Breaking
Wed. Dec 18th, 2024

ನಿಮ್ಮ ಜಮೀನಿನ ಪಹಣಿಯ ಮುದ್ರಣ, ತಿದ್ದುಪಡಿ ಮಾಡುವುದು ಮತ್ತು ಪಹಣಿಯನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?

Spread the love

ಪ್ರಿಯ ರೈತ ಬಾಂಧವರೇ,

ಮೂಲ RTC ಅನ್ನು ಹೇಗೆ ಮುದ್ರಿಸುವುದು?

ಮೊದಲು ಕೆಳಗಿರುವ ಲಿಂಕನ್ನು ಬಳಸಿಕೊಂಡು ತಂತ್ರಾಂಶಕ್ಕೆ ಭೇಟಿ ಕೊಡಿ. https://landrecords.karnataka.gov.in/service37/MissedRTC.aspx

ನಂತರ i-RTC ಆರ್ಡರ್ ಸಂಖ್ಯೆಯನ್ನು ನಮೂದಿಸಿ


1.ಯಶಸ್ವಿ ಪಾವತಿಯ ನಂತರ RTC ಅನ್ನು ಮುದ್ರಿಸಲು ಸಾಧ್ಯವಾಗದಿದ್ದರೆ, ನೀವು ಹೊಂದಿರುವ ಆರ್ಡರ್ ಸಂಖ್ಯೆಯನ್ನು ಇಲ್ಲಿ ಒದಗಿಸುವ ಮೂಲಕ ನಿಮ್ಮ i-RTC ನ ನಕಲನ್ನು ನೀವು ಪಡೆಯಬೇಕು.
2.ಆರ್ಡರ್ ಸಂಖ್ಯೆ ಪೂರ್ವಪ್ರತ್ಯಯವನ್ನು i-RTC ಯೊಂದಿಗೆ ನಮೂದಿಸಬೇಕು
3.ಆರ್ಡರ್ ಸಂಖ್ಯೆಯನ್ನು ನಮೂದಿಸಿದ ನಂತರ Get
i- RTC ಬಟನ್ ಮೇಲೆ ಕ್ಲಿಕ್ ಮಾಡಬೇಕು.

ನಿಮ್ಮ ಜಮೀನಿನ ಪಹಣಿಯನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ ಎಂದು ತಿಳಿಯೋಣ.

ಕೆಳಗಿರುವ ಹಂತಗಳನ್ನು ಪಾಲಿಸಿ


1)ಪ್ರಾರಂಭದಲ್ಲಿ ಮೊಬೈಲ್ ನಲ್ಲಿ ಯಾವುದಾದರು ಬ್ರೌಸರ್ ಓಪನ್ ಮಾಡಿ.
2)https://landrecords.karnataka.gov.in/service53/ಎಂಬ ವೆಬ್ಸೈಟ್ ಓಪನ್ ಮಾಡಿ.
3)ಆಮೇಲೆ ಭೂಮಿ ಎಂಬ ಪೇಜ್ ರಿಡೈರೆಕ್ಟ್ ಆಗುತ್ತದೆ.ಅಲ್ಲಿ view RTC and MR ಅಂತ ಇರುತ್ತೆ ಅಲ್ಲಿ ಕ್ಲಿಕ್ ಮಾಡಿ.
4) ಆಮೇಲೆ ಕೆಳಗಡೆ ಸ್ಕ್ರೂಲ್ ಮಾಡಬೇಕು.ಕೆಳಗಡೆ ಡಿಸ್ಟ್ರಿಕ್ಟ್ ಅಂತ ಅಲ್ಲಿ ನಿಮ್ಮ ಜಿಲ್ಲೆ ಯಾವುದೆಂದು ಆಯ್ಕೆ ಮಾಡಿಕೊಳ್ಳಿ.
5) ಆಮೇಲೆ ತಾಲೂಕು, ಹೋಬಳಿ,ಹಳ್ಳಿ, ಸರ್ವೇ ನಂಬರ್, ನಂತರ ಇದರಲ್ಲಿ ಸ್ಟಾರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ, ನಂತರ ಹಿಸ್ಸಾ ನಂಬರ್ ಕೆಲವೊಂದು ನಂಬರ್ ಇರುತ್ತೆ ಕೆಲವೊಂದು ಸ್ಟಾರ್ ಇರುತ್ತೆ ನಿಮ್ಮ ಯಾವುದಾದರು ಹಳೆಯ ಪಹಣಿ ಇದ್ದರೆ ನೋಡಬಹುದು.
6) ಆಮೇಲೆ ಪಿರಿಯಡ್ ಮತ್ತು ಇಯರ್ ಸೆಲೆಕ್ಟ್ ಮಾಡಿ.ನಂತರ fetch details ಮೇಲೆ ಕ್ಲಿಕ್ ಮಾಡಿ.ಕೆಳಗೆ ಸ್ಕ್ರೂಲ್ ಕೊಡಿ ನಂತರ view ಮೇಲೆ ಕ್ಲಿಕ್ ಮಾಡಿ.
7) ಆಮೇಲೆ ಪಹಣಿ ಓಪನ್ ಆಗುತ್ತದೆ. ಇದರಲ್ಲಿ ನೀವು ನಿಮ್ಮಸರ್ವೇ ನಂಬರ್ ಹಿಸ್ಸಾ ನಂಬರ್ ನೋಡಬಹುದು. ಆಮೇಲೆ ನಿಮ್ಮ ಡೀಟೇಲ್ಸ್ ವಿಸ್ತೀರ್ಣ ಎಷ್ಟು ಏನಾದರು ಸಾಲ ತೆಗೆದುಕೊಂಡಿದ್ದರೆ ಋಣಗಳು ಕೆಳಗಡೆ ಇರುತ್ತದೆ.

ಪಹಣಿ ತಿದ್ದುಪಡಿ

  1. ಮೊದಲು ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳಿಸಲಾಗುತ್ತದೆ.
  2. ಈ ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.
  3. ಈ ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುತ್ತಾರೆ. ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುತ್ತಾರೆ.
  4. ಈ ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು. ಕೆಲವು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ಬರುತ್ತದೆ.

ಇದನ್ನೂ ಓದಿರಿ :- ರೈತರೇ ಪಿಎಂ ಕಿಸಾನ್ ಹಣ ಜಮಾಗುವ ಸಮಯ ಬಂದಾಯ್ತು ಈ ಕೆಲಸವನ್ನು ನೀವು ಮಾಡಲೇಬೇಕು ಎಂದರೆ ಮಾತ್ರ ಹಣ ಜಮವಾಗುತ್ತದೆ , ಅತಿ ದೊಡ್ಡ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ

Related Post

Leave a Reply

Your email address will not be published. Required fields are marked *