ಪ್ರಿಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಕೃಷಿಗೆ ತುಂಬಾ ಆದ್ಯತೆ ಕೊಡುತ್ತಿದ್ದು ರೈತರು ಕೃಷಿಯಂತೆ ಪಸುಸಂಗೋಪನೆಯೂ ಗ್ರಾಮೀಣ ಭಾಗದ ಪ್ರಮುಖ ಆರ್ಥಿಕತೆಯ ಭಾಗವಾಗಿ ಹೊರಹೊಮ್ಮುತ್ತಿದೆ. ಬೇಸಿಗೆಯಲ್ಲಿ ಜಾನುವಾರು ಹಾಲಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿ, ರೈತರಿಗೆ ಆರ್ಥಿಕ ತೊಂದರೆಯಾಗುತ್ತದೆ. ಬೇಸಿಗೆಯಲ್ಲಿ ಜಾನುವಾರು ಪಾಲನೆ, ಪೋಷಣೆ ಕುರಿತಂತೆ ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಉಪಯುಕ್ತ ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ಜಾನುವಾರು ರಕ್ಷಣೆ ಹೇಗೆ ಮಾಡಬೇಕು?
ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಜಾನುವಾರು ಕೂಡ ತೊಂದರೆ ಅನುಭವಿಸುತ್ತವೆ. ಅವುಗಳ ನೀರಿನ ದಾಹ ತಣಿಸಲು ಒಂದು ಬಕೆಟ್ ನೀರಿನಲ್ಲಿ 250 ಗ್ರಾಂ ಸಕ್ಕರೆ, 20 ರಿಂದ 30 ಗ್ರಾಂ ಉಪ್ಪು, ಮಿಶ್ರಣವನ್ನು ತಯಾರಿಸಿ ಪ್ರಾಣಿಗಳಿಗೆ ಕುಡಿಸಬೇಕು. ನಾಲ್ಕು ಕೆಜಿ ಜೋಳ, 3 ಕೆಜಿ ಎಣ್ಣೆ, 2.5 ಕೆಜಿ ಗೋಧಿ, 500 ಗ್ರಾಂ ಬೆಲ್ಲವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ ಪ್ರತಿದಿನ 50 ಗ್ರಾಂ ಖನಿಜ ಮಿಶ್ರಣವನ್ನು ಜಾನುವಾರುಗಳಿಗೆ ಕೊಡಬೇಕು.
ಅವುಗಳ ಊಟ ಮತ್ತು ಉಪಚಾರ ಹೇಗೆ ಮಾಡಬೇಕು?
ಹುಲ್ಲಿನಲ್ಲಿ ಫೈಬರ್, ಪ್ರೋಟೀನ್ ಮತ್ತು ಔಷಧ ಗುಣಗಳಿವೆ. ಇವು ಪ್ರಾಣಿಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಸಹಾಯ ಮಾಡುತ್ತದೆ. ಕಾರಣ ಜಾನುವಾರುಗಳಿಗೆ ಹೆಚ್ಚು ಹಸಿರು ಹುಲ್ಲನ್ನು/ ಮೇವನ್ನು ಕೊಡಬೇಕು.ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಲು ಬೆಳಗ್ಗೆ ಅಥವಾ ಸಾಯಂಕಾಲ ಕೊಳದಲ್ಲಿ ಸ್ನಾನ ಮಾಡಿಸಿದರೆ ಅವುಗಳ ಆರೋಗ್ಯ ರಕ್ಷಣೆಗೆ ಸಹಕಾರಿ ಆಗುತ್ತದೆ. ಪ್ರಾಣಿಗಳಿಗೆ ದಿನಕ್ಕೆ 2 ರಿಂದ 3 ಬಾರಿ ಶುದ್ಧ ಮತ್ತು ತಂಪಾದ ನೀರನ್ನು ಕುಡಿಸಬೇಕು.
ಹೆಚ್ಚಿನ ಮಾಹಿತಿಗೆ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 9448418389
ಇದನ್ನೂ ಓದಿ :- ಕರ್ನಾಟಕದ ಈ ಭಾಗದ ಊರುಗಳಿಗೆ ಭಾರೀ ಮಳೆ ಮುನ್ಸೂಚನೆ ಹವಾಮಾನ ಇಲಾಖೆ ಇಂದ ಎಚ್ಚರಿಕೆ
ಇದನ್ನೂ ಓದಿ :- ಮಹಿಳೆಯರಿಗೆ ಉಚಿತವಾಗಿ 30 ದಿನಗಳ ಕಾಲ ಹೊಲಿಗೆ ಯಂತ್ರದ ತರಬೇತಿ ಊಟ ಮhttps://bhoomisuddi.com/free-sewing-training-for-women-apply-now/ತ್ತು ವಸತಿ ಉಚಿತವಾಗಿದ್ದು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