನೀವು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರನ್ನು ಹಾಕಿ, ನಂತರ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ಮುಂದೆ ಹೊಡೆಯಬೇಕು. ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ನೋಡಿಕೊಂಡು ಆ ಸ್ಥಳದಲ್ಲಿ ಹಾಕಬೇಕು.
ನಂತರ ನೀವು ಓಟಿಪಿ ಹಾಕಿದ ಮೇಲೆ ನಿಮ್ಮ ಖಾತೆಗೆ ನೀವು ಹೊಸದಾಗಿ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿ ಅಲ್ಲಿ ನಮೂದಿಸಬೇಕು. ನಂತರ ನೀವು ನಿಮ್ಮ ಪಾಸ್ವರ್ಡ್ ಮತ್ತು ಮೊಬೈಲ್ ನಂಬರ್, ಕ್ಯಾಪ್ಷ ಕೊಡನ್ನು ಹಾಕಿ ಲಾಗಿನ್ ಆಗಬಹುದು. ಇಷ್ಟೆಲ್ಲಾ ಆದಮೇಲೆ ನೀವು Download e- EPIC card ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಅಲ್ಲಿ ನಿಮ್ಮ EPIC ನಂಬರನ್ನು ಹಾಕಿ ನಿಮ್ಮ ರಾಜ್ಯವನ್ನು ಆಯ್ದುಕೊಳ್ಳಬೇಕು. ನಂತರ ನಿಮ್ಮ ನೋಂದಣಿ ಮಾಡಿದ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಆ ಒಟಿಪಿಯನ್ನು ನೀವು ಅಲ್ಲಿ ನಮೂದನೆ ಮಾಡಬೇಕು. ಇಷ್ಟೆಲ್ಲಾ ಆದಮೇಲೆ ಕೊನೆಗೆ ನೀವು Download e- EPIC card ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ವೋಟರ್ ಐಡಿ ಡೌನ್ಲೋಡ್ ಆಗಿ ನಿಮ್ಮ ಮೊಬೈಲ್ ನಲ್ಲಿ ಬರುತ್ತದೆ.
ಇದನ್ನೂ ಓದಿ :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ದಿನಗೂಲಿ 357 ರೂಪಾಯಿ ಹೆಚ್ಚಳ