Breaking
Tue. Dec 17th, 2024

ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆ ಹೇಗೆ ನೋಡಿ?

Spread the love

ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ. ಗ್ರಾಮ ಒನ್ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾ ಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ ಸರ್ಕಾರದ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಯೋಜನೆ ಅಡಿಯಲ್ಲಿ 750 ಕ್ಕೂ ಹೆಚ್ಚು ನಾಗರೀಕ ಸೇವೆಗಳನ್ನು ಗ್ರಾಮೀಣ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ, ಈ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿರುತ್ತದೆ. ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಜನಸಂಖ್ಯಾನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಅಥವಾ ಎರಡು ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತಿ, ಹುಣಸಗಿ ತಾಲೂಕಿನ ಕೊಡೆಕಲ್, ಹಗರಟಗಿ ಗ್ರಾಮ ಪಂಚಾಯತಿ, ವಡಗೇರಾ ತಾಲೂಕಿನ ಐಕೂರ ಗ್ರಾಮ ಪಂಚಾಯಿತಿ ಆನ್‌ಲೈನ್ karnataka.gov.inನಲ್ಲಿ 2024ರ ಸೆಪ್ಟೆಂಬರ್ 15 ರಂದು ಸಂಜೆ 6 ಗಂಟೆಯ ಒಳಗೆ ಅರ್ಜಿಸಲ್ಲಿಸಬೇಕು.

ತಮದಡ್ಡಿ ಕೆರೆ ನೀರಿನಿಂದ ಜಮೀನುಗಳು ಜಲಾವೃತ

ತಾಳಿಕೋಟೆ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಮುಖ್ಯ ಕಾಲುವೆಯ ಮುಖಾಂತರ ಎಲ್ಲ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದ್ದು ತಾಲೂಕಿನ ತಮದಡ್ಡಿ ಗ್ರಾಮದ ಕೆರೆಯು ತುಂಬಿ ನೀರು ಹರಿಯುತ್ತಿರುವದರಿಂದ ಸುಮಾರು 300 ಕ್ಕೂ ಹೆಚ್ಚು ಎಕರೆ ರೈತರ ಜಮೀನುಗಳು ಜಲಾವೃತಗೊಂಡಿದ್ದು ಬಿತ್ತನೆ ಮಾಡಲಾದ ಹತ್ತಿ, ತೊಗರಿ ಅಲ್ಲದೇ ಇನ್ನಿತರ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿವೆ. ಈ ವಿಷಯ ಸಂಬಂದಿಸಿ ಆಲಮಟ್ಟಿ ಕೆಬಿಜೆಎನ್ಎಎಲ್, ಮತ್ತು ಸಣ್ಣ ನೀರಾವರಿ ಇಲಾಖೆ, ತಹಶಿಲ್ದಾರರು, ಅಲ್ಲದೇ ಕೃಷಿ ಅಧಿಕಾರಿಗಳಿಗೆ ರೈತಾಪಿ ಜನರು ಬೆಳೆ ಹಾನಿಯ ಕುರಿತು ಮನವಿ ಸಲ್ಲಿಸಿದರೂ ಯಾವ ಅಧಿಕಾರಿಗಳು ಬೆಟ್ಟಿ ನೀಡಿಲ್ಲಾ ರೈತರ ಸಮಸ್ಯ ಆಲಿಸಿಲ್ಲಾವೆಂದು ಬೋಳವಾಡ ಗ್ರಾಮದ ರೈತ ರಮೇಶ ಜಂಬಗಿ ಅವರು ಆರೋಪಿಸಿದ್ದಾರೆ.

