ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯವು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರು ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ, ಡೈರಿ, ಕೋಳಿ, ಮೀನುಗಾರಿಕೆ ಮುಂತಾದ ವಿವಿಧ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಈ ಪ್ರತಿಯೊಂದು ಚಟುವಟಿಕೆಗೆ ವಿಶೇಷ ಜ್ಞಾನ ಮತ್ತು ಅನುಭವದ ಅಗತ್ಯವಿದೆ. ಆದ್ದರಿಂದ, ಕೃಷಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ರೈತರಿಗೆ ಸಹಾಯ ಮಾಡಲು ರಾಜ್ಯವು ವಿಶೇಷ ಮತ್ತು ನಿರ್ದಿಷ್ಟ ಇಲಾಖೆಯನ್ನು ಸ್ಥಾಪಿಸಿದೆ.
ಫ್ರೂಟ್ಸ್ ಐಡಿ ಪಡೆಯುವುದರಿಂದ ರೈತರಿಗೆ ಲಾಭಗಳು ಏನು?
ಫ್ರೂಟ್ಸ್ ಐಡಿ ಎಂಬುದು ಪ್ರತಿಯೊಬ್ಬ ರೈತರೂ ತಮ್ಮ ಕೃಷಿ ಜಮೀನಿನ ಎಲ್ಲ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ನೊಂದಣಿ ಮಾಡಿ ಆತನಿಗೆ ಒಂದು ನಂಬರನ್ನು ನೀಡಲಾಗುತ್ತದೆ, ಆ ನಂಬರಿನ ಹೆಸರು FID. FID ನಂಬರು ರೈತನ ಗುರುತಿನ ಚೀಟಿ ಆಗಿರುತ್ತದೆ. ಎಫ್ಐಡಿ ಎಂಬುದು ರೈತರಿಗೆ ಗುರುತಿನ ಚೀಟಿ ಇದ್ದಂತೆ. ಈ ಸಂಖ್ಯೆಯಿಂದ ರೈತನು ಹಲವಾರು ಜಮೀನ ದಾಖಲೆಗಳು ಅವನು ಬರೆದ ಬೆಳೆ ಮತ್ತು ಆತನಿಗೆ ದೊರೆಯುವ ಸರ್ಕಾರದಿಂದ ಸೌಲಭ್ಯಗಳು ಪಡೆಯುವ ಅಧಿಕಾರವನ್ನು ಹೊಂದುತ್ತಾನೆ.
ಈ FID ಫಾರಂ ನೊಂದಣೆ ಮಾಡುವುದು ಹೇಗೆ?
ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನೋಂದಣಿ https://fruits.karnataka.gov.in ನಂತರ ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ Citizen Login ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ Citizen Registration ಎಂಬ ಆಯ್ಕೆಯು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದಿನ ಮುಖಪುಟವನ್ನು ಕರೆಯಿರಿ. ನಂತರ ಅಲ್ಲಿ ನಿಮಗೆ ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ನಂಬರ್ ತುಂಬಲು ಸ್ಥಳ ಕಾಣುತ್ತದೆ. ಆಮೇಲೆ Submit ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಷ್ಟಲ್ಲಾದ ಮೇಲೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸಿ Proceed ಕ್ಲಿಕ್ ಮಾಡಿ, ಆಮೇಲೆ ನಿಮಗೆ ನಿಮ್ಮ ಎಫ್ ಐ ಡಿ ಖಾತೆಯನ್ನು ನಿರ್ವಹಿಸಲು ಒಂದು ಪಾಸ್ವರ್ಡ್ ಅನ್ನು ಇಟ್ಟುಕೊಳ್ಳುವುದು ಅವಶ್ಯವಾಗಿದೆ.
ಆದ ಕಾರಣ ನೀವು ಒಂದು ಪಾಸ್ವರ್ಡ್ ಅನ್ನು ಇಟ್ಟು ನಂತರ ಕ್ರಿಯೇಟ್ ಪಾಸ್ವರ್ಡ್ ಕ್ಲಿಕ್ ಮಾಡಿದಾಗ ನಿಮ್ಮ ರಿಜಿಸ್ಟ್ರೇಷನ್ ಮುಕ್ತಾಯಗೊಳ್ಳುತ್ತದೆ. ನಂತರ ನೀವು ಲಾಗಿನ್ ಪೇಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು, ಅಲ್ಲಿ ನೀವು ಮೊದಲು ದಾಖಲೆಸಿರುವ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿದರೆ, ಇಷ್ಟಲ್ಲಾದ ಮೇಲೆ ಫ್ರೂಟ್ಸ್ ಲಾಗಿನ್ ಆಗಿರುವ ಒಂದು ಮುಖಪುಟವು ನಿಮಗೆ ಕಾಣುತ್ತದೆ. ರಿಜಿಸ್ಟ್ರೇಷನ್ ನಿಮಗೆ ಫಾರ್ಮರ್ ಐಡಿ ಸಿಗುತ್ತದೆ. ನೀವು ಮೊದಲೇ ಈ ಕಿಸಾನ್ ಸವಲತ್ತನ್ನು ಸರ್ಕಾರದಿಂದ ಪಡೆದುಕೊಂಡಿದ್ದರೆ ನಿಮ್ಮ ಅಪ್ಲಿಕೇಶನ್ ಅಪರೂ ಆಗಿದೆ ಎಂದು ತೋರಿಸುತ್ತದೆ.
ಇದನ್ನೂ ಓದಿ :- ಈಗ ಕೇವಲ 5 ನಿಮಿಷಗಳಲ್ಲಿ ನಿಮ್ಮ ಹೊಲದ ಮೇಲೆ ಏಷ್ಟು ಭೋಜಾ ಇದೆ ಎಂದು ಮೊಬೈಲ್ ನಲ್ಲಿ ನೋಡಿ
ಇದನ್ನೂ ಓದಿ :- ಕರ್ನಾಟಕ ಬಜೆಟ್ ನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ 5000 ರೂಪಾಯಿಗಳ ಸಹಾಯಧನ ನೀಡಲಾಗಿದೆ