ಹಿಂಗಾರು ಹಂಗಾಮಿನಲ್ಲಿ ಈ ಭಾಗದ ಪ್ರಮುಖ ಆಹಾರಧಾನ್ಯ ಬೆಳೆಯಾದ ಜೋಳದ ಬಿತ್ತನೆಗೆ ರೈತರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಮುಂಗಾರು ಬೆಳೆ ಕಟಾವು ಮಾಡಿದ ಕೂಡಲೇ ಭೂಮಿಯನ್ನು ಚೆನ್ನಾಗಿ ಹರಗಿ ಕನವನ್ನು ಆರಿಸಿ ಬಿತ್ತನೆಗೆ ತಯಾರು ಮಾಡಬೇಕು. ಹಿಂಗಾರು ಜೋಳದ ಬೆಳೆಯನ್ನು ಸೆ.15 ರಿಂದ ಅಕ್ಟೋಬರ್ 15ರ ವರೆಗೆ ಬಿತ್ತನೆ ಮಾಡುವುದು ಸೂಕ್ತ.
ಜೋಳದಲ್ಲಿ ಎಂ 35-1, ಮೂಗುತಿ, ಬಿಜೆಪಿ-44, ಎಸ್ಪಿಬ್ಲಿ-2217, ಸಿಎಸ್‌ವಿ-29ಆರ್, ಡಿಎಸ್‌ವಿ-4 ಎಂಬ ತಳಿಗಳಿವೆ. ಬಿತ್ತನೆಗೆ ಮುನ್ನ ಪ್ರತಿ ಕೆಜಿ ಬೀಜವನ್ನು ಒಂದೂವರೆ ಲೀಟರ್ ನೀರಿನಲ್ಲಿ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಬೆರೆಸಿದ ದ್ರಾವಣದಲ್ಲಿ 8 ಗಂಟೆ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಹೆಚ್ಚಾಗುವದಲ್ಲದೆ, ಇಳುವರಿ ಹೆಚ್ಚಾಗುವುದು.
• ಬೀಜವನ್ನು 45 ಸೆಂ.ಮೀ.ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 15 ಸೆಂ.ಮೀ.ಅಂತರದಲ್ಲಿ ಬಿತ್ತನೆ ಮಾಡಬೇಕು.ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ
ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ
ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ಸಿಗುತ್ತವೆ