ಗ್ರಾಮೀಣ ಪ್ರದೇಶದ ರೈತಾಪಿ ಜನರು ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳ ಮೇಲೆ ಇಡೀ ವರ್ಷದ ಜೀವನವನ್ನು ನಡೆಸುವದಾಗಿದೆ ಆದರೆ ಈ ಭಾರಿ ಉತ್ತಮ ಮಳೆಯಾಗಿದೆ ಫಸಲು ತುಂಬಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯ ಮೇಲೆ ಹೊಲಗದ್ದೆಗಳ ಕೆಲಸದಲ್ಲಿ ತೊಡಗಿಕೊಂಡಿದ್ದೇವು ಆದರೆ ಕೆರೆಯ ನೀರು ರೈತರ ಆಶಾಭಾವನೆಯನ್ನು ದಿಕ್ಕಾಪಾಲು ಆಗುವಂತೆ ಮಾಡಿದೆ ಕೂಡಲೇ ಜಿಲ್ಲಾಧಿಕಾರಿಗಳು ಈ ಭಾಗದ ರೈತಾಪಿ ಜನರ ಜಮೀನುಗಳಿಗೆ ಬೆಟ್ಟಿ ನೀಡಿ ಕೆರೆಯ ನೀರಿನಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆದ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ . ರಮೇಶ ಜಂಬಗಿ ಅವರು ಆಗ್ರಹಿಸಿದ್ದಾರೆ.

ಪ.ಜಾತಿ ಯುವಕ, ಯುವತಿಯರಿಗೆ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

2024-25ನೇ ಸಾಲಿನಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ರಾಜು ಬಾವಿಹಳ್ಳಿ ಅವರು ತಿಳಿಸಿದ್ದಾರೆ. ಯುವಜನರನ್ನು ಸ್ವಾವಲಂಭಿಯಾಗಲು ಉತ್ತೇಜಿಸುವ ದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯ- ರಿಗೆ ಈ ಕೆಳಕಂಡ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗಿದೆ.

ತರಬೇತಿ ಶಿಬಿರಗಳು ಜಿಮ್, ಫಿಟೈಸ್ ತರಬೇತಿ ಶಿಬಿರ (15 ದಿನಗಳು) 19-09- 2024 20 03-10-2024 ಎಸ್.ಎಸ್.ಎಲ್.ಸಿ (ಪಾಸ್/ಫೇಲ್) ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು. 18 ರಿಂದ 30 ವರ್ಷ ಒಳಗಿರಬೇಕು. ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಂಗಳೂರು ತರಬೇತಿ ನಡೆಯುವ ಸ್ಥಳವಾಗಿದೆ. ಬ್ಯೂಟೀಷಿಯನ್ ತರಬೇತಿ (13 2) 21-09-2024 00 03-10-2024 2.2. ಎಲ್.ಸಿ (ಪಾಸ್/ಫೇಲ್) ಮಹಿಳೆಯ- ರಿಗೆ ಮಾತ್ರ ಕನಿಷ್ಠ ವಿದ್ಯಾರ್ಹತೆ 18 ರಿಂದ 40 ವರ್ಷ ಒಳಗಿರಬೇಕು. ಚಾಟ್ಸ್ ತಯಾರಿಕೆ ತರಬೇತಿ ಶಿಬಿರ (06 2), 04-10-2024 20 09-10-2024ರವರೆಗೆ, ಎಸ್.ಎಸ್.ಎಲ್.ಸಿ (ಪಾಸ್/ಫೇಲ್) ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು, 18 ರಿಂದ 29 ವರ್ಷ ಹೊಂದಿರಬೇಕು, ಒಳಗಿರಬೇಕು, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಬೆಂಗಳೂರು ತರಬೇತಿ ನಡೆಯುವ ಸ್ಥಳವಾಗಿದೆ.

