ಮಾನ್ಯ ಕಂದಾಯ ಸಚಿವರಾದ ಆರ.ಅಶೋಕ್ ರವರು ಬೃಹತ್ ಘೋಷಣೆಯನ್ನು ಮಾಡಿದ್ದಾರೆ ಅದುವೇ, ನೋಂದಣಿಯಾದ ಆಸ್ತಿ ನೀಡಲು ಸದ್ಯಕ್ಕೆ 34 ದಿನಗಳ ಕಾಲ ಕಾಲವಕಾಶ ಇತ್ತು. ಇದನ್ನು 7 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ತಿಳಿಸಿದರು ಎಂದರೆ ಆಸ್ತಿ ನೋಂದಣಿಯಾದ 7 ದಿನದ ಒಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿಯನ್ನು ಬದಲಾವಣೆಯನ್ನು ಕಡ್ಡಾಯಗೊಳಿಸುವುದು ಎಂದು ಆರ್ ಅಶೋಕ್ ಹೇಳಿದ್ದಾರೆ. ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಬೇರೊಬ್ಬರ ಹೆಸರಲ್ಲಿ ಇದ್ದ ಆಸ್ತಿಯನ್ನು ನೀವು ಖರೀದಿ ಮಾಡಿರುತ್ತಿರ ಆದರೆ ಅದು ನಿಮ್ಮ ಹೆಸರಿಗೆ ನೊಂದನಿಯಾಗಬೇಕಾದರೆ ಬರೋಬ್ಬರಿ 1 ತಿಂಗಳ ಮೇಲೆ 4 ದಿನ ಕಾಯಬೇಕಾಗಿತ್ತು ಆದರೆ ಈಗ ಕೇವಲ 7 ದಿನಗಳಲ್ಲಿ ಆಸ್ತಿ ನಿಮ್ಮ ಹೆಸರಿಗೆ ನೊಂದಣಿಯಾಗುತ್ತದೆ. ಆಸ್ತಿ ನೋಂದಣಿ ಮಾಡಿಸಿಕೊಂಡವರು ಖಾತೆ ಪಡೆಯಲು ತಿಂಗಳುಗಟ್ಟಲೇ ಕಛೇರಿಗೆ ಹೋಗುವುದನ್ನು ತಪ್ಪಿಸಲು ಈ ತೀರ್ಮಾನವನ್ನು ಮಾಡಲಾಗಿದೆ. ಇದರಿಂದ ಆಸ್ತಿ ಮೇಲೆ ಸೌಲಭ್ಯ ಪಡೆಯಲು ಜನರಿಂದ ಬಹಳಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನವನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೀಗೆ ಮಾಡುವುದರಿಂದ ತಲೆಯ ಭಾರ ಹಾಗೂ ಸಂತೋಷವನ್ನು ಆಸ್ತಿ ಖರೀದಿಸಿದವರಿಗೆ ಸಿಗುತ್ತದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.