ಪ್ರಿಯ ರೈತ ಬಾಂಧವರೇ, ನಿಮಗೆ ಸಾಲ ಬೇಕಾದ ಸಮಯದಲ್ಲಿ ಬ್ಯಾಂಕ್ ಗೆ ಹೋದಾಗ, ಎಲ್ಲಿ ನಿಮಗೆ ನಿಮ್ಮ ಹೊಲದ ಮೇಲಿನ ಭೋಜಾ ತಗೆದುಕೊಂಡು ಬನ್ನಿ ಎಂದು ಹೇಳಿ ಕಳಸುತ್ತಾರೆ. ಆಗ ನೀವು ಚಿಂತೆ ಪಡುವ ಅವಶ್ಯ ಇಲ್ಲ. ನಿಮ್ಮ ಬಳಿ ಒಂದು ಮೊಬೈಲ್ ಇದ್ದರೆ ಸಾಕು 5 ನಿಮಿಷದಲ್ಲಿ ಏಷ್ಟು ಭೋಜಾ ಇದೆ ಎಂದು ತಿಳಿಯಬಹುದು.
ಯಾವ ದಾಖಲೆಗಳು ಬೇಕು?
ರೈತರು ನಮ್ಮ ಹೊಲದ ಸರ್ವೆ ನಂಬರ್, ಹಿಸ್ಸಾ, ಹೋಬಳಿ, ತಾಲೂಕ, ಜಿಲ್ಲಾ ಇಷ್ಟೆಲ್ಲ ಮಾಹಿತಿ ಗೊತ್ತಿದ್ದರೆ ಸಾಕು. ಇಷ್ಟು ಮಾಹಿತಿ ಇಟ್ಟುಕೊಂಡು ನೀವು ಸ್ವಲ್ಪ ಸಮಯದಲ್ಲಿ ಮೊಬೈಲ್ ಮೂಲಕ ಉಚಿತವಾಗಿ ನಮ್ಮ ಯಾವ ಹೊಲದ ಮೇಲೆ ಎಷ್ಟು ಭೋಜ ಕೂಡಲೇ ತಿಳಿಯಬಹುದು.
ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ?
ಮೊದಲು ರೈತರು ಭೂಮಿಯ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://landrecords.karnataka.gov.in/Service2/
ಅಲ್ಲಿ ಕಾಣುವ ಆಯ್ಕೆಗಳನ್ನು ಆಯ್ಕೆ ಮಾಡಿ, ಆಮೇಲೆ ಅಲ್ಲಿ ನಿಮಗೆ ಕಾಣುವ ನಿಮ್ಮ ಜಿಲ್ಲೆ, ತಾಲೂಕ,ಗ್ರಾಮ, ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರ್ ಆಯ್ಕೆ ಮಾಡಬೇಕು . ಆಗ ನಿಮಗೆ ಫೆಚ್ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಹೊಸ ಪೇಜ್ ಓಪನ್ ಆಗಿ ಬಿಡುತ್ತದೆ, ಅಲ್ಲಿ ನೀವು ವ್ಯೂ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಉತ್ತಾರ ಓಪನ್ ಆಗುತ್ತದೆ, ಅಲ್ಲಿ 11 ನೇ ಅಂಕಣದಲ್ಲಿ ನೀವು ಯಾವ ಬ್ಯಾಂಕ್ನಲ್ಲಿ ಎಷ್ಟು ಭೋಜ ಹೊಂದಿದ್ದೀರಾ ಎಂದು ತಿಳಿದುಕೊಳ್ಳಬಹುದು. ಈ ರೀತಿಯಾಗಿ ನಿಮ್ಮ ಹೊಲದ ಮೇಲಿನ ಭೋಜಾದ ಬಗ್ಗೆ ತಿಳಿಯಿರಿ.
ಇದನ್ನೂ ಓದಿ :- ಇಂದಿನ ಮಾರುಕಟ್ಟೆಯ ದರಗಳನ್ನು ತಿಳಿಯಿರಿ