ತರಬೇತಿ ಕರ್ನಾಟಕದ ಯುವಕ, ಯುವತಿಯ- ರಿಗೆ ಮಾತ್ರ ನೀಡಲಾಗುವುದು. ಯುವಕ, ಯುವತಿಯರು ಪರಿಶಿಷ್ಟ ಜಾತಿಗೆ ಸೇ- ರಿದವರಾಗಿರಬೇಕು, ಅರ್ಜಿದಾರರು ಕಡ್ಡಾಯವಾಗಿ ಆರ್.ಡಿ.ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಿರಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪ್ರತಿಯನ್ನು ಲಗತ್ತಿಸುವುದು. ಜಿಮ್ ಫಿಟೈಸ್, ಬ್ಯೂಟಿಷಿಯನ್, ಚಾಟ್ಸ್ ತಯಾ- ರಿಕೆ ತರಬೇತಿಗಳಿಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್, ಫೇಲ್ ಶಿಕ್ಷಣವನ್ನು ಹೊಂದಿರಬೇಕು.

ದೃಡೀಕೃತ ಅಂಕಪಟ್ಟಿಯ ಪ್ರತಿಯನ್ನು ಲಗತ್ತಿಸುವುದು. ಅರ್ಜಿದಾರರು 18ರಿಂದ 40 ವರ್ಷದೊಳಗಿನ ಯುವಕ, ಯುವತಿಯರು ಮಾತ್ರ ಭಾಗವಹಿಸಲು ಅರ್ಹರು. ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಶಿಸ್ತು ಹಾಗೂ ಸಂಯಮದಿಂದ ಇರಬೇಕು, ಅನುಚಿತವಾಗಿ ವರ್ತಿಸಿದಲ್ಲಿ ಇಲಾಖೆಯ ನಿಯಾಮಾನುಸಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಉಪ, ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಸಲ್ಲಿಸಬೇಕು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ, ಯುವತಿಯರಿಗೆ ಲಘು ಉಪಹಾರ ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿದಾರರು ದೈಹಿಕವಾಗಿ ಸದೃಡರಾಗಿರಬೇಕು. ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಯಾದಗಿರಿ ಇಲ್ಲಿ 2024ರ ಅಕ್ಟೋಬರ್ 16ರ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಚಿತ್ತಾಪುರ ರಸ್ತೆ ಯಾದಗಿರಿ ಮೊ.ಸಂ.9108197572ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಕರ್ನಾಟಕ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಹೊಸಪೇಟೆ : ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ- ಕರ್ನಾಟಕ’ಗೆ 2024 ನೇ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕ ಜೀವನದಲ್ಲಿ ಮಹಾತ್ಮಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ 60 ವರ್ಷಗಳಾಗಿರುವ ವ್ಯಕ್ತಿಗಳು ಅಥವಾ 25 ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗುವುದು. 2024 ರ ಅಕ್ಟೋಬರ್ 02 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಹಾತ್ಮಗಾಂಧೀಜಿಯವರು ಪ್ರಚುರಪಡಿಸಿದ ಜನಪರ ಕಾರ್ಯಕ್ರಮಗಳಾದ ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿವಸ್ತು ಬಳಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಾರ, ಈ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಅಥವಾ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ನಾಮನಿರ್ದೇಶನ ಕೂಡ ಮಾಡಬಹುದಾಗಿದೆ.

ಸೆಪ್ಟೆಂಬರ್ 19 ರ ಸಂಜೆ 5.30 ರೊಳಗಾಗಿ ಅರ್ಜಿಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ನಂ. 17. ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು-560001 ಅಥವಾ ಇ-ಮೇಲ್ : informationdiprawards@gmail.com ಕಳುಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಾಲು ಖರೀದಿ ದರ ಇಳಿಕೆ ತಾತ್ಕಾಲಿಕ : ರಾಬಕೊವಿ

ಬಳ್ಳಾರಿ : ರೈತರಿಂದ ಪಡೆಯುವ ಹಾಲಿನ ಖರೀದಿ ದರವನ್ನು ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟ’ 1.50ರಷ್ಟು ಕಡಿಮೆ ಮಾಡಿದ್ದು, ರೈತರಿಂದ ಆಕ್ಷೇಪ ವ್ಯಕ್ತವಾಗಿದೆ. ಆದರೆ. ಇದಕ್ಕೆ ಸ್ಪಷ್ಟನೆ ನೀಡಿರುವ ರಾಬಕೊವಿ ‘ಸದ್ಯ ಒಕ್ಕೂಟ ತೀವ್ರ ನಷ್ಟದಲ್ಲಿದೆ. ಇದನ್ನು ಸರಿದೂಗಿಸಲು ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಇಳಿಸಲಾಗಿದೆ. ಆದರೆ, ಇದು ತಾತ್ಕಾಲಿಕ’ ಎಂದು ಒಕ್ಕೂಟ ಹೇಳಿದೆ.

ದೇಶದಲ್ಲಿರುವ ಎಲ್ಲ ಒಕ್ಕೂಟಗಳಲ್ಲೂ ಇದು ಸಾಮಾನ್ಯ ಪ್ರಕ್ರಿಯೆ. ಹಾಲು ಉತ್ಪಾದನೆ ಹೆಚ್ಚಾದಾಗೆಲ್ಲ ಇಂಥ ಸಮಸ್ಯೆ ಎದುರಾಗುತ್ತದೆ. ನಮಗೆ ಹಾಲಿನ ಮಾರಾಟ ದರವನ್ನು ಹೆಚ್ಚಿಸಲು ಅವಕಾಶವಿಲ್ಲ. ಅಂಥ ಸಂದರ್ಭದಲ್ಲಿ ನಷ್ಟ ಉಂಟಾಗುತ್ತದೆ. ದರ ಇಳಿಸದೇ ಹೋಗಿದ್ದಿದ್ದರೆ ನಷ್ಟ ಬೆಳೆಯುತ್ತಾ ಹೋಗುತ್ತಿತ್ತು. ಆಗ ಏಕಾಏಕಿ 3 4 ಇಳಿಸಬೇಕಾದ ಪರಿಸ್ಥಿತಿ ಬರುತ್ತಿತ್ತು. ಕೆಲವು ಒಕ್ಕೂಟಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ನಮಗಿಂತಲೂ ಕಡಿಮೆ ಇದೆ. ಒಕ್ಕೂಟದಿಂದ ತೆಲಂಗಾಣಕ್ಕೆ ಹಾಲು ಪೂರೈಕೆ ಆರಂಭವಾದರೆ, ನಷ್ಟ ಸರಿದೂಗಿಸಿಕೊಳ್ಳಬಹುದು. ರೈತರಿಗೂ ಲಾಭಾಂಶ ನೀಡಲಾಗುವುದು’ ಎಂದು ಒಕ್ಕೂಟದ ವ್ಯವಸ್ಥಾಪಕ | ನಿರ್ದೇಶಕ ಪೀರ್ಯ ನಾಯಕ್ ತಿಳಿಸಿದ್ದಾರೆ.

ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 45 ವಯೋಮಾನದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಟ್ರಾವೆಲ್ ಮತ್ತು ಟೂರಿಸ್ಟ್ ಗೈಡ್ ಮತ್ತು ನವೆಂಬರ್ ತಿಂಗಳಿನಲ್ಲಿ ಮೊಬೈಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ಹಾಗೂ ಜೆಸಿಬಿ ಚಾಲನೆ ತರಬೇತಿಗಳನ್ನು ನೀಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ಊಟ ಹಾಗೂ ವಸತಿಯು ಉಚಿತವಾಗಿರುತ್ತದೆ.

ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್ ನಿಂದ ಸಾಲ ಪಡೆದು ಸ್ವ- ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನೇತರ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ, .: 8217236973, 9483485489, 9482188780, ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ : ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಪ್ರಸ್ತಾವನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬ‌ರ್ 17 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗಾಗಿ ಪರಿಶಿಷ್ಟ ವರ್ಗದವರ ಜನರಿಗೆ ಸೇವೆ ಸಲ್ಲಿಸಿದ ಕೊಪ್ಪಳ ಜಿಲ್ಲೆಯಿಂದ ಒಬ್ಬರು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ. ಅರ್ಹತೆಗಳು: ಪ್ರಮುಖವಾಗಿ ಪರಿಶಿಷ್ಟ ವರ್ಗದವರ ಶೈಕ್ಷಣಿಕ ಪ್ರಗತಿ ಹಾಗೂ ಆರ್ಥಿಕವಾಗಿ ಸಧೃಡಗೊಳಿಸಲು ಸ್ವಯಂ ಪ್ರೇರಣೆಯಿಂದ ದುಡಿಯುವ ವ್ಯಕ್ತಿಯಾಗಿರಬೇಕು.

ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಇವುಗಳ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಾಮರಸ್ಯ ವಾತಾವರಣ ಮೂಡಿಸುವುದು ಅಥವಾ ದೌರ್ಜನ್ಯ ನಿಯಂತ್ರಿಸಲು ಸಹಕಾರಿಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರಮಿಸುವ ವ್ಯಕ್ತಿಯಾಗಿರಬೇಕು. ಶ್ರೀ ಮಹರ್ಷಿ ವಾಲ್ಮೀಕಿ ಇವರ ತತ್ವ ಹಾಗೂ ಆದರ್ಶಗಳನ್ನು ಸಾಕಾರಗೊಳಿಸುವಂತಹ ಯಾವುದೇ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪರಿಶಿಷ್ಟ ವರ್ಗದ ಜನರನ್ನು ಹೊಂದಿರಬೇಕು. ಅವರು ಸಾಧನೆ ಮಾಡಿರುವ ಸಾಧನೆಗಳ ಬಗ್ಗೆ ದಾಖಲಾತಿ ಹೊಂದಿರಬೇಕು. ಪ್ರಶಸ್ತಿ ಆಯ್ಕೆ ಕುರಿತಂತೆ ಸರ್ಕಾರ ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿರುವ ಅರ್ಜಿ ಹಾಗೂ ದಾಖಲೆಗಳೊಂದಿಗೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಮತ್ತು ಇಲಾಖೆಯ ಸಂಭಂದಪಟ್ಟ ತಾಲೂಕು ಸಹಾಯಕ ನಿರ್ದೇಶಕರು ಅಥವಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸೆಪ್ಟೆಂಬರ್ 17 ರೊಳಗಾಗಿ ಸಲ್ಲಿಸಬೇಕು. ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 10 ದಿನಗಳ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ, 10 ದಿನಗಳ ಅಗರಬತ್ತಿ ತಯಾರಿಕೆ ತರಬೇತಿ, 10 ದಿನಗಳ ಅಣಬೆ ಬೇಸಾಯ ತರಬೇತಿ ಹಾಗೂ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ರಿಂದ 45 ವರ್ಷ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು. ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು.

ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತರು ತಮ್ಮ ಆಧಾರ ಕಾರ್ಡ ಜೆರಾಕ್ಸ್ ಪ್ರತಿ, ರೇಶನ್ ಕಾರ್ಡ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಮೂರು ಫೋಟೋ, ಮಾರ್ಕ್ಸ ಕಾರ್ಡ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ. ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ.ಸಂ: 08539-231038, 9483618178, 9481085217. 7259073827.

9538096796ಗೆ ಸಲ್ಲಿಸಬೇಕು. ಸ್ವಯಂ ಉದ್ಯೋಗ ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಗಾಗಿ ಸೆಪ್ಟೆಂಬರ್ 07 ರಂದು ಸಂದರ್ಶನ ನಡೆಯಲಿದ್ದು, ಸೆ. 09 ರಿಂದ ತರಬೇತಿ ಪ್ರಾರಂಭವಾಗಲಿವೆ ಎಂದು ಕೊಪ್ಪಳ ಎಸ್‌ಬಿಐ ಆರ್‌ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *