ಪ್ರಿಯ ರೈತ ಬಾಂಧವರೇ, ಇಲ್ಲಿದೆ ನಿಮಗೆ ಒಂದು ಅದ್ಭುತ ಅಪ್ಲಿಕೇಶನ್. ಏನಿದು ಅದ್ಭುತ ಅಪ್ಲಿಕೇಶನ್ ಎಂದರೆ ಈ ಆ್ಯಪ್ ನಿಂದ ನೀವು ನಿಮ್ಮ ಹೊಲ ಎಷ್ಟು ಎಕರೆ ಇದೆ ಎಂದು ತಿಳಿಯಬಹುದು. ನಿಮ್ಮ ಹೊಲವನ್ನು ಬೇರೆ ಯಾರಾದರೂ ಆಕ್ರಮಿಸಿಕೊಂಡಿದ್ದಾರೆ ಸುಲಭವಾಗಿ ಈ ಆ್ಯಪ್ ಮೂಲಕ ನಿಮ್ಮ ಭೂಮಿ ಎಷ್ಟು ಉಳಿದಿದೆ ಎಂದು ತಿಳಿಯಬಹುದು. ಈ ಆ್ಯಪ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡುವ ಮತ್ತು ಅದನ್ನು ಬಯಸುವ ವಿಧಾನವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ಬರೆಯಲಾಗಿದೆ.
ಈ ಆ್ಯಪ್ ವಿಶೇಷವೇನೆಂದರೆ, ನೀವು ನಿಮ್ಮ ಮೊಬೈಲ್ ನಲ್ಲಿ ಈ ಆಪನ್ನು ಡೌನ್ಲೋಡ್ ಮಾಡಿ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಹೊಲ ಸುತ್ತಲೂ ಒಂದು ಬಾರಿ ಸುತ್ತಾಡಿದರೆ ಸಾಕು ನಿಮ್ಮ ಹೊಲ ಎಷ್ಟು ಎಕರೆ ಇದೆ ಎಂದು ಈ ಆ್ಯಪ್ ತೋರಿಸುತ್ತದೆ. ನಿಮ್ಮ ಹೊಲವನ್ನು ಯಾರಾದರೂ ಒತ್ತುವರಿ ಮಾಡಿಕೊಂಡು, ನಿಮ್ಮ ಜಮೀನಿನಲ್ಲಿ ಅವರು ತಮ್ಮ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರೆ, ನೀವು ಈ ತಕ್ಷಣ ಈ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೊಲ ವಿಸ್ತೀರ್ಣ ಎಷ್ಟಿದೆ ಎಂದು ತಿಳಿಯಬಹುದು. ಹೀಗೆ ಮಾಡುವುದರಿಂದ ನಿಮ್ಮ ಹೊಲವನ್ನು ಬೇರೆಯವರು ಆಕ್ರಮಿಸಿಕೊಳ್ಳಲು ಆಗುವುದಿಲ್ಲ.
ಆ್ಯಪ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಬಳಸುವ ವಿಧಾನ?
ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=measureapp.measureapp
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಈ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ತೆರೆಯುತ್ತದೆ. ನಂತರ ನೀವು ಡೌನ್ಲೋಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಬೇಕು. ಈ ಆ್ಯಪ್ ಅನ್ನು ನೀವು ಬಳಸುವ ಮುನ್ನ ನಿಮ್ಮ ಮೊಬೈಲ್ ನ ಜಿಪಿಎಸ್ ಅಥವಾ ಲೊಕೇಶನ್ ಅನ್ನು ಆನ್ ಮಾಡಿ ಇಟ್ಟುಕೊಳ್ಳಬೇಕು. ಲೊಕೇಶನ್ ಆನ್ ಮಾಡಿದ ಮೇಲೆ ನಿಮಗೆ ಈ ಆಪನ್ನು ತೆರೆದಾಗ ರನ್ನಿಂಗ್( running) ಎಂಬ ಅಕ್ಷರವು ಹಸಿರು ಬಣ್ಣದಲ್ಲಿ ಕಾಣುತ್ತದೆ.
ಮೊದಲು ರೈತರು ನಿಮ್ಮ ಹೊಲದ ಒಂದು ಮೂಲೆಯಲ್ಲಿ ನಿಂತು, ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಸ್ಟಾರ್ಟ್(start) ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿದ ತಕ್ಷಣ ಈ ಆ್ಯಪ್ ಅಳತೆ ಮಾಡಲು ಪ್ರಾರಂಭ ಮಾಡುತ್ತದೆ. ನೀವು ಏರಿಯ(area) ಎಂಬ ಆಯ್ಕೆಯಲ್ಲಿ ಎಕರೆ (acre) ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು. ನಂತರ ನೀವು ನಿಮ್ಮ ಹೊಲದ ಇನ್ನೊಂದು ಮೂಲೆಗೆ ಹೋಗಬೇಕು ಹಾಗೆಯೇ ಮಾಡುತ್ತಾ ಮೂರು ಮೂಲೆಯನ್ನು ಮುಟ್ಟಿ ಕೊನೆಗೆ ಮೊದಲು ನಿಂತ ಸ್ಥಾನಕ್ಕೆ ಬರಬೇಕು. ಅಂದರೆ ನಿಮ್ಮ ಹೊಲದ ಸುತ್ತಲೂ ಒಮ್ಮೆ ಈ ಫೋನ್ ಹಿಡಿದುಕೊಂಡು ನಾಲ್ಕು ಮೂಲೆಯನ್ನು ಸುತ್ತಿದಾಗ ನಿಮ್ಮ ಹೊಲದ ಸಂಪೂರ್ಣ ಅಳತೆ ಆಗುತ್ತದೆ. ಕೊನೆಗೆ ನೀವು ಸ್ಟಾಪ್(stop) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಭೇಟಿ ಮಾಡುವ ಕ್ರಿಯೆ ಮುಗಿಯುತ್ತದೆ. ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಏರಿಯ(area) ಎಂಬ ಜಾಗದಲ್ಲಿ ನಿಮ್ಮ ಹೊಲ ಎಷ್ಟು ಎಕರೆ ಇದೆ ಎಂದು ನಿಮಗೆ ಕಾಣುತ್ತದೆ.
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?