ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.mylpg.in/
ನೀಲಿ ಬಣ್ಣದ click here ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ಕೆಳಗೆ ಕಾಣುವ ಚಿತ್ರದ ಹಾಗೆ ನಿಮ್ಮ ಗ್ಯಾಸ್ ಏಜೆನ್ಸಿ ಸೆಲೆಕ್ಟ್ ಮಾಡಿ.
ಆಮೇಲೆ ನಿಮ್ಮ ರಾಜ್ಯ, ನಿಮ್ಮ ಜಿಲ್ಲೆ, ನಿಮ್ಮ ಗ್ಯಾಸ್ ಏಜೆನ್ಸಿ, ನಿಮ್ಮ consumer ನಂಬರ್ ಮತ್ತು captch ಕೋಡ್ ಅನ್ನು ಹಾಕಿ ಪ್ರೊಸೀಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ಮೊಬೈಲ್ ನಂಬರ್ ಬರುತ್ತದೆ,
• OTP ಹಾಕಿ,
• ಆಮೇಲೆ submit ಮೇಲೆ ಕ್ಲಿಕ್ ಮಾಡಿ.
• ಇಮೇಲ್ ಐಡಿಗೆ ಒಂದು ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
• ಆಮೇಲೆ ನೀವು ಹೊಸದಾಗಿ ಒಂದು Password create & confirm password type ಮಾಡಬೇಕು.
• ಈಗ ನಿಮ್ಮ Account activate ಆಗಿ ಬಿಡುತ್ತದೆ.
• ಇಷ್ಟಾದ ಮೇಲೆ ನೀವು click here to login ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ಕೊನೆಗೆ signin ಮೇಲೆ ಕ್ಲಿಕ್ ಮಾಡಿ
• ಎಲ್ಲಿ ನಿಮ್ಮ ಮೊಬೈಲ್ ನಂಬರ್ / email Id ಹಾಕಬೇಕು, ಎಲ್ಲಿ ಕಾಣುವ captcha type ಮಾಡಬೇಕು.
• ಕೆಳಗೆ ಕಾಣುವ login ಮೇಲೆ ಕ್ಲಿಕ್ ಮಾಡಿ.
• ಎಲ್ಲಿ ನೀವು ನಿಮ್ಮ ಗ್ಯಾಸ್ ಸಂಪರ್ಕದ ವಿವರಗಳು ಕಾಣುತ್ತವೆ.
• ನಿಮ್ಮ ಎಡಕ್ಕೆ ಕಾಣಿಸಿಕೊಳ್ಳುವ ಆಧಾರ್ ದೃಢೀಕರಣ ಆಯ್ಕೆ ಆರಿಸಿ.
• ನೀವು ಎಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸ ಬೇಕು.
• ಇಮೇಲ್ ಗೆಟ್ ಒಟಿಪಿ ಕ್ಲಿಕ್ ಮಾಡಬೇಕು.
• ನೀವು ಮೊಬೈಲ್ ಗೆ ಬರುವ ಒಟಿಪಿ ಹಾಕಿ.
• ಈಗ ekyc ಸಂಪೂರ್ಣ ಆಗಿದೆ.
ನಿಮಗೆ ಇಷ್ಟೆಲ್ಲಾ ಮಾಡುವುದು ಗೊತ್ತಾಗದಿದ್ದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ekyc ಮಾಡಿಸಿಕೊಳ್ಳಬಹುದು. ನಿರಂತರವಾಗಿ ಈ ರೀತಿಯ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ಭೂಮಿ ಸುದ್ದಿ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿ.
ಲಯನ್ಸ್ ಕ್ಲಬ್ ವತಿಯಿಂದ ಫೆಬ್ರವರಿ 4ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಚಿಕ್ಕಮಗಳೂರು ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ಮಿಲನ್ ಇವರ ಸಹಯೋಗದೊಂದಿಗೆ ಫೆ.4ರಂದು ಮೆಗಾ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ. ನಗರದ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸೇವಾ ಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶುಗರ್, ಬಿ.ಪಿ.. ಇಮೋಗ್ಲೋಬಿನ್ ಪರೀಕ್ಷೆ. ವೈದ್ಯರ ಸಮಾಲೋಚನೆ, ಡೆಂಟಲ್ ಮತ್ತು ಶ್ರವಣ ಸ್ಟೀನಿಂಗ್, ಕಣ್ಣಿನ ತಪಾಸಣೆ, ಆಡಿಯೋಗ್ರಾಮ್ ಶಿಬಿರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಸವೇಶ್ವರ ಪಾಲಿ ಕ್ಲಿನಿಕ್‌ನ ಡಾ. ಸುರೇಶ್ ಕಣ್ಣಿನ ತಪಾಸಣೆ ನಡೆಸಲಿದ್ದು, ಅಗತ್ಯವಿದ್ದವರಿಗೆ ಉಚಿತ ಓದುವ ಕನ್ನಡಕಗಳನ್ನು ವಿತರಣೆ ಮಾಡಲಿದ್ದು, ನಗರದ ದಂತ ವೈದ್ಯ ಡಾ. ಖಾದರ್ ಮತ್ತು ಡಾ. ಲಯನ್ ಸುಂದರೇಗೌಡ ದಂತ ತಪಾಸಣೆ ನಡೆಸಲಿದ್ದಾರೆ. ದೇಹದಲ್ಲಿನ ಕೊಬ್ಬು, ನಾರಿನಾಂಶ, ಬೊಜ್ಜು ಸೇರಿದಂತೆ ಹಲವು ರೋಗಗಳ ಆರೋಗ್ಯ ತಪಾಸಣೆ ನಡೆಯಲಿದ್ದು, ಲಯನ್ ಸೂರಿ ಪ್ರಭು ಮತ್ತು ಲಯನ್ ಭಗವತಿ ಹರೀಶ್ ಹಾಗೂ ಲಯನ್ ಸುನಿಲ್ ಕುಮಾರ್ ಈ ಕಾರ್ಯಕ್ರಮದ ಕೋ- ಆರ್ಡಿನೇಟರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಲಯನ್ಸ್ ಕ್ಲಬ್ ಬೆಂಗಳೂರು ಮಿಲನದ ಅಧ್ಯಕ್ಷ ರಾಘವೇಂದ್ರ ಪ್ರಸಾದ್ ಹಾಗೂ ಖಜಾಂಚಿ ಲಯನ್ ಕೆ. ನರಸಿಂಹ ಗುಪ್ತ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಆರೋಗ್ಯ ಶಿಬಿರದಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಜಿ.ರಮೇಶ್ ಮನವಿ ಮಾಡಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಹೆಸರುಗಳನ್ನು ಮೋಹಿನಿ ದೂ.ಸಂ. 8792065037 ಇವರನ್ನು ಸಂಪರ್ಕಿಸಬಹುದಾಗಿದೆ.
ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್: ಕ್ರಮ ಸಮರ್ಥಿಸಿಕೊಂಡ ಸಚಿವ ಈಶ್ವರ್ ಖಂಡ್ರೆ
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಿಸುವ ಕುರಿತ ಸರ್ಕಾರದ ವಿರುದ್ಧದ ಕ್ರಮವನ್ನು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಒಡೆತನದ ಕಾರ್ಖಾನೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಲಕ್ಷಾಂತರ ಟನ್ ಕಬ್ಬು ಅರೆಯುತ್ತಿದ್ದರು. ಹೀಗಾಗಿ ಸಂಬಂಧ ಪಟ್ಟ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಇದೇ ವೇಳೆ ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ವರ್ಷದ ಹಿಂದೆ 1.5 ಕೋಟಿ ರೂ. ದಂಡ ವಿಧಿಸಿತ್ತು. ಯತ್ನಾಳ್ ದಂಡದ ಮೊತ್ತ ಮರುಪಾವತಿಸಿದ್ದಾರೆ. ಹೀಗಿರುವಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜಕೀಯ ಕಾರಣಗಳಿಂದಾಗಿ ರಾಜ್ಯ ಸರ್ಕಾರವೇ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪಗಳು ಆಧಾರ ರಹಿತವಾಗಿದೆ ಎಂದು ಖಂಡ್ರೆ ಹೇಳಿದರು.
ವಾರದ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ನಡೆಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವರು ತಿಳಿಸಿದ್ದು, ಎಷ್ಟು ಕಾರ್ಖಾನೆಗಳು ಪರಿಸರ ಮಾಲಿನ್ಯ ಕಾಯಿದೆಯನ್ನು ಉಲ್ಲಂಘಿಸಿ ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿವೆ ಎಂಬುದನ್ನು ಪತ್ತೆ ಹಚ್ಚಿ, ಉಲ್ಲಂಘಿಸಿದವರ ಮೇಲೆ ಮಂಡಳಿಯು ಯಾವ ಕ್ರಮ ಕೈಗೊಂಡಿದೆ ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ಖಂಡ್ರೆ ಹೇಳಿದರು. ವರದಿ ಆಧರಿಸಿ ಇದೀಗ ಸರ್ಕಾರ ಪರಿಸರ ಮಾಲಿನ್ಯ ಕಾಯಿದೆ ಉಲ್ಲಂಘಿಸಿದ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.