ಸರ್ಕಾರಿ ಹೆಸರಿನಲ್ಲಿರುವ ಜಮೀನುಗಳಲ್ಲಿ ಸಾಲು ಸಾಲಾಗಿ ಸಾಗುವಳಿಯನ್ನು ಮಾಡುತ್ತಿರುವ ಭೂಮಿಯನ್ನು ಹೊಂಡಿಲ್ಲದವರು ಮತ್ತು ಸಣ್ಣ ರೈತರ ಜಮೀನುಗಳನ್ನು ಸಕ್ರಮವಾಗಿ ಮಾಡಿಸಲು 31- ಮೇ- 2023 ವರೆಗೆ ವಿಸ್ತರಣೆಯನ್ನು ಮಾಡುವ ಬಹುಮುಖ್ಯವಾದ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ಒಂದು ವೇಳೆ ನೀವು ರೈತರು ಆಗಿದ್ದರೆ. ನೀವು ಸರ್ಕಾರದ ಜಾಗದಲ್ಲಿ ನಿಮ್ಮ ಬೇಸಾಯ ವೃತ್ತಿಯನ್ನು ಮಾಡಿಕೊಂಡು, ಅಲ್ಲಿಯೇ ನಿಮ್ಮ ಉಪಜೀವನ ನಡೆಸುತ್ತಿದ್ದರೆ. ಅಂತಹ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ. ಸರ್ಕಾರವು ನಮ್ಮ ರೈತರಿಗಾಗಿ ಆ ಜಗಕ್ಕೆ ಒಮ್ಮೆ ಸಾಗುವಳಿ ಚೀಟಿಯನ್ನು ಪಡೆದರೆ ಆ ಜಗವನ್ನು ಮಾರಲು ಅವರಿಗೆ ಅಧಿಕಾರ ಇರುವುದಿಲ್ಲ. ಆ ಜಮೀನು ಮಾರಾಟವಾಗುವುದೇ ಇಲ್ಲ. ಈ ಸರ್ಕಾರಿ ಜಾಗದಲ್ಲಿ ಕೃಷಿ ಮಾಡುವವರಿಗೆ ಮತ್ತೊಂದು ಲಾಭವನ್ನು ಕೊಡಲು ಸರ್ಕಾರ ನಿರ್ಧಾರ ಮಾಡಿದೆ.
ಈ ಅಕ್ರಮ ಸಕ್ರಮ ಯೋಜನೆ ಅಡಿ ಯಾವುದೇ ವ್ಯಕ್ತಿ ತಾನು ಬಹುದಿನಗಳಿಂದ ಒಂದು ಜಾಗದಲ್ಲಿ ಉಳಿಮೆಯನ್ನು ಮಾಡುತ್ತಿದ್ದು ಅದರಿಂದ ಅವನಿಗೆ ಲಾಭವನ್ನು ದೊರೆಸಿಕೊಂದು ಜೀವಿಸುತ್ತಿದ್ದರೆ ಅದನ್ನು ತಮಗೆಯೇ ಸ್ವಂತದ್ದಾಗಿ ಮಾಡಿಕೊಡುವ ಅವಕಾಶವನ್ನು ಕಲ್ಪಿಸುತ್ತದೆ ಹಾಗೂ ತನ್ನ ಜಮೀನಿನ ಮೇಲೆ ಅಧಿಕಾರವನ್ನೂ ಹೊಂದಲು ಸಕ್ರಮ ಮಾಡಿಕೊಳ್ಳುವುದಕ್ಕೆ ಗೊತ್ತುಪಡಿಸಿದ ಅರ್ಹತೆಗಳನ್ನು ಹೊಂದಿರುತ್ತಾರೆ.
ಸರ್ಕಾರಿ ಜಮೀನನ್ನು ಅನಧೀಕೃತ ಸಾಗುವಳಿಯನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 (A) ಅನ್ವಯ ಅವಕಾಶ ನೀಡಲಾಗಿದೆ. ನಮೂನೆ 57 ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಮೇ 31 ರ 2023 ರ ವರೆಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಅನಧೀಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ಭೂ ಕಂದಾಯ ಕಾಯ್ದೆ 1964 ರ ಕಲಂ 94 (A), 94 (B), 94(A4) ಅಡಿಯಲ್ಲಿ ನಮೂನೆ 50- 53 ರಲ್ಲಿ ಅರ್ಜಿ ಸಲ್ಲಿಸುವವರಿಗೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದಿದ್ದಾರೆ.
ಅರ್ಜಿ ನಮೂನೆಯನ್ನು ಪಡೆಯುವುದು ಹೇಗೆ?
ಅರ್ಜಿ ಸಲ್ಲಿಸಲು ಜನರು ನಿಮ್ಮ ಹತ್ತಿರದ ನಾಡಕಚೇರಿಗೆ ಹೋಗಿ, ಅಲ್ಲಿ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ಇರುವ ದಾಖಲಾತಿಗಳನ್ನು ಒದಗಿಸಬೇಕು. ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಮೇಲೆ ಅರ್ಜಿ ನೋಂದಣಿ ನಮೂನೆಯನ್ನು ಕರ್ನಾಟಕದ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಸಲ್ಲಿಸಬೇಕು.
ಇದನ್ನೂ ಓದಿ :- ಪಿಎಂ ಕಿಸಾನ್ ಬಿಗ್ ಅಪ್ಡೇಟ್ ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡಿ