ಆತ್ಮೀಯ ರೈತ ಬಾಂಧವರಿಗೆ, ನೀವೆಲ್ಲಾ ಮನೆಯಲ್ಲಿ ಹಸು ಮತ್ತು ಎಮ್ಮೆ ಸಾಕಾಣಿಕೆ ಮಾಡಿ ಅದರಿಂದ ತುಂಬಾ ಲಾಭ ಪಡೆದುಕೊಳ್ಳುತ್ತಿದ್ದೀರಿ. ಆದರೆ ಸ್ವಲ್ಪ ಸಮಯದಲ್ಲಿ ನೀವು ನಿಮ್ಮ ಹಾಲನ್ನು ಡೈರಿಗೆ ಹಾಕಲು ಹೋದಾಗ ಅಲ್ಲಿ ಹಾಲಿನ ಗುಣಮಟ್ಟದ ಅಳತೆ ಮಾಡುತ್ತಾರೆ. ಅದು ಸರಿಯಾದ ಡಿಗ್ರಿ ಬರದೆ ಹೋದರೆ ನಿಮ್ಮ ಹಾಲನ್ನು ಅವರು ಸ್ವೀಕರಿಸುವುದಿಲ್ಲ ಆದಕಾರಣ ಅದರಿಂದ ನಿಮಗೆ ತುಂಬಾ ನಷ್ಟವಾಗಿ ಬಿಡುತ್ತದೆ. ಇಷ್ಟೆಲ್ಲಾ ಸಮಸ್ಯೆಗೆ ನಾವು ಇಂದು ನಿಮಗೆ ಪರಿಹಾರ ನೀಡುತ್ತೇವೆ. ಈ ಹಾಲಿನ ಗುಣಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ರೈತರೇ ನೀವು ಹಾಲಿನ ಉತ್ಪಾದನೆ ಹೆಚ್ಚು ಮಾಡಬೇಕೆಂದು 10 ಹಲವಾರು ಮಿಶ್ರ ತಳಿಗಳನ್ನು ಸಾಕುತ್ತೀರಿ, ಈ ಮಿಶ್ರ ತಳಿಗಳನ್ನು ಸಾಕಾಣಿಕೆ ಮಾಡಿದರೆ ಅವುಗಳ ಹಾಲಿನ ಗುಣಮಟ್ಟ ಕಡಿಮೆ ಇರುತ್ತದೆ. ಒಂದು ವೇಳೆ ನಿಮ್ಮ ಹತ್ತಿರ ಇಂತಹ ಹಸುಗಳ ಇದ್ದರೆ ಏನು ಮಾಡಬೇಕು ಅವುಗಳ ಹಾಲಿನ ಗುಣಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂದು ಸಂಪೂರ್ಣವಾಗಿ ಇಲ್ಲಿ ತಿಳಿಯೋಣ. ಡೈರಿಯಲ್ಲಿ ತೆಗೆದುಕೊಳ್ಳುವ ಹಾಲಿನ ಕೊಬ್ಬಿನ ಅಂಶ 3.5 ರಷ್ಟು ಇರಲೇಬೇಕಾಗುತ್ತದೆ.
ಹಾಲಿನ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ?
ಹಸುಗಳಿಗೆ ಮತ್ತು ಎಮ್ಮೆಗಳಿಗೆ ಅತಿ ಶುದ್ಧವಾದ ನೀರನ್ನು ಕುಡಿಸಬೇಕು. ಅವುಗಳಿಗೆ ಕುಡಿಸುವ ದೋಣಿ ಅಥವಾ ತೊಟ್ಟೆಗೆ ನಾವು ಸುಣ್ಣ ಅಥವಾ ಬಣ್ಣ ಹಚ್ಚಬೇಕು. ಅವುಗಳಿಗೆ ಆಗಾಗ ಜಂತುನಾಶಕ ಔಷಧಗಳನ್ನು ಕುಡಿಸಬೇಕಾಗುತ್ತದೆ. ಹಸುಗಳಿಗೆ ಮಿನರಲ್ ಪುಡಿಯನ್ನು ದಿನಕ್ಕೆ ಒಂದರಿಂದ ಎರಡು ಬಾರಿ ಕೊಡಬೇಕಾಗುತ್ತದೆ. ಅವುಗಳಿಗೆ ಬರಿ ವನಮೆಯನ್ನು ನೀಡಬಾರದು, ಅದರ ಜೊತೆ ಹಸಿಮೆವನ್ನು ಕೂಡ ನೀಡಿದರೆ ಹಾಲಿನ ಗುಣಮಟ್ಟ ಹೆಚ್ಚುತ್ತದೆ. ಅವುಗಳಿಗೆ ಊಟದ ಜೊತೆ ಹಲವಾರು ಹಿಂಡಿಗಳನ್ನು ನೀಡಬೇಕಾಗುತ್ತದೆ. ನಿಮ್ಮ ಹಸು ಅತಿ ಕಡಿಮೆ ಡಿಗ್ರಿ ಹಾಲನ್ನು ಕೊಡುತ್ತಿದ್ದರೆ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಲ್ಸಿಯಂ ಅನ್ನು ತೆಗೆದುಕೊಂಡು ಬಂದು ಅವುಗಳಿಗೆ ದಿನ ನೀರಿನ ಜೊತೆ ಕುಡಿಸಬೇಕು ಆಗ ತಾನಾಗಿಯೇ ಹಾಲಿನ ಗುಣಮಟ್ಟ ಏರಿಕೆಯಾಗಿ ಬಿಡುತ್ತದೆ.
ನಿಮ್ಮ ಹಸು ಒಂದು ಲೀಟರ್ ಹಾಲನ್ನು ಕೊಡುತ್ತಿದ್ದರೆ ಅದಕ್ಕೆ 200 ಗ್ರಾಂ ಯಾವುದಾದರೂ ಒಂದು ಹಿಂಡಿಯನ್ನು ಕೊಡುವುದು ಅವಶ್ಯವಾಗಿದೆ. ನೀವು ಶೇಂಗಾ ಇಂಡಿಯನ್ ನೀಡಿದರೆ ಅತಿ ಸುಲಭವಾಗಿ ಕೊಬ್ಬಿನಂಶವನ್ನು ಏರಿಕೆ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲದೆ ನೀವು 200 ಗ್ರಾಂ ಬೆಲ್ಲವನ್ನು ಕೊಟ್ಟರೆ ನೀವು ಯಥೇಚ್ಛವಾಗಿ ಹಾಲನ್ನು ಅತಿ ಗುಣಮಟ್ಟವಾಗಿ ಪಡೆದುಕೊಳ್ಳಬಹುದು. KMF ನಲ್ಲಿ ಸಿಗುವ ಪಶು ಆಹಾರಗಳನ್ನು ತಂದು ಒಂದು ಲೀಟರ್ 200 ಗ್ರಾಂ ಹಾಕಿದರೆ ಸಾಕು ಅದು ಉತ್ತಮ ರಿಸಲ್ಟ್ ಅನ್ನು ಕೊಟ್ಟುಬಿಡುತ್ತದೆ.
ಇದನ್ನೂ ಓದಿ :- ರೈತರು 50 ಶೇಕಡಾ ಸಬ್ಸಿಡಿ ದರದಲ್ಲಿ ನೀರಾವರಿ ಪೈಪ್ ಲೈನ್ ಪಡೆಯಿರಿ ಕೂಡಲೇ ಅರ್ಜಿ ಸಲ್ಲಿಸಿ