Breaking
Tue. Dec 17th, 2024

ನಿಮ್ಮ ಹೊಲದ ನಕ್ಷೆ ಮೊಬೈಲ್ನಲ್ಲಿ ಪಡೆಯುವುದು ಹೇಗೆ??

Spread the love

ಆತ್ಮೀಯ ರೈತ ಭಾಂದವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ಕರ್ನಾಟಕದಿಂದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರವು ಮತ್ತೊಂದು ಭರ್ಜರಿ ಬಹುಮಾನ ನೀಡಿದೆ. ನಿಮ್ಮ ಅಥವಾ ರೈತರ ಜಮೀನಿನ ಅಥವಾ ಹೊಲದ ಮ್ಯಾಪ್ ಮತ್ತು ನಕ್ಷೆ ತಮ್ಮ ತಮ್ಮ ಮೊಬೈಲ್ ನಲ್ಲಿಯೇ ಲಭ್ಯವಿರುವಂತೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಭೂ ಮಾಪನ ಮತ್ತು ಕಂದಾಯ ಇಲಾಖೆಯು ರೈತರ ಜಮೀನಿನ ನಕ್ಷೆಯಲ್ಲಿ ಅಥವಾ ಅವರ ಮ್ಯಾಪ್ ನಲ್ಲಿ ಕಾಲುದಾರಿ ಹಾಗೂ ರಸ್ತೆ ಬಂಡಿ ದಾರಿ ಸೇರಿದಂತೆ, ಇತರೆ ಇನ್ನೂ ಎಲ್ಲಾ ರೀತಿಯ ವಿವರವಾದ ಮಾಹಿತಿಯನ್ನು ಒಳಗೊಂಡ,

ರೈತರಿಗೆ ಅವರ ಕೈನ ಬೆರಳ ತುದಿಗೆ ಸಿಗುವಂತೆ ಕರ್ನಾಟಕ ರಾಜ್ಯ ಸರ್ಕಾರವು ಜಮೀನಿನ ಮ್ಯಾಪ್ ಅಥವಾ ಹೊಲದ ನಕ್ಷೆಯು ತಮ್ಮ ಮೊಬೈಲ್ ನಲ್ಲಿ ದೊರೆಯುವಂತೆ ಹೊಸ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದ ರೈತರು ತಮ್ಮ ಅನೇಕ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳುವಷ್ಟು ಅನುಕೂಲ ರಾಜ್ಯ ಸರ್ಕಾರ ಮಾಡಿಕೊಡಲಾಗಿದೆ.

ಬನ್ನಿ, ನೀವು ಕೂಡ ರೈತರಾಗಿದ್ದರೆ ಅಥವಾ ರೈತರ ಕುಟುಂಬಕ್ಕೆ ಸೇರಿದವರಾಗಿದ್ದರೆ ತಪ್ಪದೇ ಇದರ ಸಹಾಯವನ್ನು ಪಡೆದುಕೊಳ್ಳಿ.

ಇನ್ನು ಮುಂದೆ ರೈತರು ತಾಲೂಕು ಕಚೇರಿ ಕಂದಾಯ ಇಲಾಖೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಮ್ಮ ಜಮೀನಿನ ಅಥವಾ ಹೊಲದ ಮ್ಯಾಪನ್ನು ಅಥವಾ ನಕ್ಷೆಯನ್ನು ತಮ್ಮ ಮೊಬೈಲ್ ನಲ್ಲಿಯೇ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೈತರ ಬಳಿ ಯಾವುದಾದರೂ ಒಂದು ಸ್ಮಾರ್ಟ್ ಫೋನ್ (smart phone) ಇದ್ದರೆ ಸಾಕು. ಅದರಿಂದ ರೈತರು ತಮ್ಮ ಜಮೀನಿನ ಅಥವಾ ಹೊಲದ ಮ್ಯಾಪನ್ನು ಮನೆಯಲ್ಲಿ ಕುಳಿತುಕೊಂಡು ವೀಕ್ಷಿಸಬಹುದು ಅಥವಾ ಬೇಕೆಂದರೆ ಅದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

  • ಈಗ ನಾವು ರೈತರ ಜಮೀನಿನ ಅಥವಾ ನಕ್ಷೆಯನ್ನು ನೋಡುವುದು ಹೇಗೆ? ಹಾಗೂ ಅದೇ ರೀತಿಯಲ್ಲಿ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ.
  • ರೈತರು ತಮ್ಮ ಜಮೀನಿನ ಅಥವಾ ತಮ್ಮ ಅಥವಾ ಸಂಬಂಧಪಟ್ಟವರ ಹೊಲದ ಮ್ಯಾಪ್ ಅಥವಾ ನಕ್ಷೆ ಡೌನ್ಲೋಡ್ ಮಾಡಿಕೊಳ್ಳಲು ಅಥವಾ ಅದರ ಬಗ್ಗೆ ಮಾಹಿತಿ ಪಡೆಯಲು ಮೊದಲಿಗೆ ಕರ್ನಾಟಕ ರಾಜ್ಯ ಸರ್ಕಾರದ ವೆಬ್ ಸೈಟ್ ಆದಂತಹ

www.landrecords.karnataka.gov.in ಎಂಬ ವೆಬ್ ಸೈಟನ್ನು ತೆರೆಯಬೇಕಾಗುತ್ತದೆ.

  • ಈ ವೆಬ್ ಸೈಟ್ ಅನ್ನು ತೆರೆದ ನಂತರ ಅಥವಾ ಅದರ ಮೇಲೆ ಕ್ಲಿಕ್ಕ ಮಾಡಿ ತೆರೆದ ನಂತರ ನಿಮಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಂದರೆ ರೆವೆನ್ಯೂ ಮ್ಯಾಪ್ ವೆಬ್ ಸೈಟ್ (revenue map website) ನ ಮುಖಪುಟ ತೆರೆದುಕೊಳ್ಳುತ್ತದೆ.
  • ರೈತರಿಗೆ ಈ ಮುಖ ಪುಟದಲ್ಲಿ ಕೇಳಲಾಗುವ ಮಾಹಿತಿಯ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಅದರಲ್ಲಿ ರೈತರಿಗೆ ಅಂದರೆ ಈ ಮುಖ ಪುಟದಲ್ಲಿ ರೈತರಿಗೆ ತಮ್ಮ ಜಿಲ್ಲೆಯ ಆಯ್ಕೆ ಮತ್ತು ತಮ್ಮ ತಾಲೂಕಿನ ಆಯ್ಕೆಯನ್ನು ಕೇಳಲಾಗುತ್ತದೆ. ರೈತರು ತಮಗೆ ಸಂಭದಪಟ್ಟ ಜಿಲ್ಲೆಯ ಮತ್ತು ತಾಲೂಕಿನ ಆಯ್ಕೆಯನ್ನು ಮಾಡಬೇಕಾಗುತ್ತದೆ.

  • ಅದೇ ರೀತಿಯಾಗಿ ಅದರಲ್ಲಿ ರೈತರಿಗೆ ಅಂದರೆ ಈ ಮುಖ ಪುಟದಲ್ಲಿ ರೈತರಿಗೆ ಅವರ ವ್ಯಾಪ್ತಿಯಲ್ಲಿ ಬರುವ ಹೋಬಳಿ ಮತ್ತು ಅವರ ಹಳ್ಳಿಯ ಆಯ್ಕೆಯನ್ನು ನೀಡಲಾಗುತ್ತದೆ. ರೈತರು ತಮಗೆ ಸಂಬಂಧ ಪಟ್ಟ ಹೋಬಳಿ ಮತ್ತು ತಮ್ಮ ಹಳ್ಳಿಯ ಆಯ್ಕೆಯನ್ನು ಮಾಡಬೇಕಾಗುತ್ತದೆ.
  • ಇದಾದ ನಂತರ ರೈತರು ತಮ್ಮ ಹೋಬಳಿಯ ಆಯ್ಕೆಯನ್ನು ಮಾಡಿಕೊಂಡ ನಂತರ, ಅವರ ಹೋಬಳಿಯ ವ್ಯಾಪ್ತಿಯಲ್ಲಿ ಬರುವಂತಹ ಅನೇಕ ಗ್ರಾಮಗಳ ಪಟ್ಟಿಯನ್ನು ಈ ಮುಖ ಪುಟದಲ್ಲಿ ನೀಡಲಾಗುವುದು.
  • ನಂತರ ರೈತರು ಅಲ್ಲಿ ತಮ್ಮ ಗ್ರಾಮಗಳ ಅಥವಾ ತಮಗೆ ಯಾವ ಊರಿನ ಮಾಹಿತಿಯನ್ನು ಬೇಕೋ ಆ ಊರಿನ ಹೆಸರಿನ ಮುಂದೆ ಇರುವ ಪಿಡಿಎಫ್ (pdf) ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಪಿಡಿಎಫ್ (pdf) ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿದ ನಂತರ ಆ ಊರಿನ ಅಂದರೆ ನೀವು ಆಯ್ಕೆ ಮಾಡಿದ ಊರಿನ ಮ್ಯಾಪ್ ತೆರೆದುಕೊಳ್ಳುತ್ತದೆ. ಒಂದು ವೇಳೆ ರೈತರು ತಮಗೆ ಸಂಬಂಧಪಟ್ಟ ಅಥವಾ ರೈತರು ಆಯ್ಕೆ ಮಾಡಿಕೊಂಡ ಪಿಡಿಎಫ್ ಮ್ಯಾಪ್ (pdf map) ಡೌನ್ಲೋಡ್ ಆಗದಿದ್ದರೆ ರೈತರಿಗೆ pop up blocked ಎಂಬ ಮೆಸೇಜ್ ಕಾಣುತ್ತದೆ.
  • ಅದರಲ್ಲಿ ರೈತರು ಅಲ್ಲಿ ಮೆಸೇಜ್ ನಲ್ಲಿ ಕಾಣುವ ಆಲ್ವೇಸ್ ಶೇರ್ (always share) ಎಂಬುದರ ಮೇಲೆ ಕ್ಲಿಕ್ ಮಾಡಿದರೆ ಸಾಕು. ರೈತರು ಯಾವ ಊರು ಆಯ್ಕೆ ಮಾಡಿಕೊಂಡಿದ್ದರೋ ಅಥವಾ ಯಾವ ಊರಿನ ಬಗ್ಗೆ ವಿವರವಾದ ಮಾಹಿತಿಯ ಅಗತ್ಯವಿದೆಯೋ ಅಂತಹ ಊರಿನ ಸರ್ವೇ ನಂಬರ್ ಮತ್ತು ಇನ್ನಿತರೇ ಅನೇಕ ಮಾಹಿತಿಯನ್ನು ಒಳಗೊಂಡ ಮ್ಯಾಪ್ ಡೌನ್ಲೋಡ್ ಆಗುತ್ತದೆ.
  • ರೈತರು ತಮ್ಮ ಊರಿನ ಅಥವಾ ತಾವು ಆಯ್ಕೆ ಮಾಡಿದ ಊರಿನ ಮ್ಯಾಪ್ ಡೌನ್ಲೋಡ್ ಆದ ನಂತರ ಅವರಿಗೆ ತಮ್ಮ ಅಥವಾ ತಾವು ಆಯ್ಕೆ ಮಾಡಿದ ಊರಿನ ಗಡಿ ರೇಖೆಗಳು ಮತ್ತು ಆ ಊರಿನ ಜಮೀನಿನ ಅಥವಾ ಹೊಲಗಳ ಸರ್ವೆ ನಂಬರ್ ಗಳ ಮಾಹಿತಿ ಲಭ್ಯ ವಾಗುತ್ತದೆ.
  • ಹಾಗೂ ಅದೇ ರೀತಿಯಲ್ಲಿ ಆ ಊರಿನ ಸುತ್ತಮುತ್ತಲಿನ
  • ಸರ್ವೆ ನಂಬರಗಳು
    •ಹಳ್ಳ
    •ಕೊಳ್ಳ
    •ನದಿ
  • ಕಾಲುವೆ
  • ಬಂಡಿದಾರಿಗಳು ಮತ್ತು
    •ಕಾಲುಧಾರಿಗಳು

ಇವೆಲ್ಲವುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಈ ಡೌನ್ಲೋಡ್ ಮಾಡಿಕೊಂಡ ಮ್ಯಾಪ್ ನ ಸಹಾಯದಿಂದ ಪಡೆದುಕೊಳ್ಳಬಹುದು.

» ರೈತರಿಗೆ ತಮ್ಮ ಮೊಬೈಲ್ ನಲ್ಲಿಯೇ ತಮ್ಮ ಜಮೀನಿನ ಅಥವಾ ಹೊಲದ ಮತ್ತು ಜಮೀನಿನ ಸರ್ವೆ ನಂಬರ್ ಗಳ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಮಾಡಿಕೊಡಲಾಗಿದೆ.

» ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ರಾಜ್ಯ ಸರ್ಕಾರವು ಮೃತರ ಅಥವಾ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅಥವಾ ಭೂ ಪ್ರದೇಶಗಳನ್ನು ಮತ್ತು ಅದಕ್ಕೆ ಸಂಭಂದ ಪಟ್ಟ ಭೂ ದಾಖಲೆಗಳನ್ನು ಅದಕ್ಕೆ ಸಂಬಂಧಪಟ್ಟ ವಾರಸುದಾರರಿಗೆ ಅಥವಾ ಹಾಲಿ ವಾರಸುದಾರರಿಗೆ ವರ್ಗಾಯಿಸಲು ಅಥವಾ ಹಸ್ತಾಂತರಿಸಲು ಪೌತಿ ಖಾತೆ ಅಭಿಯಾನವನ್ನು ಸಹ ಆರಂಭಿಸಲು ಕಂದಾಯ ಇಲಾಖೆಯ ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ :- ರೈತರು ಕಿಸಾನ್ ವಿಕಾಸ್ ಪತ್ರವನ್ನು ಪಡೆಯುವುದು ಹೇಗೆ? ಈ ಪತ್ರದಿಂದ 1000 ರೂಪಾಯಿ ಹೂಡಿಕೆ ಮಾಡಿದರೆ ಸಾಕು ನಿಮಗೆ ಡಬಲ್ ಹಣ ಬರುತ್ತದೆ

ಇದನ್ನೂ ಓದಿ :- ದಾಳಿಂಬೆ ಕೃಷಿಯನ್ನು ಮಾಡಿ ಮತ್ತುಒಂದು ಎಕರೆಗೆ 3 ರಿಂದ 4 ಲಕ್ಷ ರೂಪಾಯಿ ಲಾಭವನ್ನು ಪಡೆಯಲು ಸುವರ್ಣ ಅವಕಾಶ

ಇದನ್ನೂ ಓದಿ :- ನಿಮಗೆ ಬೆಳೆ ವಿಮೆ ಹಣ ಜಮಾ ಆಗಿಲ್ಲವೇ? ಈಗ ಏನು ಮಾಡಬೇಕು? ರೈತರು ಏಪ್ರಿಲ್ 28 ರ ಒಳಗೆ ಆಕ್ಷೇಪಣೆ ಸಲ್ಲಿಸಿ ಹಣ

Related Post

Leave a Reply

Your email address will not be published. Required fields are marked *